Insurance: ರೈಲ್ವೆ ಪ್ರಯಾಣಕ್ಕೂ ಮುನ್ನ ಈ ಚಿಕ್ಕ ಕೆಲಸ ಮಾಡಿದರೇ, ಏನೇ ಆದರೂ ಹತ್ತು ಲಕ್ಷದ ವರೆಗೂ ಹಣ ನೀಡುತ್ತೆ ರೈಲ್ವೆ ಇಲಾಖೆ- 35 ಪೈಸೆ ಖರ್ಚು ಮಾಡಿ ಸಾಕು.

Insurance: ಜೂನ್ 2ರಂದು ಒಡಿಶಾ (Odisha)ದಲ್ಲಿ ನಡೆದ ರೈಲು (Rail) ದುರಂತ ಇಡೀ ಭಾರತವನ್ನು ನಡುಗಿಸಿತು. ಈ ಅಪಘಾತದಲ್ಲಿ ಮೃತರಾದವರ ಸಂಖ್ಯೆ 288, ಗಾಯಗೊಂಡವರ ಸಂಖ್ಯೆ 1000ಕ್ಕಿಂತ ಹೆಚ್ಚು. ಈ ಘಟನೆ ನಡೆದ ಬಳಿಕ ಪ್ರಯಾಣಿಕರಿಗಾಗಿ ಭಾರತೀಯ ರೈಲ್ವೆ ಜೀವವಿಮೆ (Insurance) ಕೊಡುವುದಕ್ಕೆ ಮುಂದಾಗಿದೆ. ಕೇವಲ 35 ಪೈಸೆಯ ವಿಮೆಯಿಂದ ಪ್ರಯಾಣಿಕರಿಗೆ ಸಾಕಷ್ಟು ಪ್ರಯೋಜನ ಸಿಗುತ್ತದೆ. ಒಂದು ವೇಳೆ ಈ ರೀತಿ ಘಟನೆ ನಡೆದು ಪ್ರಯಾಣಿಕರು ಮೃತರಾದರೆ ಅಥವಾ ಪರ್ಮನೆಂಟ್ ಅಂಗವೈಕಲ್ಯ ಉಂಟಾದರೆ ಅವರಿಗೆ 10 ಲಕ್ಷ, ಗಂಭೀರ ಗಾಯವಾಗಿರುವವರಿಗೆ 2 ಲಕ್ಷ, ಸಣ್ಣಪುಟ್ಟ ಗಾಯ ಆಗಿರುವವರಿಗೆ 50,000ವರೆಗು ವಿಮೆ ಪಡೆಯಬಹುದು. ಈ ವಿಮೆ ಪಡೆಯುವುದು ಹೇಗೆ ಎಂದು ತಿಳಿಸುತ್ತೇವೆ ನೋಡಿ.. ಇದನ್ನೂ ಓದಿ:Aadhar card:ಆಧಾರ್ ಕಾರ್ಡ್ ನಲ್ಲಿ ಇರುವ ನಿಮ್ಮ ಖರಾಬು ಫೋಟೋವನ್ನು ಬದಲಾಯಿಸಿ – ಇದೀಗ ಮತ್ತಷ್ಟು ಸುಲಭ. ಹೇಗೆ ಗೊತ್ತೇ??

JOSH 2 | Live Kannada News
Insurance: ರೈಲ್ವೆ ಪ್ರಯಾಣಕ್ಕೂ ಮುನ್ನ ಈ ಚಿಕ್ಕ ಕೆಲಸ ಮಾಡಿದರೇ, ಏನೇ ಆದರೂ ಹತ್ತು ಲಕ್ಷದ ವರೆಗೂ ಹಣ ನೀಡುತ್ತೆ ರೈಲ್ವೆ ಇಲಾಖೆ- 35 ಪೈಸೆ ಖರ್ಚು ಮಾಡಿ ಸಾಕು. https://sihikahinews.com/2023/06/07/book-rail-ticket-get-insurance/

