Kannada Recipe: ಮನೆಯಲ್ಲಿಯೇ ಹೋಟೆಲ್ ಗಿಂತ ಸೂಪರ್ ಆಗಿ ಮಸಾಲಾ ದೋಸಾ ಮಾಡುವುದು ಹೇಗೆ ಗೊತ್ತೇ?? ಸುಲಭ ವಿಧಾನ ಹೇಗೆ ಗೊತ್ತೇ??

Kannada Recipe: ಸಾಮಾನ್ಯವಾಗಿ ಕರ್ನಾಟಕದಲ್ಲಿ ಈ ಎಲ್ಲರಿಗೂ ದೋಸೆ ಅಂದ್ರೆ ಇಷ್ಟ ಅದರಲ್ಲೂ ಬೆಳಗಿನ ಉಪಹಾರಕ್ಕೆ ಸಾಕಷ್ಟು ಜನ ಮನೆಯಲ್ಲಿ ದೋಸೆಯನ್ನೇ ಮಾಡುತ್ತಾರೆ ಆದರೆ ಎಲ್ಲಾ ದೋಸೆಗಳಿಗಿಂತಲೂ ಹೋಟೆಲ್ ನಲ್ಲಿ ಮಾಡುವ ಮಸಾಲ ದೋಸೆ ಎರಡು ಟೇಸ್ಟ್ ಭಿನ್ನವಾಗಿರುತ್ತದೆ ಹಾಗಂತ ಇದನ್ನ ಮನೆಯಲ್ಲಿ ತಯಾರು ಮಾಡುವುದಕ್ಕೆ ಆಗುವುದಿಲ್ಲವಾ? ಅಂತ ನೀವು ಕೇಳಿದರೆ ಖಂಡಿತವಾಗಿಯೂ ಸಾಧ್ಯ ಹಾಗಾದರೆ ಹೋಟೆಲ್ ಸ್ಟೈಲ್ ನಲ್ಲಿ ಮಸಾಲ ದೋಸೆಯನ್ನು ಮನೆಯಲ್ಲಿ ಹೇಗೆ ಮಾಡಿಕೊಳ್ಳುವುದು ನೋಡೋಣ ಬನ್ನಿ.

ಹೋಟೆಲ್ ಸ್ಟೈಲ್ ನಲ್ಲಿ ಮಸಾಲ ದೋಸೆ ಮಾಡಿಕೊಳ್ಳಲು ಬೇಕಾಗುವ ಸಾಮಗ್ರಿಗಳು;

ಅಕ್ಕಿ ಎರಡು ಕಪ್

ಉದ್ದಿನ ಬೇಳೆ ಅರ್ಧ ಕಪ್

ಮೆಂತ್ಯ ಅರ್ಧ ಚಮಚ

ಸಾಬೂದಾನ ಎರಡು ಚಮಚ

ಚಿರೋಟಿ ರವೆ ಎರಡು ಚಮಚ

ಸೋಡಾ ಕಾಲು ಚಮಚ,

ಸಕ್ಕರೆ ಒಂದು ಚಮಚ,

ಉಪ್ಪು ರುಚಿಗೆ

ಮಾಡುವ ವಿಧಾನ;

ಮೊದಲಿಗೆ ಎರಡು ಕಪ್ ಅಕ್ಕಿಯನ್ನು ಒಂದು ಪಾತ್ರೆಗೆ ಹಾಕಿ ಅದಕ್ಕೆ ಅರ್ಧ ಕಪ್ ಉದ್ದಿನಬೇಳೆಯನ್ನು ಸೇರಿಸಿ ನಂತರ ಕಾಲು ಚಮಚ ಮೆಂತ್ಯವನ್ನು ಹಾಕಿ ಬಳಿಕ ಎರಡು ಚಮಚದಷ್ಟು ಸಾಬುದಾನ ಅಥವಾ ಸಬ್ಬಕ್ಕಿಯನ್ನು ಹಾಕಿ ನೀರಿನಲ್ಲಿ ಚೆನ್ನಾಗಿ ತೊಳೆದು ಮತ್ತೆ ನೀರನ್ನು ಹಾಕಿ ನೆನೆಯಲು ಬಿಡಿ. ಇದನ್ನು ಸುಮಾರು ಐದರಿಂದ ಆರು ಗಂಟೆಗಳ ಕಾಲ ನೆನೆಸಿಟ್ಟುಕೊಳ್ಳಿ. ಇದನ್ನೂ ಓದಿ: Smart Phone Offer: ಕ್ರಿಸ್ ಮಸ್ ಗೆ ಹೊಸ ಫೋನ್ ಗಿಪ್ಟ್ ಕೊಡ್ಬೇಕಾ? ಇಲ್ಲಿದೆ ನೋಡಿ ಬೆಸ್ಟ್ ಆಫರ್, 17,000ರೂ. ಗಳ ಮೊಬೈಲ್ ಕೊಳ್ಳಿ ಕೇವಲ 999ರೂ. ಗಳಿಗೆ!

