Jayalalitha: ಮಂಡ್ಯ ಮೂಲದ ಕನ್ನಡ ನಟಿಯ ಬಳಿ ಇತ್ತು ಬರೋಬ್ಬರಿ 900 ಕೋಟಿ ಆಸ್ತಿ: ಅಷ್ಟು ಹಣ ಆಕೆ ಸಂಪಾದನೆ ಮಾಡಿದ್ದಾದರೂ ಹೇಗೆ?

Jayalalitha: ಸ್ಯಾಂಡಲ್ ವುಡ್ ನಲ್ಲಿ ಆಕೆ ಮಾಡಿದ್ದು ಹೆಚ್ಚು ಸಿನಿಮಾಗಳೇನು ಅಲ್ಲ. ಆದರೆ ಕನ್ನಡಿಗರಿಗೆ ಮಾತ್ರವಲ್ಲದೆ ಇಡೀ ದೇಶಕ್ಕೆ ಆಕೆ ಚಿರಪರಿಚಿತ ನಟಿ. ನಟಿ ಎನ್ನುವುದಕ್ಕಿಂತ ಆಕೆಯನ್ನು ‘’ಅಮ್ಮ’(Amma) ಎನ್ನಬಹುದೇನೋ!

1960ರ ದಶಕವನ್ನು ನೆನಪಿಸಿಕೊಳ್ಳಿ!

ಹೌದು, 1960ರ ದಶಕದಲ್ಲಿ ದಕ್ಷಿಣ ಭಾರತದಲ್ಲಿ ಈಕೆ ಅಸಾಮಾನ್ಯ ಪ್ರತಿಭೆ ಅನಾವರಣಗೊಂಡಿತು. ಆಕೆ ತನ್ನ ಚಿಕ್ಕ ವಯಸ್ಸಿನಲ್ಲಿ ಸಂಪಾದನೆ ಮಾಡಿದ ಆಕೆಯ ಬಳಿ ಇದ್ದ ಚಿನ್ನ (Gold) ದುಡ್ಡು (money) ಬೆಳ್ಳಿ (Silver) ಮೊದಲಾದವುಗಳಿಗೆ ಬೆಲೆಯೇ ಇಲ್ಲ. ಒಬ್ಬ ಹೀರೋ ತನ್ನ ಸಿನಿಮಾಕ್ಕೆ ಒಂದು ಕೋಟಿ ರೂಪಾಯಿ ಸಂಭಾವನೆ ಪಡೆಯಲು ಆರಂಭಿಸಿದರೆ ಆಕೆಯ ಬಳಿ ನೂರು ಕೋಟಿಯಷ್ಟು ಆಸ್ತಿ ಸಂಪಾದನೆಯಾಗಿತ್ತು. ಆಕೆ ಬೇರೆ ಯಾರು ಅಲ್ಲ ತಮಿಳುನಾಡಿನ ಅಮ್ಮ ಎಂದೇ ಕರೆಸಿಕೊಳ್ಳುವ ಜಯಲಲಿತ (Jayalalitha).

ಈಗಿನ ಸ್ಟಾರ್ ನಟಿಯರಾದ ಐಶ್ವರ್ಯ ರೈ, ದೀಪಿಕಾ ಪಡುಕೋಣೆ ಮೊದಲಾದ ನಟಿಯರಿಗೆ ಹೋಲಿಸಿದರೆ ಆಗಿನ ಕಾಲದಲ್ಲಿ ಜಯಲಲಿತ ಬಳಿ ಇದ್ದದ್ದು ಅದಕ್ಕಿಂತ ಮೂರು ಪಟ್ಟು ಹೆಚ್ಚಿನ ಆಸ್ತಿ. ಸಿನಿಮಾದಲ್ಲಿ ಮಾತ್ರವಲ್ಲದೆ ಆಕೆ ಜೀವನ ಕಂಡುಕೊಂಡಿದ್ದೆ ರಾಜಕೀಯದಲ್ಲಿ. ಅಷ್ಟು ಹಣವನ್ನು ಸಂಪಾದಿಸಿದ್ದು ಕೂಡ, ಬಣ್ಣದ ಬದುಕಿಗೆ ಗುಡ್ ಬೈ ಹೇಳಿ ರಾಜಕಾರಣಕ್ಕೆ ಸೇರಿದ ನಂತರ.

