Business Idea:ಈ ತಿಂಗಳಿನಲ್ಲಿ ನೀವು ಈ ಬ್ಯುಸಿನೆಸ್ ಆರಂಭಿಸುವುದರಿಂದ ತುಂಬಾನೆ ಲಾಭ; ಸುಮ್ಮನೆ ಕೂರುವ ಬದಲು ಪ್ರಯತ್ನ ಪಡೋದ್ರಲ್ಲಿ ತಪ್ಪಿಲ್ಲ ಅಲ್ವಾ. ಯಾವ ಉದ್ಯಮ ಗೊತ್ತೇ?

Business Idea: ಈಗ ಡಿಸೆಂಬರ್ (December) ತಿಂಗಳ ಆರಂಭವಾಗಿದೆ. ಈ ತಿಂಗಳಿನಲ್ಲಿ ಬರುವ ಹಬ್ಬವೆಂದರೆ ಅದು ಕ್ರಿಶ್ಚಿಯನ್ ಸಮುದಾಯದವರು ಆಚರಿಸುವ ಕ್ರಿಸ್ ಮಸ್ (christmas) . ಅಲ್ಲದೆ ಹೊಸ ವರ್ಷಕ್ಕೂ ಕಾಯುವಿಕೆ ಶುರುವಾಗಿದೆ. ಹಲವರು ಈಗಾಗಲೇ ಹೊಸವರ್ಷ ಸ್ವಾಗತಿಸಲು ಪ್ಲಾನ್ ಮಾಡಲು ಆರಂಭಿಸಿರುತ್ತಾರೆ. ಈ ಎರಡು ಸಂದರ್ಭಗಳನ್ನು ಸದುಪಯೋಗಪಡಿಸಿಕೊಂಡು ನೀವು ನಿಮ್ಮ ಉದ್ಯಮ ಆರಂಭಿಸುವುದರಿಂದ ಒಳ್ಳೆಯ ಲಾಭಗಳಿಸಬಹುದು. ಇದನ್ನೂ ನೋಡಿ: Kannada Bigg Boss: ಪ್ರಶಾಂತ್ ಸಂಬರ್ಗಿ ಎಲಿಮಿನೇಶನ್ ಮಾಮೂಲಿ ಎಲಿಮಿನೇಶನ್ ಅಲ್ಲ, ಔಟ್ ಆಗಲು ಕಾರಣ ಏನಂತೆ ಗೊತ್ತಾ?

ಮಾರಾಟ ಮಾಡಿ ಕೇಕ್ (cake) ಮತ್ತು ಕುಕ್ಕೀಸ್ (Cookies) :
ಕ್ರಿಸ್ಮಸ್ ಹಾಗೂ ಹೊಸವರ್ಷಕ್ಕೆ ಕೇಗ್ ಗಳು, ಕುಕ್ಕಿಗಳು, ನಾಂಕ್ಟೈಗೆ ಹೆಚ್ಚಿನ ಬೇಡಿಕೆ ಇರುತ್ತದೆ. ಹೊಸ ವರ್ಷವನ್ನು ಹೆಚ್ಚಿನ ಜನರು ಕೇಕ್ ಕಟ್ ಮಾಡುವ ಮೂಲಕ ಸಂಭ್ರಮಿಸುತ್ತಾರೆ. ನೀವು ಸಹ ಈ ಸಂದರ್ಭವನ್ನು ಬಳಸಿಕೊಂಡು ಮನೆಯಲ್ಲಿಯೇ ಕೇಕ್, ಕುಕಿಸ್ ತಯಾರು ಮಾಡಿ ಮಾರಾಟ ಮಾಡಬಹುದು. ವಿವಿಧ ಬಗೆಯ ಬಿಸ್ಕತ್ಗಳುಮ ನಾಂಕ್ಟೈಗಳನ್ನು ತಯಾರಿಸಿ ಅದನ್ನು ಮಾರಾಟ ಮಾಡಬಹುದು. ನೀವು ಈ ವ್ಯವಹಾರವನ್ನು ಮನೆಯಲ್ಲಿಯೇ ಆರಂಭಿಸುವುದರಿಂದ ಜಾಗದ ಬಾಡಿಗೆ ನೀಡುವ ತಲೆಬಿಸಿ ಇರುವುದಿಲ್ಲ. ಕೇಕ್, ಬಿಸ್ಕತ್ ತಯಾರಿಸಲು ಬೇಕಾಗುವ ಸಾಮಗ್ರಿಗಳನ್ನು ಕೊಂಡು ತಂದರೆ ಅಷ್ಟೆ ಸಾಕಾಗುತ್ತದೆ. ಇದನ್ನೂ ಓದಿ: Agriculture Loan:ರೈತರಿಗೆ ಸಾಲ ನೀಡಲು ಬ್ಯಾಂಕ್ ಗಳ ಡ್ರಾಮಾ; ಸರ್ಕಾರಿ ಸಬ್ಸಿಡಿ ಯೋಜನೆಗಳು ಮಣ್ಣುಪಾಲು; ರೈತರಿಗೆ ಯಾಕೆ ತಲುಪುತ್ತಿಲ್ಲ ಸರ್ಕಾರಿ ಯೋಜನೆ?


