Astrology Tips:ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಹೆಣ್ಣು ಮಕ್ಕಳು ಯಾಕೆ ಬಳೆ ತೊಡಬೇಕು ಗೊತ್ತೇ? ಗೊತ್ತಾದರೆ ಗಂಡಸರು ಇಂದೇ ಒಂದು ಡಜನ್ ಬಳೆ ಖರೀದಿಸಿ ತಂದುಕೊಡುತ್ತಾರೆ ನೋಡಿ!

Astrology Tips:ಸ್ನೇಹಿತರೆ, ಹೆಣ್ಣು ಮಕ್ಕಳಿಗೆ ಆಭರಣಗಳೇ ಭೂಷಣ. ಅದರಲ್ಲೂ ಮದುವೆಯಾದ ಸ್ತ್ರೀಯರು ಕೈಯಲ್ಲಿ ಬಳೆ, ಕಾಲುಂಗುರ, ಕರಿಮಣಿ, ಹಣೆಗೆ ಕುಂಕುಮ ಇವೆಲ್ಲವನ್ನ ಧರಿಸಿದರೆ ನೋಡುವುದಕ್ಕೆ ಎಷ್ಟು ಸುಂದರವಾಗಿ ಕಾಣುತ್ತಾರೆ ಅಲ್ವಾ!? ಆಧುನಿಕ ಪ್ರಪಂಚದಲ್ಲಿ ಎಲ್ಲವೂ ಮರೆಯಾಗಿ ಬಿಟ್ಟಿದೆ. ಇವೆಲ್ಲವೂ ಹಳೆಯ ಸಂಪ್ರದಾಯ ಎಂದು ಕರೆಸಿಕೊಳ್ಳುತ್ತವೆ.

ನಮ್ಮ ಪೂರ್ವಜರು ಕೆಲವು ನೀತಿ ನಿಯಮ ಸಂಪ್ರದಾಯಗಳನ್ನು ಮಾಡಿಟ್ಟಿದ್ದಾರೆ ಆದರೆ ಇವು ಕೇವಲ ಆಡಂಬರದ ಆಚರಣೆಗಳೆಲ್ಲ ಅದರ ಹಿಂದೆ ವೈಜ್ಞಾನಿಕ ಕಾರಣಗಳು ಸಾಕಷ್ಟಿವೆ.  ಹೆಣ್ಣು ಮಕ್ಕಳು ಕೈಗೆ ಬಳೆಯನ್ನು ಧರಿಸುವುದರಿಂದ ಸಾಕಷ್ಟು ಪ್ರಯೋಜನಗಳಿವೆ. ಮನೆಗೆ ಆರ್ಥಿಕವಾಗಿ ಸಹಾಯಕವಾಗುವುದು ಮಾತ್ರವಲ್ಲದೆ ಆರೋಗ್ಯ ಪ್ರಯೋಜನಗಳನ್ನು ಕೂಡ ಹೊಂದಿವೆ, ಹಾಗಾದರೆ ಬಳೆ ತೊಡೋದ್ರಿಂದ ಆಗುವ ಲಾಭಗಳು ಯಾವವು ನೋಡೋಣ ಬನ್ನಿ.

ಜ್ಯೋತಿ ಶಾಸ್ತ್ರದ ಪ್ರಕಾರ ಕೈಗಳಿಗೆ ಬಳೆಯನ್ನು ಧರಿಸಿದರೆ ಅದು ಮನೆಯ ಶ್ರೇಯಸ್ಸಿಗೆ ಮುನ್ನುಡಿ. ಹೆಣ್ಣು ಮಕ್ಕಳ ಬಳಿಯ ಸದ್ದು ಮನೆಯ ತುಂಬೆಲ್ಲ ತುಂಬಿದ್ರೆ ಲಕ್ಷ್ಮಿ ದೇವಿ ಅಲ್ಲಿ ನೆಲೆಸುತ್ತಾಳೆ. ಈಗಲೂ ನಮ್ಮ ಹಿರಿಯರು ಹೆಣ್ಣುಮಕ್ಕಳ ಕೈಗೆ ಬಳೆ ಇಲ್ಲದೆ ಇದ್ರೆ ಅದು ಯಾಕೆ ಕಾಲಿ ಕೈಯಲ್ಲಿ ಇದ್ದೀಯ ಎಂದು ಬಯ್ಯುತ್ತಾರೆ ಅಲ್ವಾ? ಬಳೆ ಕೈಗಳಿಗೆ ಸುಂದರ ಎನ್ನುವ ಕಾರಣಕ್ಕಾಗಿ ಮಾತ್ರವಲ್ಲ ಬಳೆಗಳನ್ನು ಧರಿಸಿದರೆ ಆರೋಗ್ಯಕರ ಪ್ರಯೋಜನಗಳು ಕೂಡ ಇವೆ ಅನ್ನೋದು ಹಿರಿಯರಿಗೂ ಗೊತ್ತು.

