Politics: ಮುಂದಿನ ಬಾರಿ ಪ್ರಧಾನಿ ಆಗುವುದು ಒಬ್ಬ ಮಹಿಳೆ: ನಿಜವಾಗುತ್ತಾ ಗುರೂಜಿ ಕಾಲಜ್ಞಾನ? ಈ ಭವಿಷ್ಯ ನುಡಿದಿದ್ದು ಯಾರು?

Politics: 2024ಕ್ಕೆ ನಡೆಯಲಿರುವ ಚುನಾವಣೆ (Election) ಮೂಲಕ ದೇಶದ ಪ್ರಧಾನಿ (Prime Minister)  ಯಾರಾಗಬಹುದು ಎನ್ನುವ ಕುತೂಹಲಕ್ಕೆ ತೆರೆ ಬೀಳಲಿದೆ ಆದರೆ ದೇಶದ ಚುಕ್ಕಾಣಿ ಹಿಡಿಯುವುದಕ್ಕೆ ಎಲ್ಲರೂ ಎಲ್ಲಾ ರೀತಿಯಿಂದಲೂ ಸಕಲ ತಯಾರಿ ನಡೆಸಿಕೊಳ್ಳುತ್ತಿದ್ದಾರೆ. ಒಬ್ಬರು ಒಬ್ಬರ ಹೆಸರನ್ನು ಸೂಚಿಸಿದರೆ, ಕಾಲಜ್ಞಾನಿ ಯಶವಂತ್ ಗುರೂಜಿ (Yashwanth Guruji) ಮಾತ್ರ ಸ್ಪೋಟಕ ವಿಚಾರವನ್ನು ಹೇಳಿದ್ದಾರೆ. ಈ ಗುರೂಜಿ ಕಾಲಜ್ಞಾನ ಸತ್ಯವಾದರೆ ಮುಂದಿನ ಬಾರಿ ದೇಶದ ಅಧಿಕಾರದ ಹಿಡಿಯುವುದು ಒಬ್ಬ ಮಹಿಳೆ!

ಹೌದು, ನಿಮಗೂ ಆಶ್ಚರ್ಯ ಎನಿಸಬಹುದು ಆದರೆ ತುಮಕೂರಿನ ನೊಣವಿನ ಕೆರೆಯಲ್ಲಿ ಯಶವಂತ್ ಗುರೂಜಿ ಅವರು ಭವಿಷ್ಯ ನಡೆದಿದ್ದು ಇಂದಿರಾಗಾಂಧಿ (Indira Gandi)  ಬಳಿಕ ಮತ್ತೆ ರಾಷ್ಟ್ರದ ರಾಜಕಾರಣದ ಚುಕ್ಕಾಣಿ ಹಿಡಿಯುವುದು ಒಬ್ಬ ಮಹಿಳೆ ಎಂದು ಭವಿಷ್ಯ ನಡೆದಿದ್ದಾರೆ. 35 ವರ್ಷಗಳ ಹಿಂದೆ ದೇಶವನ್ನು ಇಂದಿರಾ ಗಾಂಧಿ ನಡೆಸಿದ್ದರು. ಮಹಾಶಿವರಾತ್ರಿಯ ಬಳಿಕ ರಾಷ್ಟ್ರ ರಾಜಕಾರಣ (Politics) ದಲ್ಲಿ ದೊಡ್ಡ ಬದಲಾವಣೆ ಆಗಲಿದೆ ಎಂದು ಗುರುಜಿ ಭವಿಷ್ಯ ನಡೆದಿದ್ದಾರೆ.

ಗುರೂಜಿ ಹೇಳಿರುವ ಪ್ರಕಾರ ಮುಂದಿನ ದಿನಗಳಲ್ಲಿ ಅಧಿಕಾರದ ವಿಷಯದಲ್ಲಿ ಅತಂತ್ರ ಪರಿಸ್ಥಿತಿ ಉದ್ಭವವಾಗುತ್ತದೆ. ಮಿತ್ರ ಪಕ್ಷಗಳ ಸಹಾಯದಿಂದ ಒಂದು ಪಕ್ಷ ಅಧಿಕಾರಕ್ಕೆ ಬರುತ್ತದೆಯಾದರೂ ಪ್ರಧಾನ ಮಂತ್ರಿ ಆಗುವ ಯೋಗ ಇರುವುದು ಮಾತ್ರ ಒಬ್ಬ ಮಹಿಳೆಗೆ ಎಂದು ಹೇಳಿದ್ದಾರೆ.

