Get SSP scholarship: ನಿಮ್ಮ ಮನೆಯಲ್ಲಿ ಓದುವ ಮಕ್ಕಳು ಇದ್ದರೇ, ಇಲ್ಲಿ ಅರ್ಜಿ ಹಾಕಿ. ವಿದ್ಯಾರ್ಥಿವೇತನ ಸಿಗುತ್ತೆ. ಹಣ ಪಡೆದು ಓದಿಸಿ.
Get SSP scholarship: ನಮಸ್ಕಾರ ಸ್ನೇಹಿತರೇ ಹಲವು ವಿದ್ಯಾರ್ಥಿಗಳಿಗೆ ಬಡತನ ಅಥವಾ ಇತರೆ ಕಾರಣಗಳಿಂದ ಮೆಟ್ರಿಕ್ ನಂತರ ಓದಲು ಸಾಧ್ಯವಾಗುವುದಿಲ್ಲ. ಅದಕ್ಕಾಗಿ ಅವರು ಓದನ್ನು ಅರ್ಧಕ್ಕೆ ಬಿಟ್ಟು ದುಡಿಮೆಗೆ ಸೇರಿಕೊಳ್ಳುತ್ತಾರೆ. ಅರ್ಹ ಪ್ರತಿಭಾನ್ವಿತ ವಿದ್ಯಾರ್ಥಿಗಳು ಓದಿನಿಂದ ವಂಚಿತರಾಗಬಾರದು ಎನ್ನುವ ಕಾರಣಕ್ಕೆ ಸರ್ಕಾರವು ಎಸ್ಎಸ್ಪಿ ವಿದ್ಯಾರ್ಥಿ ವೇತನ ನೀಡುತ್ತಿದೆ. ಅದಕ್ಕಾಗಿ ಪ್ರಸಕ್ತ ಸಾಲಿನ ಅರ್ಜಿ ಆಹ್ವಾನಿಸಲಾಗಿದೆ.
ಅರ್ಹ ಪ್ರತಿಭಾನ್ವಿತ ವಿದ್ಯಾರ್ಥಿಗಳ ವಿದ್ಯಾರ್ಜನೆಗೆ ತೊಂದರೆಯಾಗಬಾರದು ಎನ್ನುವ ಕಾರಣಕ್ಕಾಗಿ ಈ ಶಿಷ್ಯವೇತನ ನೀಡಲಾಗುತ್ತದೆ. ಹಾಗಾಗಿ ಪ್ರತಿಭಾನ್ವಿತ ವಿದ್ಯಾರ್ಥಿಗಳು ಈ ವಿದ್ಯಾರ್ಥಿ ವೇತನ ಪಡೆದುಕೊಂಡು ತಮ್ಮ ಶಿಕ್ಷಣ ಪೂರೈಸಿಕೊಳ್ಳಬಹುದು. ಮೆಟ್ರಿಕ್ ನಂತರದ ಕೋರ್ಸುಗಳಲ್ಲಿ ಅಧ್ಯಯನ ಮಾಡುತ್ತಿರುವ ಹಾಗೂ ಕುಟುಂಬದ ವಾರ್ಷಿಕ ಆದಾಯ ಮಿತಿ ೨.೫೦ ಲಕ್ಷ ರೂ.ಕ್ಕಿಂತ ಕಡಿಮೆ ಇರುವ ಪರಿಶಿಷ್ಟ ಜಾತಿ ಹಾಗೂ ಪಂಗಡದ ವಿದ್ಯಾರ್ಥಿಗಳಿಗೆ ಈ ವಿದ್ಯಾರ್ಥಿ ವೇತನ ದೊರೆಯಲಿದೆ.
ಮೆಟ್ರಿಕ್ ನಂತರದ ವಿದ್ಯಾರ್ಥಿ ವೇತನ: here is how you can get ssp scholarship
ಎಲ್ಲ ಅರ್ಹ ಪರಿಶಿಷ್ಟ ಜಾತಿಯ ವಿದ್ಯಾರ್ಥಿಗಳಿಗೆ ಆರ್ಥಿಕ ನೆರವು ನೀಡಲು ಸಮಾಜ ಕಲ್ಯಾಣ ಇಲಾಖೆಯಿಂದ ಮೆಟ್ರಿಕ್ ನಂತರದ ವಿದ್ಯಾರ್ಥಿ ವೇತನ ನೀಡಲು ಅರ್ಜಿ ಆಹ್ವಾನಿಸಲಾಗಿದೆ. ಪದವಿ ಪೂರ್ವ, ಪದವಿ, ಇಂಜನಿಯರಿಂಗ್ ಕಾಲೇಜುಗಳಲ್ಲಿ ಉಚಿತ ಪ್ರವೇಶ ನೀಡಲಾಗುತ್ತದೆ.
