Kannada Film: ರಮ್ಯಾ ಗೆ ಬಿಗ್ ಶಾಕ್- ಸಂಜು ವೆಗ್ಸ್ ಗೀತಾ 2 ಗೆ ರಮ್ಯಾ ಅಲ್ಲ ನಾಯಕಿ- ರಮ್ಯಾಕ್ಕಿಂತ ಒಂದು ಕೈ ಮೇಲೆ ಇರುವ ನಟಿ ಆಯ್ಕೆ. ಯಾರು ಗೊತ್ತಾ.

Kannada Film: ಕನ್ನಡ ಚಿತ್ರರಂಗದಲ್ಲಿ ಸೂಪರ್ ಹಿಟ್ ಆಗಿ ಕನ್ನಡ ಸಿನಿಮಾಪ್ರಿಯರ ಆಲ್ ಟೈಮ್ ಫೇವರೆಟ್ ಸಿನಿಮಾ ಎನ್ನಿಸಿಕೊಂಡಿರುವ ಲಿಸ್ಟ್ ನಲ್ಲಿ 2011ರಲ್ಲಿ ತೆರೆಕಂಡ ಸಂಜು ವೆಡ್ಸ್ ಗೀತಾ ಸಿನಿಮಾ ಕೂಡ ಸೇರುತ್ತದೆ. ಇಂದಿಗೂ ಕೂಡ ಈ ಸಿನಿಮಾ ಎಲ್ಲರ ಫೇವರೆಟ್. ಸಂಜು ವೆಡ್ಸ್ ಗೀತ ಸಿನಿಮಾವನ್ನು ಎಲ್ಲಾ ಸಿನಿಪ್ರಿಯರು ನೋಡಿ, ಭಾವುಕರಾಗಿದ್ದರು. ನಟಿ ರಮ್ಯಾ ಮತ್ತು ನಟ ಶ್ರೀನಗರ ಕಿಟ್ಟಿ ಮೊದಲ ಬಾರಿ ಜೋಡಿಯಾಗಿ ನಟಿಸಿದ್ದ ಈ ಸಿನಿಮಾ ದೊಡ್ಡ ಹಿಟ್ ಆಗಿತ್ತು, ಸಂಜು ವೆಡ್ಸ್ ಗೀತ ಸಿನಿಮಾದ ಟ್ರಾಜಿಕ್ ಕ್ಲೈಮ್ಯಾಕ್ಸ್ ಎಲ್ಲರ ಮೆಚ್ಚುಗೆ ಪಡೆದಿತ್ತು.

ಈ ಸಿನಿಮಾದ ಹಾಡುಗಳು ದೊಡ್ಡ ಸೆನ್ಸೇಷನ್ ಅಗಿದ್ದವು ಎಂದರೆ ತಪ್ಪಲ್ಲ. ಇನ್ನು ಸಂಜು ವೆಡ್ಸ್ ಗೀತಾ ಸೀಕ್ವೆಲ್ ಬರಬೇಕು ಎನ್ನುವುದು ಎಲ್ಲಾ ಅಭಿಮಾನಿಗಳ ಆಸೆ ಮತ್ತು ಕನಸು ಕೂಡ ಆಗಿತ್ತು, ಅದ್ಕಕೀಗ ಸಿನಿಮಾ ಬಿಡುಗಡೆಯಾಗಿ 12 ವರ್ಷಗಳ ನಂತರ ಉತ್ತರ ಸಿಕ್ಕಿದೆ. ನಿರ್ದೇಶಕ ನಾಗಶೇಖರ್ ಅವರು ನಟ ಶ್ರೀನಗರ ಕಿಟ್ಟಿ ಅವರ ಹುಟ್ಟುಹಬ್ಬದ ಪ್ರಯುಕ್ತ ಹೊಸದೊಂದು ಪೋಸ್ಟರ್ ಶೇರ್ ಮಾಡಿದ್ದು, ಸಂಜು ವೆಡ್ಸ್ ಗೀತಾ2 ಎಂದು ಶೀರ್ಷಿಕೆ ಇಟ್ಟಿದ್ದಾರೆ. ಈ ಒಂದು ಪೋಸ್ಟರ್ ಹೊಸ ಸೆನ್ಸೇಷನ್ ಸೃಷ್ಟಿಸಿತ್ತು.

