DBT Status Check:ಅಗಸ್ಟ್ ತಿಂಗಳಿನ ಅನ್ನಭಾಗ್ಯ ಯೋಜನೆಯ ಹಣ ಕೂಡ ಬಿಡುಗಡೆ ಆಗಿದೆ, ನಿಮ್ಮ ಖಾತೆಗೆ ಬಂದಿದ್ಯೋ ಇಲ್ಲವೋ ಎಂಬುದನ್ನು ಈ ಕೂಡಲೇ ಈ ರೀತಿ ಚೆಕ್ ಮಾಡಿಕೊಳ್ಳಿ!

DBT Status Check: ರಾಜ್ಯ ಸರ್ಕಾರದ (Karnataka Government)  ಗ್ಯಾರಂಟಿ ಯೋಜನೆಗಲ್ಲಿ ಅನ್ನಭಾಗ್ಯ ಯೋಜನೆ (Annabhagya Scheme)  ಕೂಡ ಒಂದು ಇದರ ಅಡಿಯಲ್ಲಿ ಕೇಂದ್ರ ಸರ್ಕಾರದ 5 ಕೆಜಿ ಉಚಿತ ಅಕ್ಕಿಯ ಜೊತೆಗೆ ರಾಜ್ಯ ಸರ್ಕಾರದಿಂದ ಕೂಡ 5 ಕೆಜಿ ಉಚಿತ ಅಕ್ಕಿ (Free Rice) ಸಿಗಬೇಕಿತ್ತು ಆದರೆ ಈ ಅಕ್ಕಿ ಒದಗಿಸಲು ರಾಜ್ಯ ಸರ್ಕಾರಕ್ಕೆ ಸಾಧ್ಯವಾಗದೆ ಇರುವ ಹಿನ್ನೆಲೆಯಲ್ಲಿ ಕಳೆದ ಜುಲೈ ತಿಂಗಳಿನಿಂದ 5 ಕೆಜಿ ಅಕ್ಕಿಯ ಬದಲು ಪ್ರತಿ ಕೆಜಿಗೆ 34 ರೂಪಾಯಿಗಳಂತೆ 5 ಕೆಜಿ ಅಕ್ಕಿಗೆ 170ಗಳನ್ನು, ಬಿಪಿಎಲ್ (BPL) ಹಾಗೂ ಅಂತ್ಯೋದಯ ಕಾರ್ಡ್ ಹೊಂದಿರುವವರಿಗೆ ನೀಡಲಾಗುತ್ತಿದೆ. ನೇರವಾಗಿ ಅವರ ಖಾತೆಗೆ ವರ್ಗಾವಣೆ ಮಾಡಲಾಗುತ್ತೆ.

ಬಾರಿ ನಿಮ್ಮ ಅಕೌಂಟ್ ಗೆ ಹಣ ಬಂದಿದ್ಯಾ ನೋಡಿ!

ಅನ್ನಭಾಗ್ಯ ಯೋಜನೆಯ ಹಣ ಮಂಜೂರ್ ಆಗಿದ್ದರು ಸಾಕಷ್ಟು ಜನರಿಗೆ ಅದು ಸಿಕ್ಕಿಲ್ಲ. ಇದಕ್ಕೆ ಬೇರೆ ಬೇರೆ ಕಾರಣಗಳು ಕೂಡ ಇವೆ. ಸರ್ಕಾರದ ಸರ್ವರ್ ಪ್ರಾಬ್ಲಮ್ ನಿಂದ ಹಿಡಿದು, ನಿಮ್ಮ ಬ್ಯಾಂಕ್ ಅಕೌಂಟ್ ಹಾಗೂ ಆಧಾರ್ ಕಾರ್ಡ್ ಲಿಂಕ್ ಆಗದೆ ಇರುವ ಕಾರಣದಿಂದಲೂ ಕೂಡ ಖಾತೆಗೆ ಹಣ ಬಂದಿರದೆ ಇರಬಹುದು. ಹಾಗೇನಾದರೂ ಆಗಿದ್ದಲ್ಲಿ ಅದೆಲ್ಲವನ್ನ ಸರಿಪಡಿಸಿಕೊಳ್ಳಿ ಜೊತೆಗೆ ಈ ತಿಂಗಳು ಅಂದರೆ ಆಗಸ್ಟ್ ತಿಂಗಳಿನ ಹಣವನ್ನು ಕೂಡ ಸರ್ಕಾರ ಸಂಬಂಧ ಪಟ್ಟವರ ಖಾತೆಗೆ ಜಮಾ ಮಾಡಿದೆ. ಅದನ್ನ ಚೆಕ್ ಮಾಡುವುದು ಹೇಗೆ ನೋಡೋಣ.

