Chetan Ahimsa: ಕೇರಳ ಸ್ಟೋರಿ ಬಗ್ಗೆ ಟೀಕೆ ಮಾಡಿದ ಕಮಲ್ ಹಾಸನ್ ಗೆ ಠಕ್ಕರ್ ಕೊಟ್ಟ ಚೇತನ್- ಇದೇನಪ್ಪ ಇದು, ಚೇತನ್ ಹೇಳಿದ್ದೇನು ಗೊತ್ತೇ??

Chetan Ahimsa: ನಮ್ಮ ದೇಶದಲ್ಲಿ ಕಳೆದ ಕೆಲವು ದಿನಗಳಿಂದ ದಿ ಕೇರಳ ಸ್ಟೋರಿ ಸಿನಿಮಾ (The kerala story) ಭಾರಿ ಸದ್ದು ಮಾಡುತ್ತಿದೆ. ಈ ಸಿನಿಮಾ ಸತ್ಯಕಥೆ ಎಂದು ನಿರ್ದೇಶಕ ಸುದೀಪ್ತೋ ಸೇನ್ (sudipto sen) ಹೇಳಿದ್ದು, ಕೇರಳ ರಾಜ್ಯದಲ್ಲಿ ಮತಾಂತರ ಆಗಿ, ಆಸೀಸ್ ಗೆ ಸೇರಿರುವ ಹೆಣ್ಣುಮಕ್ಕಳ ಕಥೆ ಇದು ಎಂದು ಹೇಳಿದ್ದರು. ಈ ಸಿನಿಮಾದಲ್ಲಿ ನಟಿ ಅದಾ ಶರ್ಮ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ. ಇದನ್ನೂ ಓದಿ: The Kerala Story: ಕೇರಳ ಸ್ಟೋರಿ ಆಟ ಇನ್ನು ಮುಂದೆ ಶುರು – ಸಿನೆಮಾಗೆ ಸಿಕ್ತು ಆನೆ ಬಲ- ಇನ್ನು ವಿಶ್ವದಲ್ಲಿ ಟಚ್ ಮಾಡೋರು ಯಾರು ಇಲ್ಲ. ಏನಾಗಿದೆ ಗೊತ್ತೇ??

ದಿ ಕೇರಳ ಸ್ಟೋರಿ ಸಿನಿಮಾ ಸಾಕಷ್ಟು ವಿವಾದಗಳನ್ನು ಸೃಷ್ಟಿಸಿದೆ. ಹಲವು ಜನರು ಈ ಸಿನಿಮಾ ಬ್ಯಾನ್ ಆಗಬೇಕು ಎಂದು ಕೇಸ್ ಹಾಕಿದರು. ರಾಜಕೀಯವನ್ನು ಗಮನದಲ್ಲಿ ಇಟ್ಟುಕೊಂಡು ಈ ಸಿನಿಮಾ ಮಾಡಲಾಗಿದೆ ಎಂದು ಇನ್ನು ಹಲವರು ಅಭಿಪ್ರಾಯ ವ್ಯಕ್ತಪಡಿಸಿದರು. ಆದರೆ ಸಿನಿಮಾ ಬಿಡುಗಡೆಯಾಗಿ 200 ಕೋಟಿಗಿಂತ ಹೆಚ್ಚಿನ ಹಣ ಗಳಿಸಿ ಮುನ್ನುಗ್ಗುತ್ತಿದೆ. ಹಲವರು ಸಿನಿಮಾ ನೋಡಿ ಮೆಚ್ಚುಗೆ ಸೂಚಿಸಿದರು.

