Kannada Serial: ಲಕ್ಷ್ಮಿ ನಿವಾಸ ಧಾರವಾಹಿಯ ಹರೀಶ್ ಪಾತ್ರಧಾರಿ ನಿಜವಾಗಿಯೂ ಯಾರು? ಅವರ ಪತ್ನಿ ಕೂಡ ನಟಿ ಗೊತ್ತಾ?

Kannada Serial: ಕಿರುತೆರೆಯ ಪ್ರೇಕ್ಷಕರ ಫೇವರೆಟ್ ಧಾರಾವಾಹಿಗಳಲ್ಲಿ ಒಂದಾಗಿರುವಂತಹ ಲಕ್ಷ್ಮಿ ನಿವಾಸ ಧಾರವಾಹಿಯಲ್ಲಿ ಹರೀಶ್ ಎನ್ನುವಂತಹ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುವಂತಹ ಕಲಾವಿದನ ಬಗ್ಗೆ ಇವತ್ತಿನ ಲೇಖನದಲ್ಲಿ ನಿಮಗೆ ಮಾಹಿತಿಯನ್ನು ನೀಡಲು ಹೊರಟಿದ್ದೇವೆ. ಅಷ್ಟಕ್ಕೂ ಹರೀಶ್ ಯಾರು ಅವರ ಹಿನ್ನೆಲೆ ಏನು ಹಾಗೂ ಅವರ ಪತ್ನಿ ಕೂಡ ನಟಿಯಾಗಿದ್ದು ಅವರು ಯಾರು ಅನ್ನೋದನ್ನ ಇವತ್ತಿನ ಈ ಲೇಖನದ ಮೂಲಕ ತಿಳಿದುಕೊಳ್ಳೋಣ ಬನ್ನಿ.

ಲಕ್ಷ್ಮಿ ನಿವಾಸ ಧಾರವಾಹಿಯ ಹರೀಶ್ ಪಾತ್ರಧಾರಿಯ ಬಗ್ಗೆ ಇಲ್ಲಿದೆ ನೋಡಿ ಸಂಪೂರ್ಣ ವಿವರ!

ಲಕ್ಷ್ಮಿ ನಿವಾಸ ಧಾರವಾಹಿಯಲ್ಲಿ ಹರೀಶ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವುದು ಅಜಯ್ ರಾಜ್. ಕನ್ನಡ ಕಿರುತೆರೆಯ ಕ್ಷೇತ್ರದಲ್ಲಿ ಇವರು ಕಳೆದ ಸಾಕಷ್ಟು ವರ್ಷಗಳಿಂದಲೂ ಕೂಡ ಕಲಾವಿದನಾಗಿ ಸೇವೆ ಸಲ್ಲಿಸಿ ಕೊಂಡು ಬರ್ತಾ ಇದ್ದಾರೆ. ಟಿಎನ್ ಸೀತಾರಾಮ್ ರವರ ಅತ್ಯಂತ ಜನಪ್ರಿಯ ಧಾರವಾಹಿ ಆಗಿರುವಂತಹ ಮುಕ್ತ ಧಾರವಾಹಿಯಲ್ಲಿ ಕೂಡ ಇವರು ನಟಿಸಿದ್ದಾರೆ. ಕನ್ನಡ ಕಿರುತೆರೆಯ ಲೋಕದಲ್ಲಿ ಸಾಕಷ್ಟು ಧಾರವಾಹಿಗಳಲ್ಲಿ ಇದುವರೆಗೆ ಅಜಯ್ ರಾಜ್ ನಟಿಸಿರೋದನ್ನ ನೀವು ಕಾಣಬಹುದಾಗಿದೆ.

ಅದ್ಭುತ ಕಲಾವಿದ ಹಾಗೂ ಪ್ರೇಕ್ಷಕರನ್ನು ಸೆಳೆಯುವ ರೀತಿಯಲ್ಲಿ ನಟನೆಯನ್ನು ತೋರ್ಪಡಿಸಬಲ್ಲಂತಹ ಬುದ್ಧಿವಂತ ಅನ್ನೋದನ್ನ ಕೂಡ ಸಾಬೀತುಪಡಿಸಿ ತೋರಿಸಿದ್ದಾರೆ. ಕೇವಲ ಧಾರವಾಹಿಗಳಲ್ಲಿ ಮಾತೃಬಲ್ಲದೆ ಅಜಯ್ ರಾಜ್ ಸಾಕಾಷ್ಟು ಸಿನಿಮಾಗಳಲ್ಲಿ ಕೂಡ ನಟಿಸಿರೋದನ್ನ ನಾವು ಈ ಸಂದರ್ಭದಲ್ಲಿ ನೆನಪು ಮಾಡಿಕೊಳ್ಳಬಹುದಾಗಿದೆ. ಧಾರವಾಹಿ ಹಾಗೂ ಸಿನಿಮಾ ಎರಡರಲ್ಲಿ ಕೂಡ ಬ್ಯಾಲೆನ್ಸ್ ಆಗಿ ಅವಕಾಶ ಪಡೆದುಕೊಂಡು ಅದನ್ನು ಸರಿಯಾದ ರೀತಿಯಲ್ಲಿ ಉಪಯೋಗಿಸಿಕೊಂಡಿರುವಂತಹ ಕೆಲವೇ ಕೆಲವು ಕಲಾವಿದರಲ್ಲಿ ಅಜಯ್ ರಾಜ್ ಕಾಣಿಸಿಕೊಳ್ಳುತ್ತಾರೆ.

