Game Designer course: ಗೇಮ್ ಆಡೋದು ಮಾತ್ರವಲ್ಲ ಇದರಿಂದ ಲಕ್ಷ ಲಕ್ಷ ಹಣ ಸಂಪಾದಿಸಬಹುದು ಹೇಗೆ ಗೊತ್ತಾ? PUC ನಂತ್ರ ಇದೊಂದು ಕೋರ್ಸ್ ಮಾಡಿ ಸಾಕು!

Game Designer course: ಸಾಮಾನ್ಯವಾಗಿ ಮೊಬೈಲ್ ನಲ್ಲಿ ಅಥವಾ ಕಂಪ್ಯೂಟರ್, ಲ್ಯಾಪ್ಟಾಪ್ ನಲ್ಲಿ ಗೇಮ್ ಆಡುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಮಕ್ಕಳು ಮಾತ್ರವಲ್ಲದೆ ವಯಸ್ಕರು ವೃದ್ಧರು ಎಲ್ಲರೂ ಕೂಡ ಗೇಮಿಂಗ್ ಆಪ್ (Gaming App)  ಗಳನ್ನು ಮೊಬೈಲ್ ನಲ್ಲಿ ಡೌನ್ಲೋಡ್ (Download) ಮಾಡಿಕೊಂಡು ಆಟವಾಡುತ್ತಾರೆ. ಆದರೆ ಈ ಗೇಮ್ ಆಡುತ್ತಾ ಆಗುತ್ತಾ ನಿಮ್ಮ ಜೀವನವನ್ನು ಹಾಳು ಮಾಡಿಕೊಳ್ಳುವ ಬದಲು ಈ ಒಂದು ಕೆಲಸ ಮಾಡಿ ಇದರಿಂದ ನಿಮ್ಮ ಜೀವನ ಉದ್ಧಾರವಾಗುತ್ತೆ ನೋಡಿ. ಇದನ್ನು ಓದಿ: DBT Status Check:ಅಗಸ್ಟ್ ತಿಂಗಳಿನ ಅನ್ನಭಾಗ್ಯ ಯೋಜನೆಯ ಹಣ ಕೂಡ ಬಿಡುಗಡೆ ಆಗಿದೆ, ನಿಮ್ಮ ಖಾತೆಗೆ ಬಂದಿದ್ಯೋ ಇಲ್ಲವೋ ಎಂಬುದನ್ನು ಈ ಕೂಡಲೇ ಈ ರೀತಿ ಚೆಕ್ ಮಾಡಿಕೊಳ್ಳಿ!

12ನೇ ತರಗತಿಯ ನಂತರ ಮಾಡಿ ಈ ಕೋರ್ಸ್!

ಪಿಯುಸಿ (After PCU Course) ಮುಗಿದ ನಂತರ ಹಲವಾರು ಕೋರ್ಸ್ಗಳು ಲಭ್ಯವಿರುತ್ತದೆ ಕೆಲವರು ಇಂಜಿನಿಯರಿಂಗ್ ಅಥವಾ ಮೆಡಿಕಲ್ ಓದಿದರೆ ಇನ್ನೂ ಕೆಲವರು ಯಾವ ಕೋರ್ಸ್ ತೆಗೆದುಕೊಂಡು ಬೇಗ ಹಣ ಸಂಪಾದಿಸಬಹುದು ವೃತ್ತಿ ಜೀವನವನ್ನು ಆಯ್ದುಕೊಳ್ಳಬಹುದು ಎಂದು ಯೋಚನೆ ಮಾಡುತ್ತಾರೆ. ಹಾಗೇನಾದ್ರೂ ನೀವು ಗೊಂದಲಕ್ಕೆ ಒಳಗಾಗಿದ್ದರೆ ಗೇಮ್ ಡಿಸೈನಿಂಗ್ ಕೋರ್ಸ್ (Game Designing Course)  ತೆಗೆದುಕೊಳ್ಳಬಹುದು.

ಹೌದು ನಿಮಗೆ ಗೇಮಿಂಗ್ ನಲ್ಲಿ ಹೆಚ್ಚು ಇಂಟರೆಸ್ಟ್ ಇದ್ದರೆ ಕಂಪ್ಯೂಟರ್ ಪ್ರೋಗ್ರಾಮ್ ಗಳ ಬಗ್ಗೆ ತಿಳಿದುಕೊಂಡರೆ, ಡಿಸೈನರ್ ಗೇಮಿಂಗ್ ಸಾಫ್ಟ್ವೇರ್ (Software) ಮೂಲಕ ಗೇಮ್ ಡಿಸೈನರ್ ಆಗಲು ಸಾಧ್ಯವಿದೆ. ಇತ್ತೀಚಿನ ತಂತ್ರಜ್ಞಾನಗಳನ್ನು ಬಳಸಿ ಹೊಸ ಹೊಸ ಗೇಮಿಂಗ್ ನೀವು ಕೂಡ ತಯಾರಿಸಬಹುದು. ವಿಶೇಷವಾದ ಗೇಮ್ಸ್ ಗಳು ಅದರಲ್ಲಿ ಕಂಪ್ಯೂಟರ್ ಕೋಡಿಂಗ್, ಕಂಪ್ಯೂಟರ್ ಭಾಷೆಗಳು, ಪ್ರೋಗ್ರಾಮ್ ಅಳವಡಿಸುವುದು ಈ ಎಲ್ಲಾ ವಿಚಾರಗಳನ್ನು ಕೂಡ ನೀವು ಕೋರ್ಸ್ ಮೂಲಕ ತಿಳಿದುಕೊಳ್ಳಬಹುದು.