ಮಹಾಶಿವರಾತ್ರಿಯ (Mahashivratri)  ಮೊದಲು ಲೋಕಸಭೆ ಚುನಾವಣೆ ನಡೆದರೆ ನರೇಂದ್ರ ಮೋದಿ ಪ್ರಧಾನಿಯಾಗಿ ಮತ್ತೆ ಆಯ್ಕೆಗೊಳ್ಳುವ ಸಾಧ್ಯತೆ ಇದೆ. ಆದ್ರೆ ಶಿವರಾತ್ರಿಯ ನಂತರ ಅಂದರೆ ಮಾರ್ಚ್ ನಂತರ ಚುನಾವಣೆ ನಡೆದರೆ ಕೇಂದ್ರದಲ್ಲಿ ಬಿಜೆಪಿ ಬದಲು ಬೇರೆ ಪಕ್ಷ ಅಧಿಕಾರಕ್ಕೆ ಬರುತ್ತದೆ ಹಾಗೂ ಒಬ್ಬ ಮಹಿಳೆ ಪ್ರಧಾನಿ ಆಗುತ್ತಾಳೆ. ಆ ಮಹಿಳೆ ಯಾವ ಪಕ್ಷದವರೇ ಆಗಿರಬಹುದು ಆದರೆ ದೇಶವನ್ನು ಆಳುವುದು ಅಧಿಕಾರದ ಗದ್ದುಗೆ ಹಿಡಿಯುವುದು ಮಾತ್ರ ಮಹಿಳೆಗೆ ಆಗಿರುತ್ತಾಳೆ ಎಂದು ಯಶವಂತ ಗುರೂಜಿ ಮಹತ್ವದ ಭವಿಷ್ಯ ನುಡಿದಿದ್ದಾರೆ.

ಕರ್ನಾಟಕ ಚುನಾವಣೆಯಲ್ಲಿ ಕಾಂಗ್ರೆಸ್ (Congress) ಅಲೆ ಆರಂಭವಾಗಲಿದೆ 135 ಸ್ಥಾನಗಳಿಂದ ಒಂದು ಪಕ್ಷ ಅಧಿಕಾರಕ್ಕೆ ಬರಲಿದೆ ಎಂದು ಯಶ್ವಂತ್ ಪೂಜಾರಿ ಈ ಹಿಂದೆಯೂ ಭವಿಷ್ಯ ನುಡಿದಿದ್ದರು. ಮುಖ್ಯಮಂತ್ರಿ ಯಾರಾಗಬಹುದು ಎನ್ನುವ ಗೊಂದಲದ ಸಂದರ್ಭದಲ್ಲಿ ಮುಂದಿನ ಮುಖ್ಯಮಂತ್ರಿ ಸಿಎಂ ಸಿದ್ದರಾಮಯ್ಯ ಅವರೇ ಆಗುತ್ತಾರೆ ಎಂಬುದಾಗಿಯೂ ಹೇಳಿದ್ದರು. ಯಶವಂತ್ ಗುರೂಜಿ ಅವರ ಕಾಲಜ್ಞಾನ ಭವಿಷ್ಯದ ಪ್ರಕಾರ ಕರ್ನಾಟಕ ಚುನಾವಣೆಗೆ ಸಂಬಂಧಪಟ್ಟ ವಿಷಯಗಳು ನಿಜವಾಗಿರುವ ಹಿನ್ನೆಲೆಯಲ್ಲಿ ದೇಶ ರಾಜಕಾರಣದ ಚೊಕ್ಕಾಣಿ ಹಿಡಿಯುವುದು ಒಬ್ಬ ಮಹಿಳೆ ಎನ್ನುವ ಭವಿಷ್ಯ ಕೂಡ ನಿಜವಾಗುತ್ತದೆಯೋ ಎಂಬುದನ್ನು ಕಾದು ನೋಡಬೇಕು.

Comments are closed.