Darshan Case: ದರ್ಶನ್ ಬಳಸುತ್ತಿದೆ ಸಿಮ್ ಕಾರ್ಡ್ ಯಾರ ಹೇಸಲಿನಲ್ಲಿ ಇತ್ತು ಗೊತ್ತೇ?? ಬಯಲಾಯ್ತು ಸಿಮ್ ಕಾರ್ಡ್ ನ ಅಸಲಿ ಮ್ಯಾಟರ್

Darshan Case: ರೇಣುಕಾ ಸ್ವಾಮಿ ಅವರ ಪ್ರಕರಣದಲ್ಲಿ ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರು ಈಗಾಗಲೇ ಜುಲೈ 4 ರಿಂದ ಮುಂದುವರೆದು ಜುಲೈ 18ರವರೆಗೆ ಕೂಡ ಪರಪ್ಪನ ಅಗ್ರಹಾರದಲ್ಲಿ ನ್ಯಾಯಾಂಗ ಬಂದನದಲ್ಲಿ ಇರಲಿದ್ದಾರೆ ಎನ್ನುವಂತಹ ಮಾಹಿತಿ ನೆನ್ನೆ ಅಷ್ಟೇ ಕೋರ್ಟಿನ ತೀರ್ಪಿನ ಮುಖಾಂತರ ಹೊರ ಬಂದಿದೆ. ಇನ್ನು ಇದೇ ಸಂದರ್ಭದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರ ಹಾಗೂ ಈ ಪ್ರಕರಣದಲ್ಲಿ ಸಿಲುಕಿಕೊಂಡಿರುವಂತಹ ಬೇರೆ ಆರೋಪಿಗಳ ಮೊಬೈಲ್ ಫೋನ್ ಹಾಗೂ ಇನ್ನಿತರ ಸಾಕ್ಷಾಧಾರಗಳನ್ನು ಕೂಡ ಚೆಕ್ ಮಾಡುವಂತಹ ಕೆಲಸ ನಡೆದುಕೊಂಡು ಬರುತ್ತಿದೆ.

ಇನ್ನು ತನಿಖೆ ಸಂದರ್ಭದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರು ಬಳಸುತ್ತಿದ್ದ ಸಿಮ್ ಕಾರ್ಡ್ ಅನ್ನು ಚೆಕ್ ಮಾಡಿರುವಂತಹ ಪೊಲೀಸರಿಗೆ ಅದು ಅವರ ಹೆಸರಿನಲ್ಲಿಲ್ಲ ಬದಲಾಗಿ ಬೇರೆಯವರ ಹೆಸರಿನಲ್ಲಿ ಖರೀದಿಸಲಾಗಿದೆ ಅನ್ನುವಂತಹ ಮಾಹಿತಿ ಸಿಕ್ಕಿದ್ದು ಸಿಮ್ ಖರೀದಿ ಮಾಡಿರುವವರಿಗೆ ನೋಟಿಸ್ ಅನ್ನು ಕಳಿಸಲಾಗಿದೆ. ಕೇವಲ ದರ್ಶನ್ ಮಾತ್ರವಲ್ಲದೆ ಈ ಪ್ರಕರಣದಲ್ಲಿ ಕಾಣಿಸಿಕೊಂಡಿರುವ ಬಹುತೇಕ ಆರೋಪಿಗಳು ಬೇರೆಯವರ ಹೆಸರಿನಲ್ಲಿ ಸಿಮ್ ಕಾರ್ಡ್ ಬಳಸುತ್ತಿದ್ದರು ಅನ್ನೋದು ಕೂಡ ತಿಳಿದು ಬಂದಿದೆ.