ಗೇಮ್ ಡಿಸೈನರ್ ಕೋರ್ಸ್ ಮಾಡುವುದು ಹೇಗೆ?

ನೀವು ಗೇಮ್ ಡಿಸೈನರ್ ಕೋರ್ಸ್ ಮಾಡುವುದಿದ್ದರೆ ಕೆಲವು ಪ್ರವೇಶ ಪರೀಕ್ಷೆಯಲ್ಲಿ ಕೂಡ ಉತ್ತೀರ್ಣವಾಗಬೇಕು. (NIDDAT, UCEED, AIEED, CEED) ಮೊದಲಾದ ಪ್ರವೇಶ ಪರೀಕ್ಷೆಯನ್ನು ತೆಗೆದುಕೊಳ್ಳಬೇಕು. ಗೇಮ್ ಆಟ ಗೇಮ್ ಅನಿಮೇಷನ್ ಗೇಮ್ ಪ್ರೋಗ್ರಾಮ್ ಗೆ ಸಂಬಂಧಪಟ್ಟ ಅನೇಕಾ ಕೋರ್ಸ್ಗಳು ಇರುತ್ತವೆ. ಇನ್ನು ಈ ಕೋರ್ಸ ಮಾಡಲು ಪಿಯುಸಿ ಸೈನ್ಸ್ ವಿಭಾಗದಲ್ಲಿ ಕನಿಷ್ಠ 50 ಅಂಕಗಳೊಂದಿಗೆ ಉತ್ತೀರ್ಣರಾಗಿರಬೇಕು. ಇದನ್ನೂ ಓದಿ: Ration Card Correction: ರೇಷನ್ ಕಾರ್ಡ್ ತಿದ್ದುಪಡಿಗೆ ಅವಕಾಶ; ಹೊಸ ರೇಷನ್ ಕಾರ್ಡ್ ಕೂಡ ಮಾಡಿಸಿಕೊಳ್ಳಬಹುದೇ? ರಾಜ್ಯ ಸರ್ಕಾರದ ಮಹತ್ವದ ಸೂಚನೆ!

ಕೂರ್ಸ ಅವಧಿ:

ಗೇಮಿಂಗ್ ಡಿಸೈನರ್ ಕೋರ್ಸ್ ಅವಧಿ ಮೂರು ತಿಂಗಳಿನಿಂದ ಮೂರು ವರ್ಷದ ವರೆಗೆ ಇರುತ್ತದೆ. ನೀವು ಆಯ್ದುಕೊಳ್ಳುವ ಕೋರ್ಸ್ಗೆ ಸಂಬಂಧ ಪಟ್ಟ ಹಾಗೆ ಶುಲ್ಕವು ಕೂಡ ಇರುತ್ತದೆ. 50,000 ಗಳಿಂದ 6 ಲಕ್ಷ ರೂಪಾಯಿಗಳವರೆಗೆ ಚಾರ್ಜ್ ಇರಬಹುದು.

ಗಳಿಸಿರಿ ಲಕ್ಷ ಲಕ್ಷ ಹಣ

ಇನ್ನು ನೀವು ಪಿಯುಸಿ ಬಳಿಕ ಬೇರೆ ವಿದ್ಯಾಭ್ಯಾಸವನ್ನು ಮಾಡಲು ಇಷ್ಟವಿಲ್ಲದೆ ಇದ್ದಲ್ಲಿ ಗೇಮ್ ಡಿಸೈನರ್ ಕೋರ್ಸ್ ಅತ್ಯುತ್ತಮ ಆಯ್ಕೆಯಾಗಿದೆ. ಪ್ರತಿ ಜೀವನಕ್ಕೆ ಕಾಲಿಟ್ಟರೆ, ವಾರ್ಷಿಕವಾಗಿ ಮೂರರಿಂದ ಆರು ಲಕ್ಷ ರೂಪಾಯಿಗಳ ಪ್ಯಾಕೇಜ್ ಪಡೆಯಬಹುದು. ಇನ್ನು ಹೆಚ್ಚು ಹೆಚ್ಚು ಸಂಬಳ ಪಡೆಯುವುದಕ್ಕಾಗಿ ಗೇಮಿಂಗ್ ನಲ್ಲಿಯೇ ಪದವಿ ಕೋರ್ಸಗಳು ಕೂಡ ಲಭ್ಯವಿದೆ ಅವುಗಳನ್ನು ಕೂಡ ನೀವು ಮುಂದುವರಿಸಬಹುದು.

Comments are closed.