900 ಕೋಟಿ ಆಸ್ತಿಯ ಒಡತಿ:

1997ರಲ್ಲಿ ಜಯಲಲಿತ ಅವರ ರಾಜಕೀಯ ಜೀವನ ಉತ್ತುಂಗದಲ್ಲಿ ಇದ್ದ ಸಮಯ ಆಗ ಅವರ ಮನೆಯ ಮೇಲೆ ರೆಡ್ ಆಗುತ್ತೆ. ಆಗ ಸಿಕ್ಕ ಬೃಹತ್ ಸಂಪತ್ತಿನ ಬಗ್ಗೆ ತಿಳಿದರೆ ನಿಮಗೂ ಆಶ್ಚರ್ಯವಾಗಬಹುದು. ಆಗ ಆಕೆ ಬಳಿ ಇದ್ದದ್ದು 10,500 ಸೀರೆಗಳು 91 ವಾಚ್ ಗಳು, 200 ಕೆಜಿ ಬೆಳ್ಳಿ ಹಾಗೂ 28 ಕೆಜಿ ಚಿನ್ನ, 750ಕ್ಕೂ ಹೆಚ್ಚು ಪಾದರಕ್ಷೆಗಳ ಜೋಡಿ. ಆಕೆ ತನ್ನ ಬಳಿ ಇರುವ ಆಸ್ತಿ 118 ಕೋಟಿ ಎಂದು ಘೋಷಿಸಿದ್ದರೂ, ವರದಿಯ ಪ್ರಕಾರ ಆಕೆಯ ಬಳಿ ಇದ್ದದ್ದು ಬರೋಬ್ಬರಿ 900 ಕೋಟಿ ರೂಪಾಯಿಗಳ ಆಸ್ತಿ.

2016ರಲ್ಲಿ ಮತ್ತೊಮ್ಮೆ ಜಯಲಲಿತ ಅವರ ಆಸ್ತಿ ತನಿಖೆ ಮಾಡಲಾಗಿತ್ತು. ಆಗ ಸಿಕ್ಕಿದ್ದು 1250 ಕೆಜಿ ಬೆಳ್ಳಿ 21 ಕೆಜಿ ಚಿನ್ನ 40 ಕೋಟಿಗೂ ಹೆಚ್ಚಿನ ಮೌಲ್ಯದ ಚರ ಆಸ್ತಿಗಳು ಹಾಗೂ ಎಂಟು ಕಾರುಗಳು. ಚಿಕ್ಕ ವಯಸ್ಸಿನಲ್ಲಿ ನಟನೆ ಆರಂಭಿಸಿದ ಜಯಲಲಿತ ಅವರು ಕಲ್ಯಾಣಕುಮಾರ್, ಎನ್ ಟಿ ರಾಮರಾವ್ ,ಅಕ್ಕಿನೇಣಿ ನಾಗೇಶ್ವರ್ ರಾವ್ ಮೊದಲಾದ ಯಶಸ್ವಿ ನಟರ ಜೊತೆಗೆ ತೆರೆ ಹಂಚಿಕೊಂಡಿದ್ದಾರೆ.

ಮಂಡ್ಯದಲ್ಲಿ ಹುಟ್ಟಿದ ಕೋಟಿಯ ಒಡತಿ:

ಜಯಲಲಿತಾ ಹುಟ್ಟಿದ್ದು ಮಂಡ್ಯದ ಮೇಲುಕೋಟೆಯಲ್ಲಿ 1948 ರಲ್ಲಿ. 1961 ರಲ್ಲಿ ಕನ್ನಡದಲ್ಲಿ ಶ್ರೀಶೈಲ ಮಹಾತ್ಮೆ ಎನ್ನುವ ಸಿನಿಮಾದಲ್ಲಿ ಮೊದಲ ಬಾರಿಗೆ ಬಾಲ ಕಲಾವಿದೆಯಾಗಿ ಅಭಿನಯಿಸುತ್ತಾರೆ. ನಂತರ ಒಂದು ಬಾಲಿವುಡ್ ಸಿನಿಮಾದಲ್ಲಿಯೂ ಅಭಿನಯಿಸಿ ಬಳಿಕ ತಮ್ಮ ಸಿನಿಮಾ ಜೀವನವನ್ನು ತಮಿಳು ತೆಲುಗು ಸಿನಿಮಾಗಳಲ್ಲಿಯೇ ಕಂಡುಕೊಳ್ಳುತ್ತಾರೆ. ನಂತರ ಅದ್ದೂರಿಯಾಗಿ ರಾಜಕೀಯ ಜೀವನ ನಡೆಸಿದ ಜಯಲಲಿತ, 2016 ಡಿಸೆಂಬರ್ ತಿಂಗಳಿನಲ್ಲಿ ನಿಧನರಾಗುತ್ತಾರೆ. ಆಗ ಅವರಿಗೆ 68 ವರ್ಷ ವಯಸ್ಸು. ಒಟ್ಟಿನಲ್ಲಿ ಜಯಲಲಿತಾ ರಾಜಕೀಯ ಜೀವನದಲ್ಲಿ ಸಾಕಷ್ಟು ಏಳು ಬೀಳುಗಳನ್ನು ಕಂಡಿದ್ದರು ಬದುಕಿರುವವರೆಗೆ ಅಪಾರ ಸಂಪತ್ತಿನ ಒಡತಿಯಾಗಿದ್ದಳು ಎನ್ನುವುದು ಮಾತ್ರ ಸುಳ್ಳಲ್ಲ.

Comments are closed.