Property Rules: 12 ವರ್ಷ ಒಂದೇ ಮನೆಯಲ್ಲಿ ವಾಸಿಸಿದ ಬಾಡಿಗೆದಾರ ಆ ಮನೆಯನ್ನು ಸ್ವಾಧೀನಪಡಿಸಿಕೊಳ್ಳಬಹುದೇ? ಭಾರತದ ಕಾನೂನು ಏನನ್ನುತ್ತೆ ಗೊತ್ತೇ?

Property Rules: ಮನೆಯನ್ನು ಬಾಡಿಗೆಗೆ ಕೊಟ್ಟು ಒಳ್ಳೆಯ ಬಾಡಿಗೆದಾರರು, ಬದಲಾಯಿಸುವುದು ಬೇಡ, ಎಂದು ಹಲವಾರು ವರ್ಷಗಳಿಂದ ಒಂದೇ ಕುಟುಂಬ ಬಾಡಿಗೆಗೆ ಇದೆಯೇ? ಒಳ್ಳೆಯದೇ. ಸಮಯಕ್ಕೆ ಸರಿಯಾಗಿ ಬಾಡಿಗೆಗೆ ಕೊಡುತ್ತಾ ಪ್ರತೀ ವರ್ಷ ಬಾಡಿಗೆಯನ್ನು ಹೆಚ್ಚು ಮಾಡುತ್ತಾ ಇದ್ದರೆ, ಮನೆಯನ್ನು ಸ್ವಚ್ಛವಾಗಿಟ್ಟರೆ ಅಂತಹ ಬಾಡಿಗೆ ದಾರನಿಂದ ಹೆಚ್ಚು ಏನು ಬೇಕು ?

ಆದರೆ ಹೀಗೆ ಬಾಡಿಗೆಗೆ ಕೊಟ್ಟ ಮನೆಯನ್ನು ಬಾಡಿಗೆದಾರ ಇದು ನಮ್ಮ ಸ್ವಂತ ಮನೆ ಬಿಟ್ಟುಕೊಡಲ್ಲ ಎಂದು ಅಧಿಕಾರ ಚಲಾಯಿಸಲು ಬಂದರೆ ಹೇಗಿರುತ್ತದೆ ? ಇದು ಸಾಧ್ಯವೇ ? ಭಾರತದಲ್ಲಿ ಒಂದು ಕಾನೂನಿದೆ. ಅದರ ಹೆಸರು ಅಡ್ವರ್ಸ್ ಪೊಸೆಷನ್. ಇದರ ಪ್ರಕಾರ 12 ವರ್ಷಗಳ ಕಾಲ ಒಂದೇ ಜಾಗದಲ್ಲಿರುವ ವ್ಯಕ್ತಿ ಆ ಜಾಗವನ್ನು ತನ್ನದೇ ಎನ್ನಬಹುದು.

ಇಂತಹ ಕಾನೂನಿದೆ ಎಂದು ಬಹಳ ವರ್ಷಗಳಿಂದ ಇರುವ ನಿಮ್ಮ ಬಾಡಿಗೆದಾರರಿಂದ ಮನೆ ಬಿಡಿಸಲು ಮುಂದಾಗಬೇಡಿ. ಹನ್ನೆರಡು ವರ್ಷಗಳು ಇದ್ದ ಮಾತ್ರಕ್ಕೆ ಆ ಮನೆ ಅವರದ್ದಾಗಿ ಬಿಡುವುದಿಲ್ಲ. ಅದಕ್ಕೂ ಹಲವು ನೀತಿ ನಿರ್ಬಂಧಗಳಿವೆ. ಹಾಗಾದರೆ ಈ ಕಾನೂನು ಏನು ಎಂದು ಸ್ವಲ್ಪ ತಿಳಿದುಕೊಳ್ಳೋಣ.

ಎಲ್ಲಾ ಬಾಡಿಗೆದಾರರು ಈ ತರಹದ ಕ್ಲೈಮ್ ಮಾಡುವಂತಿಲ್ಲ, ಮಾಡಿದರೂ ಅದು ಸಾಬೀತಾಗಬೇಕು. ಈ ಕಾನೂನು ಬಂದಿರುವುದು ಯಾವುದೋ ಒಂದು ಜಾಗದಲ್ಲಿ ಇನ್ನೊಬ್ಬರು ಅಕ್ರಮವಾಗಿ ನೆಲೆಸಿದಾಗ ಅವರನ್ನು ಆ ಜಾಗದಿಂದ ತೆರೆವುಗೊಳಿಸಲು ಕಾನೂನು ನೀಡಿದ ಅವಧಿ 12 ವರ್ಷಗಳು. ಇದು ಮನೆಗೆ ಸಂಬಂಧಿಸಿದ್ದಲ್ಲ ಬದಲಾಗಿ ಜಾಗಕ್ಕೆ ಸಂಬಂಧಿಸಿದ್ದು. ಉದಾಹರಣೆಗೆ ನಮ್ಮದೊಂದು ಜಾಗ ಇದೆ. ಅಲ್ಲಿ ಯಾರೋ ಒಬ್ಬ ಬಂದು ಇದು ನನ್ನದು ಎಂದು ವಾಸಿಸಲು ಆರಂಭಿಸುತ್ತಾನೆ. ಅವರನ್ನು ಅಲ್ಲಿಂದ ತೆರವುಗೊಳಿಸಲು ನಾವು ಯಾವುದೇ ಪ್ರಯತ್ನವೇ ಪಟ್ಟಿಲ್ಲ ಎಂದಾದರೆ ಆಗ ಅಲ್ಲಿ ನೆಲೆಸಿದ ವ್ಯಕ್ತಿ ಆ ಜಾಗವನ್ನು ತನ್ನದೇ ಜಾಗ ಎಂದು ಹೇಳಬಹುದು.

