Ambani: ಅಬ್ಬಬ್ಬಾ ಚಾನ್ಸ್ ಅಂದ್ರೆ ಇದೆ; ಮುಕೇಶ್ ಅಂಬಾನಿ ತನ್ನ ಪತ್ನಿಯ ಹುಟ್ಟಿದ ಹಬ್ಬಕ್ಕೆ ಕೊಟ್ಟ ಗಿಫ್ಟ್ ಎಷ್ಟು ಬೆಲೆದು ಗೊತಾದ್ರೆ ನೀವ್ ತಲೆ ತಿರ್ಗಿ ಬೀಳ್ತೀರಿ!

Ambani: ನಮ್ಮ ಭಾರತ ದೇಶ ಇತ್ತೀಚಿನ ವರ್ಷಗಳಲ್ಲಿ ಆರ್ಥಿಕವಾಗಿ ಸಾಕಷ್ಟು ವೇಗವಾಗಿ ಬೆಳೆಯುತ್ತಿರುವಂತಹ ದೇಶವಾಗಿದೆ. ಇನ್ನು ನಮ್ಮ ಭಾರತ ದೇಶದ ಶ್ರೀಮಂತರ ವಿಚಾರಕ್ಕೆ ಬರುವುದಾದರೆ ಈ ವ್ಯಕ್ತಿ ಕೇವಲ ಭಾರತ ದೇಶದಲ್ಲಿ ಮಾತ್ರವಲ್ಲದೆ ಇಡೀ ಏಷ್ಯಾ ಖಂಡದಲ್ಲಿ ಅತ್ಯಂತ ಹೆಚ್ಚಿನ ಹಣವನ್ನು ಹೊಂದಿರುವಂತಹ ವ್ಯಕ್ತಿ ಅಂದ್ರೆ ಅದು ಮುಕೇಶ್ ಅಂಬಾನಿ. ರಿಲಯನ್ಸ್ ಗ್ರೂಪ್ ನ ಒಡೆಯ ಆಗಿರುವಂತಹ ಮುಕೇಶ್ ಅಂಬಾನಿ ಅವರು ಇಡೀ ಏಷ್ಯಾ ಖಂಡದಲ್ಲಿ ಅತ್ಯಂತ ಶ್ರೀಮಂತ ವ್ಯಕ್ತಿ ಅನ್ನೋದು ಭಾರತೀಯರಾದ ನಮಗೆ ಹೆಮ್ಮೆಯ ವಿಚಾರವಾಗಿದೆ. ಕೇವಲ ಹಣದ ವಿಚಾರದಲ್ಲಿ ಮಾತ್ರವಲ್ಲದೆ ಹೃದಯ ಶ್ರೀಮಂತಿಕೆ ವಿಚಾರದಲ್ಲಿ ಕೂಡ ಮುಕೇಶ್ ಅಂಬಾನಿ ಮುಂದೆ ಕಾಣಿಸಿಕೊಳ್ಳುತ್ತಾರೆ.

ಇನ್ನು ಕೇವಲ ಅಂಬಾನಿ ಕುಟುಂಬದಿಂದ ಮುಕೇಶ್ ಅಂಬಾನಿ ಮಾತ್ರವಲ್ಲದೆ ಅವರ ಪತ್ನಿ ಆಗಿರುವಂತಹ ನೀತ ಅಂಬಾನಿ ಕೂಡ ಶ್ರೀಮಂತಿಕೆ ಹಾಗೂ ಹೃದಯ ಶ್ರೀಮಂತಿಕೆ ವಿಚಾರದಲ್ಲಿ ಸುದ್ದಿ ಆಗ್ತಾರೆ. ರಿಲಯನ್ಸ್ ಫೌಂಡೇಶನ್ ಟ್ರಸ್ಟ್ ಮೂಲಕ ಬಡ ಮಕ್ಕಳಿಗೆ ಚಿಕಿತ್ಸೆ ಹಾಗೂ ಉಚಿತ ಶಿಕ್ಷಣದ ಸೌಲಭ್ಯಗಳನ್ನು ನೀಡುವ ವಿಚಾರದಲ್ಲಿ ಕೂಡ ನೀತಾ ಅಂಬಾನಿ ಸದ್ದಿಲ್ಲದೆ ಕೆಲಸ ಮಾಡುತ್ತಿದ್ದಾರೆ. ಇನ್ನು ಮುಕೇಶ್ ಅಂಬಾನಿಯವರ ಪ್ರೀತಿಯ ಮಡದಿಗೆ ಅಂಬಾನಿ ನೀಡಿರುವಂತಹ ಉಡುಗೊರೆಯ ಬಗ್ಗೆ ಕೇಳಿದರೆ ಖಂಡಿತವಾಗಿ ನೀವು ಕೂಡ ಮೂಗಿನ ಮೇಲೆ ಬೆರಳು ಇಡ್ತೀರ.

