SBI ATM: SBI ಎಟಿಎಂನಿಂದ ನೀವು ಎಷ್ಟು ಹಣವನ್ನು ಡ್ರಾ ಮಾಡಿಕೊಳ್ಳುಬಹುದು ಗೊತ್ತಾ? ಇದಕ್ಕಿಂತ ಹೆಚ್ಚು ವಿತ್ ಡ್ರಾ ಮಾಡಿದ್ರೆ ಕಟ್ಟಬೇಕು ಶುಲ್ಕ!

SBI ATM: ದಿನನಿತ್ಯದ ವ್ಯವಹಾರದ ಸಂದರ್ಭದಲ್ಲಿ ಪ್ರತಿಯೊಬ್ಬರು ಕೂಡ ಎಟಿಎಂನಿಂದ ಹಣವನ್ನು ಡ್ರಾ ಮಾಡಿಕೊಳ್ಳುವುದು ಸರ್ವೇಸಾಮಾನ್ಯವಾಗಿದೆ. ಇನ್ನು ಇವತ್ತಿನ ಈ ಲೇಖನದ ಮೂಲಕ ನಾವು ನಿಮಗೆ ಹೇಳೋದಕ್ಕೆ ಹೊರಟಿರೋದು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ತನ್ನ ಗ್ರಾಹಕರಿಗೆ ಎಟಿಎಂನಿಂದ ಒಂದು ದಿನಕ್ಕೆ ಎಷ್ಟು ಹಣವನ್ನು ಡ್ರಾ ಮಾಡಿಕೊಳ್ಳುವುದಕ್ಕೆ ಅವಕಾಶ ಮಾಡಿಕೊಡುತ್ತದೆ ಎನ್ನುವ ವಿಚಾರದ ಬಗ್ಗೆ ನಿಮಗೆ ಮಾಹಿತಿಯನ್ನು ನೀಡಲು. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಂತೆ ಪ್ರತಿಯೊಂದು ಬ್ಯಾಂಕುಗಳು ಕೂಡ ತನ್ನ ಗ್ರಾಹಕರಿಗೆ ಎಟಿಎಂನಿಂದ ಹಣವನ್ನು ಪಡೆದುಕೊಳ್ಳುವುದಕ್ಕೆ ಪ್ರತಿದಿನದ ಲಿಮಿಟ್ ಅನ್ನು ನೀಡಿರುತ್ತದೆ.

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಭಾರತದ ಅತ್ಯಂತ ದೊಡ್ಡ ಗ್ರಾಹಕ ಬಳಗವನ್ನು ಹೊಂದಿರುವಂತಹ ಬ್ಯಾಂಕಿಂಗ್ ಕಂಪನಿ ಆಗಿದೆ. ಇದೊಂದು ಸರ್ಕಾರಿ ಬ್ಯಾಂಕ್ ಆಗಿದ್ರೂ ಕೂಡ ಭಾರತ ದೇಶದಲ್ಲಿ ಅತ್ಯಂತ ಸುರಕ್ಷಿತ ಬ್ಯಾಂಕ್ ಎನ್ನುವಂತಹ ಹಣೆಪಟ್ಟಿಯನ್ನು ಪಡೆದುಕೊಂಡಿದೆ.

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಎಟಿಎಂ ನಲ್ಲಿ ಒಂದು ದಿನದ ಹಣದ ಡ್ರಾ ಲಿಮಿಟ್ ಎಷ್ಟು ಗೊತ್ತಾ?

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಗ್ರಾಹಕರಿಗೆ ಎಟಿಎಂ ನಲ್ಲಿ ಹಣವನ್ನು ಪಡೆದುಕೊಳ್ಳುವುದಕ್ಕೆ ಕೆಲವೊಂದು ಲಿಮಿಟ್ ಗಳನ್ನು ಹೇರಲಾಗಿದ್ದು ಬನ್ನಿ ಅವುಗಳ ಬಗ್ಗೆ ಇವತ್ತಿನ ಈ ಲೇಖನದ ಮೂಲಕ ಸಂಪೂರ್ಣ ಮಾಹಿತಿಯನ್ನು ಪಡೆದುಕೊಳ್ಳೋಣ.

