Social Media: ಕರುನಾಡಿನ ಚಿಟ್ಟೆ ಎಂದು ಮೀಡಿಯಾ ದಲ್ಲಿ ಸದ್ದು ಮಾಡುತ್ತಿರುವ ಸೋನು ಗೌಡ ಳ ಬಗ್ಗೆ ನಿಮಗೆ ಯಾಕೆ ಬೇಕು? ಆಕೆಯ ಸಾಧನೆ ಬಗ್ಗೆ ನಿಮಗೆ ಗೊತ್ತಾ?

Social Media: ಸೋಶಿಯಲ್ ಮೀಡಿಯಾ.. ಅವಕಾಶವನ್ನು ಕೊಡುವುದು ಮಾತ್ರವಲ್ಲ, ಪ್ರತಿಯೊಬ್ಬರಿಗೂ ಅವಕಾಶಗಳನ್ನು ಸೃಷ್ಟಿಸಿಕೊಳ್ಳುವ ವೇದಿಕೆ. ನಮ್ಮ ನಮ್ಮ ಕೌಶಲ್ಯ, ಟ್ಯಾಲೆಂಟ್ (Telent) ಹೆಗಿದ್ಯೋ ಅದರ ಆಧಾರದ ಮೇಲೆ ಸೋಶಿಯಲ್ ಮೀಡಿಯಾದಲ್ಲಿ ಹೆಸರು ಗಳಿಸಿಕೊಳ್ಳಬಹುದು.

ಸಾಮಾಜಿಕ ಜಾಲತಾಣದಲ್ಲಿ ನೆಗೆಟಿವ್ (natagive) ಹಾಗೂ ಪಾಸಿಟಿವ್ (positive) ಎರಡೂ ವಿಷಯಗಳು ಇರುತ್ತೆ. ನೀವು ಹೇಗೆ ಆಯ್ಕೆ ಮಾಡಿಕೊಳ್ಳುತ್ತಿರೋ ಹಾಗೆ. ಆದರೆ ದುರದೃಷ್ಟ ಅಂದ್ರೆ ಇತ್ತೀಚಿಗೆ ಸೋಶಿಯಲ್ ಮೀಡಿಯಾ ನೆಗೆಟಿವ್ ವಿಷ್ಯಗಳನ್ನ ಹರಡುವುದೆ ಜಾಸ್ತಿ..

ಟ್ರೊಲ್ ಗಾಗಿಯೇ ಸರ್ಕಸ್ ಮಾಡುವ ಜನ:

ಹೌದು ಸೋಶಿಯಲ್ ಮೀಡಿಯಾದಲ್ಲಿ ನಮ್ಮ ಉತ್ತಮ ಕೌಶಲ್ಯ ಪ್ರದರ್ಶಿಸುವುದು ಸರಿ. ಜಗತ್ತಿನ ಯಾವುದೇ ಮೂಲೆಯಲ್ಲಿ ನಿಂತು ನೀವು ನಿಮ್ಮ ಟ್ಯಾಲೆಂಟ್ ತೋರಿಸಿದರೆ ಅದನ್ನು ಜಗತ್ತಿನ ಯಾವುದೇ ವ್ಯಕ್ತಿ ನೋಡಬಹುದು. ಈಗ ಟ್ಯಾಲೆಂಟ್ ಗೆ ಯಾವುದೇ ವೇದಿಕೆ ಕೂಡ ಬೇಕಾಗಿಲ್ಲ. ಇನ್ನು ಸರಿಯಾದ ರೀತಿಯಲ್ಲಿ ಕೌಶಲ್ಯ ತೋರಿಸಿ ಫೇಮಸ್ ಆದ್ರೆ ಒಂದು ಲೆಕ್ಕ. ಆದ್ರೆ ಅದೆಷ್ಟೋ ಜನ, ಬೇಡದ ರೀತಿಯಲ್ಲಿಯೇ ಫೇಮಸ್ ಆಗಿ ಹೆಸರು ಹಣ ಮಾಡಲು ಹೊರಡುತ್ತಾರೆ.