JOSH 1 | Live Kannada News
Chetan Ahimsa: ಕೇರಳ ಸ್ಟೋರಿ ಬಗ್ಗೆ ಟೀಕೆ ಮಾಡಿದ ಕಮಲ್ ಹಾಸನ್ ಗೆ ಠಕ್ಕರ್ ಕೊಟ್ಟ ಚೇತನ್- ಇದೇನಪ್ಪ ಇದು, ಚೇತನ್ ಹೇಳಿದ್ದೇನು ಗೊತ್ತೇ?? https://sihikahinews.com/2023/05/29/chetan-ahimsa-talk-about-kamal-haasan/

ಆದರೆ ಬಹಳಷ್ಟು ಹಿರಿಯ ಕಲಾವಿದರು ಹಾಗೂ ರಾಜಕೀಯ ನಾಯಕರು (Political Leader) ಸಿನಿಮಾ ವಿರೋಧವೆ ಇದ್ದಾರೆ, ನಟ ಕಮಲ್ ಹಾಸನ್ ಅವರು ಸಹ ತಾವು ದಿ ಕೇರಳ ಸ್ಟೋರಿ ಸಿನಿಮಾ ವಿರೋಧಿ ಎಂದಿದ್ದಾರೆ. ಇದೊಂದು ಪ್ರೊಪಗಾಂಡ ಸಿನಿಮಾ ಅಷ್ಟೇ.. ಸತ್ಯಕಥೆ ಎಂದು ಟೈಟಲ್ ಕೆಳಗೆ ಹಾಕಿದರೆ ಸಾಕಾಗೋದಿಲ್ಲ, ಸತ್ಯವಿರಬೇಕು.. ಎಂದು ನಟ ಕಮಲ್ ಹಾಸನ್ ಅವರು ಅಬುಧಾಬಿಯಲ್ಲಿ ನಡೆದ ಫಿಲ್ಮ್ ಫೆಸ್ಟಿವಲ್ (Film Festival) ನಲ್ಲಿ ಮಾತನಾಡಿದರು. ಕಮಲ್ ಹಾಸನ್ ಅವರ ಈ ಮಾತಿಗೆ ಈಗ ನಟ ಚೇತನ್ ಅಹಿಂಸಾ ಅವರು ಪ್ರತಿಕ್ರಿಯೆ ನೀಡಿದ್ದಾರೆ.

“‘ದಿ ಕೇರಳ ಸ್ಟೋರಿ’ಗೆ ಪ್ರತಿಕ್ರಿಯಿಸಿರುವ ನಟ ಕಮಲ್ ಹಾಸನ್ (Kamal Haasan), ‘ನಾನು ಪ್ರಾಪಗಾಂಡ ಚಿತ್ರಗಳ ವಿರುದ್ಧ ಇದ್ದೇನೆ’ ಎಂದಿದ್ದಾರೆ. ನಾವು ರಾಜಕೀಯವಾಗಿ/ಸೈದ್ಧಾಂತಿಕವಾಗಿ ವಿರೋಧಿಸುವುದನ್ನು ಪ್ರಾಪಗಾಂಡ ಎಂದು ಕರೆಯುತ್ತೇವೆ. ‘ಕರ್ಣನ್’ ಮತ್ತು ‘ಜೈ ಭೀಮ್’ ಅನ್ನು ಜಾತಿ ವಿರೋಧಿ ಅಥವಾ ಪೊಲೀಸ್ ವಿರೋಧಿ ಪ್ರಾಪಗಾಂಡ ಎಂದು ಪರಿಗಣಿಸಬಹುದಲ್ಲವೇ? ಬಲವಾದ ಪ್ರಜಾಪ್ರಭುತ್ವಕ್ಕಾಗಿ, ವಿಭಿನ್ನ ಸಿದ್ಧಾಂತಗಳು ಕೂಡ ಅಸ್ತಿತ್ವದಲ್ಲಿ ಇರಬೇಕು/ ಇರುತ್ತವೆ..” ಎಂದು ನಟ ಚೇತನ್ ಅವರು ಫೇಸ್ ಬುಕ್ ನಲ್ಲಿ ಬರೆದುಕೊಂಡಿದ್ದು, ಚೇತನ್ ಅವರ ಪ್ರತಿಕ್ರಿಯೆ ಈಗ ವೈರಲ್ ಆಗುತ್ತಿದೆ. ಇದನ್ನೂ ಓದಿ: Business News: ಹೆಚ್ಚು ಬೇಡವೇ ಬೇಡ, ಕೇವಲ 10 ಸಾವಿರದಿಂದ ಆರಂಭ ಮಾಡಿ ಲಕ್ಷ ಲಕ್ಷ ಗಳಿಸುವುದು ಹೇಗೆ ಗೊತ್ತೇ??

Comments are closed.