Agriculture: ಜಿಲ್ಲಾವಾರು ಬೆಳೆ ಇನ್ಸೂರೆನ್ಸ್ ಪಟ್ಟಿ ಬಿಡುಗಡೆ; ನಿಮ್ಮ ಹೆಸರು ಕೂಡ ಇದೆಯಾ ಅನ್ನೋದನ್ನ ಚೆಕ್ ಮಾಡುವುದು ಹೀಗೆ, ಇಲ್ಲಿದೆ ಡೈರೆಕ್ಟ್ ಲಿಂಕ್!

Agriculture: ಈ ಬಾರಿ ಸಾಕಷ್ಟು ಕಡಿಮೆ ಮಳೆ ಬಿದ್ದಿರುವ ಕಾರಣದಿಂದಾಗಿ ರೈತರು ಬೆಳೆದಿರುವಂತಹ ಫಸಲು ಸಂಪೂರ್ಣವಾಗಿ ನಷ್ಟವಾಗಿದೆ ಎಂದು ಹೇಳಬಹುದಾಗಿದೆ. ಇದೇ ಕಾರಣಕ್ಕಾಗಿ ರೈತರು ಬೆಳೆ ಪರಿಹಾರವನ್ನು ಕೇಳಿದ್ದು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಕೂಡ ರೈತರಿಗೆ ಬೆಳೆ ಇನ್ಸೂರೆನ್ಸ್ ನೀಡುವುದಕ್ಕೆ ಸಿದ್ಧವಾಗಿವೆ. ರೈತರ ವಿಚಾರಕ್ಕೆ ಬಂದ್ರೆ ರಾಜ್ಯ ಸರ್ಕಾರವಾಗಲಿ ಕೇಂದ್ರ ಸರ್ಕಾರವಾಗಲಿ, ಸಹಾಯ ಮಾಡುವುದಕ್ಕೆ ಮುಂದೆ ಬರುತ್ತವೆ ಅನ್ನೋದಕ್ಕೆ ಇದೇ ಉದಾಹರಣೆಯಾಗಿದೆ.

ಫಸಲ್ ಭೀಮಾ ಯೋಜನೆ ಅಡಿಯಲ್ಲಿ ಪರಿಹಾರ!

ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆ ಅಡಿಯಲ್ಲಿ ರೈತರು ತಮ್ಮನ್ನು ತಾವು ನೋಂದಾವಣೆ ಮಾಡಿಸಿಕೊಂಡಿದ್ದಾರೆ ಇದೇ ಕಾರಣಕ್ಕಾಗಿ ಬೆಳೆ ಪರಿಹಾರದ ಯೋಜನೆ ಅಡಿಯಲ್ಲಿ ಅವರು ಹಣವನ್ನು ಪಡೆದುಕೊಳ್ಳುವುದಕ್ಕೆ ಸಾಧ್ಯವಾಗುತ್ತಿದೆ. ಈ ಯೋಜನೆ ಅಡಿಯಲ್ಲಿ ರೈತರಿಗೆ ಈಗಾಗಲೇ ಅವರ ಖಾತೆಗೆ ವಿಮಾ ಯೋಜನೆಯ ಹಣವನ್ನ ವರ್ಗಾವಣೆ ಮಾಡುವಂತಹ ಕೆಲಸವನ್ನು ಸರ್ಕಾರ ಮಾಡಿದೆ. ಸದ್ಯದ ಮಟ್ಟಿಗೆ ಈ ಯೋಜನೆ ಅಡಿಯಲ್ಲಿ ಜಿಲ್ಲಾವಾರು ಬೆಳೆ ಪರಿಹಾರ ಬಿಡುಗಡೆಯನ್ನು ಮಾಡ್ತಾ ಇದ್ದು 25 ಪ್ರತಿಶತ ಹಣವನ್ನು ರೈತರ ಖಾತೆಗೆ ಈಗಾಗಲೇ ವರ್ಗಾವಣೆ ಮಾಡಲಾಗಿದ್ದು ಇನ್ನು 75 ಪ್ರತಿಶತ ಹಣವನ್ನು ಅತಿ ಶೀಘ್ರದಲ್ಲಿ ವರ್ಗಾವಣೆ ಮಾಡಲಾಗುತ್ತದೆ.

