Arecanut Price: ಇದು ಅಡಿಕೆ ಬೆಳೆಯಲ್ಲ ಬಂಗಾರದ ಬೆಳೆ: 500ರ ಗಡಿ ದಾಟುತ್ತಿರುವ ಅಡಿಕೆ ದರ!

Arecanut Price: ನಾವು ದಿನವೂ ಖರೀದಿಸುವ ವಸ್ತುಗಳ ಬೆಲೆ ದಿನದಿಂದ ದಿನಕ್ಕೆ ಜಾಸ್ತಿಯಾಗುತ್ತದೆ. ಇತ್ತೀಚಿಗಂತೂ ಏರಿಕೆ ಕಂಡ ಟೊಮೆಟೊ ಬೆಲೆ, ಟೊಮ್ಯಾಟೋ ಖರೀದಿ ಮಾಡುವುದೇ ಬೇಡ ಎನ್ನುವಷ್ಟರ ಮಟ್ಟಿಗೆ ಹೆಚ್ಚಳವಾಗಿತ್ತು. ಅಕ್ಕಿ ಗೋಧಿ ಹಾಲು ಹೀಗೆ ನಮ್ಮ ಪ್ರತಿನಿತ್ಯದಲ್ಲಿ ಬೇಕಾಗುವ ಎಲ್ಲಾ ವಸ್ತುಗಳು ಕೂಡ ದುಬಾರಿಯಾಗಿರುವುದು ಜನರಿಗೆ ಸಮಸ್ಯೆ ಉಂಟು ಮಾಡಿದೆ. ಆದರೆ ಎಷ್ಟು ಬಾರಿ ನಾವು ಖರೀದಿಸುವ ವಸ್ತುಗಳ ಬೆಲೆ ಜಾಸ್ತಿಯಾಗುತ್ತದೆ ಹೊರತು ನಾವು ಮಾರಾಟ ಮಾಡುವ ವಸ್ತುಗಳ ಬೆಲೆ ಜಾಸ್ತಿ ಆಗುವುದಿಲ್ಲ. ಹಾಗೇನಾದ್ರೂ ನೀವು ಖುಷಿಯಲ್ಲಿ ಇದ್ದು ಅಡಿಕೆ ಮಾರಾಟ ಮಾಡುತ್ತಿದ್ದರೆ ನಿಮಗೆ ಬಂಪರ್ ಲಾಟರಿ ಹೊಡೆದಿದೆ ಎಂದು ಹೇಳಬಹುದು.

ಹೌದು ಅಡಿಕೆ ಬೆಲೆಯಲ್ಲಿ ಪ್ರತಿದಿನ ಏರಿಳಿತ ಆಗುವುದು ಸಾಮಾನ್ಯ ಆದರೆ ಇತ್ತೀಚಿನ ದಿನಗಳಲ್ಲಿ ಭೂತಾನನಿಂದ ಅಡಿಕೆ ಖರೀದಿ ಮಾಡುತ್ತಿದೆ ದೇಶ ಎನ್ನುವ ಕಾರಣಕ್ಕೆ ದೇಶೀಯ ಅಡಿಕೆ ಬೆಳೆಗಾರರಲ್ಲಿ ಆತಂಕ ಮೂಡಿತ್ತು. ಆದರೆ ಇನ್ನು ಮುಂದೆ ಚಿಂತೆ ಬೇಡ ಅಡಿಕೆ ಧಾರಣೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದ್ದು ಐದುನೂರು ಗಡಿ ಕೂಡ ಸಮೀಪಿಸಿದೆ. ಕಳೆದ ತಿಂಗಳು ಪ್ರತಿ ಕೆಜಿಗೆ 370ಗಳ ಅಡಿಕೆದರ ಇದೀಗ 487 ರೂಪಾಯಿಗಳನ್ನು ತಲುಪಿದೆ. 80ಗಳಷ್ಟು ಏರಿಕೆ ಕಂಡಿರುವ ಅಡಿಕೆದರ ಇಂದು ಎಷ್ಟಿದೆ ನೋಡೋಣ.

ಅಡಿಕೆ ಧಾರಣೆ:
ಮಂಗಳೂರು

ಹೊಸ ಚಾಲಿ – 447ರೂ. ಕೆ.ಜಿಗೆ.
ಹಳೆ ಚಾಲಿ – 485 ರಿಂದ 487 ಪ್ರತಿ ಕೆಜಿಗೆ
ಕರಿ ಗೋಟು- 340 ರೂ. ಪ್ರತಿ ಕೆಜಿಗೆ
ಚಿಪ್ಪು ಗೋಟು – 325 ರಿಂದ 330 ರೂಪಾಯಿ ಪ್ರತಿ ಕೆಜಿಗೆ
ಕುಮಟಾ:
ಚಿಪ್ಪು – ಕ್ವಿಂಟಲ್ ಗೆ 34, 059 ರೂಪಾಯಿ.
ಫ್ಯಾಕ್ಟರಿ – 22,169 ರೂಪಾಯಿಗಳು
ಹಣ್ಣು ಅಡಿಕೆ – 40,629 ರೂಪಾಯಿಗಳು
ಶಿವಮೊಗ್ಗ:
ಬಟ್ಟೆ – 52,200
ರಾಶಿ – 50, 019 ರೂಪಾಯಿಗಳು
ಗೊರಬಲು- 38,679 ರೂಪಾಯಿಗಳು

Comments are closed.