Gruhajyoti Scheme: ಕರೆಂಟ್ ಬಿಲ್ ಬರ್ತಾ ಇಲ್ವಾ? ಇನ್ನು ಮುಂದೇನು ಫ್ರೀ ಬೇಕೇ? ಹಾಗಿದ್ದರೆ ಈ ಕೂಡಲೇ ಈ ಕೆಲಸ ಮಾಡಿ. ಇಲ್ಲವಾದಲ್ಲಿ ಬಂದ್.

Gruhajyoti Scheme: ನಮಸ್ಕಾರ ಸ್ನೇಹಿತರೆ ರಾಜ್ಯ ಸರ್ಕಾರದಿಂದ ಜಾರಿಯಾಗಿರುವಂತಹ ಗೃಹ ಜ್ಯೋತಿ ಯೋಜನೆ (Gruhajyoti Scheme) ಅಡಿಯಲ್ಲಿ ಈಗಾಗಲೇ ರಾಜ್ಯಾದ್ಯಂತ 1.6 ಕೋಟಿಗಳಿಗೆ ಹೆಚ್ಚಿನ ಮನೆಗಳಿಗೆ ಈಗಾಗಲೇ ತಿಂಗಳಿಗೆ 200 ಯೂನಿಟ್ ವರೆಗೂ ಕೂಡ ಉಚಿತ ವಿದ್ಯುತ್ ನೀಡಲಾಗುತ್ತಿದೆ. ಕಳೆದ ಸಾಕಷ್ಟು ಸಮಯಗಳಿಂದಲೂ ಕೂಡ ರಾಜ್ಯದ ಪ್ರತಿಯೊಂದು ಮನೆಗಳಲ್ಲಿ ಈ ಯೋಜನೆಯ ಮೂಲಕ ಕೋಟ್ಯಾಂತರ ಜನರು ಉಚಿತ ವಿದ್ಯುತ್ ಅನ್ನು ಪಡೆದುಕೊಳ್ಳುತ್ತಿದ್ದಾರೆ. ಆದರೆ ಈಗ ಯೋಜನೆಯಲ್ಲಿ ಕೆಲವೊಂದು ಮಹತ್ವವಾದಂತಹ ಬದಲಾವಣೆಗಳು ನಡೆಯಲಿವೆ.

ಈ ಹಿಂದೆ ಇದ್ದ ವಾರ್ಷಿಕವಾಗಿ ಬಳಕೆ ಮಾಡಲಾಗುವಂತಹ ವಿದ್ಯುತ್ ನ 10 ಪ್ರತಿಶತ ಹೆಚ್ಚಿನ ವಿದ್ಯುತ್ ಅನ್ನು ನೀಡುವಂತಹ ಘೋಷಣೆ ಮಾಡಲಾಗಿತ್ತು. ಆದರೆ ಈಗ 10 ಯೂನಿಟ್ ಹೆಚ್ಚಿಗೆ ವಿದ್ಯುತ್ ನೀಡುವಂತಹ ಘೋಷಣೆ ಮಾಡಲಾಗಿದೆ. ಈ ಮೂಲಕ ರಾಜ್ಯ ಸರ್ಕಾರ ವಿದ್ಯುತ್ ಇಲಾಖೆಯ ಮೂಲಕ ಅಗತ್ಯ ಇರುವವರಿಗೆ ಅಗತ್ಯ ಇರುವಂತಹ ವಿದ್ಯುತ್ ಅನ್ನು ಮಾತ್ರ ಉಚಿತವಾಗಿ ಪೂರೈಕೆ ಮಾಡುವಂತಹ ಕೆಲಸವನ್ನು ಮಾಡುತ್ತಿದೆ. ಮಾತ್ರವಲ್ಲದೆ ಬೇಕಾಬಿಟ್ಟಿಯಾಗಿ ಯಾರೂ ಕೂಡ ವಿದ್ಯುತ್ ಬಳಕೆಯನ್ನು ಪೋಲು ಮಾಡದಂತೆ ಬಳಕೆಯನ್ನು ನಿಯಂತ್ರಣ ಮಾಡುತ್ತಿದೆ ಎಂದು ಹೇಳಬಹುದಾಗಿದೆ.

