Free electricity:ನಿಜಕ್ಕೂ ಕಾಣದ ಷರತ್ತುಗಳ ನಡುವೆ ನಿಮಗೆ ಉಚಿತ ವಿದ್ಯುತ್ ಸಿಗುತ್ತದೆಯೇ?? ಹೇಗೆ ಚೆಕ್ ಮಾಡುವುದು ಗೊತ್ತೇ??

Free electricity: ಕಾಂಗ್ರೆಸ್ ಸರ್ಕಾರ (Congress Govt.) ವು ಜನರಿಗೆ ಐದು ಗ್ಯಾರಂಟಿ ಯೋಜನೆಗಳನ್ನು ಉಚಿತವಾಗಿ ನೀಡುವ ಭರವಸೆಯನ್ನು ಎಲೆಕ್ಷನ್ ಗಿಂತ ಮೊದಲು ನೀಡಿತ್ತು. ಅದನ್ನು ಈಗ ಜಾರಿಗೆ ತರಲಾಗುತ್ತಿದೆ. ಮೊದಲನೆಯದಾಗಿ ಗೃಹಜ್ಯೋತಿ ಯೋಜನೆ, ಇದು ರಾಜ್ಯದ ಎಲ್ಲಾ ಜನತೆಯ ಮನೆಗಳಿಗೆ 200 ಯೂನಿಟ್ (Unit) ವಿದ್ಯುತ್ ಫ್ರೀ ಎಂದು ಹೇಳಲಾಗಿತ್ತು. ಆದರೆ ಈ ಉಚಿತ ವಿದ್ಯುತ್ (Free electricity) ಯೋಜನೆ ಪಡೆಯಲು ಕೆಲವು ಷರತ್ತುಗಳನ್ನು ಹಾಕಲಾಗಿದೆ. ಇದೆಲ್ಲವು ಇರುವಾಗ ನೀವು ಉಚಿತ ವಿದ್ಯುತ್ ಪಡೆಯುತ್ತೀರಾ ಎಂದು ತಿಳಿಯುವುದು ಹೇಗೆ? ಇದನ್ನೂ ಓದಿ: Business Ideas: 40 ದಿನಗಳಲ್ಲಿ ಬೆಳೆ ಬರುವ, ಕೆಜಿಗೆ ಕನಿಷ್ಠ 500 ರೂಪಾಯಿಸಿಗುವ ಕೆಂಪು ಬೆಂಡೆಕಾಯಿ ಬೆಳೆಯಿರಿ. ಕೈತುಂಬಾ ಆದಾಯ ಗಳಿಸಿ. ಏನು ಮಾಡಬೇಕು ಗೊತ್ತೇ?

JOSH 2 | Live Kannada News
Free electricity:ನಿಜಕ್ಕೂ ಕಾಣದ ಷರತ್ತುಗಳ ನಡುವೆ ನಿಮಗೆ ಉಚಿತ ವಿದ್ಯುತ್ ಸಿಗುತ್ತದೆಯೇ?? ಹೇಗೆ ಚೆಕ್ ಮಾಡುವುದು ಗೊತ್ತೇ?? https://sihikahinews.com/2023/06/04/is-everyone-getting-free-electricity/

ಸರ್ಕಾರವು ಎಲ್ಲಾ ಮನೆಗಳಿಗೂ ಉಚಿತ ವಿದ್ಯುತ್ ನೀಡುತ್ತಿಲ್ಲ. ಒಂದು ವರ್ಷಗಳ ಕಾಲ ಮನೆಯ ವಿದ್ಯುತ್ ಎಷ್ಟು ಬಳಕೆ ಆಗಿದೆ ಎಂದು ಪ್ರತಿ ತಿಂಗಳ ಬಿಲ್ ಇಂದ ಮಾಹಿತಿ ಕಲೆಹಾಕುತ್ತಾರೆ, ಉದಾಹರಣೆಗೆ 60 ರಿಂದ 65 ಯೂನಿಟ್ ವರೆಗು ವಿದ್ಯುತ್ ಬಳಕೆ ಆಗಿದ್ದರೆ, ಅದಕ್ಕೆ 10% ಹೆಚ್ಚುವರಿ, ಸುಮಾರು 65 ರಿಂದ 71 ಯೂನಿಟ್ ಮಾತ್ರ ನಿಮಗೆ ಫ್ರೀಯಾಗಿ ಸಿಗುತ್ತದೆ ಒಂದು ವೇಳೆ ನೀವು ಇಡೀ ವರ್ಷದ ಬಿಲ್ ಅನ್ನು ಸರಿಯಾದ ಸಮಯಕ್ಕೆ ಕಟ್ಟಿದ್ದರೆ, ನಿಮ್ಮ ವಿದ್ಯುತ್ ಬಿಲ್ ಸರಾಸರಿ ಹೆಚ್ಚಾಗುತ್ತದೆ. ಒಂದು ವೇಳೆ ಆ ಸರಾಸರಿ 200 ಯೂನಿಟ್ ಗಿಂತ ಕಡಿಮೆ ಬಂದರೆ, ಆಗ ಮಾತ್ರ ನೀವು 200 ಯೂನಿಟ್ ವಿದ್ಯುತ್ ಅನ್ನು ಪೂರ್ತಿಯಾಗಿ ಪಡೆಯಬಹುದು.

