Force Gurkha: ಥಾರ್, ಜಿಮ್ನಿಗಳು ಇನ್ನು ಮುಂದೆ ಸೈಡ್ ಲನ್, ಬೆಂಕಿಯಂತಹ ಫೀಚರ್ಸ್ ಹೊತ್ತು ಬರ್ತಿದೆ  ಗೂರ್ಖಾ ಕಾರು!

Force Gurkha: ಭಾರತದ ಕಾರು ಪ್ರೀಯರ ಆಸಕ್ತಿ ಇತ್ತೀಚಿನ ಕಳೆದ ವರ್ಷಗಳಲ್ಲಿ ಎಸ್.ಯು.ವಿ (SUV) ಕಾರುಗಳತ್ತ ವಾಲಿದೆ. ಎಸ್.ಯು.ವಿ ಕಾರುಗಳ ಲುಕ್ ಬಹಳ ಮಂದಿಗೆ ಆಸಕ್ತಿ ಮೂಡಿಸಿದರೆ ಇನ್ನೂ ಹಲವರಿಗೆ ಈ ಕಾರುಗಳು ಮಾಡಬಹುದಾದ ಆಫ್ ರೋಡಿಂಗ್ (Off Roading) ನ ಬಗ್ಗೆ ಹೆಚ್ಚು ಪ್ರೀತಿ ಇರುತ್ತದೆ. ಆಫ್ ರೋಡಿಂಗ್ ಸಾಮರ್ಥ್ಯವನ್ನೇ ಗಮನದಲ್ಲಿಟ್ಟುಕೊಂಡು ಲಾಂಚ್ ಮಾಡಲಾದ ಕಾರುಗಳೂ ಭಾರತದಲ್ಲಿದೆ. ಇದರಲ್ಲಿ ಮಹೀಂದ್ರ ಥಾರ್ (Mahindra Thar) ಹೆಚ್ಚಿನವರ ಇಷ್ಟದ ಕಾರಾಗಿದ್ದರೆ ಇತ್ತೀಚೆಗೆ ಲಾಂಚ್ ಆದ ಮಾರುತಿ ಸುಝುಕಿ ಜಿಮ್ನಿ (Maruti Suzuki Jimny)  ಕೂಡ ಜನರನ್ನು ಆಕರ್ಷಿಸುತ್ತಿದೆ. ಆದರೂ ಥಾರ್ ತನ್ನ ಮೊದಲನೇ ಆಯ್ಕೆಯ ಸ್ಥಾನವನ್ನು ಉಳಿಸಿಕೊಂಡಿದೆ. ಇದನ್ನೂ ಓದಿ: Hero Xtreme 200s 4v: ಹಿರೋ ತರಾನೇ ಭಾರತಕ್ಕೆ ಎಂಟ್ರಿ ಕೊಡ್ತಾ ಇದೆ ಹಿರೋ ಎಕ್ಸ್ ಟ್ರೀಮ್ 200; ವೈಶಿಷ್ಟ್ಯತೆ ನೋಡಿಂದ್ರೆ ಕಂಗಾಲಾಗಿ ಹೋಗ್ತೀರಾ!

ಈ ಎರಡು ಕಾರುಗಳ ನಡುವೆ ಇನ್ನೊಂದು ಕಾರು 2020 ರಲ್ಲಿ ಮಾರುಕಟ್ಟೆಯಲ್ಲಿ ಸರಿದಾಡಿತ್ತು. ಒಂದು ಮಟ್ಟಿನ ಸಫಲತೆಯನ್ನು ಪಡೆದ ಕಾರು ಥಾರ್‍ ಮತ್ತು ಜಿಮ್ನಿ ಗಳಷ್ಟು ಫೋರ್ಸ್ ನ ಗೂರ್ಖಾ ಹೆಸರುವಾಸಿಯಾಗಿಲ್ಲ. ಆಫ್ ರೋಡ್ ಗಾಗಿ ಮಾತ್ರ ಜನರ ಆಯ್ಕೆಯಾಗಿರುವ ಈ ಕಾರುಗಳು ಹೆಚ್ಚು ಜಾಗವನ್ನು ನೀಡಿದ್ದಲ್ಲಿ ಇನ್ನೂ ಹೆಚ್ಚಿನ ಜನರು ಇಂತಹ ಕಾರುಗಳನ್ನು ಆಯ್ಕೆ ಮಾಡಬಹುದು ಎಂಬ ಸಾಧ್ಯತೆಯನ್ನು ಮನಗಂಡ ಗೂರ್ಖಾ ಈಗ ಐದು ಬಾಗಿಲುಗಳ ಮಾದರಿಯೊಂದಿಗೆ ಮಾರುಕಟ್ಟೆಯನ್ನು ಪ್ರವೇಶಿಸಲಿದೆ.

