E-KYC: ಇ ಕೆ ವೈ ಸಿ ಮಾಡಿಸಿಕೊಳ್ಳುವುದಕ್ಕೆ ಆಗಸ್ಟ್ 31 ಕೊನೆಯ ದಿನಾಂಕ: ಪಡಿತರ ಚೀಟಿದಾರರು ಲಿಂಕ್ ಮಾಡಿಸಿಕೊಳ್ಳಲೇಬೇಕು!

E-KYC: ಸರ್ಕಾರ ಈಗಾಗಲೇ ಈ ಬಗ್ಗೆ ಮಾಹಿತಿಯನ್ನು ನೀಡಿದೆ. ಪಡಿತರ ಚೀಟಿದಾರರು (ration Card holders)  ಆಗಸ್ಟ್ 31ರ ಒಳಗೆ ಇ ಕೆ ವೈ ಸಿ (E-KYC) ಮಾಡಿಸಿಕೊಳ್ಳುವುದು ಕಡ್ಡಾಯ ಎಂದು ಆಹಾರ ಇಲಾಖೆ ತಿಳಿಸಿದೆ. ಇಲ್ಲವಾದರೆ ರೇಷನ್ ಕಾರ್ಡ್ ರದ್ದಾಗುತ್ತದೆ ಜೊತೆಗೆ ಸರ್ಕಾರದಿಂದ ಸಿಗಬೇಕಾಗಿರುವ ಯಾವುದೇ ಸೌಲಭ್ಯಗಳು ಕೂಡ ಸಿಗುವುದಿಲ್ಲ. ಇದನ್ನೂ ಓದಿ: World Cup 2023: ವಿಶ್ವ ಕಪ್ ಆಡಲು ಕೆಎಲ್ ರಾಹುಲ್ ಬದಲು ದ್ವಿಶತಕ ವೀರ 25ರ ಈ ಪೋರ ಆಯ್ಕೆಯಾಗಬಹುದಾ? ಕ್ರಿಕೆಟಿಗರಲ್ಲಿ ಮೂಡಿದ ಕುತೂಹಲ!

ಇ ಕೆ ವೈ ಸಿ ಮಾಡಿಸಿಕೊಳ್ಳುವುದು ಯಲ್ಲಿ?

ಪಡಿತರ ವಸ್ತುಗಳನ್ನು ತೆಗೆದುಕೊಳ್ಳುವ ನ್ಯಾಯಬೆಲೆ ಅಂಗಡಿಯಲ್ಲಿ ಬ್ಯಾಂಕ್ ಖಾತೆಗೆ ಆಧಾರ ಲಿಂಕ್ ಮಾಡಿಸಿಕೊಳ್ಳಬಹುದು ಅದೇ ರೀತಿ ಆನ್ಲೈನ್ ನಲ್ಲಿಯೂ ಕೂಡ ಕೆ ವೈ ಸಿ ನವೀಕರಣ ಪ್ರಕ್ರಿಯೆ ಮಾಡಿಸಿಕೊಳ್ಳಲು ಅವಕಾಶವಿದೆ. ಆನ್ಲೈನ್ ನಲ್ಲಿ ಯಾವ ರೀತಿ ಮಾಡಿಕೊಳ್ಳುವುದು ನೋಡೋಣ.

ಆನ್ಲೈನ್ ಕೆ ವೈ ಸಿ:

