Tirupati: ಈ ವಿಶೇಷ ದಿನದಂದು ತಿರುಪತಿ ತಿಮ್ಮಪ್ಪನಲ್ಲಿ ಭೇಟಿ ನೀಡಿದರೆ, ನಿಮ್ಮ ಮೇಲಿರುತ್ತೆ ತಿಮ್ಮಪ್ಪನ ಸಂಪೂರ್ಣ ಆಶಿರ್ವಾದ; ನಿಮ್ಮ ಅದೃಷ್ಟವೇ ಬದಲಾಗುತ್ತೆ!

Tirupati: ನಮಸ್ಕಾರ ಸ್ನೇಹಿತರೆ ನಮ್ಮ ಸನಾತನ ಹಿಂದೂ ಸಂಸ್ಕೃತಿಯಲ್ಲಿ ದೇವಸ್ಥಾನಗಳಿಗೆ ಸಾಕಷ್ಟು ಪ್ರಾಮುಖ್ಯತೆ ಹಾಗೂ ಪೂಜ್ಯ ಸ್ಥಾನವನ್ನು ನೀಡಲಾಗಿದೆ. ಇದೇ ಕಾರಣಕ್ಕಾಗಿ ನಮ್ಮ ದೇಶದ ದೇವಸ್ಥಾನಗಳಿಗೆ ಸಾವಿರಾರು ಲಕ್ಷಾಂತರ ಮಂದಿ ಭಕ್ತ ಅಭಿಮಾನಿಗಳು ಪ್ರತಿದಿನ ಹರಿದು ಬರುತ್ತಾರೆ. ಅಂತಹ ದೇವಸ್ಥಾನಗಳಲ್ಲಿ ತಿರುಪತಿ (Tirupati)ತಿಮ್ಮಪ್ಪನ ದೇವಸ್ಥಾನ ಕೂಡ ಒಂದು. ಇನ್ನು ನಾವು ತಿರುಪತಿ ತಿಮ್ಮಪ್ಪನ ದೇವಸ್ಥಾನದ ಬಗ್ಗೆ ಒಂದು ವಿಶೇಷ ಮಾಹಿತಿಯನ್ನು ನಿಮ್ಮ ಜೊತೆಗೆ ಹಂಚಿಕೊಳ್ಳಲು ಹೊರಟಿದ್ದೇವೆ. ಅದೇನೆಂದರೆ ಪ್ರತಿ ಹುಣ್ಣಿಮೆಯ ದಿನದಂದು ನಡೆಯುವಂತಹ ಗರುಡ ಸೇವೆ ಸಂದರ್ಭದಲ್ಲಿ ನೀವು ದೇವಸ್ಥಾನಕ್ಕೆ ಹೋದರೆ ತಿಮ್ಮಪ್ಪನ ದರ್ಶನವನ್ನು ಪಡೆದುಕೊಳ್ಳಬಹುದಾಗಿದೆ ಎನ್ನುವುದರ ಬಗ್ಗೆ.

ಈ ವಿಶೇಷ ದಿನದಂದು ತಿರುಪತಿ (Tirupati) ತಿಮ್ಮಪ್ಪನ ಭಕ್ತಾಭಿಮಾನಿಗಳು ತಮ್ಮ ಇಷ್ಟದೇವರ ದರ್ಶನವನ್ನು ಪಡೆದುಕೊಳ್ಳಬಹುದಾಗಿದೆ. ತಿರುಪತಿಗೆ ಬರೋದಕ್ಕೆ ಮಂಗಳ ಆನ್ಲೈನ್ ಬುಕಿಂಗ್ ಅವಕಾಶ ಕೂಡ ಇದೆ. ಕೇವಲ ಇಷ್ಟು ಮಾತ್ರವಲ್ಲದೆ ಇನ್ನೇನು ಪ್ರಾರಂಭವಾಗಲಿರುವಂತಹ ಮಾರ್ಚ್ ತಿಂಗಳಿನಲ್ಲಿ ತಿರುಪತಿಯಲ್ಲಿ ಇರುವಂತಹ ದೇವಸ್ಥಾನದ ಸೇವೆಗಳು ಹಾಗೂ ಪೂಜೆಗಳ ಬಗ್ಗೆ ಕೂಡ ನಿಮಗೆ ಆನ್ಲೈನ್ ನಲ್ಲಿ ಅಡ್ವಾನ್ಸ್ ಆಗಿ ಟಿಕೆಟ್ ಬುಕ್ ಮಾಡುವಂತ ಅವಕಾಶಗಳನ್ನು ಕೂಡ ನೀಡಲಾಗಿರುತ್ತದೆ. ಹೀಗಾಗಿ ಈ ವಿಶೇಷ ಸಂದರ್ಭದಲ್ಲಿ ನೀವು ಟಿಕೆಟ್ ಬುಕಿಂಗ್ ಮಾಡಬಹುದಾಗಿದ್ದು, ಬನ್ನಿ ಮಾರ್ಚ್ ತಿಂಗಳಲ್ಲಿ ಇರುವಂತಹ ಪೂಜೆಗಳ ಬಗ್ಗೆ ಸಂಪೂರ್ಣ ವಿವರವನ್ನು ತಿಳಿದುಕೊಳ್ಳೋಣ‌.