ಕೈಗೆ ಬಳೆಯನ್ನು ಧರಿಸಿದಾಗ ಕೈ ಚಲನೆ ಆದಾಗ, ಬಳೆಗಳು ಕೂಡ ಹಿಂದಕ್ಕೆ ಮುಂದಕ್ಕೆ ಚಲಿಸುತ್ತವೆ. ಬಳೆಗಳ ನಡುವೆ ಘರ್ಷಣೆ ಉಂಟಾಗುತ್ತದೆ. ಇದರಿಂದ ರಕ್ತ ಪರಿಚಲನೆ (blood circulation) ಚೆನ್ನಾಗಿ ಆಗುತ್ತೆ ಕೈಯಲ್ಲಿ ರಕ್ತದೊತ್ತಡದ ಸಾಧ್ಯತೆಗಳು ಕಡಿಮೆಯಾಗುತ್ತದೆ.

ಇನ್ನು ಮದುವೆಯ ಮುನ್ನ ಹೆಣ್ಣು ಮಕ್ಕಳಿಗೆ ಒಳ್ಳೆಯ ಶಾಸ್ತ್ರ ಮಾಡಿಸುತ್ತಾರೆ ಇದು ಸಂಪ್ರದಾಯವು ಹೌದು ಇದರ ಹಿಂದೆ ಇರುವ ವೈಜ್ಞಾನಿಕ ಕಾರಣ ನೋಡುವುದಾದರೆ ವೃತ್ತಾಕಾರದ ಬಳೆ ನೀನು ಇನ್ನು ಮುಂದೆ ಸಂಸಾರದ ಚಕ್ರದಲ್ಲಿ ಸದಾ ಪತಿಯ ಜೊತೆಗೆ ಒಂದಾಗಿರಬೇಕು ಎನ್ನುವ ಸಂದೇಶವನ್ನು ಸಾರುತ್ತದೆ. ಇದನ್ನೂ ಓದಿ: Vastu Tips: ಬೇರೆ ಏನು ಬೇಡ, ಜಸ್ಟ್ ಇವುಗಳಲ್ಲಿ ಒಂದನ್ನು ಮನೆಯಲ್ಲಿಡಿ ಸಾಕು; ಹಣ ಬೇಡ ಬೇಡ ಅಂದರು ಹುಡುಕಿಕೊಂಡು ಬರುತ್ತದೆ!

ಇನ್ನು ಗರ್ಭಿಣಿ ಸ್ತ್ರೀಯರು 7ನೇ ತಿಂಗಳಿನ ನಂತರ ಬಳೆಯನಾದರಿಸಬೇಕು ಎನ್ನಲಾಗುತ್ತೆ. ಹಾಗಾಗಿಯೇ ಸೀಮಂತ ಶಾಸ್ತ್ರವನ್ನ ಮಾಡಿ ಮಹಿಳೆಯರು ಗರ್ಭಿಣಿಯ ಸ್ತ್ರೀಗೆ ಕೈ ತುಂಬಾ ಬಳೆ ತುಂಬುತ್ತಾರೆ. ಇದರ ಹಿಂದಿರುವ ವೈಜ್ಞಾನಿಕ ಕಾರಣ ಏನು ಗೊತ್ತಾ! ಗರ್ಭಿಣಿ ಸ್ತ್ರೀಗೆ 7ನೇ ತಿಂಗಳು ತುಂಬಿದ ನಂತರ ಮಗುವಿನ ಮೆದುಳಿನ ಕೋಶಗಳ ಬೆಳವಣಿಗೆ ಆರಂಭವಾಗುತ್ತದೆ ಆ ಸಂದರ್ಭದಲ್ಲಿ ಮಗು ವಿಭಿನ್ನ ಶಬ್ದಗಳನ್ನು ಗುರುತಿಸಲು ಪ್ರಾರಂಭಿಸುತ್ತದೆ ಹಾಗಾಗಿ ತಾಯಿಯ ಬಳೆಯ ಶಬ್ದ ಮಗುವಿನ ಮೆದುಳಿನ ಗುರುತಿಸುವಿಕೆಯ ಶಕ್ತಿಯನ್ನು ಹೆಚ್ಚಿಸುತ್ತದೆ. ಜೊತೆಗೆ ತಾಯಿಯಲ್ಲಿ ಒತ್ತಡವನ್ನು ನಿವಾರಿಸುತ್ತದೆ ಮನಸ್ಸು ಕೂಡ ಶಾಂತವಾಗಿರುತ್ತದೆ.

Comments are closed.