Astrology: ಮುಂದಿನ 17 ವರ್ಷದವರೆಗೆ ಈ ರಾಶಿಯವರು ಆಡಿದ್ದೆ ಆಟ; ಇವರ ಜೀವನದಲ್ಲಿ ರಾಜ ವೈಭೋಗ ಎದ್ದು ಕಾಣುತ್ತೆ!

Astrology: ವೈದಿಕ ಜ್ಯೋತಿಷ್ಯ ಶಾಸ್ತ್ರದಲ್ಲಿ ಅತ್ಯಂತ ಅಪರೂಪದ ಯೋಗವಾಗಿರುವಂತಹ ಬುಧ ಮಹಾದಶಯೋಗ ಎನ್ನುವುದು ನಿರ್ದಿಷ್ಟ ರಾಶಿಯವರ ಜೀವನದಲ್ಲಿ 17 ವರ್ಷಗಳ ಕಾಲ ಸಾಕಷ್ಟು ಉತ್ತಮ ಫಲಿತಾಂಶಗಳನ್ನ ಅವರಿಗೆ ತಂದು ಕೊಡಲಿದೆ. ಈ ಸಂದರ್ಭದಲ್ಲಿ ಅವರ ಜೀವನದಲ್ಲಿ ಸಾಕಷ್ಟು ಮಂಗಳಕರ ಕಾರ್ಯಕ್ರಮಗಳು ನಡೆಯಲಿವೆ ಹಾಗೂ ಜೀವನ ಹಿಂದೆಂದಿಗಿಂತಲೂ ಉತ್ತಮವಾಗಿ ನಡೆಯಲಿದೆ. ಹಾಗಿದ್ರೆ ಬನ್ನಿ 17 ವರ್ಷಗಳ ಕಾಲ ಬುಧನ ಕೃಪೆಗೆ ಪಾತ್ರರಾಗುವಂತಹ ಅದೃಷ್ಟವಂತರು ಯಾರು ಎನ್ನುವ ಮಾಹಿತಿಯನ್ನು ತಿಳಿದುಕೊಳ್ಳೋಣ.

ಕನ್ಯಾ ರಾಶಿ

ಕನ್ಯಾ ರಾಶಿಯವರು ಈ ಸಮಯದಲ್ಲಿ ಯಾವುದೇ ಕೆಲಸ ಮಾಡಿದರೂ ಕೂಡ ಅದರಲ್ಲಿ ಅವರಿಗೆ ನಿಶ್ಚಿತ ರೂಪದಲ್ಲಿ ಗೆಲುವು ದೊರಕುತ್ತದೆ.ಮುಟ್ಟಿದ್ದೆಲ್ಲ ಚಿನ್ನ ಎಂದು ಹೇಳಬಹುದು. ಈ ಸಂದರ್ಭದಲ್ಲಿ ನೀವು ಯಾವುದಾದರೂ ಹೊಸ ಉದ್ಯೋಗ ಅಥವಾ ಉದ್ಯಮವನ್ನು ಪ್ರಾರಂಭ ಮಾಡಬೇಕು ಎನ್ನುವಂತಹ ಆಸೆಯನ್ನು ಹೊಂದಿದ್ದರೆ ಯಾವುದೇ ರೀತಿಯ ಹಿಂಜರಿಕೆ ಇಲ್ಲದೆ ಇದನ್ನು ಪ್ರಾರಂಭ ಮಾಡಬಹುದಾಗಿದೆ. ಖಂಡಿತವಾಗಿ ಗೆಲುವು ನಿಮ್ಮದಾಗುವುದರಲ್ಲಿ ಯಾವುದೇ ಅನುಮಾನವಿಲ್ಲ.