ಈಗ ಒಂದು ಮಿಕ್ಸರ್ ಜಾರ್ ಗೆ ನೆನೆಸಿದ ಅಕ್ಕಿ ಬೇಳೆ ಮಿಶ್ರಣವನ್ನು ಹಾಕಿ. ಸ್ವಲ್ಪ ಸ್ವಲ್ಪವೇ ನೀರನ್ನು ಸೇರಿಸಿಕೊಂಡು ನುಣ್ಣಗೆ ರುಬ್ಬಿಕೊಳ್ಳಿ ರುಬ್ಬಿದ ಹಿಟ್ಟನ್ನು ಒಂದು ಪಾತ್ರೆಗೆ ಹಾಕಿ. ನಂತರ ಅದನ್ನು ಮೆಚ್ಚಿ ರಾತ್ರಿ ಇಡಿ ಹಾಗೆ ಬಿಡಿ ನಂತರ ಬೆಳಿಗ್ಗೆ ಎದ್ದು ನೋಡಿದರೆ ಅದು ಚೆನ್ನಾಗಿ ಹುದುಗಿ ಬಂದಿರುತ್ತದೆ. ಇದನ್ನೂ ಓದಿ: Agriculture: ಅಡಿಕೆ ಬೆಳೆಗಾರರಿಗೆ ಗುಡ್ ನ್ಯೂಸ್; ಎಲ್ಲಾ ರೀತಿಯ ಅಡಿಕೆಗೂ ಬೆಲೆ ಏರಿಕೆ!

ಈಗ ಹುಡುಗಿ ಬಂದ ಮಿಶ್ರಣಕ್ಕೆ ಎರಡರಿಂದ ಮೂರು ಚಮಚ ಚಿರೋಟಿ ರವೆ ಸೇರಿಸಿ ನಂತರ ಒಂದು ಚಮಚ ಸಕ್ಕರೆಯನ್ನು ಹಾಕಿ ಇದರಿಂದ ಬಣ್ಣ ಚೆನ್ನಾಗಿ ಬರುತ್ತದೆ ಹಾಗೂ ದೋಸೆ ಗರಿಗರಿಯಾಗಿ ಬರುತ್ತದೆ ನಂತರ ರುಚಿಗೆ ತಕ್ಕಷ್ಟು ಉಪ್ಪನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ಕೊನೆಯಲ್ಲಿ ಹಿಟ್ಟು ದಪ್ಪವಾಗಿದ್ದರೆ ಸ್ವಲ್ಪ ನೀರನ್ನು ಸೇರಿಸಿ ಜೊತೆಗೆ ಕಾಲು ಚಮಚದಷ್ಟು ಸೋಡವನ್ನು ಹಾಕಿ ಮತ್ತೆ ಮಿಕ್ಸ್ ಮಾಡಿ.

ಈಗ ಒಂದು ತವಾ ಗ್ಯಾಸ್ ಮೇಲೆ ಇಟ್ಟು ಬಿಸಿ ಮಾಡಿ ನಂತರ ಅದಕ್ಕೆ ಚೆನ್ನಾಗಿ ಮಿಕ್ಸ್ ಮಾಡಿದ ಹಿಟ್ಟನ್ನು ತೆಳ್ಳಗೆ ದೋಸೆ ಮಾಡಿಕೊಳ್ಳಿ ಮೇಲ್ಗಡೆ ಸ್ವಲ್ಪ ಎಣ್ಣೆಯನ್ನು ಹಾಕಿ ಗರಿಗರಿಯಾಗಿ ದೋಸೆಯನ್ನು ಮಾಡಿ. ಇದು ನೋಡುವುದಕ್ಕೂ ತಿನ್ನುವುದಕ್ಕೂ ಥೇಟ್ ಹೋಟೆಲ್ ಸ್ಟೈಲ್ ನಲ್ಲಿಯೇ ಇರುತ್ತದೆ ಇದಕ್ಕೆ ಬೇಕಾದ ಚಟ್ನಿ ಹಾಗೂ ಮೇಲ್ಗಡೆಯಿಂದ ಆಲೂಗಡ್ಡೆ ಪಲ್ಯವನ್ನು ಹಾಕಿ ಮಾಡಿಕೊಂಡು ತಿನ್ನಬಹುದು ಅಥವಾ ಹಾಗೆಯೇ ದೋಸೆಯನ್ನು ಚಟ್ನಿಯ ಜೊತೆ ಸವಿಯಬಹುದು.

Comments are closed.