Siddheshwara Shree:2014 ರಲ್ಲಿಯೇ ಎಲ್ಲವನ್ನು ವಿವರಿಸಿ ವಿಲ್ ಬರೆದಿಟ್ಟಿದ್ದ ಶ್ರೀ ಗಳು; ಅಂದು ವಿಲ್ ನಲ್ಲಿ ಬರೆದಿದ್ದನು ಏನು ಗೊತ್ತೇ??

Siddheshwara Shree: ಸಾಕಷ್ಟು ಜನರಿಗೆ ಜ್ಞಾನವನ್ನು ಧಾರೆ ಎರೆದ ಜೊತೆಗೆ ಸಾಕಷ್ಟು ಜನರಿಗೆ ಮಾರ್ಗದರ್ಶನ ನೀಡಿದ ಜ್ಞಾನ ಯೋಗಶ್ರಮದ ಪೂಜ್ಯ ಸಿದ್ದೇಶ್ವರ ಶ್ರೀಗಳು ನಿನ್ನೆ ಲಿಂಗೈಕ್ಯರಾಗಿದ್ದಾರೆ ಸಿದ್ದೇಶ್ವರ ಶ್ರೀಗಳು ಲಿಂಗೈಕ್ಯ ರಾಗಿರುವುದಕ್ಕೆ ಭಕ್ತಾದಿಗಳು ಕಣ್ಣೀರಿಟ್ಟಿದ್ದಾರೆ. ಕಳೆದ ಕೆಲವು ವಾರಗಳಿಂದ ಅನಾರೋಗ್ಯಕ್ಕೆ ಒಳಗಾಗಿದ್ದರು. ಸಿದ್ದೇಶ್ವರ ಶ್ರೀಗಳಿಗೆ 82 ವರ್ಷ ವಯಸ್ಸಾಗಿತ್ತು.

ಸಿದ್ದೇಶ್ವರ ಶ್ರೀಗಳನ್ನು ನಡೆದಾಡುವ ದೇವರು ಎಂದೇ ಕರೆಯಲಾಗುತ್ತಿತ್ತು. ಇವರು ಖ್ಯಾತ ಪ್ರವಚನಕಾರರು ಹೌದು. ಇನ್ನು ಜ್ಞಾನ ಯೋಗ ಶ್ರಮದ ಪೂಜ್ಯ ಸಿದ್ದೇಶ್ವರ ಶ್ರೀಗಳು ಲಿಂಗೈಕ್ಯರಾಗುವ ಮೊದಲೇ ವಿಲ್ ಕೂಡ ಬರೆದಿಟ್ಟಿದ್ದಾರೆ. ಮುಖ್ಯವಾಗಿ ನನ್ನ ಯಾವುದೇ ಬಗೆಯ ಸ್ಮಾರಕ ನಿರ್ಮಾಣ ಮಾಡಬೇಡಿ ಎಂಬುದಾಗಿ 2014ರಲ್ಲಿ ರಚನೆ ಮಾಡಲಾದ ವಿಲ್ಲಿನಲ್ಲಿ ಸಿದ್ದೇಶ್ವರ ಶ್ರೀಗಳು ಬರೆದಿಟ್ಟಿದ್ದಾರೆ.  ಇಂದು ಸಂಜೆ 5:00ಯ ವರೆಗೆ ಪೂಜ್ಯರ ಅಂತಿಮ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗಿದ್ದು ನಂತರ ವಿಧಿ ವಿಧಾನಗಳೊಂದಿಗೆ ಅಂತಿಮ ಕ್ರಿಯೆಯನ್ನು ನಡೆಸಲಾಗುವುದು ಎಂಬುದಾಗಿ ಆಶ್ರಮದ ಸದಸ್ಯರು ತಿಳಿಸಿದ್ದಾರೆ.

ಸಿದ್ದೇಶ್ವರ ಶ್ರೀಗಳು 2014ರಲ್ಲಿ ಬರೆದ ವೀಲ್ ನಲ್ಲಿ ಏನಿತ್ತು ಗೊತ್ತಾ?

ಬದುಕು ಅನುಭವಗಳ ಪ್ರವಾಹ.

ಸಿರಿವಂತಿಕೆಯು ವಿಶ್ವ ಚಿಂತನೆ ಹಾಗೂ ಸತ್ಯ ಬೋಧನೆಗಳಿಂದ ಅದರ ಸೌಂದರ್ಯವೂ ರಾಗ ತ್ವೇಶ ರಹಿತವಾದ ಹಾಗೂ ಅಸೀಮಿತವಾದ ಸದ್ಭಾವ. ಅದನ್ನು ಶುಭಕ ಹಾಗೂ ಸಮೃದ್ಧಗೊಳಿಸುವುದು ಸಾಧನೆ.

ಅಂತಹ ಜೀವನದ ಉಪಯುಕ್ತವಾದ ಅನುಭವಗಳನ್ನು ಆಸಕ್ತರೊಂದಿಗೆ ಹಂಚಿಕೊಳ್ಳುವುದೇ ಧರ್ಮ ನನ್ನದು ವೇಗವಿಲ್ಲದ ಸಾಮದಾನದ ಸಾಮಾನ್ಯ ಬದುಕು.

ಅದನ್ನು ರೂಪಿಸಿದವನು ದೇವರು ಹದಗೊಳಿಸಿದವರು ನಾಡಿನ ಪೂಜ್ಯರು, ಹಿತೈಷಿಗಳು, ಸಾಧಕರು ನಾನು ಎಲ್ಲರಿಗೂ ಎಲ್ಲದಕ್ಕೂ ಉಪಕೃತ.

ಬದುಕು ಮುಗಿಯುತ್ತಿದೆ

 ದೀಪ ಹರಿದಂತೆ, ತೆರೆ ಅಡಗಿದಂತೆ, ಮೇಘ ಕರಗಿದಂತೆ, ಉಳಿಯುವುದು ಬರಿ ಬಯಲು, ಮಹಾ ಮೌನ, ಶೂನ್ಯ ಸತ್ಯ,

ಹಲವು ದಶಕಗಳ ಕಾಲ ಈ ಅದ್ಭುತ ಜಗತ್ತಿನಲ್ಲಿ ಬದುಕಿದ್ದೇನೆ ನೋಡಿ ತಿಳಿದು ಅನುಭವಿಸಿದ್ದೇನೆ ನನ್ನ ಬದುಕು ಕೊನೆಗೊಳ್ಳುವ ಮುಂಚೆ ಅದನ್ನ ಕೃತಜ್ಞತೆಯಿಂದ ಸ್ಮರಿಸಬೇಕು ಅದಕ್ಕಾಗಿಯೇ ಅಂತಿಮ ಅಭಿವಾದನಾ ಪತ್ರ.

ಈ ರೀತಿಯಾಗಿ ಜ್ಞಾನ ಯೋಗಾಶ್ರಮದ ಪೂಜ್ಯ ಸಿದ್ದೇಶ್ವರ ಶ್ರೀಗಳು ಅಂತಿಮ ಉಯಲಿನಲ್ಲಿ ಜನರಿಗೆ ಮಾರ್ಗದರ್ಶನ ನೀಡುವಂತಹ ವಿಷಯಗಳನ್ನು ಕೂಡ ಬರೆದು ಇಟ್ಟಿದ್ದಾರೆ.

Comments are closed.