ಹೇಮಂತ್ ಹಾಗೂ ಚಂದನ್ ಎನ್ನುವಂತಹ ಹೆಸರಿನಲ್ಲಿ ಇದ್ದಂತಹ ಸಿಮ್ ಕಾರ್ಡ್ ಅನ್ನು ದರ್ಶನ್ ರವರು ಬಳಸ್ತಾಯಿದ್ರೆ ಮನೋಜ್ ರವರ ಹೆಸರಿನಲ್ಲಿ ಇರುವಂತಹ ಸಿಮ್ ಕಾರ್ಡನ್ನು ಪವಿತ್ರ ಗೌಡ ಅವರು ಬಳಸುತ್ತಿದ್ದರು ಎಂಬುದಾಗಿ ತಿಳಿದು ಬಂದಿದೆ. ತನಿಖೆಯ ವೇಳೆ ಈ ರೀತಿ ಬೇರೆಯವರ ಹೆಸರಿನಲ್ಲಿ ಆರೋಪಿಗಳು ಸಿಮ್ ಕಾರ್ಡ್ ಬಳಸುತ್ತಿದ್ದರು ಎನ್ನುವಂತಹ ಮಾಹಿತಿ ತಿಳಿದು ಬಂದಿದೆ.

ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರು ಹಾಗೂ ಅವರ ಸಹಚರರಿಗೆ ಜುಲೈ ನಾಲ್ಕರವರೆಗೆ ನ್ಯಾಯಾಂಗ ಬಂದನದಲ್ಲಿ ಇರಿಸಲಾಗಿತ್ತು ಹಾಗೂ ಈಗ ಮತ್ತೆ ವಿಡಿಯೋ ಕಾನ್ಫರೆನ್ಸ್ ಮೂಲಕ ಈ ವಿಚಾರದ ಬಗ್ಗೆ ನ್ಯಾಯಾಧೀಶರು ತೀರ್ಪನ್ನು ಹೊರಹಾಕಿದ್ದು ಜುಲೈ 18ರವರೆಗೆ ನ್ಯಾಯಾಂಗ ಬಂಧನವನ್ನ ಮುಂದುವರಿಸಬೇಕು ಎನ್ನುವಂತಹ ಆಜ್ಞೆಯನ್ನು ಹೊರಡಿಸಿದ್ದಾರೆ. ಈ ಸಂದರ್ಭದಲ್ಲಿ ದರ್ಶನ್ ರವರು ತಮ್ಮ ಸಹಕೈದಿಗಳ ಬಗ್ಗೆ ಕೂಡ ಅಸಮಾಧಾನವನ್ನು ಹೊಂದಿದ್ದಾರೆ ಎಂಬುದಾಗಿ ಕೂಡ ತಿಳಿದು ಬಂದಿದೆ ಎಂಬುದಾಗಿ ಮೂಲಗಳು ತಿಳಿಸಿವೆ. ಪರಪ್ಪನ ಅಗ್ರಹಾರದ ಜೈಲಿನಲ್ಲಿಯೇ ಈ ವಿಡಿಯೋ ಕಾನ್ಫರೆನ್ಸ್ ಅನ್ನು ನಿರ್ಧರಿಸಲಾಗಿತ್ತು ಹಾಗೂ ಇಲ್ಲಿಯೇ ತಮ್ಮ ಸಹ ಕೈದಿಗಳ ಬಗ್ಗೆ ಮಾತನಾಡಿರುವಂತಹ ದರ್ಶನ್ ರವರು ನಿಮ್ಮ ಸಹವಾಸ ಮಾಡಿರುವ ಕಾರಣದಿಂದಾಗಿ ನಾನು ಈ ರೀತಿ ಆಗಿದ್ದೇನೆ ಮೊದಲು ನಿಮ್ಮನ್ನು ದೂರ ಇಡಬೇಕು ಅಂತ ಹೇಳಿದ್ದಾರಂತೆ. ಇಲ್ಲಿ ದರ್ಶನ್ ರವರ ನೇರ ಇನ್ವಾಲ್ಮೆಂಟ್ ಇತ್ತ ಅಥವಾ ಅವರ ಸಹಚರರು ಈ ರೀತಿ ಮಾಡಿದ್ದಾರಾ ಅನ್ನೋದು ಮುಂದಿನ ದಿನಗಳಲ್ಲಿ ಅಧಿಕೃತವಾಗಿ ಹೊರಬರಬೇಕಾಗಿದೆ.

Comments are closed.