KVP Investment: ರೈತರಿಗೆ ಹೂಡಿಕೆ ಮಾಡಲು ಇದಕ್ಕಿಂತ ಬೆಸ್ಟ್ ಯೋಜನೆ ಮತ್ತೊಂದಿಲ್ಲ; ಹೆಚ್ಚಿದೆ ಬಡ್ದಿದರ;  ಹೂಡಿಕೆಯ ಮೇಲೆ ಗಳಿಸಬಹುದು ಮೂರು ಪಟ್ಟು ಹೆಚ್ಚಿನ ಆದಾಯ!

KVP Investment: ನಮ್ಮ ಬಳಿ ಎಷ್ಟು ಸಾಧ್ಯವೋ ಅಷ್ಟು ಸ್ವಲ್ಪ ಸ್ವಲ್ಪವೇ ಆದರೂ ಹೂಡಿಕೆ (Investment)  ಮಾಡುತ್ತಾ ಬಂದರೆ ಭವಿಷ್ಯದಲ್ಲಿ ಆರ್ಥಿಕವಾಗಿ ಸಮಸ್ಯೆ ಇರುವುದಿಲ್ಲ. ಇದು ನಗರಗಳಾಲ್ಲಿ ದುಡಿಯುವವರಿಗೆ ಮಾತ್ರವಲ್ಲ, ಹಳ್ಳಿಯಲ್ಲಿ ಕೃಷಿ (Farming) ಮಾಡುವ ರೈತರಿಗೂ ಕೂಡ ಅನ್ವಯಿಸುತ್ತೆ. ಹಾಗಾದ್ರೆ ರೈತರು ಎಲ್ಲಿ ಹೂಡಿಕೆ ಮಾಡಬಹುದು? ಎಷ್ಟು ಆದಾಯ (earn) ಗಳಿಸಬಹುದು? ಹೇಳ್ತೀವಿ ಮುಂದೆ ಓದಿ. ಇದನ್ನೂ ಓದಿ: Arecanut Price: ಇದು ಅಡಿಕೆ ಬೆಳೆಯಲ್ಲ ಬಂಗಾರದ ಬೆಳೆ: 500ರ ಗಡಿ ದಾಟುತ್ತಿರುವ ಅಡಿಕೆ ದರ!

ಕಿಸಾನ್ ವಿಕಾಸ್ ಪತ್ರ ಯೋಜನೆ (KVK)

ಈ ಯೊಜನೆಯನ್ನು ಬಹಳ ವರ್ಷಗಳ ಹಿಂದೆ ಸರ್ಕಾರ ಆರಂಭಿಸಿದೆ. ಹಳ್ಳಿಗಳಲ್ಲಿ ಇರುವ ಸಣ್ಣ ಹಾಗೂ ಮಧ್ಯಮ ವರ್ಗದ ರೈತರಿಗೆ ಅನುಕೂಲ ಆಗುವಂತೆ ಈ ಯೋಜನೆ ರೂಪಿಸಲಾಗಿದೆ. ಯಾವುದೇ ಬ್ಯಾಂಕ್ ಗಳಲ್ಲಿ ಸಿಗುವುದಕ್ಕಿಂತ ಹೆಚ್ಚಿನ ಲಾಭ ಇಲ್ಲಿ ಸಿಗುತ್ತದೆ. ಕೇವಲ 2-3 ವರ್ಷಗಳಲ್ಲಿ ಕಿಸಾನ್ ವಿಕಾಸ್ ಪತ್ರದಲ್ಲಿ ಹೂಡಿಕೆ ಮಾಡಿದ್ರೆ ಹಣ ದ್ವಿಗುಣವಾಗುತ್ತೆ. ಯಾಕೆಂದರೆ ಇದಕ್ಕೆ ಉತ್ತಮ ಬಡ್ಡಿ (Interest)  ದರವನ್ನು ನೀಡಲಾಗುತ್ತದೆ. ನೀವು ಎಷ್ಟು ಹಣವನ್ನು ಬೇಕಾದರೂ ಈ ಯೋಜನೆಯ ಅಡಿಯಲ್ಲಿ ಠೇವಣಿ ಇಡಬಹುದು.  ಕಿಸಾನ್ ವಿಕಾಸ ಪತ್ರದಲ್ಲಿ ಹಣವನ್ನು ಇಟ್ಟರೆ ಕನಿಷ್ಠ ಮೂರು ಪಟ್ಟಿನಷ್ಟು ಅಧಿಕ ಲಾಭ ಸಿಗುತ್ತದೆ. ಇದನ್ನೂ ಓದಿ: Jayalalitha: ಮಂಡ್ಯ ಮೂಲದ ಕನ್ನಡ ನಟಿಯ ಬಳಿ ಇತ್ತು ಬರೋಬ್ಬರಿ 900 ಕೋಟಿ ಆಸ್ತಿ: ಅಷ್ಟು ಹಣ ಆಕೆ ಸಂಪಾದನೆ ಮಾಡಿದ್ದಾದರೂ ಹೇಗೆ?

