kannada Serial: ರಾಮಾಚಾರಿಯನ್ನ ನೋಡಿ ವೈಶಾಖ ಮಿಸ್ಟೇಕ್ ಮಾಡಿಕೊಂಡ್ಲು! ಇದನ್ನು ನೋಡಿ ಚಾರು ಮಾಡಿದ್ದೆ ಬೇರೆ!

kannada Serial: ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರ ಆಗುತ್ತಿರುವಂತಹ ರಾಮಾಚಾರಿ ಧಾರವಾಹಿ ದಿನೇ ದಿನ ಎಪಿಸೋಡ್ ನಲ್ಲಿ ಪ್ರೇಕ್ಷಕರಿಗೆ ಕುತೂಹಲ ಮೂಡಿಸುವಂತಹ ಕಹಾನಿಯನ್ನು ಹೇಳುತ್ತಿದೆ. ರಾಮಾಚಾರಿ ಕಿಟ್ಟಿ ಹಾಗೂ ಕಿಟ್ಟಿ ರಾಮಾಚಾರಿ ಯಾಗಿ ಬದಲಾಗಿರುವುದರಿಂದಾಗಿ ಪ್ರತಿಯೊಬ್ಬರಿಗೂ ಕೂಡ ಗೊಂದಲ ಉಂಟಾಗುತ್ತಿದೆ. ಪ್ರಮುಖವಾಗಿ ವೈಶಾಖಾಳಿಗೆ ಈ ವಿಚಾರದಲ್ಲಿ ತುಂಬಾ ಗೊಂದಲವಾಗುತ್ತಿದೆ.

ರಾಮಾಚಾರಿಯನ್ನು ಕಿಟ್ಟಿ ಅಂತ ಭಾವಿಸಿ, ವೈಶಾಖ ಕೆಲವೊಂದು ಸತ್ಯಗಳನ್ನು ಅವನಿಗೆ ಹೇಳ್ತಾ ಇದ್ದಾಳೆ ಆದರೆ ರಾಮಾಚಾರಿಗೆ ಇದರ ಬಗ್ಗೆ ಯಾವುದೇ ಸುಳಿವಿರುವುದಿಲ್ಲ. ಏನು ಮಾತಾಡ್ತಿದ್ದಾಳೆ ಅನ್ನೋದಾಗಿ ಕೊನೆವರೆಗೂ ಅರ್ಥ ಆಗೋದಿಲ್ಲ. ಪದೇಪದೇ ಕೆಲಸ ಮಾಡಿ ಮುಗಿಸಿಲ್ಲ ಅಂತ ವೈಶಾಖ ಹೇಳ್ತಿರೋ ಮಾತನ್ನ ಕೊನೆವರೆಗೂ ಕೂಡ ರಾಮಾಚಾರಿ ಅರ್ಥ ಮಾಡಿಕೊಳ್ಳಲು ಸಾಧ್ಯವಾಗುವುದಿಲ್ಲ. ಆದರೆ ಇದರ ಅರಿವಿಲ್ಲದ ವೈಶಾಖ ಏನು ನೀನು ಸುಮ್ನೆ ಟೈಂಪಾಸ್ ಮಾಡೋದಕ್ಕೆ ಬಂದಿರೋದಾ? ಸರಿಯಾಗಿ ಕೆಲಸ ಮಾಡು ಅಂತ ಹೇಳ್ತಾಳೆ. ನೀನು ಯಾವುದಕ್ಕೂ ಹಿಂಜರಿಯಬಾರದು ನನ್ನ ದಾರಿಗೆ ಅಡ್ಡವಾಗಿರುವ ಮುಳ್ಳುಗಳನ್ನ ನೀನೆ ಕಿತ್ತು ಹಾಕ್ಬೇಕು ಅನ್ನೋದಾಗಿ ವೈಶಾಖ ಹೇಳ್ತಾಳೆ. ಆಗ ಚಾರು ಬಂದು ಕೃಷ್ಣ ಅಂತ ಕೂಗ್ತಾ ಅತ್ಯಮ್ಮ ಕರೀತಿದ್ದಾಳೆ ಬಾ ಅಂತ ಕರೆದುಕೊಂಡು ಹೋಗೋಕೆ ಪ್ರಯತ್ನ ಪಟ್ಟಾಗ ವೈಶಾಖಾಳಿಗೆ ಇದು ಕಿಟ್ಟಿ ಅಲ್ಲ ರಾಮಾಚಾರಿ ಎಂಬುದಾಗಿ ಅರಿವಾಗುತ್ತದೆ.