IRCTC ವೆಬ್ಸೈಟ್ ಅಥವಾ ಅಪ್ಲಿಕೇಶನ್ (application) ಮೂಲಕ ಟಿಕೆಟ್ (Ticket) ಬುಕ್ ಮಾಡುವವರಿಗೆ ಮಾತ್ರ ಈ ವಿಮೆಯ ಪ್ರಯೋಜನ ಪಡೆಯುವ ಅವಕಾಶ ಸಿಗುತ್ತದೆ, ಈ ವಿಮೆ ಭಾರತದ ಪ್ರಜೆಗಳಿಗೆ ಮಾತ್ರ ಸಿಗಲಿದ್ದು, ಹೊರದೇಶದವರಿಗೆ ಸಿಗುವುದಿಲ್ಲ. ಇದೊಂದು ಆಯ್ಕೆ ಆಗಿದ್ದು, ಆಯ್ಕೆ ಮಾಡಿದ ನಂತರ ಒಂದೇ PNR ನಂಬರ್ ಇರುವ ಎಲ್ಲಾ ಪ್ರಯಾಣಿಕರಿಗೆ ಇದು ಅನ್ವಯವಾಗುತ್ತದೆ. CNF/RC/CNF ಪಾರ್ಟ್ ಟಿಕೆಟ್ ಬುಕಿಂಗ್ ಮಾಡುವಾಗ ಮಾತ್ರ ಈ ಆಯ್ಕೆ ನಿಮಗೆ ಸಿಗುತ್ತದೆ. ಟಿಕೆಟ್ ಬುಕ್ ಆದ ಮೇಲೆ ನಿಮ್ಮ ಮೊಬೈಲ್ ನಂಬರ್ ಅಥವಾ ಇಮೇಲ್ ಐಡಿಗೆ ವಿಮೆಯ ಮಾಹಿತಿ ಬರುತ್ತದೆ. ಇದನ್ನೂ ಓದಿ: Technology: ಮತ್ತೆ ಬರುತ್ತಿದೆ ನೋಕಿಯಾ- ಸಿ22 ಸ್ಮಾರ್ಟ್ ಫೋನ್ ಗಳ ಬೆಲೆ ಎಷ್ಟು ಕಡಿಮೆ ಗೊತ್ತೇ?? ಇದಪ್ಪ ಆಫರ್ ಅಂದ್ರೆ.

ಬಳಿಕ ನೀವು ನಾಮನಿದರ್ಶನವನ್ನು ಫಿಲ್ ಮಾಡಬೇಕಾಗುತ್ತದೆ.
ನಿಮ್ಮ ಪಾಲಿಸಿ ನಂಬರ್ IRCTC ಟಿಕೆಟ್ ಬುಕಿಂಗ್ ಹಿಸ್ಟರಿಯಲ್ಲಿ ಸಹ ನೀವು ನೋಡಬಹುದು. ಈ ಪಾಲಿಸಿಯನ್ನು ಟಿಕೆಟ್ ಬುಕ್ ಮಾಡದ 5 ವರ್ಷದ ಒಳಗಿನ ಮಕ್ಕಳಿಗೆ ಕೊಡಲಾಗುವುದಿಲ್ಲ. ಇನ್ಷುರೆನ್ಸ್ ಕವರೇಜ್ ಗಾಗಿ IRCTC ಲಿಬರ್ಟಿ ಜನರಲ್ ಇನ್ಷುರೆನ್ಸ್ ಮತ್ತು SBI ಜನರಲ್ ಇನ್ಷುರೆನ್ಸ್ ಅನ್ನು ಆಯ್ಕೆ ಮಾಡಿದೆ. ಈ ಇನ್ಷುರೆನ್ಸ್ ಮೂಲಕ ನಿಮಗೆ ನೀಡುವ ಕವರೇಜ್, ಒಂದು ವೇಳೆ ಪ್ರಯಾಣಿಕರು ಮೃತರಾದರೆ ಅಥವಾಖಾಯಂ ಅಂಗವೈಕಲ್ಯ ಆದರೆ ₹10,00,000 ಲಕ್ಷ ರೂಪಾಯಿಗಳು.