 ಮಾರ್ಚ್ ತಿಂಗಳಲ್ಲಿ ತಿರುಪತಿಯಲ್ಲಿ ಇರುವಂತಹ ವಿಶೇಷ ಸೇವೆಗಳು

  • ಅಂಕುರಾರ್ಪಣ ಮಾರ್ಚ್ ಎಂಟರ ಸಂಜೆ 6 ಗಂಟೆಯನ್ನು ನಡೆಯಲಿದೆ.
  • ಮಾರ್ಚ್ 9 ರಿಂದ ಮಾರ್ಚ್ 17ರ ವರೆಗೆ ತೊಂಡಮಾನಪುರಂ ವೆಂಕಟೇಶ್ವರ ಸ್ವಾಮಿಯ ದೇವಸ್ಥಾನದಲ್ಲಿ ವಾರ್ಷಿಕ ಬ್ರಹ್ಮೋತ್ಸವ ಪೂಜೆ ನಡೆಯಲಿದೆ.
  • ಧ್ವಜಾರೋಹಣದ ಮೂಲಕ ದೇವಸ್ಥಾನದ ಬ್ರಹ್ಮೋತ್ಸವ ಕಾರ್ಯಕ್ರಮ ಮಾರ್ಚ್ 9ರ ಬೆಳಗ್ಗೆ ಏಳರಿಂದ ಎಂಟರವಳೆಗೆ ನಡೆಯಲಿದೆ.
  • ಮಾರ್ಚ್ ಹತ್ತರಿಂದ ಹದಿನಾರರವರೆಗೆ ಕ್ರಮವಾಗಿ ಪ್ರತಿದಿನ, ಹಂಸವಾಹನ, ಸಿಂಹ ವಾಹನ, ಹನುಮಾನ್ ವಾಹನ, ಕಲ್ಯಾಣೋತ್ಸವ ಗರುಡ ಸೇವೆ, ಗಜವಾಹನ, ಚಂದ್ರಪ್ರಭ ವಾಹನ, ತಿರುಚಿ ಸೇವೆ ಹಾಗೂ ಅಶ್ವ ವಾಹನ ನಡೆಯಲಿದೆ.
  • ಚಕ್ರ ಸ್ನಾನ ಹಾಗೂ ದ್ವಜಾರೋಹಣ ಮತ್ತೆ ಮಾರ್ಚ್ 17ರ ಬೆಳಿಗ್ಗೆ 6.30 8ರ ನಡುವೆ ನಡೆಯಲಿದೆ.
  • ವಿಶೇಷವಾದ ಪುಷ್ಪಯಾಗ ಮಾರ್ಚ್ 18ರಂದು ನಡೆಯಲಿದೆ.

ಮಾರ್ಚ್ ಒಂದರಿಂದ ಹತ್ತರವರೆಗೆ ದೇವಸ್ಥಾನದಲ್ಲಿ ವಾರ್ಷಿಕ ಬ್ರಹ್ಮ ಯಾಗ ನಡೆಯಲಿದೆ ಎಂಬುದನ್ನು ಕೂಡ ನೀವು ಇಲ್ಲಿ ತಿಳಿದುಕೊಳ್ಳಬೇಕಾಗಿರುತ್ತದೆ. ಇನ್ನು ಫೆಬ್ರವರಿ 25 ರಿಂದ ಸರ್ವ ದರ್ಶನ ಬೆಳಗ್ಗೆ 8 ರಿಂದ ಪ್ರಾರಂಭಿಸಿ ಹನ್ನೊಂದರವರೆಗೆ ಹಾಗೂ ಮಧ್ಯಾಹ್ನ 2:30 ರಿಂದ ಪ್ರಾರಂಭಿಸಿ ರಾತ್ರಿ ಎಂಟರವರೆಗೆ ಕೂಡ ಇರುತ್ತದೆ. ಈ ಮೂಲಕ ಭಕ್ತಾಭಿಮಾನಿಗಳು ದೇವರ ದರ್ಶನವನ್ನು ಪಡೆದುಕೊಳ್ಳಬಹುದಾಗಿದೆ. ತಿರುಪತಿ ತಿಮ್ಮಪ್ಪನ ಸನ್ನಿಧಾನವನ್ನು ಕಾಣುವುದಕ್ಕೆ ಇದೊಂದು ಅತ್ಯಂತ ಪವಿತ್ರ ಹಾಗೂ ಉತ್ತಮ ಸಮಯ ಎಂದು ಹೇಳಬಹುದಾಗಿದ್ದು ಪ್ರತಿಯೊಬ್ಬ ಭಕ್ತರು ಕೂಡ ಈ ಸಂದರ್ಭದಲ್ಲಿ ದೇವರ ದರ್ಶನವನ್ನು ಮಾಡುವಂತಹ ಪ್ರಯತ್ನವನ್ನು ಮಾಡಬಹುದಾಗಿದೆ.

Comments are closed.