Aadhar card:ಆಧಾರ್ ಕಾರ್ಡ್ ನಲ್ಲಿ ಇರುವ ನಿಮ್ಮ ಖರಾಬು ಫೋಟೋವನ್ನು ಬದಲಾಯಿಸಿ – ಇದೀಗ ಮತ್ತಷ್ಟು ಸುಲಭ. ಹೇಗೆ ಗೊತ್ತೇ??

Aadhar card: ಆಧಾರ್ ಕಾರ್ಡ್ ಇದು ಭಾರತದ ಎಲ್ಲಾ ಪ್ರಜೆಗಳ ಐಡೆಂಟಿಟಿ, ಆಧಾರ್ ಕಾರ್ಡ್ ಈಗ ಎಲ್ಲಾ ಕೆಲಸಗಳಿಗೂ ಬೇಕೇ ಬೇಕು. ಸರ್ಕಾರದ ಸೌಲಭ್ಯಗಳನ್ನು ಪಡೆಯಲು, ಇನ್ನಿತರ ಹಲವು ಸೌಕರ್ಯಗಳನ್ನು ಪಡೆಯಲು ಆಧಾರ್ ಕಾರ್ಡ್ ಅತ್ಯಗತ್ಯವಾಗಿದೆ. ಎಲ್ಲಾ ಕೆಲಸಕ್ಕೂ ಬೇಕಾದ ಆಧಾರ್ ಕಾರ್ಡ್ ನಲ್ಲಿ ನಿಮ್ಮ ಫೋಟೋ ಏನಾದರು ಚೆನ್ನಾಗಿಲ್ಲ ಎಂದು ನಿಮಗೆ ಅನ್ನಿಸಿದರೆ, ಅದನ್ನು ನೀವು ಸುಲಭವಾಗಿ ಬದಲಾಯಿಸಬಹುದು. ಇದನ್ನೂ ಓದಿ:Kannada News: ಐದು ಗ್ಯಾರಂಟಿ ಬಿಡುಗಡೆಗೂ ಮುನ್ನವೇ ಆರನೇ ಗ್ಯಾರಂಟಿ ಘೋಷಣೆ ಮಾಡಿದ ಪ್ರಿಯಾಂಕ್ ಖರ್ಗೆ. ಏನಂತೆ ಗೊತ್ತೇ?? ಇವೆಲ್ಲಾ ಬೇಕಿತ್ತಾ? ಹೌದು.

ಕೆಲವು ಜನರು ತಮ್ಮ ಆಧಾರ್ ಕಾರ್ಡ್ ಗಳಲ್ಲಿ ಇರುವ ಫೋಟೋವನ್ನು ಬದಲಾಯಿಸಬೇಕು ಎಂದು ಬಯಸುತ್ತಾರೆ. ಒಂದು ವೇಳೆ ನೀವು ಕೂಡ ಆಧಾರ್ ಕಾರ್ಡ್ ನಲ್ಲಿರುವ ನಿಮ್ಮ ಫೋಟೋ ಬದಲಾಯಿಸಬೇಕು ಎಂದು ಬಯಸುವುದಾದರೆ, ಕೆಲವು ಸುಲಭ ವಿಧಾನವನ್ನು ಅನುಸರಿಸುವ ಮೂಲಕ ಅಥವಾ ಆಧಾರ್ ನೋಂದಣಿ ಕಚೇರಿಗೆ ಹೋಗುವ ಮೂಲಕ ನಿಮ್ಮ ಆಧಾರ್ ಕಾರ್ಡ್ ನಲ್ಲಿರುವ ಫೋಟೋ ಬದಲಾಯಿಸಬಹುದು. ಅದು ಹೇಗೆ ಎಂದು ತಿಳಿಸುತ್ತೇವೆ ನೋಡಿ.. ಇದನ್ನೂ ಓದಿ:Business News: ಹೆಚ್ಚು ಬೇಡವೇ ಬೇಡ, ಕೇವಲ 10 ಸಾವಿರದಿಂದ ಆರಂಭ ಮಾಡಿ ಲಕ್ಷ ಲಕ್ಷ ಗಳಿಸುವುದು ಹೇಗೆ ಗೊತ್ತೇ??

