Business Idea: ಇಷ್ಟೇ ಇಷ್ಟು ಹೂಡಿಕೆ ಮಾಡಿ  ಅತೀ ಲಾಭ ಗಳಿಸ್ಬೇಕಾ? ಕೂಡಲ್ ಈ ಕೆಲಸ ಮಾಡಿ; ಲಕ್ಷ ಹಣ ಗಳಿಸಿ!

Business Idea for Deepavali 2023: ಇದೀಗ ನಮ್ಮ ದೇಶದಲ್ಲಿ ಹಬ್ಬದ ಸೀಸನ್ ಶುರುವಾಗಿದೆ. ಈತ ತಾನೆ ನವರಾತ್ರಿ ಹಬ್ಬವು ಮುಗಿದಿದ್ದು, ಇನ್ನೇನು ಕೆಲವೇ ದಿನಗಳಲ್ಲಿ ದೊಡ್ಡ ಹಬ್ಬ ಎಂದೇ ಕರೆಯಿಸಿಕೊಳ್ಳುವ ದೀಪಾವಳಿ ಹಬ್ಬ ಬರಲಿದೆ. ಈ ಹಬ್ಬವು ಭಾರತೀಯರಿಗೆ ಬಹಳ ವಿಶೇಷವಾಗಿದೆ. ಈ ಹಬ್ಬದಲ್ಲಿ ಸಂಪತ್ತಿನ ಅಧಿದೇವತೆಯಾದ ತಾಯಿ ಲಕ್ಷ್ಮಿ ದೇವಿಯನ್ನು ಆರಾಧನೆ ಮಾಡಲಾಗುತ್ತದೆ. ಹಬ್ಬ ಎಂದ ಮೇಲೆ ಭರ್ಜರಿ ಊಟದ ವ್ಯವಸ್ಥೆ ಇದ್ದೇ ಇರುತ್ತದೆ. ನಾನಾ ರೀತಿಯ ಸಿಹಿ ತಿಂಡಿ, ಕುರುಕಲು ತಿಂಡಿಗಳನ್ನು ಮಾಡಿ ಸವಿದು ಖುಷಿ ಪಡುತ್ತಾರೆ. ಇಂತಹ ಸಂದರ್ಭ ಬಳಸಿಕೊಂಡು ನೀವು ವ್ಯಾವಹಾರಿಕವಾಗಿ ಯೋಚನೆ ಮಾಡುವುದಾದರೆ ಒಂದು ಉತ್ತಮ ಉಪಾಯ ಇಲ್ಲಿದೆ. ಕೆಲವೇ ದಿನಗಳಲ್ಲಿ ನೀವು ಕೈತುಂಬಾ ಆದಾಯ ಗಳಿಸಬಹುದು. ದೀಪಾವಳಿ ಸಂದರ್ಭ ನೀವು ಮಾಡಬಹುದಾದ ನಾಲ್ಕು ಉದ್ಯಮಗಳು Business Idea ಇಲ್ಲಿವೆ.

Best Diwali business ideas to earn money

ದೀಪಾವಳಿ ಅಲಂಕಾರ:

ದೀಪಾವಳಿ ಹಬ್ಬವು ಭಾರತೀಯರಿಗೆ ಬಹಳ ದೊಡ್ಡ ಹಬ್ಬವಾಗಿದೆ. ಈ ಹಬ್ಬಕ್ಕಾಗಿ ಪ್ರತಿಯೊಬ್ಬರು ತಮ್ಮ ಮನೆಯನ್ನು ವಿಶೇಷವಾಗಿ ಅಕಂಕರಿಸಲು ಬಯಸುತ್ತಾರೆ.ಇದಕ್ಕಾಗಿ ಕಾಗದ, ಪ್ಲಾಸ್ಟಿಕ್  ಹಾಗೂ ಇಲೆಕ್ಟ್ರಾನಿಕ್ ವಸ್ತುಗಳನ್ನು ಬಳಸಲಾಗುತ್ತದೆ. ಮನೆಯ ಮುಂದೆ ರಂಗೋಲಿಗಳನ್ನು ಬಿಡಿಸಲಾಗುತ್ತದೆ. ಮನೆಯ ಮುಂದೆ, ಮನೆಯ ಒಳಗೆ ಮೆಣದ ಬತ್ತಿ ಇಲ್ಲವೇ ಹಣತೆಯಿಂದ ದೀಪ ಬೆಳಗುತ್ತಾರೆ. ಈ ಅವಕಾಶವನ್ನು ನೀವು ಉದ್ಯಮವಾಗಿ ಪರಿವರ್ತಿಸಿಕೊಳ್ಳಬಹುದು. ಈ ದೀಪಾವಳಿಯಂದು ನೀವು ಅಲಂಕಾರಿಕ ವಸ್ತುಗಳ ಮಾರಾಟ ಆರಂಭಿಸಬಹುದು. ನೀವು ಸುಸ್ಥಿರ ಉತ್ಪನ್ನಗಳನ್ನು ಮಾರಾಟ Business Idea ಮಾಡಿದರೆ ಅದು ಆರ್ಥಿಕತೆಗೆ ಉತ್ತಮವಾಗಿರುತ್ತದೆ.

