Tirupati Tirumala: ವಿದ್ಯಾರ್ಥಿನಿಯರಿಗೆ ತಿಂಗಳಿಗೊಮ್ಮೆ ಉಚಿತ  ತಿರುಪತಿ ತಿರುಮಲ ದರ್ಶನ; ಯಾರಿಗೆ ಸಿಗಲಿದೆ ಈ ಯೋಗ?

Tirupati Tirumala: ನಮಸ್ಕಾರ ಸ್ನೇಹಿತರೆ ಇವತ್ತಿನ ಈ ಸುದ್ದಿಯನ್ನು ಕೇಳಿದರೆ ಖಂಡಿತವಾಗಿ ನೀವು ಕೂಡ ಆಶ್ಚರ್ಯಪಡುತ್ತೀರಾ. ನಮ್ಮ ಭಾರತ ದೇಶದಲ್ಲಿ ದೇವಸ್ಥಾನಗಳು ಕೇವಲ ಭಕ್ತಾಭಿಮಾನಿಗಳಿಗೆ ಮಾತ್ರವಲ್ಲದೆ ಬರುವಂತಹ ಹಣದಲ್ಲಿ ಬೇರೆ ಬೇರೆ ಸಮಾಜ ಉಪಯೋಗವಾಗುವಂತಹ ಕಾರ್ಯಗಳನ್ನು ಹಾಗೂ ಸಂಸ್ಥೆಗಳನ್ನು ಕೂಡ ನಡೆಸುತ್ತವೆ. ಹೌದು ತಿರುಪತಿ (Tirupati Tirumala) ದೇವಸ್ಥಾನದ ಆಡಳಿತ ಮಂಡಳಿ ಟಿಟಿಡಿ (TTD) ತಾನು ನಡೆಸುತ್ತಿರುವಂತಹ ವಿದ್ಯಾಸಂಸ್ಥೆಯಲ್ಲಿ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಉತ್ತಮ ಅಂಕಗಳನ್ನು ಪಡೆದಂತಹ ವಿದ್ಯಾರ್ಥಿನಿಯರಿಗೆ ತಿಂಗಳಿಗೆ ಒಮ್ಮೆ ತಿರುಪತಿಯ ಶ್ರೀವಾರಿ ದರ್ಶನಕ್ಕೆ ಅವಕಾಶ ನೀಡುವಂತಹ ನಿರ್ಧಾರವನ್ನು ತೆಗೆದುಕೊಂಡಿದೆ. ಉತ್ತಮ ಅಂಕಗಳನ್ನು ಪಡೆದುಕೊಳ್ಳುವುದಕ್ಕೆ ವಿದ್ಯಾರ್ಥಿನಿಯರಿಗೆ ಉತ್ತೇಜಿಸುವುದಕ್ಕಾಗಿ ಟಿಟಿಡಿ ತೆಗೆದುಕೊಂಡಿರುವಂತಹ ನಿರ್ಧಾರ ಈಗ ಎಲ್ಲಾ ಕಡೆ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದೆ.

Tirupati Tirumala Free Darshanam for students. Who can get this benefits?

ನೂರಕ್ಕೆ ನೂರರಷ್ಟು ಫಲಿತಾಂಶವನ್ನು ಪಡೆದುಕೊಂಡಿರುವಂತಹ ವಿದ್ಯಾರ್ಥಿನಿಯರನ್ನು ಗೌರವಿಸುವ ಸಂದರ್ಭದಲ್ಲಿ ಜೆಇಓ ಆಗಿರುವಂತಹ ಸದಾ ಭಾರ್ಗವಿ ಅವರು ಈ ವಿಚಾರವನ್ನು ಪ್ರಸ್ತಾಪಿಸಿದ್ದಾರೆ. ಇದೇ ಸಂದರ್ಭದಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವಂತಹ ವಿದ್ಯಾರ್ಥಿನಿಯರಿಗೆ ಉತ್ತಮ ಕೋಚಿಂಗ್ ಸೌಲಭ್ಯ ಕೂಡ ನೀಡುವುದಾಗಿ ಘೋಷಿಸಿದ್ದಾರೆ. ಉತ್ತಮ ಫಲಿತಾಂಶವನ್ನು ತರುವಂತಹ ಹೆಣ್ಣು ಮಕ್ಕಳಿಗೆ ತಿರುಪತಿ ತಿಮ್ಮಪ್ಪನ (Tirupati Tirumala)  ದರ್ಶನವನ್ನು ಮಾಡಿಸುವಂತಹ ಮಾತನ್ನು ಕೂಡ ಆಡಿದ್ದಾರೆ. ಇಷ್ಟು ಮಾತ್ರವಲ್ಲದೆ ಸಂಸ್ಥೆಯಿಂದ ಸಿಗುವಂತಹ ಪ್ರತಿಯೊಂದು ಸಂಪನ್ಮೂಲಗಳನ್ನು ಸರಿಯಾದ ರೀತಿಯಲ್ಲಿ ಬಳಸಿಕೊಂಡು ಉತ್ತಮವಾಗಿ ವಿದ್ಯಾಭ್ಯಾಸ ಮಾಡಿ ಅನ್ನುವುದಾಗಿ ಕೂಡ ಕರೆ ನೀಡಿದ್ದಾರೆ.