ಇದರಲ್ಲಿಯೂ ನೀವು ನಿಮ್ಮ ಕ್ರಿಯೇಟಿವಿಟಿ ಬಳಸಿ ವಿಭಿನ್ನವಾಗಿ ತಯಾರು ಮಾಡಿದಲ್ಲಿ ಹಾಗೂ ನಿಮ್ಮ ಸ್ನೇಹಿತರು, ಸಂಬಂಧಿಕರ ಸಹಾಯದಿಂದ ಒಳ್ಳೆಯ ಕಾಂಟೆಕ್ಟ್ಗಳನ್ನು ಸಂಪಾದಿಸಿದರೆ ನೀವು ಒಳ್ಳೆಯ ಲಾಭಗಳಿಸಬಹುದಾಗಿದೆ. ದೊಡ್ಡ ದೊಡ್ಡ ಕಡೆಯಿಂದ ಆರ್ಡ್ರ್ ನಿಮ್ಮ ಕೈ ಸೇರಲಿದೆ. ನಿಮ್ಮ ವ್ಯಾಪಾರ ಯೋಜನೆ ಬರೆದಿಟ್ಟುಕೊಳ್ಳಬೇಕು. ಯಾವ ರೀತಿ ಕುಕೀಯನ್ನು ತಯಾರು ಮಾಡುತ್ತೀರಿ ಮತ್ತು ಎಷ್ಟು ವೆಚ್ಚವಾಗುತ್ತದೆ ಎನ್ನುವುದನ್ನು ವಿವರಸಿ. ಎಲ್ಲಕ್ಕಿಂತ ಮುಖ್ಯವಾಗಿ ನೀವು ದೊಡ್ಡ ಪ್ರಮಾಣದಲ್ಲಿ ಜನಸಂಪರ್ಕವನ್ನು ಸಾಧಿಸಬೇಕಾಗುತ್ತದೆ.


ನೀವು ತಯಾರಿಸಿದ ಕೇಕ್, ಕುಕೀಸ್ ಗಳನ್ನು ಉತ್ತಮ ರೀತಿಯಲ್ಲಿ ಪ್ಯಾಕೇಜಿಂಗ್ ಮಾಡಬೇಕು. ಅದು ಆಕರ್ಷಕವಾಗಿರಬೇಕು. ಯಾಕೆಂದರೆ ನೀವು ಎಷ್ಟೆ ಒಳ್ಳೆಯ ಗುಣಮಟ್ಟದ ಕುಕೀಸ್ ತಯಾರು ಮಾಡಿದ್ದರೂ ನೀವು ಮಾಡುವ ಪ್ಯಾಕೇಜಿಂಗ್ ಆಕರ್ಷಕವಾಗಿರದಿದ್ದರೆ ಜನರು ಇಷ್ಟಪಡುವುದಿಲ್ಲ. ಆದ್ದರಿಂದ ನೀವು ಕುಕೀಸ್ ತಯಾರಿಸಿದಷ್ಟೇ ಮಹತ್ವವವನ್ನು ಪ್ಯಾಕೇಜಿಂಗ್ಗೂ ನೀಡಬೇಕು.

Comments are closed.