ಇದೇ ಕಾನೂನು ಮನೆಗೂ ಅನ್ವಯಿಸಿದರೂ ಕೆಲವು ನಿರ್ಬಂಧಗಳಿವೆ.

ನಿಜವಾದ ಸ್ವಾಧೀನ ಆಗಿರಬೇಕು: ಆ ಮನೆಯಲ್ಲಿ ಬಾಡಿಗೆದಾರ ಬಾಡಿಗೆದಾರನಾಗಿರದೆ ಹಕ್ಕನ್ನು ಚಲಾಯಿಸಿರಬೇಕು. ತನ್ನ ಸಾಮರ್ಥ್ಯದಲ್ಲಿ ಮನೆಯಲ್ಲಿ ಅಥವಾ ಜಾಗದಲ್ಲಿ ಬದಲಾವಣೆಗಳನ್ನು ಮಾಡಿರಬೇಕು.

ಸ್ವಾಧೀನ ನಿರಂತರವಾಗಿರಬೇಕು: ಸ್ವಾಧೀನಕ್ಕೆ ಕ್ಲೈಮ್ ಮಾಡುವ ವ್ಯಕ್ತಿ ಅಲ್ಲಿ ಹನ್ನೆರಡು ವರ್ಷಗಳಿಂದ ನಿರಂತರವಾಗಿ ಇರುವುದಕ್ಕೆ ಪುರಾವೆ ನೀಡಬೇಕು. ಇದರ ಜೊತೆಗೆ ಆ ಎಲ್ಲಾ ವರ್ಷಗಳಲ್ಲಿ ಆ ಜಾಗದ ಸಂಪೂರ್ಣ ಉಸ್ತುವಾರಿಯನ್ನು ತೆಗೆದುಕೊಂಡಿರಬೇಕು.

ಅನಿರ್ಬಂಧಿತ ಮಾಲೀಕತ್ವ ಆಗಿರಬೇಕು: ಆ ಜಾಗದಲ್ಲಿ ಬಾಡಿಗೆದಾರ ಅನಿರ್ಬಂಧಿತವಾದ ಒಡೆತನ ಹೊಂದಿದ್ದಕ್ಕೆ ಸರಿಯಾವ ಪುರಾವೆ ನೀಡಬೇಕಾಗುತ್ತದೆ. ಅಂದರೆ ಆ ಜಾಗದಲ್ಲಿ ನವೀಕರಣ ಮಾಡಿರುವುದು, ಆ ಜಾಗದ ವಿಸ್ತಾರ ಮಾಡಿರುವುದಕ್ಕೆ ಪುರಾವೆ ನೀಡಬೇಕು. ಜೊತೆಗೆ ಆ ಜಾಗದ ನೆರೆಹೊರೆಯವರೊಂದಿಗೆ ಒಳ್ಳೆಯ ಸಂಬಂಧಗಳನ್ನೂ ಹೊಂದಿರಬೇಕು ಎನ್ನುವುದು ಕಾನೂನಿನಲ್ಲಿದೆ.

ಪ್ರತೀಕೂಲ ಸ್ವಾಧೀನ: ಬಾಡಿಗೆದಾರ ಅಗ್ರೀಮೆಂಟ್ ಅನ್ನು ಸರಿಯಾಗಿಲ್ಲ ಎಂದು ವಾದಿಸಿ ಅದನ್ನು ಅಮಾನ್ಯ ಮಾಡಿ ಆ ಜಾಗದಲ್ಲಿ ಇರಲು ಆರಂಭಿಸಿದರೆ ಮತ್ತು ಜಾಗದ ಒಡೆಯ ಹನ್ನೆರಡು ವರ್ಷಗಳ ಕಾಲ ಅದನ್ನು ವಿರೋಧಿಸಿದೇ ಇದ್ದರೆ ಆ ಜಾಗದ ಒಡೆತನ ಬಾಡಿಗೆದಾರ ತೆಗೆದುಕೊಳ್ಳಬಹುದು.

ಹೀಗೆ ಎಲ್ಲಾ ಬಾಡಿಗೆದಾರರು ಎಷ್ಟೇ ವರ್ಷ ಒಂದೇ ಮನೆಯಲ್ಲಿ ಇದ್ದರೂ ಜಾಗದ ಒಡೆತನದ ಹಕ್ಕನ್ನು ಪಡೆಯುವಂತಿಲ್ಲ. ಈ ಮೇಲೆ ಹೇಳಿದ ಎಲ್ಲಾ ನಿಯಮಗಳು ಅಥವಾ ಷರತ್ತುಗಳು ಇದ್ದರಷ್ಟೇ ಇದು ಸಾಧ್ಯ. ಇದಕ್ಕೆ ಮನೆಯ ಬಾಡಿಗೆಯ ಅಗ್ರಿಮೆಂಟ್ ಮಾಡುವಾಗ 11 ತಿಂಗಳ ಅಗ್ರಿಮೆಂಟ್ ಮಾಡುತ್ತಾರೆ. ಮುಂದೆ ಇಂತಹ ಸಮಸ್ಯೆಗಳು ಬಾರದೇ ಇರುವಂತೆ ಮನೆಯ ಮಾಲೀಕರು ಅಗ್ರಿಮೆಂಟ್ ಅನ್ನು ಪ್ರತಿ ವರ್ಷ ಅಥವಾ ಎರಡು ಮೂರು ವರ್ಷಗಳಿಗೊಮ್ಮೆ ರಿನಿವಲ್ ಮಾಡುವುದು ಒಳ್ಳೆಯದು.

Comments are closed.