ನೀವೆಲ್ಲ ನೋಡಿರಬಹುದು, ಊರ್ಫಿ ಜಾವೆದ್ ಯಾವೆಲ್ಲ ಅವತಾರಗಳನ್ನು ಹಾಕಿ ಜನರ ಮುಂದೆ ಬರುತ್ತಾರೆ ಅಂತ. ದಿನದಿನವೂ ಏನೇನೋ ಬಟ್ಟೆಯನ್ನು ಧರಿಸಿ ಸೋಶಿಯಲ್ ಮೀಡಿಯಾಗಳಲ್ಲಿ ಕಾಣಿಸಿಕೊಳ್ಳುತ್ತಾರೆ. ಅಂತವರನ್ನು ಕ್ಯಾಚ್ ಹಾಕುವುದಕ್ಕಾಗಿಯೆ ಒಂದಿಷ್ಟು ಪಾಪರಜಿಗಳೂ ಕೂಡ ಇರುತ್ತಾರೆ.

ಸೋನು ಶ್ರೀನಿವಾಸ ಗೌಡ ಎನ್ನುವ ಇನ್ಫ್ಲೂಯೆನ್ಸರ್?

ಇತ್ತ ಕನ್ನಡಕ್ಕೆ ಬಂದರೆ ಸೋನು ಶ್ರೀನಿವಾಸ್ ಗೌಡ (Sonu Shrinivas Gowda) ಎನ್ನುವ ಹುಡುಗಿ ದಿನದಿಂದ ದಿನಕ್ಕೆ ಫೇಮಸ್ ಆಗುತ್ತಲೇ ಇದ್ದಾಳೆ. ಯಾವುದೇ ಆಂಗಲ್ ನಲ್ಲಿ ನೋಡಿದ್ರೂ ಇವಳಿಗೆ ಇಷ್ಟು ಹೈಪ್ ಬೇಕಿತ್ತಾ ಅಂತ ಅನ್ನಿಸದೇ ಇರೋದಿಲ್ಲ. ಆಕೆ ಮಾಡಿದ ಸಾಧನೆ ಎದೆಂತದ್ದೋ ಗೊತ್ತಿಲ್ಲ, ಸೋಶಿಯಲ್ ಮೀಡಿಯಾದಲ್ಲಿ ಮಾತ್ರ ಅವಳದ್ದೇ ಸುದ್ದಿ!

ಐಪೋನ್ ಆಟ:

 ಹೊಸ ಐ ಫೋನ್ (I phone) ಬಿಡುಗಡೆ ಆದಾಗ ಅದ್ಯಾವ ಸೆಲೆಬ್ರಿಟಿ ಕೈ ಸೇರುತ್ತದೆಯೋ ಇಲ್ವೋ ಗೊತ್ತಿಲ್ಲ ಆದ್ರೆ ಸೋನು ಕೈಯಲ್ಲಿ ಮಾತ್ರ ಇದ್ದೇ ಇರುತ್ತೆ. ಸೋಶಿಯಲ್ ಮೀಡಿಯಾದಲ್ಲಿ ಆಕೆಗೆ ಇರುವ ಫಾಲೋವರ್ಸ್ ನೋಡಿದ್ರೆ ಯಾವ ನಾಸಾ ವಿಜ್ಞಾನಿಗಳಿಗೂ ಇಲ್ಲ. ಯಾವ ಸ್ಟಾರ್ ನಟ ನಟಿಯರಿಗೂ ಇಲ್ಲ. ಇದೆಲ್ಲ ನೋಡಿದ್ರೆ ಮತ್ತೆ ಅದೇ ಪ್ರಶ್ನೆ ಆಕೆ ಮಾಡಿದ ಸಾಧನೆ ಏನು?

ಬಿಗ್ ಬಾಸ್ ಗೂ ಸ್ಪರ್ಧಿ?

ಬಿಗ್ ಬಾಸ್ (Bigg Boss) ಎನ್ನುವ ಇಡೀ ಕರ್ನಾಟಕವೇ ನೋಡುವ ಒಂದು ಶೋ, ಇದರಲ್ಲಿಯೂ ಸೋನು ಅವಕಾಶ ಗಿಟ್ಟಿಸಿಕೊಂಡಳು. ಸೋಶಿಯಲ್ ಮೀಡಿಯಾ ಇನ್ಫ್ಲೂಯೆನ್ಸರ್ ಆಗಿ? ಯಾವ ಅರ್ಥದಲ್ಲಿ ಆಕೆ ಜನರಿಗೆ ಇನ್ಫ್ಲೂಯೆನ್ಸ್ ಮಾಡುತ್ತಿದ್ದಾಳೆ ಗೊತ್ತಿಲ್ಲ.. ಆಕೆಯ ಖಾಸಗಿ ವಿಡಿಯೋ ಒಂದು ಲೀಕ್ ಆಗಿರುವ ಪ್ರಕರಣ ಎಲ್ಲರಿಗೂ ಗೊತ್ತು.. ಈಗ ಅದನ್ನೇ ಇಟ್ಟುಕೊಂಡು ಇನ್ಫ್ಲೂಯೆನ್ಸರ್ ಆಗಿರಬೇಕು ಅಷ್ಟೇ..