  • ಮೊದಲಿಗೆ ನೀವು ಯಾವ ಬ್ಯಾಂಕ್ ಶಾಖೆಯಲ್ಲಿ ನಿಮ್ಮ ಖಾತೆ ಹೊಂದಿರುತ್ತೀರೋ ಆ ಬ್ಯಾಂಕ್ ಅಧಿಕೃತ ಹೋಟೆಲ್ ಅನ್ನು ತೆರೆಯಬೇಕು.
  • ಲಾಗ್ ಇನ್ ಮಾಡಿ ಕೆವೈಸಿ ಆಯ್ಕೆಯ ಮೇಲೆ ಕ್ಲಿಕ್ ಮಾಡಿ
  • ಆಧಾರ್ ಪ್ಯಾನ್ ಕಾರ್ಡ್ ಹಾಗೂ ಅಗತ್ಯ ದಾಖಲೆಗಳನ್ನು ನೀಡಬೇಕು.
  • ಈ ಎಲ್ಲ ಮಾಹಿತಿಗಳ ಸ್ಕ್ಯಾನ್ ಕಾಪಿ ಅಪ್ಲೋಡ್ ಮಾಡಬೇಕು ಕಡ್ಡಾಯವಾಗಿದೆ ಎಂಬುದನ್ನು ನೆನಪಿಟ್ಟುಕೊಳ್ಳಿ.
  • ಪ್ರಕ್ರಿಯೆ ಪೂರ್ಣಗೊಂಡ ನಂತರ ಸಬ್ಮಿಟ್ ಎಂದು ಆಯ್ಕೆಯ ಮೇಲೆ ಕ್ಲಿಕ್ ಮಾಡಿ ನಂತರ ನಿಮಗೆ ಒಂದು ಸಂಖ್ಯೆಯನ್ನು ನೀಡಲಾಗುತ್ತದೆ. ಅದರ ಆಧಾರದ ಮೇಲೆ ಕೆವೈಸಿ ಆಗಿದ್ಯೋ ಇಲ್ಲವೋ ಎಂಬುದನ್ನು ಆನ್ಲೈನ್ ನಲ್ಲಿಯೇ ಚೆಕ್ ಮಾಡಿಕೊಳ್ಳಬಹುದು. ಇದನ್ನು ಓದಿ:Ration Card Update: 4 ಚಕ್ರದ ವಾಹನ ಇದ್ರೂ ರದ್ದಾಗಲ್ವಾ BPL ಕಾರ್ಡ್; ರಾಜ್ಯದ ಜನತೆಗೆ ಗುಡ್ ನ್ಯೂಸ್ ನೀಡಿದ ಕೆ. ಹೆಚ್ ಮುನಿಯಪ್ಪ!

ಗ್ರಾಹಕರು ಕೆ ವೈ ಸಿ ಮಾಡಿಸಿಕೊಳ್ಳದೆ ಇದ್ದಲ್ಲಿ ಬ್ಯಾಂಕಿನ ವಹಿವಾಟಿನ ಮೇಲೆ ನಿರ್ಬಂಧ ಹೇರಲಾಗುವುದು ಸರ್ಕಾರದ ಯಾವುದೇ ಹಣಕಾಸಿನ ಪ್ರಯೋಜನಗಳು ಕೂಡ ಸಿಗುವುದಿಲ್ಲ ಅಲ್ಲದೇ ನಿಮ್ಮ ಬ್ಯಾಂಕ್ ಖಾತೆಯನ್ನು ಸ್ಥಗಿತಗೊಳಿಸಲು ಬಹುದು. ಈ ಕೆ ವೈ ಸಿ ಮಾಡಿಸಿಕೊಳ್ಳದೆ ಇದ್ದರೆ ರೇಷನ್ ಕಾರ್ಡ್ ಕೂಡ ಸಿಗುವುದಿಲ್ಲ. ಅಗಸ್ಟ್ 31ರ ಒಳಗೆ ಈಕೆ ವೈ ಸಿ ಮಾಡಿಸಿಕೊಳ್ಳುವುದು ಕಡ್ಡಾಯವಾಗಿದೆ ಹಾಗಾಗಿ ಪಡಿತರ ಚೀಟಿ ಹೊಂದಿರುವವರು ಸರ್ಕಾರದಿಂದ ಸಿಗುವ ಪ್ರಯೋಜನಗಳನ್ನು ಪಡೆದುಕೊಳ್ಳಲು ಈ ಕೆವೈಸಿ ಯನ್ನು ಕೂಡಲೇ ಮಾಡಿಕೊಳ್ಳಿ.

Comments are closed.