MS Dhoni: MS ಧೋನಿ ರಾಜಕೀಯ ಬರುತ್ತಾರಾ?? ಖ್ಯಾತ ಉದ್ಯಮಿ ಆನಂದ್ ಮಹೇಂದ್ರ ಹೇಳಿದ್ದೇನು ಗೊತ್ತೇ?? ಅಭಿಮಾನಿಗಳು ಫುಲ್ ಕುಶ್.

MS Dhoni: ಟೀಮ್ ಇಂಡಿಯಾದ ಮಾಜಿ ಕ್ಯಾಪ್ಟನ್ ಮಹೇಂದ್ರ ಸಿಂಗ್ ಧೋನಿ ಅವರು ಅತ್ಯಂತ ಯಶಸ್ವಿ ಕ್ಯಾಪ್ಟನ್ ಗಳಲ್ಲಿ ಒಬ್ಬರು, ಈ ವರಹದ ಐಪಿಎಲ್ ನಲ್ಲಿ ಧೋನಿ ಅವರ ನಾಯಕತ್ವದ ಸಿ.ಎಸ್.ಕೆ ತಂಡ ಐಪಿಎಲ್ ನಲ್ಲಿ ಗೆದ್ದಿದೆ. ಧೋನಿ ಅವರು ಕ್ಯಾಪ್ಟನ್ ಆಗಿ ಗೆದ್ದಿರುವ 5ನೇ ಟ್ರೋಫಿ ಇದಾಗಿದ್ದು, ಧೋನಿ ಅವರಿಗೆ ಎಲ್ಲರಿಂದಾ ಮೆಚ್ಚುಗೆಯ ಮಹಾಪೂರವೇ ಹರಿದುಬಂದಿತು. ಇನ್ನು ಧೋನಿ ಅವರು ಅಂತಾರಾಷ್ಟ್ರೀಯ ಕ್ರಿಕೆಟ್ ಇಂದ ನಿವೃತ್ತಿ ಪಡೆದ ನಂತರ ಕೃಷಿ ಕೆಲಸ ಮಾಡಿ ಸುದ್ದಿಯಾಗಿದ್ದರು.

JOSH 2 | Live Kannada News
MS Dhoni: MS ಧೋನಿ ರಾಜಕೀಯ ಬರುತ್ತಾರಾ?? ಖ್ಯಾತ ಉದ್ಯಮಿ ಆನಂದ್ ಮಹೇಂದ್ರ ಹೇಳಿದ್ದೇನು ಗೊತ್ತೇ?? ಅಭಿಮಾನಿಗಳು ಫುಲ್ ಕುಶ್. https://sihikahinews.com/2023/06/03/ms-dhoni/

ನಮ್ಮ ದೇಶದ ಖ್ಯಾತ ಕೈಗಾರಿಕೋದ್ಯಮಿ ಆನಂದ್ ಮಹಿಂದ್ರ ಅವರ ಬಗ್ಗೆ ಕೂಡ ನಮಗೆಲ್ಲ ಗೊತ್ತೇ ಇದೆ. ಇವರು ತಮ್ಮ ಕ್ಷೇತ್ರದಲ್ಲಿ ಉತ್ತಮವಾಗಿ ಹೆಸರು ಮಾಡಿದ್ದು, ಇದೀಗ ಇವರು ಧೋನಿ ಅವರ ಬಗ್ಗೆ ಒಂದು ಟ್ವೀಟ್ ಮಾಡಿದ್ದು, ನೆಟ್ಟಿಗರಲ್ಲಿ ಅನುಮಾನ ಮೂಡುವ ಹಾಗೆ ಮಾಡಿದೆ. ಧೋನಿ ಅವರ ಕ್ಯಾಪ್ಟನ್ಸಿಯನ್ನು ಮೆಚ್ಚಿರುವ ಆನಂದ್ ಮಹಿಂದ್ರ ಅವರು , ಎಂಎಸ್ ಧೋನಿ ಇನ್ನು ಒಂದು ವರ್ಷ ಐಪಿಎಲ್ ನಲ್ಲಿ ಇರುತ್ತಾರೆ ಎಂದು ಕೇಳಲು ನನಗೆ ಸಂತೋಷವಾಗಿದೆ ಎಂದು ಟ್ವೀಟ್ ಮಾಡಿದ್ದಾರೆ..

ಆದರೆ ಇದರ ಮೇಲೆ ಹೆಚ್ಚು ಭರವಸೆ ಇಡುವುದಿಲ್ಲ, ಧೋನಿ ಯಾವ್ಕ್ರು ರಾಜಕೀಯ ಕ್ಷೇತ್ರಕ್ಕೆ ಬರುವ ಬಗ್ಗೆ ಕೂಡ ಪರಿಗಣಿಸಬೇಕು ಎಂದು ನನಗೆ ಅನ್ನಿಸುತ್ತದೆ. ಬೈಜಯಂತ್ ಜೈ ಪಾಂಡಾ ಅವರ ಮುಂದಾಳತ್ವದ ಎನ್.ಸಿ.ಸಿ ಪರಿಶೀಲನಾ ಸಮಿತಿಯಲ್ಲಿ ನಾನು ಅವರ ಜೊತೆಗೆ ಕೆಲಸ ಮಾಡಿದ್ದೇನೆ, ಅವರ ಚುರುಕುತನ, ಗ್ರೌಂಡ್ ನಲ್ಲಿ ಅವರು ಆಡುವ ರೀತಿಯನ್ನು ನೋಡಿದ್ದೇನೆ.. ಧೋನಿ ಅವರು ಸಭ್ಯರು, ರಾಜಕೀಯ ಕ್ಷೇತ್ರಕ್ಕೆ ಅವರು ಸಮರ್ಥರಾಗಿದ್ದಾರೆ, ಅವರು ಭವಿಷ್ಯದ ನಾಯಕ ಆಗಿದ್ದಾರೆ.

41 ವರ್ಷದ ಧೋನಿ ಅವರು ಐಪಿಎಲ್ ಟ್ರೋಫಿ ಗೆದ್ದಿದ್ದಾರೆ. ಧೋನಿ ಅವರು ಐಪಿಎಲ್ ಆಡುವ ಕೊನೆಯ ವರ್ಷ ಇದು ಎಂದು ಎಲ್ಲರೂ ಅಂದುಕೊಂಡಿದ್ದರು. ಎಂದಿನ ಹಾಗೆ ಧೋನಿ ಅವರು ಈ ವರ್ಷ ಕೂಡ ಅದ್ಭುತ ಪ್ರದರ್ಶನವನ್ನೇ ನೀಡಿದರು. ಆದರೆ ಐಪಿಎಲ್ ಫಿನಾಲೆ ದಿನ ಧೋನಿ ಅವರು ಇನ್ನು ಒಂದು ವರ್ಷ ಆಡುತ್ತೇನೆ ಎಂದು ಹೇಳಿದ್ದಾರೆ, ಮುಂದಿನ ಐಪಿಎಲ್ ನಲ್ಲಿ ಧೋನಿ ಅವರು ಫಿಟ್ ಆಗಿದ್ದರೆ, ಅವರು ಮುಂದಿನ ವರ್ಷ ಕೂಡ ಐಪಿಎಲ್ ನಲ್ಲಿ ಆಡಲಿದ್ದು, ಈ ವಿಚಾರ ಕೇಳಿ ಧೋನಿ ಅವರ ಅಭಿಮಾನಿಗಳು ಫುಲ್ ಖುಷಿಯಾಗಿದ್ದಾರೆ.

Comments are closed.