ಕನ್ನಡ ಚಿತ್ರರಂಗದ ರಾಕಿಂಗ್ ಸ್ಟಾರ್ ಯಶ್ ರವರ ಅತ್ಯಂತ ಆತ್ಮೀಯ ಗೆಳೆಯರಲ್ಲಿ ಕೂಡ ಅಜಯ್ ರಾಜ್ ಒಬ್ಬರಾಗಿ ಕಾಣಿಸಿಕೊಳ್ಳುತ್ತಾರೆ. ಇನ್ನು ಅಜಯ್ ರಾಜ್ ಅವರ ವೈಯಕ್ತಿಕ ಜೀವನದ ವಿಚಾರಕ್ಕೆ ಬರೋದಾದ್ರೆ 2020ರಲ್ಲಿ ಪದ್ಮಿನಿ ಎನ್ನುವರನ್ನು ಅವರು ಮದುವೆಯಾಗುತ್ತಾರೆ. ಇವರಿಬ್ಬರ ಮದುವೆ ಬಗ್ಗೆ ಇನ್ನಷ್ಟು ಹೆಚ್ಚಿನ ಮಾಹಿತಿಯನ್ನು ಅವರು ಎಲ್ಲೂ ಕೂಡ ಬಿಟ್ಟು ಕೊಟ್ಟಿಲ್ಲ ಆದರೆ ತಿಳಿದುಬಂದಿರುವ ಮಾಹಿತಿಯ ಪ್ರಕಾರ ಪದ್ಮಿನಿ ಕನ್ನಡ ಹಾಗೂ ತೆಲುಗು ಧಾರವಾಹಿಗಳಲ್ಲಿ ಕೂಡ ನಟಿಯಾಗಿ ಕಾಣಿಸಿಕೊಂಡಿದ್ದಾರೆ ಎಂಬುದಾಗಿ ತಿಳಿದು ಬಂದಿದೆ. ಇನ್ನು ಜೀ ಕನ್ನಡ ವಾಹಿನಿಯಲ್ಲಿ ಕಾಣಿಸಿಕೊಳ್ಳುತ್ತಿರುವ ಹಿಟ್ಲರ್ ಕಲ್ಯಾಣ ಧಾರವಾಹಿಯಲ್ಲಿ ಕೂಡ ಪದ್ಮಿನಿ ಅವರು ನಟಿಸಿದ್ದಾರೆ.

ಇಬ್ಬರೂ ಕೂಡ ಕಿರುತೆರೆಯ ಕ್ಷೇತ್ರದ ಜನಪ್ರಿಯ ಕಲಾವಿದರಾಗಿದ್ದು ಇಬ್ಬರು ಕೂಡ ತಮ್ಮದೇ ಆದಂತಹ ಧಾರವಾಹಿಗಳಲ್ಲಿ ನಟಿಸುವ ಮೂಲಕ ಸಾಕಷ್ಟು ದೊಡ್ಡ ಮಟ್ಟದಲ್ಲಿ ಅಭಿಮಾನಿಗಳನ್ನು ಸಂಪಾದನೆ ಮಾಡಿದ್ದಾರೆ. ಇಬ್ರು ಕೂಡ ಧಾರವಾಹಿಗಳಲ್ಲಿ ಕಾಣಿಸಿಕೊಳ್ಳುವುದರಿಂದಾಗಿ ಅಭಿಮಾನಿಗಳು ಕೂಡ ನೀವಿಬ್ರು ಮೇಡ್ ಫಾರ್ ಈಚ್ ಅದರ್ ಎನ್ನುವುದಾಗಿ ಕಾಮೆಂಟ್ ಮಾಡುತ್ತಾರೆ.

Comments are closed.