ಭಾರತದಲ್ಲಿ ಇನ್ನೂ ದೊಡ್ಡ ಕುಟುಂಬಗಳು ಇರುವುದರಿಂದ ಒಂದೇ ಕಾರಿನಲ್ಲಿ ಎಲ್ಲರೂ ಸೇರಿ ಪ್ರಯಾಣಿಸುವಾಗ ದೊಡ್ಡ ಕಾರುಗಳು ಬೇಕಾಗುತ್ತವೆ. ಅದರಲ್ಲೂ ವಯಸ್ಸಾದ ಮಂದಿ ಮನೆಯಲ್ಲಿರಬೇಕಾದರೆ ಎರಡನೇ ರೋ ಹಾಗೂ ಅಲ್ಲೇ ಕಾರನ್ನು ಹತ್ತಲು ಎರಡನೇ ರೋ ದ ಬಾಗಿಲುಗಳು ಬೇಕಾಗುತ್ತವೆ. ಜಿಮ್ನಿ ಕೂಡ ಇದೇ ರೀತಿ ಐದು ಬಾಗಿಲುಗಳೊಂದಿಗೆ ಬಂದು ಒಂದು ಮಟ್ಟಿನ ಯಶಸ್ಸು ಕಂಡಿತ್ತು.

ಈಗ  ಗೂರ್ಖಾದ ಐದು ಬಾಗಿಲುಗಳ ಮಾದರಿ ಮಾರುಕಟ್ಟೆಗೆ ಬರುತ್ತಿದೆ ಎಂಬ ವರದಿಗಳೊಂದಿಗೆ ಇದರ ಸ್ಪೈಡ್ ಟೆಸ್ಟಿಂಗ್ ಆರಂಭವಾಗಿದೆ. ಐದು ಬಾಗಿಲುಗಳು ಇರುವ ಕಾರಣ ಗೂರ್ಖಾ ಮೊದಲಿಗಿಂತ ಹೆಚ್ಚಿನ ಜಾಗ ಪಡೆಯುವುದರಲ್ಲಿ ಸಂಶಯವೇ ಇಲ್ಲ. ಇದು ಕಾರು ಹತ್ತುವುದು ಮತ್ತು ಇಳಿಯುವುದನ್ನು ಸುಲಭ ಮಾಡುವ ಜೊತೆಗೆ ಹೆಚ್ಚಿನ ಜನರನ್ನು ಮತ್ತು ಲಗೇಜ್ ಅನ್ನು ಸಾಗಿಸಿವುದನ್ನು ಸುಲಭವನ್ನಾಗಿಸುತ್ತದೆ. ಇದನ್ನೂ ಓದಿ: TATA: ನಮ್ಮನ್ನು ಆಳಿದ್ದ ಆಂಗ್ಲರ ನಾಡಿನಲ್ಲಿಯೇ ಟಾಟಾ ಹವಾ ಶುರು- ದೊಡ್ಡ ಘೋಷಣೆ ಮಾಡಿ ಇಂಗ್ಲೆಂಡ್ ಗೆ ಎಂಟ್ರಿ ಕೊಟ್ಟ ಟಾಟಾ.

ಈ ಕಾರಿನ ಬಗ್ಗೆ ಆಸಕ್ತಿ ಹೆಚ್ಚಾಗುತ್ತಿದ್ದಂತೆ ಇದರ ಬಗ್ಗೆ ಮಾಹಿತಿಗಳೂ ಬರುತ್ತಿದ್ದು ಅದು ನಿಜವಾಗಿದ್ದರೆ ಗೂರ್ಖಾ ಡಿಸೇಲ್ ಎಂಜಿನ್ ಜೊತೆಗೆ ಬರಲಿದ್ದು ಗರಿಷ್ಟ 89 ಬಿ. ಎಚ್. ಪಿ. ಪವರ್ ಮತ್ತು 250 ಎನ್. ಎಮ್ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಫೈವ್ ಸ್ಪೀಡ್ ಗೇರ್ ಬಾಕ್ಸ್ ನೊಂದಿಗೆ ಈ ಕಾರು ಬರಲಿದ್ದು 4 x 4 ಡ್ರೈವ್ ಸಿಸ್ಟಮ್ ಅನ್ನು ಈ ಕಾರು ಹೊಂದಲಿದೆ. ಎಲ್. ಇ. ಡಿ. ಹೆಡ್ ಲೈಟ್ ಮತ್ತು ಟೈಲ್ ಲೈಟ್ ಅನ್ನು ಈ ಕಾರು ಪಡೆಯಲಿದೆ. ಫೈವ್ ಸ್ಟ್ರೋಕ್ ಅಲಾಯ್ ವೀಲ್ಸ್ ಕೂಡ ಇರಲಿದೆ. ಈ ಕಾರು ಹಬ್ಬದ ಸೀಸನ್ ನಲ್ಲಿ ಲಾಂಚ್ ಆಗಲಿದ್ದು ಥಾರ್‍ ಮತ್ತು ಜಿಮ್ನಿ ಗೆ ಸ್ಪರ್ಧೆಯನ್ನು ನೀಡಲಿದೆ ಎನ್ನುವುದು ಎಲ್ಲರ ನಿರೀಕ್ಷೆಯಾಗಿದೆ. ಇದನ್ನೂ ಓದಿ: Kannada Film: ರಮ್ಯಾ ಗೆ ಬಿಗ್ ಶಾಕ್- ಸಂಜು ವೆಗ್ಸ್ ಗೀತಾ 2 ಗೆ ರಮ್ಯಾ ಅಲ್ಲ ನಾಯಕಿ- ರಮ್ಯಾಕ್ಕಿಂತ ಒಂದು ಕೈ ಮೇಲೆ ಇರುವ ನಟಿ ಆಯ್ಕೆ. ಯಾರು ಗೊತ್ತಾ.

Comments are closed.