Loan: ರೈತರಿಗೆ ಗುಡ್ ನ್ಯೂಸ್; ರೈತರ ಈ ಸಾಲ ಮನ್ನಾ ಮಾಡಲು ನಿರ್ಧರಿಸಿದ ಸರ್ಕಾರದ, ಯಾರಿಗೆ ಸಿಗಲಿದೆ ಬೆನಿಫಿಟ್!

Govt has waived farmers’ loans: ರಾಜ್ಯ ಸರ್ಕಾರವು ರೈತರ ಅಭಿವೃದ್ಧಿಗಾಗಿ ಹಗಲಿರುಳು ಶ್ರಮಿಸುತ್ತಿದೆ. ಅದಕ್ಕಾಗಿಯೇ ಹಲವಾರು ಯೋಜನೆಗಳನ್ನು ಜಾರಿಗೆ ತರುತ್ತಿದೆ. ಇದೀಗ ರೈತರ ಸಾಲ ಮನ್ನಾ ಮಾಡಿದ್ದು, ಆ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ. ನೀವು ಸಹ ಈ ಯೋಜನೆ ಅಡಿಯಲ್ಲಿ ಬ್ಯಾಂಕ್ನಿಂದ ಸಾಲ Loan ಪಡೆದಿದ್ದರೆ ನಿಮ್ಮ ಸಾಲವು ಮನ್ನಾ ಆದವರ ಯಾದಿಯಲ್ಲಿ ಕಾಣಿಸಿಕೊಳ್ಳಲಿದೆ. ಹಾಗಾದರೆ ಯಾವ ಯೋಜನೆ ಅಡಿಯಲ್ಲಿ ಪಡೆದ ಸಾಲವನ್ನು ಮನ್ನಾ ಮಾಡಲಾಗಿದೆ ಎಂದು ತಿಳಿದುಕೊಳ್ಳೊಣ.

Govt has waived farmers’ loans here are the details.

ರೈತರ ಬೆಳೆ ಸಾಲ Loan ಮನ್ನಾ ಯೋಜನೆ ಅಡಿಯಲ್ಲಿ ರಾಜ್ಯದ ರೈತರ ಸಾಲವನ್ನು ಮನ್ನಾ ಮಾಡಲಾಗುತ್ತಿದೆ. ರೈತ ಸಾಲ ಯೋಜನೆ ಅಡಿಯಲ್ಲಿ ಮೊದಲ ಹಂತದಲ್ಲಿ ಐವತ್ತು ಸಾವಿರ ರೂ. ವರೆಗೆ ಸಾಲ ಪಡೆದ ರೈತರ ಸಾಲ ಮನ್ನಾ ಮಾಡಲಾಗಿದೆ. ಎರಡನೇ ಹಂತದಲ್ಲಿ ಒಂದು ಲಕ್ಷ ರೂ. ವರೆಗಿನ ಸಾಲ ಮನ್ನಾ ಮಾಡಲಾಗಿದೆ. ಎರಡನೇ ಹಂತದಲ್ಲಿ 3749 ರೈತರ 26 ಕೋಟಿ ರೂ. ಸಾಲ ಮನ್ನಾ ಮಾಡಲಾಗಿದೆ.

ಸಾಲ ಮನ್ನಾ ಆದವರ ಪಟ್ಟಿ ಪರಿಶೀಲನೆ ಹೇಗೆ?:

