Mercury Transit 2023: ಇನ್ನು ಕೇವಲ ಒಂದು ವಾರ, ಬುಧನ ಸಂಚಾರದಿಂದ ಈ ರಾಶಿಯವರ ಜೀವನದ ದಿಕ್ಕೇ ಬದಲಾಗಲಿದೆ; ದುಡ್ಡೋ ದುಡ್ಡು!  

Mercury Transit 2023: ಗ್ರಹಗಳಲ್ಲಿ ಬುಧನಿಗೆ ತನ್ನದೇ ಆದ ಮಹತ್ವವನ್ನು ಪಡೆದಿದ್ದಾನೆ. ಬುಧನು ಬುದ್ಧಿವಂತಿಕೆ, ಮಾತು, ತರ್ಕ, ಗಣಿತ, ಆರ್ಥಿಕತೆಗೆ ಹೆಸರುವಾಸಿಯಾಗಿದ್ದಾನೆ. ಬುಧನ ಸ್ಥಾನವು ಮಂಗಳಕರವಾಗಿದ್ದಾಗ ಆ ವ್ಯಕ್ತಿಯ ಉದ್ಯೋಗ, ವ್ಯವಹಾರದಲ್ಲಿ ಯಶಸ್ಸು ಕಾಣುತ್ತಾನೆ. ಬುಧನ ಸ್ಥಾನದ ಜೊತೆಗೆ ಆತನ ರಾಶಿಯ ಸ್ಥಾನಗಳು ಪಲ್ಲಟವಾದಾಗ ಅದರ ಪರಿಣಾಮ 12 ರಾಶಿಗಳ ಮೇಲೆ ಆಗುತ್ತದೆ.

ಬುಧನು ಅಕ್ಟೋಬರ್ 19ರಂದು ತುಲಾ ರಾಶಿ ಪ್ರವೇಶಿಸಿದ್ದಾನೆ. ಅಕ್ಟೋಬರ್ 22 ರಂದು ಸ್ವಾತಿ ನಕ್ಷತ್ರದಲ್ಲಿ ಮತ್ತು ಅಕ್ಟೋಬರ್ 30 ರಂದು ವಿಶಾಖಾ ನಕ್ಷತ್ರದಲ್ಲಿ ಸಂಚರಿಸಲಿದ್ದಾನೆ. ನಂತರ ಬುಧನ ವೃಶ್ಚಿಕ ರಾಶಿಗೆ ಸಂಚರಿಸಲಿದ್ದಾನೆ. ತುಲಾ ರಾಶಿಯಲ್ಲಿ ಬುಧನ ಸಂಚಾರದ ಅವಧಿಯು ಅನೇಕ ರಾಶಿಗಳ ಜೀವನದಲ್ಲಿ ಬದಲಾವಣೆಯನ್ನು ತರಲಿದೆ. ಬುಧನ ಸಂಚಾರದಿಂದ ಯಾವ ಯಾವ ರಾಶಿಯವರಿಗೆ ಒಳಿತಾಗಲಿದೆ, ಯಾರಿಗೆ ಅದೃಷ್ಟ ಬರಲಿದೆ ಎನ್ನುವುದನ್ನು ನಾವು ತಿಳಿಯೋಣ.

ಕರ್ಕಾಟಕ ರಾಶಿ:

ಕರ್ಕಾಟಕ ರಾಶಿಯವರಿಗೆ ಬುಧನ ಸಂಚಾರದಿಂದ ವ್ಯಾಪಾರ ವ್ಯವಹಾರದಲ್ಲಿ ಲಾಭ ಆಗಲಿದೆ. ನೀವು  ಜಮೀನು, ಸೈಟ್, ಮನೆ ಕಟ್ಟಿಸಲು ಯೋಚಿಸುತ್ತಿದ್ದರೆ ಇದು ಒಳ್ಳೆಯ ಸಂದರ್ಭವಾಗಿದೆ. ಈ ಸಮಯದಲ್ಲಿ ನೀವು ಕೆಲಸ ಆರಂಭಿಸಿದರೆ ನಿಮ್ಮ ಕೆಲಸಗಳು ನಿರ್ವಿಘ್ನವಾಗಿ ನೆರವೇರದಲಿದೆ. ಜಮೀನಿಗೆ ಸಂಬಂಧಿಸಿದ ಯಾವುದಾದರೂ ವ್ಯಾಜ್ಯಗಳು ಇದ್ದರೆ ಅವುಗಳು ಕೂಡ ಬಗೆಹರಿದು ನೆಮ್ಮದಿಯ ಜೀವನ ನಿಮ್ಮದಾಗಲಿದೆ. ನಿಮ್ಮ ಜೀವನದಲ್ಲಿ ಹಣದ ಹರಿವು ಉತ್ತಮವಾಗಿರಲಿದೆ. ಅಲ್ಲದೆ ನೀವು ಮಾಡುವ ಕಾರ್ಯಗಳಿಗೆ ನಿಮ್ಮ ಕುಟುಂಬದವರ ಬೆಂಬಲ ಸಿಗಲಿದೆ.

