Gift Tulsi Plant: ತುಳಸಿ ಗಿಡವನ್ನು ಬೇರೆಯವರಿಗೆ ಉಡುಗೊರೆಯಾಗಿ ಕೊಟ್ಟರೆ ಏನಾಗುತ್ತೆ ಗೊತ್ತಾ? ಗಿಫ್ಟ್ ಕೊಡೋಕೂ ಮೊದಲು ಒಮ್ಮೆ ಯೋಚಿಸಿ!

Gift Tulsi Plant: ಹಿಂದೂ ಧರ್ಮದಲ್ಲಿ ತುಳಸಿ ಗಿಡಕ್ಕೆ ಅತ್ಯಂತ ಪವಿತ್ರವಾದ ಸ್ಥಾನವಿದೆ ನಾರಾಯಣ ಹಾಗೂ ಲಕ್ಷ್ಮಿ ಪ್ರಿಯವಾದ ತುಳಸಿ ಗಿಡವನ್ನು ಬಹಳ ಶ್ರದ್ಧಾಭಕ್ತಿಯಿಂದ ಮನೆಯಲ್ಲಿ ನೆಟ್ಟು ಪೂಜಿಸಲಾಗುತ್ತದೆ. ಇನ್ನು ವಾಸ್ತು ಶಾಸ್ತ್ರದ ಪ್ರಕಾರ ತುಳಸಿ ಗಿಡವನ್ನು ಮನೆಯಲ್ಲಿ ಸರಿಯಾದ ದಿಕ್ಕಿನಲ್ಲಿ ಇಟ್ಟಾಗ ಮಾತ್ರ ಮನೆಯಲ್ಲಿ ಸುಖ ಶಾಂತಿ ನೆಮ್ಮದಿ ನೆಲೆಸಲು ಸಾಧ್ಯ. ತುಳಸಿಯನ್ನ ಸರಿಯಾದ ದಿಕ್ಕಿನಲ್ಲಿ ನೀಡಬೇಕು ಎಲ್ಲಾ ದಿನವೂ ತುಳಸಿಯನ್ನ ಕೇಳಬಾರದು ಅದೇ ರೀತಿ ತುಳಸಿಯನ್ನ ಬೇರೆಯವರಿಗೆ ಗಿಫ್ಟ್ ಆಗಿ ಕೊಡಬಹುದೇ? ಎನ್ನುವ ಪ್ರಶ್ನೆ ಹಲವರಲ್ಲಿ ಇರುತ್ತೆ ವಾಸ್ತುವಿನ ಪ್ರಕಾರ ತುಳಸಿ ಗಿಡವನ್ನು ಉಡುಗೊರೆಯಾಗಿ ಕೊಡಬಹುದೇನೋ ಆ ಪ್ರಶ್ನೆಗೆ ಇಲ್ಲಿದೆ ಉತ್ತರ.

ತುಳಸಿ ಗಿಡವನ್ನು ಬೇರೆಯವರಿಗೆ ಉಡುಗೊರೆಯಾಗಿ ನೀಡುವುದು ವಾಸ್ತವ ಶಾಸ್ತ್ರದ ಪ್ರಕಾರ ಅತ್ಯಂತ ಮಂಗಳಕರವಾದ ದಿನ. ಈ ಪವಿತ್ರ ಸಸ್ಯವನ್ನು ಬೇರೆಯವರಿಗೆ ಗಿಫ್ಟ್ ಆಗಿ ನೀಡಿದರೆ ನಿಮಗೂ ಕೂಡ ಒಳ್ಳೆಯದು ನಿಮ್ಮಿಂದ ಗಿಡವನ್ನು ತೆಗೆದುಕೊಂಡವರಿಗೂ ಕೂಡ ಒಳ್ಳೆಯದು. ತುಳಸಿಯನ್ನು ಮನೆಯ ಈಶಾನ್ಯ ದಿಕ್ಕಿನಲ್ಲಿ ಇಡಬೇಕು. ಮನೆಯಲ್ಲಿ ಗಾಳಿಯನ್ನು ಶುದ್ಧೀಕರಿಸಲು ಹಾಗೂ ನಕಾರಾತ್ಮಕ ಶಕ್ತಿಯನ್ನು ರೂಪಿಸಲು ಕೂಡ ತುಳಸಿ ಗಿಡ ಬಹಳ ಒಳ್ಳೆಯದು.

ಇನ್ನು ತುಳಸಿ ಗಿಡವನ್ನು ಭಾನುವಾರ, ಏಕಾದಶಿಯ ಮೊದಲ ದಿನ ಯಾರಿಗೂ ದಾನವಾಗಿ ಕೊಡಬಾರದು ಜೊತೆಗೆ ರೀತಿ ಈ ದಿನಗಳಲ್ಲಿ ತುಳಸಿಯನ್ನು ಕೀಳಬಾರದು. ಇನ್ನು ನೀವು ತುಳಸಿ ಗಿಡವನ್ನು ಯಾರಿಗಾದರೂ ದಾನ ಮಾಡಿದರೆ ಅವರು ಚೆನ್ನಾಗಿ ಅದನ್ನು ನೋಡಿಕೊಳ್ಳಬೇಕು ಅಂತವರಿಗೆ ಮಾತ್ರ ತುಳಸಿ ಗಿಡ ದಾನ ಕೊಟ್ರೆ ಅದರ ಫಲ ನಿಮಗೆ ಸಿಗುತ್ತದೆ. ಆದ್ದರಿಂದ ತುಳಸಿ ಗಿಡವನ್ನು ಬೇರೆಯವರಿಗೆ ದಾನ ಮಾಡುವುದು ಒಳ್ಳೆಯದು ಆದರೆ ಸರಿಯಾದ ದಿನ ಸರಿಯಾದ ಸಮಯಕ್ಕೆ ದಾನ ಮಾಡುವುದು ಬಹಳ ಮುಖ್ಯ.

Comments are closed.