ಸ್ಟೆಪ್ 1 :- ನಿಮ್ಮ ಹತ್ತಿರದ ಆಧಾರ್ ಕಾರ್ಡ್ ನೋಂದಣಿ ಕಚೇರಿ ಅಥವಾ ಆಧಾರ್ ಸೇವಾ ಕೇಂದ್ರಕ್ಕೆ ಹೋಗಿ
ಸ್ಟೆಪ್ 2 :- UIDAI website ಇಂದ ಆಧಾರ್ update ಫಾರ್ಮ್ ಅನ್ನು ಡೌನ್ಲೋಡ್ ಮಾಡಿ.
ಸ್ಟೆಪ್ 3 :- ಈ ಫಾರ್ಮ್ ಅನ್ನು ತಪ್ಪಿಲ್ಲದ ಹಾಗೆ ಫಿಲ್ ಮಾಡಿ.
ಸ್ಟೆಪ್ 4 :- ಅಲ್ಲಿ ಕೆಲಸ ಮಾಡುವವರಿಗೆ ಆಧಾರ್ ಅಪ್ಡೇಟ್ ಫಾರ್ಮ್ ನೀಡಿ, ಹಾಗೆಯೇ ನಿಮ್ಮ ಬಯೋಮೆಟ್ರಿಕ್ ಮಾಹಿತಿಗಳನ್ನು ಸಹ ನೀಡಿ.

ಸ್ಟೆಪ್ 5 :- ಆಗ ಅಲ್ಲಿ ನಿಮ್ಮ ಲೈವ್ ಫೋಟೋ ತೆಗೆದುಕೊಳ್ಳುತ್ತಾರೆ.
ಸ್ಟೆಪ್ 6 :- ನಿಮ್ಮ ಮಾಹಿತಿಗಳನ್ನು ಅಪ್ಡೇಟ್ ಮಾಡಲು ನೀವು ಬಯೋಮೆಟ್ರಿಕ್ ಮಾಡಬೇಕಾಗುತ್ತದೆ.
ಸ್ಟೆಪ್ 7 :- ಆಧಾರ್ ಅಪ್ಡೇಟ್ ಮಾಡಿಸಲು ₹100 ರೂಪಾಯಿ ಕೊಡಬೇಕಾಗುತ್ತದೆ.
ಸ್ಟೆಪ್ 8 :- ಈಗ ನಿಮಗೆ URN ಇರುವ acknowledgement ಒಂದನ್ನು ಕೊಡುತ್ತಾರೆ.
ಸ್ಟೆಪ್ 9 :- UIDAI ನಲ್ಲಿ ನಿಮ್ಮ ಆಧಾರ್ ಅಪ್ಡೇಟ್ ಬಗ್ಗೆ ಮಾಹಿತಿ ಪಡೆಯಲು ಈ URN ಸ್ಲಿಪ್ ಅನ್ನು ಬಳಸಬಹುದು.
ಈ ಪ್ರಕ್ರಿಯೆ ಮೂಲಕ ನಿಮ್ಮ ಆಧಾರ್ ಕಾರ್ಡ್ ನ ಫೋಟೋ ಅಪ್ಡೇಟ್ ಮಾಡಬಹುದು. ಇದನ್ನೂ ಓದಿ:Investment: 200 ರೂಪಾಯಿ ಬಳಸಿಕೊಂಡವು 10 ಲಕ್ಷಕ್ಕೂ ಹೆಚ್ಚು ಆದಾಯ ತರುವುದು ಹೇಗೆ ಗೊತ್ತೇ?? ಎಲ್ಲರೂ ಮಾಡಿ, ಲಕ್ಷಾಧಿಪತಿಗಳಾಗಿ.

Comments are closed.