ಅರ್ಧ ಅಥವಾ ಅದಕ್ಕಿಂತ ಹೆಚ್ಚು ಅಂಗವೈಕಲ್ಯ ಆಗಿದ್ದರೆ, ₹7,50,000 ರೂಪಾಯಿಗಳು. ಗಾಯ ಆಗಿದ್ದರೆ ಚಿಕಿತ್ಸೆಗೇ ಮತ್ತು ಆಸ್ಪತ್ರೆ ಖರ್ಚಿಗೆ 2.5ಲಕ್ಷ. ಮೃತ ದೇಹವನ್ನು ಸಾಗಿಸಲು 10,000 ಕೊಡಲಾಗುತ್ತದೆ. ಈ ಇನ್ಷುರೆನ್ಸ್ ವಿಮೆಯ ಕಂಪನಿ ಮತ್ತು ಪ್ರಯಾಣಿಕರ ಮಧ್ಯ ಇರುವ ಒಪ್ಪಂದ ಆಗಿರುತ್ತದೆ. ಒಂದು ವೇಳೆ ಪ್ರಯಾಣಿಕರು ವಿಮೆಯನ್ನು ಆಯ್ಕೆ ಮಾಡಿದರೆ, ಕ್ಲೇಮ್ ಮಾಡುವ ಪ್ರಕ್ರಿಯೆ, ಇವರ ನಡುವೆ ನಡೆಯುತ್ತದೆ.

ವಿಮೆ ಕಂಪೆನಿಗೂ ಪಾಲಿಸಿ ಕೊಡುವುದು ಹಾಗೂ ಕ್ಲೇಮ್ ಮಾಡುವುದು ಕಂಪನಿಯ ಕೆಲಸ ಆಗಿರುತ್ತದೆ..ಒಂದು ಪ್ರಯಾಣಿಕರಿಗೆ ಈ ಥರ ಏನಾದರು ಆದರೆ, ಘಟನೆ ನಡೆದು 4 ತಿಂಗಳ ಒಳಗೆ ಈ ವಿಮೆಯನ್ನು ಕ್ಲೇಮ್ ಮಾಡಿಕೊಳ್ಳಬೇಕು.. ವಿಮೆ ಕಂಪನಿಯನ್ನು ಕಾಂಟ್ಯಾಕ್ಟ್ ಮಾಡಿ ಈ ಹಣವನ್ನು ಪಡೆಯಬಹುದು. ನಾಮಿನಿ ಹೆಸರಿದ್ದರೆ ಕಾನೂನಿನ ಪ್ರಕಾರ ಅವರಿಗೆ ಸೆಟ್ಲ್ ಮಾಡಬಹುದು. ಇದನ್ನೂ ಓದಿ: Job: ಕರ್ನಾಟಕ ಗ್ರಾಮೀಣ ಬ್ಯಾಂಕ್ ನಲ್ಲಿ ಎಷ್ಟಿದೆ ನೋಡಿ ಹುದ್ದೆಗಳು 8ಸಾವಿರಕ್ಕೂ ಅಧಿಕ ಹುದ್ದೆಗಳು ಖಾಲಿ ಖಾಲಿ ; ಅರ್ಜಿ ಹಾಕಿದ್ರೆ ನಿಮಗೂ ಜಾಬ್ ಸಿಗೋದು ಪಕ್ಕಾ!! ಹಳ್ಳಿ ವಿದ್ಯಾರ್ಥಿಗಳಿಗೆ ಹೆಚ್ಚಿನ ಅವಕಾಶ!

Comments are closed.