Hero Xtreme 200s 4v: ಹಿರೋ ತರಾನೇ ಭಾರತಕ್ಕೆ ಎಂಟ್ರಿ ಕೊಡ್ತಾ ಇದೆ ಹಿರೋ ಎಕ್ಸ್ ಟ್ರೀಮ್ 200; ವೈಶಿಷ್ಟ್ಯತೆ ನೋಡಿಂದ್ರೆ ಕಂಗಾಲಾಗಿ ಹೋಗ್ತೀರಾ!

Hero Xtreme 200s 4v: ಬೈಕ್ ಪ್ರೀಯರಿಗೆ ಹೀರೋ ಮೋಟೋಕಾರ್ಪ್ (Monocarp)  ಕಡೆಯಿಂದ ಹೊಸ ಬೈಕ್ ಲಾಂಚ್ ಆಗಿದೆ. ಹೀರೋ ದ ಬಹಳ ಜನಪ್ರಿಯ ಮಾಡೆಲ್ ಆಗಿದ್ದ ಎಕ್ಸ್ ಟ್ರೀಮ್ ಈಗ 2023 ಕ್ಕೆ ಬೇಕಾದ ಬದಲಾವಣೆಗಳನ್ನು ಮಾಡಿಕೊಂಡು ಜನರ ಮುಂದೆ ಬಂದಿದೆ. ಎಂಜಿನ್ ಮತ್ತು ಸಾಮರ್ಥ್ಯದ ಬದಲಾವಣೆಗಳ ಜೊತೆಗೆ ಕಲರ್ ಫುಲ್ ಆಗಿಯೂ ಬದಲಾಗಿದೆ. ಇದನ್ನೂ ಓದಿ: TATA: ನಮ್ಮನ್ನು ಆಳಿದ್ದ ಆಂಗ್ಲರ ನಾಡಿನಲ್ಲಿಯೇ ಟಾಟಾ ಹವಾ ಶುರು- ದೊಡ್ಡ ಘೋಷಣೆ ಮಾಡಿ ಇಂಗ್ಲೆಂಡ್ ಗೆ ಎಂಟ್ರಿ ಕೊಟ್ಟ ಟಾಟಾ.

ಎಕ್ಸ್ ಟ್ರೀಮ್ 200S 4V ಬೈಕ್ 199.6 cc ಎಂಜಿನ ಅನ್ನು ಹೊಂದಿದೆ. ಇದು ಪೋರ್ ವಾಲ್ವ್ ಎಂಜಿನ್ ಆಗಿದ್ದು ಲಿಕ್ವಿಡ್ ಕೂಲ್ಡ್ ಆಗಿದೆ. ಹೀಗಾಗಿ ಲಾಂಗ್ ಜರ್ನಿಗಳನ್ನು ಇದರ ಮೇಲೆ ಸುಲಭವಾಗಿ ಮಾಡಬಹುದಾಗಿದೆ. ಈ ಬೈಕ್ 19.1 ಬಿ.ಎಚ್. ಪಿ ಪವರ್ ಅನ್ನು ಉತ್ಪಾದಿಸಿದರೆ 17.35 ಎನ್. ಎಮ್. ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಹೀರೋ ದ ಪ್ರಕಾರ ಅವರು ಕೇವಲ ಪವರ್ ಮೇಲೆ ಅಪ್ ಗ್ರೇಡ್ ನೀಡದೆ ಇದರ ಗೇರ್ ರೇಶಿಯೋ ದಲ್ಲೂ ಬದಲಾವಣೆ ಮಾಡಿರುವುದರಿಂದ ಆಕ್ಸಿಲರೇಷ್ನ್ ಈಗ ಉತ್ತಮವಾಗಿದೆ. 5 ಸ್ಪೀಡ್ ಗೇರ್ ಬಾಕ್ಸ್ ಅನ್ನು ಈ ಬೈಕ್ ಹೊಂದಿದೆ. 

ಇದರ ಎಂಜಿನ್ ಅನ್ನು OBD2 ಎಮಿಷನ್ ಮಾನದಂಡಗಳ ಪ್ರಕಾರ ವಿನ್ಯಾಸ ಮಾಡಲಾಗಿದೆ. ಕೇವಲ ಇದಷ್ಟೇ ಅಲ್ಲದೇ ಇದು E20 ಇಂಧನಕ್ಕೆ ಬೆಂಬಲಿಸುತ್ತದೆ. E20 ಮಾನದಂಡಗಳ ಪ್ರಕಾರ ಇದರಲ್ಲಿ ಎಂಭತ್ತು ಶೇಕಡಾ ಪೆಟ್ರೋಲ್ ಮತ್ತು ಎಪ್ಪತ್ತು ಶೇಕಡಾ ಎಥನಾಲ್ ಬ್ಲೆಂಡ್ ಇರುವ ಇಂಧನವನ್ನು ಬಳಸಬಹುದಾಗಿದೆ.