ತುಲಾ ರಾಶಿ:

ತುಲಾ ರಾಶಿಯಲ್ಲೇ ಬುಧನು ಸಂಚರಿಸುತ್ತಿದ್ದಾನೆ. ಆದ್ದರಿಂದ ಈ ಸಂಕ್ರಮಣ ಕಾಲವು ತುಲಾ ರಾಶಿಯವರಿಗೆ ಬಹಳ ಮಹತ್ವದ್ದಾಗಿರುತ್ತದೆ. ಈ ಅವಧಿಯಲ್ಲಿ ನೀವು ಹೆಚ್ಚಿನ ಸಂಪತ್ತನ್ನು ಗಳಿಸಲಿದ್ದೀರಿ. ಹೀಗೆ ಗಳಿಸಿದ ಸಂಪತ್ತನ್ನು ಧಾರ್ಮಿಕ ಕಾರ್ಯಗಳಿಗೂ ವಿನಿಯೋಗಿಸಲಿದ್ದೀರಿ. ಈ ಮೂಲಕ ನೆಮ್ಮದಿ ಪಡೆಯಲಿದ್ದೀರಿ. ನೀವು ಕೈಗೊಳ್ಳುವ ಕಾರ್ಯಗಳಿಗೆ ನಿಮ್ಮ ಸಂಗಾತಿಯ ಪ್ರೀತಿ, ಬೆಂಬಲ ಸಿಗಲಿದೆ. ಇದರಿಂದ ನಿಮ್ಮ ಆತ್ಮವಿಶ್ವಾಸ ಇನ್ನಷ್ಟು ವೃದ್ಧಿಸಲಿದೆ. ಇನ್ನು ತುಲಾ ರಾಶಿಯಲ್ಲಿ ಜನಿಸಿದವ ಅವಿವಾಹಿತರಿಗೆ ಅನೇಕ ಪ್ರಸ್ತಾಪಗಳು ಹುಡುಕಿ ಬರುವ ಸಾಧ್ಯತೆಗಳಿವೆ. ಈ ಸಮಯದಲ್ಲಿ ನೀವು ಐಶಾರಾಮಿ ಜೀವನ ನಡೆಸಲಿದ್ದೀರಿ.

ಕುಂಭ ರಾಶಿ:

ಬುಧನು ತುಲಾ ರಾಶಿಗೆ ಸಂಚಾರ ಮಾಡಿರುವುದರಿಂದ ಕುಂಭ ರಾಶಿಯವರಿಗೆ ಅದೃಷ್ಟ ಖುಲಾಯಿಸಲಿದೆ. ನೀವು ಯಾವುದಾದರೂ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದು, ಇನ್ನೂ ಭಡ್ತಿ ಸಿಗಲಿಲ್ಲ ಎಂದು ಸಂಕಟ ಪಡುತ್ತಿದ್ದರೆ ಈಗ ಆ ಸಂಕಟ ಪರಿಹಾರವಾಗಲಿದೆ. ಉದ್ಯೋಗದ ಕ್ಷೇತ್ರದಲ್ಲಿ ನಿಮಗೆ ಯಶಸ್ಸು ಸಿಗಲಿದೆ. ಎಲ್ಲರೂ ನಿಮ್ಮನ್ನು ಗೌರವಿಸಲಿದ್ದಾರೆ. ಅಲ್ಲದೆ ನೀವು ಯಾವುದೋ ಸಮಸ್ಯೆಯಿಂದ ಅರ್ಧಕ್ಕೆ ಬಿಟ್ಟಂತಹ ಕಾರ್ಯಗಳು ಈ ಸಂದರ್ಭದಲ್ಲಿ ನಿಮಗರಿವಿಗೆ ಬಾರದಂತೆ ಅಂದರೆ ಅಷ್ಟು ಸರಳವಾಗಿ ಪೂರ್ಣವಾಗಲಿದೆ. ನಿಮ್ಮ ಜೀವನದಲ್ಲಿ ಆರ್ಥಿಕ ಸ್ಥಿತಿ ಉತ್ತಮವಾಗಲಿದೆ. ಸಮಾಜದಲ್ಲಿಯೂ ನಿಮ್ಮ ಸ್ಥಾನಮಾನಗಳು ಹೆಚ್ಚಾಗಲಿವೆ. ವಿದ್ಯಾರ್ಥಿಗಳಿಗೂ ಸಹ ಬುಧನ ಸಂಚಾರದಿಂದ ಉತ್ತಮ ಫಲಗಳನ್ನು ಪಡೆಯಲಿದ್ದಾರೆ.  ಉದ್ಯೋಗ ಬದಲಾವಣೆ,  ಹೊಸದಾಗಿ ಉದ್ಯೋಗ ಹುಡುಕುತ್ತಿರುವವರಿಗೂ ನೀವು ಬಯಸಿದ ಉದ್ಯೋಗ ಸಿಗಲಿದೆ.

Comments are closed.