ಅನ್ನಭಾಗ್ಯ ಯೋಜನೆಯ ಹಣ ಖಾತೆಗೆ ಬಂದಿರುವುದನ್ನು ಖಚಿತಪಡಿಸಿಕೊಳ್ಳುವುದು ಹೇಗೆ?

  • ಮೊದಲಿಗೆ ಆಹಾರ ಸರಬರಾಜು ಇಲಾಖೆಯ https://ahara.kar.nic.in/Home/EServices ವೆಬ್ಸೈಟ್ ಅನ್ನು ತೆರೆಯಿರಿ.
  • ಅಲ್ಲಿ ಮೇಲ್ಭಾಗದಲ್ಲಿ ಈ ಸೇವೆಗಳು ಎನ್ನುವ ಆಯ್ಕೆ ಕಾಣಿಸುತ್ತದೆ
  • ನಂತರ ಮೂರು ಚುಕ್ಕಿಗಳು ಬ್ಲಿಂಕ್ ಆಗುತ್ತಿರುವುದನ್ನು ಕೆಳಭಾಗದಲ್ಲಿ ಕಾಣಬಹುದು. ಅದರ ಪಕ್ಕದಲ್ಲಿ ಇರುವ ಈ ಸ್ಥಿತಿ ಮೇಲೆ ಕ್ಲಿಕ್ ಮಾಡಿ.
  • ನಂತರ ಡಿಬಿಟಿ ಸ್ಥಿತಿ ಆಯ್ಕೆ ಮಾಡಿಕೊಳ್ಳಿ.
  • ಅಲ್ಲಿ ನೀವು ಯಾವ ಜಿಲ್ಲೆಯವರು ಎಂಬುದನ್ನು ನೋಡಿ ಅದಕ್ಕೆ ಸಂಬಂಧಪಟ್ಟ ನೀಲಿ ಬಣ್ಣದಲ್ಲಿ ಇರುವ ಲಿಂಕ್ ಮೇಲೆ ಕ್ಲಿಕ್ ಮಾಡಿ.
  • ಆಗ ಹೊಸದೊಂದು ಪೇಜ್ ಓಪನ್ ಆಗುತ್ತೆ.
  • ಈ ಪೇಜ್ ನಲ್ಲಿ ಕೆಳಭಾಗದಲ್ಲಿ ಸ್ಟೇಟಸ್ ಆಫ್ ಡಿಬಿಟಿ/ ನೇರ ನಗದು ವರ್ಗಾವಣೆ ಸ್ಥಿತಿ ಎಂಬುದರ ಮೇಲೆ ಕ್ಲಿಕ್ ಮಾಡಿ.
  • ಬಳಿಕ ಇನ್ನೊಂದು ಪೇಜ್ ತೆರೆದುಕೊಳ್ಳುತ್ತದೆ.
  • ಅಲ್ಲಿ ನೀವು ನಿಮ್ಮ ಆರ್ ಸಿ ಅಂದರೆ ರೇಷನ್ ಕಾರ್ಡ್ ಸಂಖ್ಯೆಯನ್ನು ನಮೂದಿಸಬೇಕು. ಬಳಿಕ ಯಾವ ತಿಂಗಳು ಎಂಬುದನ್ನು ಆಯ್ಕೆ ಮಾಡಿಕೊಳ್ಳಿ.
  • ಕ್ಯಾಪ್ಚ ನಂಬರ್ ನಮೂದಿಸಿ, ಗೋ ಎಂದು ಕ್ಲಿಕ್ ಮಾಡಿದರೆ ನಿಮ್ಮ ಖಾತೆಗೆ ಹಣ ಜಮಾ ಆಗಿದೆಯೋ ಇಲ್ಲವೋ ಎನ್ನುವ ಸಂಪೂರ್ಣ ಮಾಹಿತಿ ತಿಳಿಯುತ್ತದೆ.

ಈ ರೀತಿ ಆಗಸ್ಟ್ ತಿಂಗಳ ಅನ್ನಭಾಗ್ಯ ಯೋಜನೆಯ ಹಣ ನಿಮ್ಮ ಖಾತೆಗೆ ಜಮಾ ಆಗಿದ್ಯೋ, ಇಲ್ವೋ ಎಂಬುದನ್ನು ತಿಳಿದುಕೊಳ್ಳಬಹುದು.

Comments are closed.