ಸಸ್ಪೆನ್ಷನ್ ಬಗ್ಗೆ ಹೇಳುವುದಾದರೆ ಈ ಬೈಕ್ ನಲ್ಲಿ ಮುಂದೆ ಟೆಲಿಸ್ಕೋಪಿಕ್ ಸಸ್ಪೆನ್ಷನ್ ಇದ್ದರೆ ಹಿಂದೆ ಮೋನೋಶಾಕ್ ಸಸ್ಪೆನ್ಷನ್ ಇದೆ. ಬ್ರೇಕಿಂಗ್ ವಿಷಯದಲ್ಲಿ ಯಾವುದೇ ಕಾಂಪ್ರೊಮೈಸ್ ಮಾಡದೇ ಎರಡೂ ಕಡೆಗಳಲ್ಲಿ ಡಿಸ್ಕ್ ಬ್ರೇಕ್ ಆಯ್ಕೆಯನ್ನು ನೀಡಿದೆ. ಟ್ವಿನ್ ಹ್ಯಾಂಡಲ್ ಬಾರ್ ಮತ್ತು ಟ್ವಿನ್ ಎಲ್.ಇ.ಡಿ. ಹೆಡ್ ಲ್ಯಾಂಪ್ ಗಳು ಈ ಬೈಕ್ ನ ಲುಕ್ ಅನ್ನು ಉತ್ತಮ ಗೊಳಿಸಿದೆ. ಇದನ್ನೂ ಓದಿ: Kannada Film: ರಮ್ಯಾ ಗೆ ಬಿಗ್ ಶಾಕ್- ಸಂಜು ವೆಗ್ಸ್ ಗೀತಾ 2 ಗೆ ರಮ್ಯಾ ಅಲ್ಲ ನಾಯಕಿ- ರಮ್ಯಾಕ್ಕಿಂತ ಒಂದು ಕೈ ಮೇಲೆ ಇರುವ ನಟಿ ಆಯ್ಕೆ. ಯಾರು ಗೊತ್ತಾ.

ಇವೆಲ್ಲಾ ಎಂಜಿನ್ ಮತ್ತು ಸಾಮರ್ಥ್ಯದ ಬದಲಾವಣೆ ಗಳಾದರೆ ವಿನ್ಯಾಸದಲ್ಲೂ ಬದಲಾವಣೆಯೊಂದಿಗೆ ಎಕ್ಸ್ ಟ್ರೀಮ್ ಬೈಕ್ ಲಾಂಚ್ ಆಗಿದೆ. ಎಲ್.ಸಿ.ಡಿ. ಇನ್ಟ್ರುಮೆಂಟ್ ಕ್ಲಸ್ಟರ್ ಅನ್ನು ಈ ಬೈಕ್ ಹೊಂದಿದೆ. ಇದರಲ್ಲಿ ಟರ್ನ್ ಬೈ ಟರ್ನ್ ನಾವಿಗೇಷನ್ ನ ಸಹಾಯವನ್ನು ನಾವು ಪಡೆಯಬಹುದಾಗಿದೆ. ಸ್ಮಾರ್ಟ್ ಪೋನ್ ಅನ್ನು ಬ್ಲೂಟೂಥ್ ನಿಂದ ಸಂಪರ್ಕಿಸುವ ಆಯ್ಕೆಯೂ ಇದರಲ್ಲಿದೆ.

ಬಣ್ಣಗಳ ಆಯ್ಕೆಯ ಬಗ್ಗೆ ನೋಡುವುದಾದರೆ ಇ ಬೈಕ್ ಮೂನ್ ಯೆಲ್ಲೊ, ಪ್ಯಾಂಥರ್ ಬ್ಲಾಕ್ ಮೆಟಾಲಿಕ್ ಮತ್ತು ಮ್ಯಾಟ್ ಆಕ್ಸಿಸ್ ಗ್ರೇ ಮೆಟಾಲಿಕ್ ಎಂಬ ಕಲರ್ ಆಯ್ಕೆಗಳ ಜೊತೆಗೆ ಬರುತ್ತಿದೆ.

ಹೀರೋ ಕಂಪನಿಯ ಪ್ರಕಾರ ಎ.ಆರ್.ಎ.ಐ. ಟೆಸ್ಟ್ ನಂತೆ ಇದರ ಮೈಲೇಜ್ 54 ಕಿಲೋ ಮೀಟರ್ ಪ್ರತೀ ಲೀಟರ್ ಇದೆ. ಎಕ್ಸ್ ಟ್ರೀಮ್ 200S 4V ಯ ಎಕ್ಸ್ ಷೋರೂಮ್ ಬೆಲೆ 1.41 ಲಕ್ಷ ರೂಪಾಯಿಗಳಾಗಿದ್ದು ಇದು ಟಿ.ವಿ.ಎಸ್. ಅಪಾಚೆ ಆರ್‍. ಟಿ. ಆರ್ ಮತ್ತು ಬಜಾಜ್ ಪಲ್ಸರ್ ಎಫ್.250 ಗಿಂತ ಕಡಿಮೆ ಇದ್ದು ಬಜಾಜ್ ಪಲ್ಸರ್ 220F ಗಿಂತ ಸ್ವಲ್ಪ ಜಾಸ್ತಿ ಇದೆ.

Comments are closed.