ಸಿನಿಮಾದ ಸೀಕ್ವೆಲ್ ಗಾಗಿ ಎಲ್ಲಾ ಅಭಿಮಾನಿಗಳು ಕೂಡ ಕಾಯುತ್ತಿದ್ದಾರೆ, ಹೀಗಿರುವಾಗ ಸಿನಿಮಾದ ಹೀರೊಯಿನ್ ಯಾರು ಎನ್ನುವುದೇ ಈಗಿನ ಪ್ರಶ್ನೆ ಆಗಿದೆ, ರಮ್ಯಾ ಅವರೇ ಹೀರೋಯಿನ್ ಆಗಬೇಕು ಎನ್ನುವುದು ಎಲ್ಲರ ಆಸೆ, ಆದರೆ ಪೋಸ್ಟರ್ ನಲ್ಲಿ ಸ್ಯಾಂಡಲ್ ವುಡ್ ಕ್ವೀನ್ ರಮ್ಯಾ ಪ್ರೆಸೆಂಟ್ಸ್ ಎಂದು ಬರೆಯಲಾಗಿದ್ದು, ಅದನ್ನು ನೋಡಿದ ಅಭಿಮಾನಿಗಳಿಗೆ ರಮ್ಯಾ ಅವರು ಈ ಚಿತ್ರದಲ್ಲಿ ನಟಿಸುತ್ತಿಲ್ಲ ಎಂದು ಅನ್ನಿಸುವುದಕ್ಕೆ ಶುರುವಾಗಿದೆ. ಅದು ನಿಜವು ಆಗಿದ್ದು, ಸಂಜು ವೆಡ್ಸ್ ಗೀತಾ 2 ಹೀರೋಯಿನ್ ಬೇರೆ ನಟಿ ಎನ್ನಲಾಗಿದೆ.

ಸಿನಿಮಾ ತಂಡದಿಂದ ಅಧಿಕೃತವಾಗಿ ಇನ್ನು ಯಾವುದೇ ಮಾಹಿತಿ ಸಿಕ್ಕಿಲ್ಲ, ಆದರೆ ಸಧ್ಯಕ್ಕೆ ಸಂಜು ವೆಡ್ಸ್ ಗೀತಾ2 ನಲ್ಲಿ ನಟಿ ರಚಿತಾ ರಾಮ್ ಅವರು ಹೀರೋಯಿನ್ ಆಗಿ ನಟಿಸುತ್ತಾರೆ ಎಂದು ಹೇಳಲಾಗುತ್ತಿದೆ. ಈ ಬಗ್ಗೆ ಸುದ್ದಿಗಳು ಸೋಷಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿದೆ ಹೊರತು, ಯಾವುದೇ ಅಧಿಕೃತ ಮಾಹಿತಿ ಇನ್ನು ಸಿಕ್ಕಿಲ್ಲ. ಇತ್ತ ರಮ್ಯಾ ಅವರು ಕೂಡ ಈ ಬಗ್ಗೆ ಯಾವುದೇ ಮಾತನಾಡಿಲ್ಲ. ರಮ್ಯಾ ಅವರು ಈಗ ತಮ್ಮದೇ ಆದ ಪ್ರೊಡಕ್ಷನ್ ಹೌಸ್ ಶುರು ಮಾಡಿ, ಸ್ವಾತಿ ಮುತ್ತಿನ ಮಳೆ ಹನಿಯೇ ಸಿನಿಮಾ ನಿರ್ಮಿಸಿದ್ದಾರೆ.

ಮೊದಲಿಗೆ ಈ ಸಿನಿಮಾದಲ್ಲಿ ರಮ್ಯಾ ಅವರೇ ನಟಿಸುತ್ತಾರೆ ಎನ್ನಲಾಗಿತ್ತು, ಆದರೆ ರಮ್ಯಾ ಅವರು ಆ ಪಾತ್ರಕ್ಕೆ ಹೊಸ ನಟಿ ಇದ್ದರೆ ಚೆನ್ನಾಗಿರುತ್ತೆ ಎಂದು ನಿರ್ಮಾಣದಲ್ಲಿ ಮಾತ್ರ ತೊಡಗಿಸಿಕೊಂಡರು. ಇನ್ನು ಡಾಲಿ ಧನಂಜಯ್ ಅವರು ಹೀರೋ ಆಗಿರುವ ಉತ್ತರಕಾಂಡ ಸಿನಿಮಾ ಮೂಲಕ ರಮ್ಯಾ ಅವರು ಚಿತ್ರರಂಗಕ್ಕೆ ಕಂಬ್ಯಾಕ್ ಮಾಡಲಿದ್ದಾರೆ. ಇನ್ನು ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ ಸಿನಿಮಾದಲ್ಲಿ ವಿಶೇಷ ಪಾತ್ರದಲ್ಲಿ ನಟಿಸಿದ್ದಾರೆ.

Comments are closed.