ಜನ ಏನು ಮಾಡಿದ್ರೂ ಕಮೆಂಟ್ ಮಾಡ್ತಾರೆ!

ಸೋಶಿಯಲ್ ಮೀಡಿಯಾದಲ್ಲಿ ಹಣ ಮಾಡೋದಕ್ಕೆ ಆಕೆ ಈ ದಾರಿ ಆಯ್ದುಕೊಂಡಿದ್ದರೆ, ಆಕೆಯನ್ನೇ ಹಣ ಮಾಡುವುದಕ್ಕಾಗಿ ಸೋಶಿಯಲ್ ಮೀಡಿಯಾ ಪೇಜ್ ಗಳು ಬಳಸಿಕೊಳ್ಳತ್ತಿರುವಂತಿದೆ. ಸೋಶಿಯಲ್ ಮೀಡಿಯಾ ಆದ್ರೂ ಬಿಡಿ ಗುಜರಿ ಇದ್ದ ಹಾಗೆ. ಯಾರು ಎನ್ ಬೇಕಾದ್ರೂ ಹಾಕಬಹುದು. ಆದ್ರೆ ಸೋ ಕಾಲ್ಡ್ ನ್ಯಾಷನಲ್ ಚಾನೆಲ್ ಗಳು ಕೂಡ ಆಕೆಯ ವಿಷಯವನ್ನು ಹಾಕಿ ಹಣ ಮಾಡ್ತಿದ್ದಾರೆ ??

ಯಾರಾದ್ರೂ ಉತ್ತಮ ಕೆಲಸ ಮಾಡಿದ್ರೆ ಇನ್ನೊಬ್ಬರಿಗೆ ಮಾದರಿ ಆಗುತ್ತಾರೆ. ಆದ್ರೆ ಅಂತವರನ್ನು ಹೆಚ್ಚು ಅಂದ್ರೆ 3 ನಿಮಿಷದ ಒಂದು ವಿಡಿಯೋ ದಲ್ಲಿ ತೋರಿಸುತ್ತಾರೆ. ಮುಗೀತು.. ಅದೇ ಸೋನು ಮಾಲ್ಡೀವ್ಸ್ ಗೆ  ಹೋಗಿ ಕೆಂಪು ಬಣ್ಣದ ಒಳಉಡಪು ಧರಿಸಿ ವಿಡಿಯೋ ಮಾಡಿ ಹಾಕಿದ್ದು ಇವತ್ತಿನ ಜಗದ ಸಾಧನೆ ಎಂಬಷ್ಟರ ಮಟ್ಟಿಗೆ ಸೋಷಿಯಲ್ ಮೀಡಿಯಾ ದಲ್ಲಿ, ವಾಹಿನಿಗಳಲ್ಲಿ. ನ್ಯೂಸ್ ಚಾನೆಲ್ ಗಳಲ್ಲಿ ಬಿಂಬಿತವಾಗುತ್ತಿದೆ.

ಸ್ನೇಹಿತರೆ, ಒಂದಷ್ಟು ದಿನ ಅವಳ ವಿಡಿಯೋಗಳಿಗೆ ಕಮೆಂಟ್ ಹಾಗುವುದನ್ನ ನಿಲ್ಲಿಸಿ ನೋಡಿ, ಇಂತಹ ಅಸಾಮಾನ್ಯ ಕೆಲಸಗಳು ನಿಂತು ಹೋಗಬಹುದು. ನಿಮ್ಮ ನೆಗೆಟಿವ್ ಕಮೆಂಟ್ ಗಳೂ ಕೂಡ ಅಂತವರಿಗೆ ಪ್ಲಸ್ ಆಗುತ್ತೆ ಅನ್ನೋದು ನೆನಪಿರಲಿ. ಒಂದಷ್ಟು ಸಾಧನೆ ಮಾಡಿದವರ ಬಗ್ಗೆ ಮಾತನಾಡಿದರೆ ಅವರಿಂದ ಇನ್ನೊಬ್ಬರಿಗೆ ಸಹಾಯವಾಗಬಹುದು. ಮಾದರಿಯಾಗಬಹುದು ಏನಂತೀರಾ?

Comments are closed.