ಇನ್ನು ಬಾಡಿಗೆ ಮನೆಯಲ್ಲಿ ಇದ್ದಂತಹ ಜನರು ಹೊಸ ಮನೆಗೆ ಹೋದಾಗ ಈಗಾಗಲೇ ಇದ್ದ ಕನೆಕ್ಷನ್ ಕಾರಣದಿಂದಾಗಿ ಹೊಸ ಮನೆಗೆ ಕನೆಕ್ಷನ್ ಪಡೆಯಲು ಕಷ್ಟ ಆಗುತ್ತಿತ್ತು ಎನ್ನುವಂತಹ ಸಮಸ್ಯೆಗಳನ್ನು ಕೂಡ ಇಷ್ಟು ದಿನ ಕೇಳಲಾಗುತ್ತಿತ್ತು. ಕಳೆದ ಸಾಕಷ್ಟು ಸಮಯಗಳಿಂದಲೂ ಕೂಡ ಈ ಸಮಸ್ಯೆಗೆ ಪರಿಹಾರ ನೀಡಬೇಕು ಎಂಬುದಾಗಿ ಸರ್ಕಾರವನ್ನು ಸಾಮಾನ್ಯ ಜನರು ಕೇಳುತ್ತಿದ್ದರು. ಕೊನೆಗೂ ಸರ್ಕಾರ ಈ ಸಮಸ್ಯೆಗೆ ಪರಿಹಾರವನ್ನು ನೀಡುವಂತಹ ನಿರ್ಧಾರ ಮಾಡಿಕೊಂಡಂತಿದೆ ಎಂದು ಹೇಳಬಹುದಾಗಿದೆ.

ಇದೇ ಬರುವ ಏಪ್ರಿಲ್ ನಿಂದ ಫಾಸ್ಟ್ ಟ್ಯಾಗ್ ಬಂದ್! ಬದಲಿ ವ್ಯವಸ್ಥೆ ಬಗ್ಗೆ ಸರ್ಕಾರದ ಕೊಟ್ಟ ಹೊಸ ಅಪ್ಡೇಟ್!

ಒಂದು ವೇಳೆ ಜನರು ಬಾಡಿಗೆ ಮನೆಯಲ್ಲಿ ವಾಸವಿದ್ದರೆ ಹಾಗೂ ಆ ಮನೆಯಿಂದ ಬೇರೆ ಬಾಡಿಗೆ ಮನೆಗೆ ಅವರು ವರ್ಗಾವಣೆ ಆದರೆ ಆ ಸಂದರ್ಭದಲ್ಲಿ ಹಳೆಯ ಮನೆಯಲ್ಲಿ ಇದ್ದಂತಹ ಗ್ರಹ ಜ್ಯೋತಿ ಯೋಜನೆಯ ಲಿಂಕ್ ಅನ್ನು ರದ್ದುಪಡಿಸಿ ಹೊಸ ಮನೆಯ ಗೃಹ ಜ್ಯೋತಿ (Gruhajyoti Scheme)  ಕನೆಕ್ಷನ್ ಗೆ ಲಿಂಕ್ ಮಾಡುವಂತ ಅವಕಾಶವನ್ನು ಇಂಧನ ಇಲಾಖೆಯ ಮೂಲಕ ರಾಜ್ಯ ಸರ್ಕಾರ ಜಾರಿಗೆ ತಂದಿದೆ ಎಂದು ಹೇಳಬಹುದಾಗಿದೆ. ಬಾಡಿಗೆಯಲ್ಲಿ ಇರುವಂತಹ ಜನರು ಹಳೆಯ ಕನೆಕ್ಷನ್ ಅನ್ನು ಡಿಲಿಂಕ್ ಮಾಡಿ ಹೊಸ ಮನೆಯ ಕನೆಕ್ಷನ್ ಅನ್ನು ಪುನಃ ಸ್ಥಾಪಿಸ ಬೇಕಾಗಿರುತ್ತದೆ.

ಸರ್ಕಾರದ ಅಧಿಕೃತ ವೆಬ್ಸೈಟ್ ಆಗಿರುವಂತಹ ಸೇವಾ ಸಿಂಧು ಪೋರ್ಟಲ್ ನಲ್ಲಿ ಈ ರೀತಿಯ ಅವಕಾಶಗಳಿಗೆ ಒಪ್ಪಿಗೆ ನೀಡಲಾಗಿದ್ದು ಇಂಧನ ಇಲಾಖೆ ಈ ಬಗ್ಗೆ ಹೆಚ್ಚಿನ ಗಮನವನ್ನು ವಹಿಸಬೇಕು ಎಂಬುದಾಗಿ ಸರ್ಕಾರದಿಂದ ಆದೇಶ ಹೊರಡಿದೆ. ಈ ರೀತಿಯ ಪ್ರಕ್ರಿಯೆಗಳನ್ನು ಫೆಬ್ರವರಿ ತಿಂಗಳ ಕೊನೆಯಲ್ಲಿ ಪ್ರಾರಂಭ ಮಾಡಲಾಗುತ್ತದೆ ಎನ್ನುವುದಾಗಿ ಸರ್ಕಾರಿ ಮೂಲಗಳು ತಿಳಿಸಿವೆ. ಈ ಮೂಲಕ ಕರ್ನಾಟಕ ರಾಜ್ಯದ ಸಾಕಷ್ಟು ಬಾಡಿಗೆ ಮನೆಯಲ್ಲಿ ವಾಸಿಸುವಂತಹ ಜನರ ಸಮಸ್ಯೆಗಳನ್ನು ನಿವಾರಿಸಲಾಗುತ್ತಿದೆ.

Comments are closed.