ಇಲ್ಲಿ ಕಿಸಾನ್ ವಿಕಾಸ್ ಪತ್ರ ಯೋಜನೆ ಆರಂಭಿಸಬಹುದು:

ಸಾಮಾನ್ಯವಾಗಿ ಹಳ್ಳಿಗಳಲ್ಲಿ ವ್ಯವಸ್ಥಿತ ಬ್ಯಾಂಕ್ ವ್ಯವಸ್ಥೆ ಇರುವುದಿಲ್ಲ. ಹಾಗಂತ ನೀವು ದೂರದ ಬ್ಯಾಂಕ್ ಗಳಿಗೆ ಹೋಗಬೇಕಾಗಿಲ್ಲ.  ಪ್ರತಿಯೊಂದು ಗ್ರಾಮದಲ್ಲಿಯೂ ಪೋಸ್ಟ್ ಆಫೀಸ್ ಇದ್ದೇ ಇರುತ್ತೆ ಅಲ್ವಾ? ಅಲ್ಲಿಯೇ ಕಿಸಾನ್ ವಿಕಾಸ್ ಪತ್ರ ಯೋಜನೆ ಹೂಡಿಕೆ ಆರಂಭಿಸಬಹುದು.

ಕಿಸಾನ್ ವಿಕಾಸ ಪತ್ರಕ್ಕೆ ಸಿಗುವ ಬಡ್ಡಿ ದರ:

ಕಿಸಾನ್ ವಿಕಾಸ ಪತ್ರದಲ್ಲಿ ಹಿಂದಿನ ಬಡ್ಡಿದರ 7.2% ನಷ್ಟು ನಿಗದಿಯಾಗಿತ್ತು. ಆಗ ರೈತರು ಇಟ್ಟ ಠೇವಣಿ ಹಣ 120 ರಿಂದ 123 ತಿಂಗಳುಗಳಲ್ಲಿ ದುಪ್ಪಟ್ಟಾಗುತ್ತಿತ್ತು. ಈಗ ಬಡ್ಡಿ ದರದಲ್ಲಿಯೂ ಹೆಚ್ಚಳವಾಗಿದೆ. 7.02% ನಿಂದ 7.5% ಗೆ ಬಡ್ದಿದರ ಏರಿಕೆ ಮಾಡಲಾಗಿದ್ದು, ಕೇವಲ 115 ತಿಂಗಳಿನಲ್ಲಿ ರೈತರು ಇಟ್ತ ಠೇವಣಿಗೆ ಉತ್ತಮ ಆದಾಯ ಪಡೆಯಬಹುದು.

ಎಷ್ಟು ಹೂಡಿಕೆ ಮಾಡಬಹುದು, ಯಾರು ಹೂಡಿಕೆ ಮಾಡಬಹುದು

  • ಕಿಸಾನ್ ವಿಕಾಸ ಪತ್ರದಲ್ಲಿ  ಹೂಡಿಕೆ ಕನಿಷ್ಠ ಮೊತ್ತ 1000ರೂ. ಗಳು
  • ಹೂಡಿಕೆಗೆ ಗರಿಷ್ಠ ಮಿತಿ ಇಲ್ಲ
  • ಈ ಯೋಜನೆಗೆ 10 ವರ್ಷಗಳಿಗಿಂತ ಹೆಚ್ಚಿನ ವಯಸ್ಸಿನವರು ಹೂಡಿಕೆ ಮಾಡಬಹುದು.
  • ಆದರೆ ಸ್ವತಃ ರೈತ ಅಥವಾ ರೈತ ನಮ್ಮನೆಯ ಸದಸ್ಯರು ಮಾತ್ರ ಈ ಖಾತೆಯನ್ನು ತೆರೆಯಲು ಸಾಧ್ಯ.

ಅರ್ಜಿ ಸಲ್ಲಿಸಲು ಬೇಕಾಗಿರುವ ದಾಖಲೆಗಳು

Comments are closed.