ಮೊದಲು ನೀವು ಸರ್ಕಾರದ ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಬೇಕು. ಆಗ ನಿಮ್ಮ ಮುಂದೆ ಅದರ ಮುಖಪುಟ ತೆರೆದುಕೊಳ್ಳುತ್ತದೆ. ಇಲ್ಲಿ ನೀವು ಕಿಸಾನ್ ಬೆಳೆ ಸಾಲ Loan ಮನ್ನಾ ಯೋಜನೆ ಅಡಿಯಲ್ಲಿ ಲಾಭ ಪಡೆದಿದ್ದರೆ ರೈತರ ಆಯ್ಕೆ ಪಟ್ಟಿ ಪಡೆದುಕೊಳ್ಳುತ್ತೀರಿ. ಆ ಆಯ್ಕೆಯ ಮೇಲೆ ಕ್ಲಿಕ್ ಮಾಡಬೇಕು. ಈಗ ಈ ಸಲದ ಸಾಲ ಮನ್ನಾ ಪಟ್ಟಿ ನಿಮ್ಮ ಮುಂದೆ ತೆರೆದುಕೊಳ್ಳುತ್ತದೆ. ಇದರಲ್ಲಿ ನಿಮ್ಮ ಹೆಸರು ಇದೆಯೋ ಇಲ್ಲವೋ ಎನ್ನುವುದನ್ನು ಪರಿಶೀಲನೆ ಮಾಡಿಕೊಳ್ಳಬಹುದು.

ಪ್ರತಿಯೊಬ್ಬ ರೈತರು ಸಾಲದಿಂದ ಮುಕ್ತರಾಗಿರಬೇಕು, ಸ್ವಾವಲಂಬಿ ಜೀವನ ನಡೆಸಬೇಕು ಎನ್ನುವ ಕಾರಣಕ್ಕಾಗಿ ಸರ್ಕಾರವು ಸಾಲ ಮನ್ನಾ ಮಾಡಲು ಮುಂದಾಗಿದೆ. ಈಗ ಇದರ ಅಡಿಯಲ್ಲಿ 2 ಲಕ್ಷ ರೂ. ವರೆಗಿನ ಸಾಲ ಮನ್ನಾ ಆಗಲಿದೆ. ಈ ಸಾಲ ಮನ್ನಾ ಆದವರ ಪಟ್ಟಿಯನ್ನು ಸಹ ಸರ್ಕಾರವು ಬಿಡುಗಡೆ ಮಾಡಿದೆ.

ರಾಜ್ಯದ ರೈತರಿಗೆ ದೊಡ್ಡ ಕೊಡುಗೆ:

ಕಿಸಾನ್ ಸಾಲ ಮನ್ನಾ ಯೋಜನೆ ರಾಜ್ಯದಾದ್ಯಂತ ಸುಮಾರು 55 ಲಕ್ಷ ಸಣ್ಣ ಹಾಗೂ ಅತಿ ಸಣ್ಣ ಹಿಡುವಳಿ ಹೊಂದಿರುವ ರೈತರನ್ನು ಒಳಗೊಂಡಿದೆ.ಇತ್ತಿಚಿನ ಅಧಿಸೂಚನೆಯಲ್ಲಿ ಬೆಳೆ ಸಾಲ Loan ಮನ್ನಾ ಯೋಜನೆಯನ್ನು ಕಿಸಾನ್ ಬೆಳೆ ಸಾಲ ಮನ್ನಾ ಯೋಜನೆ ಎಂದು ಬದಲಾಯಿಸಲಾಗಿದೆ. ಸರಕಾರವು ರಾಷ್ಟ್ರೀಕೃತ ಹಾಗೂ ಗ್ರಾಮೀಣ ಬ್ಯಾಂಕ್ಗಳಲ್ಲಿ ರೈತರು ಪಡೆದುಕೊಂಡಿರುವ ಬೆಳೆ ಸಾಲವನ್ನು ಮನ್ನಾ ಮಾಡಿದೆ. ಈ ಮೂಲಕ ಸರ್ಕಾರವು ರಾಜ್ಯದ ರೈತರನ್ನು ಸ್ವಾವಲಂಬಿ ಆಗಿಸಲು ಒಂದು ಹೆಜ್ಜೆ ಮುಂದೆ ಇಟ್ಟಿದೆ ಎಂದರೆ ಅತಿಶಯೋಕ್ತಿ ಆಗಲಾರದು.

Comments are closed.