  • ಒಂದು ವೇಳೆ ನಿಮ್ಮ ಬಳಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಮಾಯ್ಸ್ಟ್ರೋ ಡೆಬಿಟ್ ಕಾರ್ಡ್ ಅಥವಾ ಕ್ಲಾಸಿಕ್ ಡೆಬಿಟ್ ಕಾರ್ಡ್ ಇದ್ರೆ ಅದರಿಂದ ನಿಮಗೆ ಒಂದು ದಿನಕ್ಕೆ ಮ್ಯಾಕ್ಸಿಮಮ್ 40,000 ಹಣವನ್ನು ಪಡೆದುಕೊಳ್ಳಬಹುದಾಗಿದೆ.
  • SBI GO ಅಥವಾ ಇನ್ ಟಚ್ ಗೆ ನಿಮ್ಮ ಖಾತೆ ಲಿಂಕ್ ಆಗಿದ್ದರೆ ಆ ಸಂದರ್ಭದಲ್ಲಿ ಕೂಡ ನೀವು ಒಂದು ದಿನಕ್ಕೆ ರೂ.40,000 ಹಣವನ್ನು ಎಟಿಎಂನಿಂದ ಡ್ರಾ ಮಾಡಿಕೊಳ್ಳಬಹುದಾಗಿದೆ.
  • ಒಂದು ವೇಳೆ ನಿಮ್ಮ ಬಳಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಪ್ಲಾಟಿನಮ್ ಇಂಟರ್ನ್ಯಾಷನಲ್ ಡೆಬಿಟ್ ಕಾರ್ಡ್ ಇದ್ರೆ ನೀವು ಒಂದು ದಿನಕ್ಕೆ ಎಟಿಎಂ ಮೂಲಕ ಒಂದು ಲಕ್ಷ ರೂಪಾಯಿ ಹಣಗಳನ್ನ ಡ್ರಾ ಮಾಡಿಕೊಳ್ಳಬಹುದಾಗಿದೆ.

ಇನ್ನು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಪ್ರತಿದಿನ ಎಟಿಎಂನಿಂದ ಹಣವನ್ನು ಡ್ರಾ ಮಾಡಿಕೊಳ್ಳುವುದಕ್ಕೆ ಯಾಕೆ ಲಿಮಿಟ್ ಅನ್ನು ವಿಧಿಸಿದೆ ಎನ್ನುವುದಾಗಿ ನೀವು ಯೋಚಿಸುತ್ತಿರಬಹುದಾಗಿದೆ ಅದಕ್ಕೂ ಕೂಡ ಕಾರಣವಿದೆ. ಒಂದು ವೇಳೆ ಆಚಾತುರ್ಯದಿಂದಾಗಿ ನಿಮ್ಮ ಎಟಿಎಂ ಕಾರ್ಡ್ ಕಳವಾಗಿ ಬೇರೆಯವರ ಕೈಗೆ ಸಿಗಬಹುದು ಆ ಸಂದರ್ಭದಲ್ಲಿ ಅವರು ಅದನ್ನ ಬಳಸಿಕೊಂಡು ನಿಮ್ಮ ಅಕೌಂಟ್ ಅನ್ನು ಖಾಲಿ ಮಾಡದೆ ಇರಲಿ ಎನ್ನುವ ಮುಂದಾಲೋಚನೆಯಿಂದ ಆಗಿಯೇ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಈ ರೀತಿಯ ನಿಯಮಗಳನ್ನು ಜಾರಿಗೆ ತಂದಿದೆ ಎಂದು ಹೇಳಬಹುದಾಗಿದೆ. ಇದು ಗ್ರಾಹಕರ ಸುರಕ್ಷತೆಯ ದೃಷ್ಟಿಯಲ್ಲಿ ಕೂಡ ಸಾಕಷ್ಟು ಪ್ರಮುಖವಾದ ನಿಯಮವಾಗಿದೆ ಎನ್ನಬಹುದಾಗಿದೆ.

Comments are closed.