ದುಡ್ಡು ಉಳಿಸುವುದಕ್ಕೆ ಸೆಕೆಂಡ್ ಹ್ಯಾಂಡ್ ಬೈಕ್ ಖರೀದಿ ಮಾಡೋದಕ್ಕೂ ಮೊದಲು ಈ ವಿಚಾರ ಗಮನಿಸಲೇಬೇಕು; ಪೊಲೀಸರೇ ಹೇಳಿದ್ದು ಇದು!

ಉತ್ತಮ ಅಂಕಗಳನ್ನು ಪಡೆದುಕೊಂಡಿರುವಂತಹ 215 ವಿದ್ಯಾರ್ಥಿನಿಯರಿಗೆ ತಲಾ ಐದು ಗ್ರಾಂ ಬೆಳ್ಳಿಯ ಡಾಲರ್ ನೀಡುವ ಮೂಲಕ ಸನ್ಮಾನಿಸಲಾಗಿದೆ. ಈಗಾಗಲೇ ಟಿಟಿಡಿ ಅಧೀನದಲ್ಲಿ 27 ಶಿಕ್ಷಣ ಸಂಸ್ಥೆಗಳು ನಡೆಯುತ್ತಿದ್ದು ಇಲ್ಲಿನ ಎಲ್ಲ ಮಕ್ಕಳು ಕೂಡ ಶಿಸ್ತನ್ನು ಪರಿಪಾಲಿಸಬೇಕು ಎಂಬುದಾಗಿ ಕೂಡ EO ಆಗಿರುವಂತ ಧರ್ಮ ರೆಡ್ಡಿ ಹೇಳಿಕೊಂಡಿದ್ದಾರೆ. ಅಗತ್ಯವಿದ್ದಲ್ಲಿ ಮಕ್ಕಳ ಪೋಷಕರನ್ನು ಕರೆಸಿ ಕೌನ್ಸೆಲಿಂಗ್ ಮಾಡುವ ಬಗ್ಗೆ ಕೂಡ ಪ್ರಸ್ತಾವನೆ ಮಾಡಿದ್ದಾರೆ. ಇದರ ಜೊತೆಗೆ ಶಾಲೆಯಲ್ಲಿ ಇರುವಂತಹ ಶಿಕ್ಷಕರ ಕೊರತೆಯನ್ನು ನೀಗಿಸಲು ಅತಿ ಶೀಘ್ರದಲ್ಲಿಯೇ 120 ಕಿರಿಯ ಉಪನ್ಯಾಸಕರನ್ನು ಭರ್ತಿ ಮಾಡುವ ಬಗ್ಗೆ ಕೂಡ ಈ ಸಂದರ್ಭದಲ್ಲಿ ಉಲ್ಲೇಖಿಸಲಾಗಿದೆ.

ಟಿಟಿಡಿ ಮೊಹೊನ್ನತ ಗುರಿಯೊಂದಿಗೆ ಮಕ್ಕಳಿಗೆ ಶಿಕ್ಷಣ ಕಲಿಯೋದಕ್ಕೆ ಪರಿಪೂರ್ಣವಾದಂತಹ ಪರಿಸರವನ್ನು ನಿರ್ಮಾಣ ಮಾಡಿದ್ದು ಪ್ರತಿಯೊಬ್ಬರು ಕೂಡ ಇದರ ಪ್ರಯೋಜನವನ್ನು ಪಡೆದುಕೊಳ್ಳಬೇಕು ಎಂಬುದಾಗಿ ಸದಾ ಭಾರ್ಗವಿ ಹೇಳಿಕೊಂಡಿದ್ದಾರೆ. ಒಟ್ಟಾರೆಯಾಗಿ ಉತ್ತಮ ಫಲಿತಾಂಶವನ್ನು ನೀಡುವಂತಹ ವಿದ್ಯಾರ್ಥಿನಿಯರಿಗೆ ಈ ರೀತಿ ತಿಂಗಳಿಗೊಮ್ಮೆ ಶ್ರೀವಾರಿಯ (Tirupati Tirumala)  ದರ್ಶನವನ್ನು ಮಾಡಿಸುವ ಪ್ರಕಟಣೆ ಮಾಡಿರುವುದು ಒಂದು ವಿಭಿನ್ನ ಪ್ರಯೋಗ ಎಂದು ಹೇಳಬಹುದಾಗಿದೆ. ಈ ರೀತಿ ವಿಭಿನ್ನವಾದ ಪ್ರಯೋಗಾತ್ಮಕ ಅವಕಾಶಗಳನ್ನು ವಿದ್ಯಾರ್ಥಿನಿಯರಿಗೆ ಟಿಟಿಡಿ ಒದಗಿಸುತ್ತಿರುವ ಬಗ್ಗೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ಕಾಮೆಂಟ್ ಬಾಕ್ಸ್ ನಲ್ಲಿ ಕಾಮೆಂಟ್ ಮಾಡುವ ಮೂಲಕ ನಮ್ಮೊಂದಿಗೆ ಹಂಚಿಕೊಳ್ಳಬಹುದಾಗಿದೆ.

Comments are closed.