Pragathi: ಕೇವಲ 5 ನಿಮಿಷದ ಸುಖಕ್ಕಾಗಿ ಕೋಟಿ ಕೋಟಿ ಖರ್ಚು ಮಾಡಿದ್ದಾರೆ, ಷಾಕಿಂಗ್ ಹೇಳಿಕೆ ಕೊಟ್ಟ ಖ್ಯಾತ ಹಿರಿಯ ನಟಿ ಪ್ರಗತಿ. ಏನಾಗಿದೆ ಗೊತ್ತೇ?

Pragathi ಚಿತ್ರರಂಗದಲ್ಲಿ ಎಲ್ಲವು ಚೆನ್ನಾಗಿಲ್ಲ, ಇಲ್ಲಿಗೆ ಬಂದು ಸ್ಟಾರ್ ಆಗುವುದು ಸುಲಭದ ಕೆಲಸವಲ್ಲ, ಸ್ಟಾರ್ ಆಗಲು ಕಷ್ಟ ಪಡಬೇಕು, ತ್ಯಾಗ ಮಾಡಲು ಸಿದ್ಧವಾಗಿರಬೇಕು. ಹೀಗೆ ಬಹಳಷ್ಟು ವಿಚಾರ ಇದೆ. ಅದರ ಜೊತೆಗೆ ಚಿತ್ರರಂಗದಲ್ಲಿ ಒಂದು ಪ್ರಮುಖವಾದ ಸಮಸ್ಯೆ ಕೂಡ ಇದೆ, ಅದೇ ಕ್ಯಾಸ್ಟಿಂಗ್ ಕೌಚ್. ಇದನ್ನು ಬಹುತೇಕ ಎಲ್ಲಾ ನಟಿಯರು ಅನುಭವಿಸುತ್ತಾರೆ ಎಂದು ಈಗಾಗಲೇ ಗೊತ್ತಿದೆ. ಆದರೆ ಹೆಚ್ಚು ನಟಿಯರು ಕ್ಯಾಸ್ಟಿಂಗ್ ಕೌಚ್ ಬಗ್ಗೆ ಹೇಳಿಕೊಳ್ಳುವುದಿಲ್ಲ.

ಇದನ್ನೂ ಓದಿ: ಟೀ ಗೆ ಖರ್ಚು ಮಾಡುವ 20 ಸಾವಿರ ದುಡ್ಡನ್ನು ಈ ಬಿಸಿನೆಸ್ ಮೇಲೆ ಹಾಕಿ- 20 ಲಕ್ಷ ಲಾಭ ಪಡೆಯಿರಿ: ಎಲ್ಲರೂ ಮಾಡಬಹುದಾದ ಉದ್ಯಮ ಯಾವುದು ಗೊತ್ತೇ?

ಅದರಲ್ಲೂ ಹೊಸದಾಗಿ ಚಿತ್ರರಂಗಕ್ಕೆ ಬರುವ ನಟಿಯರಿಗೆ, ಕ್ಯಾಸ್ಟಿಂಗ್ ಕೌಚ್ ಕಮಿಟ್ಮೆಂಟ್ಸ್ ಇಂಥ ಸಮಸ್ಯೆಗಳು ಹೆಚ್ಚಾಗಿ ಕಾಡುತ್ತದೆ. ಮೀ ಟು ಕ್ಯಾಂಪೇನ್ ಶುರು ಆದಾಗಿನಿಂದ, ಅನೇಕ ನಟಿಯರು ತಮಗೆ ಆದ ಅನುಭವದ ಬಗ್ಗೆ ಮಾತನಾಡಿದ್ದಾರೆ. ಇದೀಗ ಟಾಲಿವುಡ್ ನ ಖ್ಯಾತ ನಟಿಯರಲ್ಲಿ ಒಬ್ಬರಾದ ಪ್ರಗತಿ (Pragathi) ಅವರು ಕ್ಯಾಸ್ಟಿಂಗ್ ಕೌಚ್ ಬಗ್ಗೆ ಮಾತನಾಡಿದ್ದಾರೆ. ಇತ್ತೀಚೆಗೆ ಒಂದು ಇಂಟರ್ವ್ಯೂನಲ್ಲಿ ಈ ವಿಷಯದ ಬಗ್ಗೆ ಓಪನ್ ಅಪ್ ಆಗಿದ್ದಾರೆ ನಟಿ ಪ್ರಗತಿ.