ಮುಕೇಶ್ ಅಂಬಾನಿ ತಮ್ಮ ಪತ್ನಿಯ ಅರವತ್ತನೇ ವರ್ಷದ ಜನ್ಮದಿನಕ್ಕೆ ನೀಡಿದ ಗಿಫ್ಟ್ ಏನು ಗೊತ್ತಾ?

ನಿಮಗೆಲ್ಲರಿಗೂ ಗೊತ್ತಿರಬಹುದು ಮುಕೇಶ್ ಅಂಬಾನಿ ಹಾಗೂ ನೀತಾ ಅಂಬಾನಿ ಇಬ್ಬರು ಕೂಡ ಪರಸ್ಪರ ಪ್ರೀತಿಸಿ ಮದುವೆಯಾಗುತ್ತಾರೆ. ಇಂದಿಗೂ ಕೂಡ ಅವರಿಬ್ಬರ ಪ್ರೀತಿ ಯುವ ಜನತೆಗೆ ಸ್ಪೂರ್ತಿ ಅಂದ್ರೆ ತಪ್ಪಾಗಲಾರದು. ಭಾರತ ದೇಶದ ಅತ್ಯಂತ ಶ್ರೀಮಂತ ವ್ಯಕ್ತಿ ತಮ್ಮ ಹೆಂಡತಿಯ 60ನೇ ಬರ್ತಡೇಗೆ ನೀಡಿರುವಂತಹ ಗಿಫ್ಟ್ ಬೆಲೆ ಕೇಳಿದ್ರೆ ನೀವು ಕೂಡ ಆಶ್ಚರ್ಯ ಪಡೋದ್ರಲ್ಲಿ ಯಾವುದೇ ಅನುಮಾನವಿಲ್ಲ.

ಹೌದು ಬರೋಬ್ಬರಿ 260 ಕೋಟಿ ರೂಪಾಯಿ ಬೆಲೆ ಬಾಳುವಂತಹ ಪ್ರೈವೇಟ್ ಜೆಟ್ ಅನ್ನು ತಮ್ಮ ಪ್ರೀತಿಯ ಮಡದಿಯಾಗಿರುವಂತಹ ನೀತಾ ಅಂಬಾನಿ ಅವರಿಗೆ ಮುಕೇಶ್ ಅಂಬಾನಿ ಅವರು ಉಡುಗೊರೆಯ ರೂಪದಲ್ಲಿ ನೀಡಿದ್ದಾರೆ. ಇಡೀ ವಿಶ್ವದಲ್ಲಿ ಅತ್ಯಂತ ದುಬಾರಿ ಬೆಲೆ ಬಾಳುವ ಮನೆಯನ್ನು ಹೊಂದಿರುವ ಹಾಗೂ ಸಾವಿರ ಕೋಟಿ ರೂಪಾಯಿಗಳ ಮದುವೆಯನ್ನು ಮಾಡಿಸುವಂತಹ ವ್ಯಕ್ತಿಗೆ ಇದು ದುಬಾರಿ ಏನು ಅಲ್ಲ ಬಿಡಿ ಅಂತ ನೆಟ್ಟಿಗರು ಮಾತನಾಡಿಕೊಂಡಿದ್ದಾರೆ. ಆದರೂ ಕೂಡ ಕೇವಲ ಹುಟ್ಟಿದ ಹಬ್ಬಕ್ಕೆ ಇಷ್ಟೊಂದು ದುಬಾರಿ ಉಡುಗೊರೆಯನ್ನು ನೀಡಿರುವಂತಹ ಮುಕೇಶ್ ಅಂಬಾನಿ ಅವರ ಮಡದಿಯ ಮೇಲಿನ ಪ್ರೀತಿಯನ್ನು ಪ್ರತಿಯೊಬ್ಬರೂ ಕೂಡ ಕೊಂಡಾಡಿದ್ದಾರೆ.

Comments are closed.