ಬೆಳೆ ನಷ್ಟ ಪರಿಹಾರಕ್ಕಾಗಿ ಕೇಂದ್ರ ಸರ್ಕಾರ ಈಗಾಗಲೇ ರೈತರಿಗೆ 3454 ಕೋಟಿ ರೂಪಾಯಿಗಳನ್ನು ಬಿಡುಗಡೆ ಮಾಡುವುದಕ್ಕೆ ನೀಡಿದ್ದು ರಾಜ್ಯ ಸರ್ಕಾರದಿಂದ ಕೂಡ ಬೆಳೆ ಪರಿಹಾರಕ್ಕೆ ಹಣ ಬಿಡುಗಡೆಯಾಗಿರುವ ಬಗ್ಗೆ ಮಾಹಿತಿ ಸಿಕ್ಕಿದೆ.

ಬೆಳೆ ಪರಿಹಾರದ ಸ್ಟೇಟಸ್ ಚೆಕ್ ಮಾಡೋದು ಹೀಗೆ!

https://parihara.karnataka.gov.in/PariharaPayment/ಇದು ಅಧಿಕೃತ ವೆಬ್ಸೈಟ್ ಆಗಿದ್ದು ನೀವು ಇಲ್ಲಿ ಹೋಗಿ ಬೆಳೆ ಪರಿಹಾರದ ಬಗ್ಗೆ 2023 ಹಾಗೂ 24ನೇ ವರ್ಷದ ಮುಂಗಾರು ವಿಪತ್ತು ಬರ ಆಪ್ಷನಲ್ ಕ್ಲಿಕ್ ಮಾಡಿದ ನಂತರ ನಿಮ್ಮ ಸ್ಥಳದ ವಿವರವನ್ನು ಹಾಕಿದರೆ ಸಾಕು ಸಂಪೂರ್ಣ ಮಾಹಿತಿಯನ್ನು ನೀವು ಪಡೆದುಕೊಳ್ಳಬಹುದಾಗಿದೆ.

ಸದ್ಯದ ಮಟ್ಟಿಗೆ ರಾಜ್ಯ ಮಾತ್ರವಲ್ಲದೆ ದೇಶದ ಹಲವಾರು ಕಡೆಗಳಲ್ಲಿ ಸರಿಯಾದ ರೀತಿಯಲ್ಲಿ ಮಳೆ ಇಲ್ಲದೆ ಬೆಳೆ ಇಲ್ಲದೆ ರೈತರು ಆರ್ಥಿಕವಾಗಿ ಸಂಪೂರ್ಣವಾಗಿ ಕುಗ್ಗಿ ಹೋಗಿದ್ದಾರೆ ಎಂದು ಹೇಳಬಹುದಾಗಿದೆ. ಇದೇ ಕಾರಣಕ್ಕಾಗಿ ಕೇಂದ್ರ ಸರ್ಕಾರ ಈ ಯೋಜನೆಯನ್ನು ತಮ್ಮದಾಗಿಸಿಕೊಂಡಿರುವಂತಹ ರೈತರಿಗೆ ಬೆಳೆ ಪರಿಹಾರವನ್ನು ಈ ಬಾರಿ ನೀಡಲು ಹೊರಟಿದ್ದು ಹಣವನ್ನು ನೇರವಾಗಿ ಅವರ ಖಾತೆಗೆ ವರ್ಗಾವಣೆ ಮಾಡುವಂತಹ ಕೆಲಸವನ್ನು ಮಾಡ್ತಾ ಇದೆ. ಪ್ರತಿಯೊಬ್ಬ ಚಿಕ್ಕಪುಟ್ಟ ರೈತರು ಕೂಡ ಈ ಯೋಜನೆಯ ಲಾಭವನ್ನು ಪಡೆದುಕೊಳ್ಳಬಹುದಾಗಿದ್ದು ಕೃಷಿಯಿಂದಾಗಿ ಯಾವ ರೈತರು ಕೂಡ ತಾವು ನಷ್ಟ ಹೊಂದಿದ್ದೇವೆ ಎನ್ನುವಂತಹ ಭಾವನೆ ಬಾರದೆ ಇರಲಿ ಹಾಗೂ ಕೃಷಿಗಾರಿಕೆ ಮುಂದುವರಿಯಲಿ ಎನ್ನುವ ಕಾರಣಕ್ಕಾಗಿ ಸರ್ಕಾರ ರೈತರಿಗಾಗಿ ಈ ರೀತಿಯ ಜನಪ್ರಿಯ ಯೋಜನೆಗಳನ್ನು ಆಗಾಗ ಜಾರಿಗೆ ತರುವಂತಹ ಕೆಲಸವನ್ನು ಮಾಡುತ್ತದೆ.

Comments are closed.