ಮನೆಯಲ್ಲಿಯೇ ತಯಾರಿಸಿದ ಸಿಹಿ ಹಾಗೂ ಖಾರಾ ತಿಂಡಿಗಳು:

ದೀಪಾವಳಿಯಂದು ನೀವು ಮನೆಯಲ್ಲಿಯೇ ಸಿಹಿ ಹಾಗೂ ಖಾರಾ ತಿಂಡಿಗಳನ್ನು ತಯಾರಿಸಿ ಮಾರಾಟ ಮಾಡಬಹುದು. ದೀಪಾವಳಿಯಂದು ಹೆಚ್ಚಾಗಿ  ನಕಲಿ ಖೋವಾ ಸಿಹಿತಿಂಡಿ ಮಾಡುವುದನ್ನು ನೋಡಿರುತ್ತೀರಿ. ಆದರೆ ನೀವು ಮನೆಯಲ್ಲಿಯೇ ಈ ಖೋವಾ ಸಿಹಿತಿಂಡಿಯನ್ನು ಉತ್ತಮ ಗುಣಮಟ್ಟದಲ್ಲಿ ಮಾಡಿಕೊಟ್ಟರೆ ಜನರು ಖರೀದಿಸಲು ಇಷ್ಟ ಪಡುತ್ತಾರೆ. ಇದರಿಂದ ನೀವು ಕೆಲವೇ ದಿನಗಳಲ್ಲಿ ಕೈತುಂಬಾ ಆದಾಯ Business Idea ಗಳಿಸಬಹುದಾಗಿದೆ.

ಉಡುಗೊರೆಗಳು:

ದೀಪಾವಳಿಯಂದು ಸ್ನೇಹಿತರು, ನೆಂಟರು ಒಬ್ಬರನ್ನೊಬ್ಬರು ಭೇಟಿಯಾಗುವುದು ಸಾಮಾನ್ಯ. ಹೀಗೆ ಬೇಟಿಯಾಗುವ ವೇಳೆ ಸಿಹಿ ತಿಂಡಿ ಅಥವಾ ಉಡುಗೊರೆಗಳನ್ನು ಒಯ್ಯುತ್ತಾರೆ. ಇಂತಹ ಪರಿಸ್ಥಿತಿಯಲ್ಲಿ ನೀವು ದೀಪಾವಳಿ ಹಬ್ಬವನ್ನು ಗಮನದಲ್ಲಿಟ್ಟುಕೊಂಡು ಹಬ್ಬಕ್ಕೆ ನೀಡಬಹುದಾದ ಹಾಗೂ ಉಡುಗೊರೆ ಸ್ವೀಕರಿಸುವವರು ಬಹಳ ಕಾಲ ನೆನಪಿನಲ್ಲಿಡಬಹುದಾದ ಉಡುಗೊರೆಗಳನ್ನು ತಯಾರಿಸುವ ಉದ್ಯಮ ಪ್ರಾರಂಭಿಸಬಹುದು. ಈ ರೀತಿ ಉಡುಗೊರೆ ವಸ್ತುಗಳ ಮಾರಾಟವು ಈ ಹಬ್ಬದ ಸಂದರ್ಭದಲ್ಲಿ ನಿಮಗೆ ಹೆಚ್ಚಿನ ಲಾಭ ಗಳಿಸಲು ಸಹಾಯಕವಾಗುತ್ತದೆ.

ರಂಗೋಲಿ ವ್ಯಾಪಾರ:

ದೀಪಾವಳಿ ಹಬ್ಬದ ಮೂರು ದಿನವು ಪ್ರತಿಯೊಬ್ಬರ ಮನೆಯ ಎದುರು ವಿಧ ವಿಧವಾದ ರಂಗೋಲಿಯನ್ನು ರಚಿಸಲಾಗುತ್ತದೆ. ಮಹಿಳೆಯರು ರೀತಿ ರಂಗೋಲಿಯನ್ನು ರಚಿಸಿ ಸಂಬ್ರಮಿಸುತ್ತಾರೆ. ಕೆಲವರು ಹಲವು ಸುಧಾರಿತ ಬಣ್ಣಗಳನ್ನು ಬಳಸಿ ರಂಗೋಲಿ ಬಿಡಿಸಿದರೆ ಇನ್ನು ಕೆಲವರು ಎರಡ್ಮೂರು ಬಣ್ಣಗಳನ್ನು ಬಳಸಿ ರಂಗೋಲಿ ಬಿಡಿಸುತ್ತಾರೆ. ಹಾಗಾಗಿ ಇದನ್ನು ಗಮನದಲ್ಲಿಟ್ಟುಕೊಂಡು ನೀವು ರಂಗೋಲಿ ಬಣ್ಣದ ವ್ಯಾಪಾರವನ್ನು ಮಾಡಬಹುದು. ಇದರ ಜೊತೆ ರಂಗೋಲಿ ಬಿಡಿಸುವ ಅಚ್ಚುಗಳ ಮಾರಾಟವನ್ನು Business Idea ಮಾಡಬಹುದು.

Comments are closed.