ಇವರು ಟಾಲಿವುಡ್ ನಲ್ಲಿ ಹಲವು ವರ್ಷಗಳಿಂದ ಹೆಚ್ಚಾಗಿ ಕ್ಯಾರೆಕ್ಟರ್ ಆರ್ಟಿಸ್ಟ್ ರೋಲ್ ಗಳಲ್ಲಿ ಕಾಣಿಸಿಕೊಂಡಿದ್ದಾರೆ. ಸ್ಟಾರ್ ಹೀರೋಗಳ ಸಿನಿಮಾಗಳಲ್ಲಿ ಅಮ್ಮ, ಚಿಕ್ಕಮ್ಮ, ಅತ್ತೆ, ಅತ್ತಿಗೆ ಇಂಥ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ. ಇವರು ಕ್ಯಾಸ್ಟಿಂಗ್ ಕೌಚ್ ಬಗ್ಗೆ ಮಾತನಾಡಿದ್ದು (Pragathi), “ಚಿತ್ರರಂಗದಲ್ಲಿ ಕ್ಯಾಸ್ಟಿಂಗ್ ಕೌಚ್ ಇಲ್ಲ ಎಂದು ಹೇಳೋಕಾಗಲ್ಲ. ಇಲ್ಲಿ ಯಶಸ್ಸು ಪಡೆದಿರುವವರು ಕ್ಯಾಸ್ಟಿಂಗ್ ಕೌಚ್ ಬಗ್ಗೆ ಮಾತನಾಡುವುದಿಲ್ಲ. ಅವಕಾಶ ಸಿಗದೆ ಇರುವವರು ಮಾತ್ರ ಈ ಥರ ಹೇಳಿಕೆಗಳನ್ನು ನೀಡುತ್ತಾರೆ..

ಇದನ್ನೂ ಓದಿ: ಒಂದೇ ಬಾರಿಗೆ ದರ್ಶನ್, ಸುದೀಪ್ ಅಭಿಮಾನಿಗಳನ್ನು ಕೆಣಕಿದ ರಮ್ಯಾ: ಕಾಂಗ್ರೆಸ್ ಬೆಂಬಲಿಸಲು ಹೋಗಿ ಮಾಡಿದ ಎಡವಟ್ಟು ಏನು ಗೊತ್ತೇ? ಇವೆಲ್ಲ ಬೇಕಿತ್ತಾ??

ಇಂಥವರಿಗೋಸ್ಕರ ನಿರ್ಮಾಪಕರು ಕೋಟಿ ರೂಪಾಯಿ ಖರ್ಚು ಮಾಡೋದಕ್ಕೆ ಆಗಲ್ಲ ಅಲ್ವಾ.. ಕೇವಲ 5 ನಿಮಿಷದ ಸುಖಕ್ಕೋಸ್ಕರ, ಹೀರೋಯಿನ್ ಗಳಿಗೆ ಕೋಟಿ ಹಣ ಕೊಡೋಕೆ ಆಗಲ್ಲ ಅಲ್ವಾ (Pragathi)..ಆ ಪಾತ್ರಕ್ಕೆ ಅವರು ಸರಿ ಹೊಂದುತ್ತಾರೆ ಅಂದ್ರೆ ಮಾತ್ರ ಅವರಿಗೆ ಅವಕಾಶ ಕೊಡ್ತಾರೆ..” ಎಂದು ನಟಿ ಪ್ರಗತಿ ಅವರು ಹೇಳಿಕೆ ನೀಡಿದ್ದು, ಈ ಮಾತುಗಳು ಈಗ ಸಿಕ್ಕಾಪಟ್ಟೆ ವೈರಲ್ ಆಗಿದೆ. ನೆಟ್ಟಿಗರು ಪ್ರಗತಿ ಅವರ ಮಾತುಗಳ ಬಗ್ಗೆ ಚರ್ಚೆ ಮಾಡುತ್ತಿದ್ದಾರೆ.

Comments are closed.