ಬ್ಯಾಂಕ್ ಆಫ್ ಬರೋಡಾದಿಂದ ಗುಡ್ ನ್ಯೂಸ್; ಕ್ಷಣ ಮಾತ್ರ ದಲ್ಲಿ ಪಡೆಯಿರಿ ವೈಯಕ್ತಿಕ ಸಾಲ, ಅದೂ ಯಾವುದೇ ಅಡಮಾನ ಇಡದೆ – Loan
ಫ್ರಿಶಿಪ್ ಕಾರ್ಡ್ ಪ್ರಯೋಜನಗಳು: SSP scholarship benefits.
ಕುಟುಂಬದ ವಾರ್ಷಿಕ ಆದಾಯ ೨.೫೦ ಲಕ್ಷ ರೂ. ಮೀರಿರದ ಪರಿಶಿಷ್ಟ ಜಾತಿಯ ಎಲ್ಲ ವಿದ್ಯಾರ್ಥಿಗಳಿಗೆ ಮೆಟ್ರಿಕ್ ನಂತರದ ಎಲ್ಲ ಕೋರ್ಸುಗಳಿಗೆ ಉಚಿತ ಪ್ರವೇಶ ನೀಡಲಾಗುತ್ತದೆ. ಸರ್ಕಾರವು ಆಯಾಯ ಕೋರ್ಸಿಗೆ ನಿಗದಿಪಡಿಸಿರುವ ದರದಲ್ಲಿ ಶುಲ್ಕವನ್ನು ಇಲಾಖೆಯಿಂದ ವಿದ್ಯಾರ್ಥಿಗಳಿಗೆ ಮರುಪಾವತಿ ಮಾಡಲಾಗುತ್ತದೆ. ಯಾವುದೇ ಶಿಕ್ಷಣ ಸಂಸ್ಥೆ ಸದರಿ ಪರಿಶಿಷ್ಟ ಜಾತಿಯ ವಿದ್ಯಾರ್ಥಿಯಿಂದ ಮರುಪಾವತಿ ಮಾಡಲಾಗುವ ಶುಲ್ಕಗಳನ್ನು ಹೊರತುಪಡಿಸಿ ಇತರೆ ಕಡ್ಡಾಯ ಶುಲ್ಕಗಳನ್ನು ಆರಂಭದಲ್ಲಿಯೇ ಪಾವತಿ ಮಾಡಿ ಎಂದು ಒತ್ತಾಯ ಮಾಡುವಂತಿಲ್ಲ.
ವಿದ್ಯಾರ್ಥಿ ವೇತನ ಪಡೆಯಲು ಬೇಕಾಗುವ ದಾಖಲೆಗಳು: Documents needed to Get SSP scholarship
ಆಧಾರ್ ಸಂಖ್ಯೆ ಹಾಗೂ ಆಧಾರ್ನಲ್ಲಿರುವ ಹಾಗೆಯೇ ಹೆಸರನ್ನು ಅರ್ಜಿಯಲ್ಲಿ ತುಂಬಬೇಕು. ಮೊಬೈಲ್ ಸಂಖ್ಯೆ, ಇ-ಮೇಲ್ ಐಡಿ, ಎಸ್ಎಸ್ಎಲ್ಸಿ ನೋಂದಣಿ ಸಂಖ್ಯೆ, ಜಾತಿ ಹಾಗೂ ಆದಾಯ ಪ್ರಮಾಣ ಪತ್ರ, ವಿದ್ಯಾರ್ಥಿಯು ವಿಕಲಚೇತನರಾಗಿದ್ದಲ್ಲಿ ಯುಡಿಐಡಿ ಗುರುತಿನ ಸಂಖ್ಯೆ, ವಿದ್ಯಾರ್ಥಿಯು ವಾಸವಿರುವ ಜಿಲ್ಲೆ, ತಾಲೂಕು, ವಿಧಾನಸಭಾ ಕ್ಷೇತ್ರದ ಹೆಸರು ಹಾಗೂ ವಿಳಾಸ, ವಿದ್ಯಾರ್ಥಿಯ ಕಾಲೇಜು ದಾಖಲಾತಿ ಸಂಖ್ಯೆ, ಸಂಬಂಧಪಟ್ಟ ದಾಖಲೆಗಳ ನೋಂದಣಿ ಸಂಖ್ಯೆ, ಹಾಸ್ಟೆಲ್ನಲ್ಲಿ ಇದ್ದರೆ ಅದರ ವಿವರಗಳನ್ನು ನೀಡಬೇಕಾಗುತ್ತದೆ.
ವಿದ್ಯಾರ್ಥಿಗಳು ಕರ್ನಾಟಕ ಸರ್ಕಾರದ (SSP) ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಿ ಅಲ್ಲಿ ಅರ್ಜಿಯನ್ನು ಡೌನ್ಲೋಡ್ ಮಾಡಿಕೊಂಡು ಭರ್ತಿ ಮಾಡಿ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳಿಗೆ ಸಲ್ಲಿಸಬೇಕು. ನೀವು ಸಲ್ಲಿಸಿರುವ ಅರ್ಜಿ ಸರಿಯಾಗಿದ್ದಲ್ಲಿ ಅವರು ನಿಮಗೆ ಶಿಷ್ಯವೇತನ ಮಂಜೂರು ಮಾಡುತ್ತಾರೆ.
Comments are closed.