ಈ ಸಂದರ್ಭದಲ್ಲಾಗಲೇ ಮಾನ್ಯತ ಹೆಸರನ್ನು ಬಿಟ್ಟು ಮತ್ತೆಲ್ಲ ವಿಚಾರಗಳನ್ನು ವೈಶಾಖ ರಾಮಾಚಾರಿಗೆ ಹೇಳಿರುತ್ತಾಳೆ. ರಾಮಾಚಾರಿ ಕೂಡ ವೈಶಾಖ ಹೇಳಿರುವಂತಹ ಮಾತುಗಳು ಆಶ್ಚರ್ಯಕ್ಕೆ ತಳ್ಳಿರುತ್ತವೆ. ಕಿಟ್ಟಿ ರಾಮಾಚಾರಿ ಇಬ್ಬರೂ ಕೂಡ ಅದಲು ಬದಲಾಗಿರುವ ವಿಚಾರ ಎಲ್ಲರಿಗೂ ತಿಳಿದಿಲ್ಲ ಕೇವಲ ಮಾನ್ಯತಾಳಿಗೆ ಮಾತ್ರ ತಿಳಿದಿರುತ್ತದೆ. ಅವನ ಜೊತೆ ಮಾತನಾಡುವುದಕ್ಕೆ ಕೂಡ ಸಾಕಷ್ಟು ಪ್ರಯತ್ನ ಪಡುತ್ತಿರುತ್ತಾಳೆ. ಕೊನೆಗೂ ಕಾಲ್ ನಲ್ಲಿ ಮಾತನಾಡುವಂತಹ ಪ್ರಯತ್ನಕ್ಕೆ ಬರುವಂತಹ ಮಾನ್ಯತಾ ಜೊತೆಗೆ ಕಿಟ್ಟಿ ಕೂಡ ಬಂದಿರುತ್ತಾನೆ. ಯಾಕೆಂದರೆ ಅವನಿಗೂ ಕೂಡ ಕೆಲವೊಂದು ವಿಚಾರಗಳನ್ನ ತಿಳಿದುಕೊಳ್ಳಬೇಕಾಗಿರುವ ಅಗತ್ಯ ಇರುತ್ತದೆ. ಇಲ್ಲಿಗೆ ಬಂದು ನಿಂತಿರುವಂತಹ ಈ ಧಾರವಾಹಿ ಮುಂದಿನ ಯಾವ ತಿರುವನ್ನು ಪಡೆದುಕೊಳ್ಳುತ್ತದೆ ಎಂಬುದನ್ನು ಕಾದು ನೋಡಬೇಕಾಗಿದೆ.

ಚಿಕ್ಕ ವಯಸ್ಸಿನಲ್ಲಿ ದೂರವಾಗಿರುವಂತಹ ರಾಮಾಚಾರಿ ಹಾಗೂ ಕಿಟ್ಟಿ ಎನ್ನುವಂತಹ ಅವಳಿ ಮಕ್ಕಳ ಕಥೆಯನ್ನು ಹೇಳಲು ಹೊರಟಿರುವಂತಹ ಈ ಧಾರವಾಹಿ ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಟ್ವಿಸ್ಟ್ ಹಾಗೂ ಟರ್ನ್ ಗಳ ಮೂಲಕ ತನ್ನ ವೀಕ್ಷಕರಿಗೆ ಇನ್ನಷ್ಟು ಹತ್ತಿರವಾಗಿದೆ. ಪ್ರತಿಯೊಬ್ಬರು ಕೂಡ ಈ ಧಾರವಾಹಿಯನ್ನು ಪ್ರತಿದಿನ ತಪ್ಪದೆ ನೋಡುವಂತೆ ಮಾಡಿದೆ. ಸಿನಿಮಾದಲ್ಲಿ ಇರುವುದಕ್ಕಿಂತ ಹೆಚ್ಚಿನ ರೋಚಕತೆ ಅನ್ನೋದು ಇತ್ತೀಚಿನ ದಿನಗಳಲ್ಲಿ ಈ ಧಾರವಾಹಿಯ ಸಂಚಿಕೆಗಳಲ್ಲಿ ಕಂಡು ಬರುತ್ತಿದೆ.

Comments are closed.