ವೃಷಭ ರಾಶಿ

ವೃಷಭ ರಾಶಿಯವರ ಜೀವನದಲ್ಲಿ ಈ ಸಂದರ್ಭದಲ್ಲಿ ಮಾಡುವಂತಹ ಪ್ರತಿಯೊಂದು ಕೆಲಸಗಳಲ್ಲಿ ಕೂಡ ಅದೃಷ್ಟದ ಸಹಾಯ ದೊರಕಲಿದೆ. ಇಡುವಂತಹ ಪ್ರತಿಯೊಂದು ಹೆಜ್ಜೆಯಲ್ಲಿ ಕೂಡ ಗೆಲುವಿನ ನಗೆಯನ್ನು ಬೀರಲಿದ್ದೀರಿ. ಈ ಸಂದರ್ಭದಲ್ಲಿ ನಿಮ್ಮ ಜೀವನ ಸುಖ ಸಂಪತ್ತಿನ ಗೂಡಾಗಲಿದೆ. ಇರುವಂತಹ ಎಲ್ಲಾ ಸಾಲಗಳನ್ನು ನೀವು ತೀರಿಸಿಕೊಳ್ಳಬಹುದಾಗಿದ್ದು ಆರ್ಥಿಕ ಪರಿಸ್ಥಿತಿ ಕೂಡ ಸಂಪೂರ್ಣವಾಗಿ ಸುಧಾರಿಸಲಿದೆ. ಈ ಸಂದರ್ಭದಲ್ಲಿ ಹಣಕಾಸಿನ ಹರಿವು ಕೂಡ ನಿಮ್ಮ ಜೀವನದಲ್ಲಿ ಹೆಚ್ಚಾಗಲಿದೆ. ಭವಿಷ್ಯಕ್ಕಾಗಿ ಈ ಹಣವನ್ನು ನೀವು ಉಳಿತಾಯ ಮಾಡುವುದಕ್ಕೆ ಕೂಡ ಯಶಸ್ವಿಯಾಗಲಿದ್ದೀರಿ.

ಮಿಥುನ ರಾಶಿ

ಬುಧನ ಈ ಪರಿಣಾಮ ಎನ್ನುವುದು ಮಿಥುನ ರಾಶಿಯವರಿಗೆ ಮುಂದಿನ 17 ವರ್ಷಗಳ ಕಾಲ ಸಾಕಷ್ಟು ಲಾಭಾಂಶಗಳನ್ನು ಒದಗಿಸಿಕೊಡಲಿದೆ. ಈ ಸಂದರ್ಭದಲ್ಲಿ ಮಿಥುನ ರಾಶಿಯವರು ಯಾವುದೇ ಕೆಲಸ ಬೇಕಾದರೂ ಅಥವಾ ಯಾವುದೇ ಕ್ಷೇತ್ರದಲ್ಲಿ ಬೇಕಾದರೂ ಕೂಡ ತಮ್ಮ ಅದೃಷ್ಟ ಪರೀಕ್ಷೆಯನ್ನು ಮಾಡಬಹುದಾಗಿದೆ. ಯಾವುದೇ ಅನುಮಾನವಿಲ್ಲದೆ ಸಫಲ ಫಲಿತಾಂಶವನ್ನು ಪಡೆದುಕೊಳ್ಳಲಿದ್ದಾರೆ. ಯಾವುದು ಕೆಲಸ ಪ್ರಾರಂಭ ಮಾಡಿದ್ರು ಕೂಡ ಸೋಲುವ ಭಯ ಬೇಡ. ಪ್ರತಿಯೊಂದು ಹಂತದಲ್ಲಿ ಕೂಡ ಬುಧನ ಆಶೀರ್ವಾದ ನಿಮ್ಮ ಮೇಲೆ ಇರುತ್ತದೆ ಹಾಗೂ ಗೆಲುವು ಕೂಡ ಕಟ್ಟಿಟ್ಟ ಬುತ್ತಿಯಾಗಿದೆ. ಕುಟುಂಬದ ಜೊತೆಗೆ ಉತ್ತಮ ಕ್ಷಣಗಳನ್ನು ಕಳೆಯಬಹುದಾಗಿದೆ ಹಾಗೂ ಜೀವನ ಕೂಡ ಯಾವುದೇ ರೀತಿಯ ಸಮಸ್ಯೆ ಇಲ್ಲದೆ ಸರಾಗವಾಗಿ ಸಾಗಲಿದೆ.

Comments are closed.