ಇನ್ನು ನಿಮ್ಮ ಮನೆಯಲ್ಲಿ ಕೂಡ ನೀವು ಉಚಿತ ವಿದ್ಯುತ್ ಪಡೆಯಬಹುದಾ ಎಂದು ಚೆಕ್ ಮಾಡುವುದು ಹೇಗೆ.. ಕಳೆದ 2022ರ ಜೂನ್ ಇಂದ 2023ರ ಜೂನ್ ವರೆಗು ಎಲ್ಲಾ ವಿದ್ಯುತ್ ಬಿಲ್ ಗಳನ್ನು ಕಲೆಕ್ಟ್ ಮಾಡಿಕೊಳ್ಳಿ. 12 ತಿಂಗಳ ಈ ಎಲ್ಲಾ ಮೊತ್ತವನ್ನು ಸೇರಿಸಿ. ಬರುವ ಮೊತ್ತವನ್ನು 12 ರಿಂದ ಭಾಗಿಸಿ, ಈಗ ನಿಮಗೆ ಆವರೇಜ್ ನಂಬರ್ ಸಿಗುತ್ತದೆ. ಇದಕ್ಕೆ ನೀವು 10% ಸೇರಿಸಿ, ಉದಾಹರಣೆಗೆ ಇದು 152 ರೂಪಾಯಿ ಇದ್ದರೆ, 10% 15.52 ಜಾಸ್ತಿಯಾಗುತ್ತದೆ. 167.52 ಆಗುತ್ತದೆ. ಇದು ನಿಮ್ಮ ಮನೆಯ ವಾರ್ಷಿಕ ವಿದ್ಯುತ್ ಬಳಕೆಯ ಸರಾಸರಿ ಆಗಿರುತ್ತದೆ.

ಇದು 199ರ ಒಳಗೆ ಇದ್ದರೆ ನೀವು ಉಚಿತ ವಿದ್ಯುತ್ ಸೌಲಭ್ಯ ಪಡೆಯಬಹುದು. ಒಂದು ವೇಳೆ ನಿಮ್ಮ ಹತ್ತಿರ ಎಲೆಕ್ಟ್ರಿಸಿಟಿ ಬಿಲ್ ಇಲ್ಲ ಎಂದರೆ, ಅಥವಾ ಬಾಡಿಗೆ ಮನೆಯಲ್ಲಿದ್ದು ಹಿಂದಿನವರು ಎಷ್ಟು ಕಟ್ಟಿದ್ದಾರೆ ಗೊತ್ತಿಲ್ಲ ಎಂದು ನಿಮಗೆ ಅನ್ನಿಸಿದರೆ, ಬೆಸ್ಕಾಂ ನ ಆನ್ಲೈನ್ ಪೋರ್ಟಲ್ ಗೆ ಹೋಗಿ ನಿಮ್ಮ ಮನೆಯ, ವಿದ್ಯುತ್ ಖಾತೆ ನಂಬರ್ ಹಾಕಿದರೆ, ನಿಮ್ಮ ಮನೆಯ ವಿದ್ಯುತ್ ಬಿಲ್ ಗೆ ಸಂಬಂಧಿಸಿದ ಎಲ್ಲಾ ಡೀಟೇಲ್ಸ್ ನಿಮಗೆ ಸಿಗುತ್ತದೆ. ಇದನ್ನೂ ಓದಿ: Business Ideas: ಹೆಚ್ಚಿನ ಬಂಡವಾಳವಿಲ್ಲದೆ ಕೂಡ, ಬಿಸಿನೆಸ್ ಆರಂಭ ಮಾಡಿ ಲಕ್ಷ ಲಕ್ಷ ಲಾಭ ಗಳಿಸುವ ಬಿಸಿನೆಸ್ ಯಾವುದು ಗೊತ್ತೇ?? ನೋಡಿ ಟ್ರೈ ಮಾಡಿ.

Comments are closed.