Gruhalakshmi Yojana: ಗೃಹ ಲಕ್ಷ್ಮಿ ಯೋಜನೆಗೆ ಬತ್ತಿ ಇಟ್ಟ ಸರ್ಕಾರ; ಮತ್ತಷ್ಟು ಜನರಿಗೆ ನಿರಾಸೆ, ಯಾರಿಗೆಲ್ಲಾ 2000ರೂ. ಸಿಗಲ್ಲಾ ಗೊತ್ತಾ?

Gruhalakshmi Yojana: ಕಾಂಗ್ರೆಸ್ ಪಕ್ಷ (Congress party) ಗೃಹ ಲಕ್ಷ್ಮಿ ಯೋಜನೆಯ (Gruha lakshmi Yojana)ಬಗ್ಗೆ ಕನಸು ಇಟ್ಟುಕೊಂಡಿದ್ದ ಹಲವು ಗೃಹಿಣಿಯರಿಗೆ ನಿರಾಸೆಯಾಗಿದೆ. ಇದಕ್ಕೆ ಮುಖ್ಯವಾದ ಕಾರಣ ಅಂದ್ರೆ ಕಾಂಗ್ರೆಸ್ ಸರ್ಕಾರ ಹಾಕಿರುವ ಈ ಒಂದು ಕಂಡೀಶನ್ (Condition) . ಅದೇನು ಗೊತ್ತಾ? ಇದನ್ನೂ ಓದಿ:Investment: 200 ರೂಪಾಯಿ ಬಳಸಿಕೊಂಡವು 10 ಲಕ್ಷಕ್ಕೂ ಹೆಚ್ಚು ಆದಾಯ ತರುವುದು ಹೇಗೆ ಗೊತ್ತೇ?? ಎಲ್ಲರೂ ಮಾಡಿ, ಲಕ್ಷಾಧಿಪತಿಗಳಾಗಿ.

JOSH 2 | Live Kannada News
Gruhalakshmi Yojana: ಗೃಹ ಲಕ್ಷ್ಮಿ ಯೋಜನೆಗೆ ಬತ್ತಿ ಇಟ್ಟ ಸರ್ಕಾರ; ಮತ್ತಷ್ಟು ಜನರಿಗೆ ನಿರಾಸೆ, ಯಾರಿಗೆಲ್ಲಾ 2000ರೂ. ಸಿಗಲ್ಲಾ ಗೊತ್ತಾ? https://sihikahinews.com/2023/06/08/if-you-are-taxpayers-you-will-not-come-under-gruhalakshmi-yojana/

ಕಾಂಗ್ರೆಸ್ ಪಕ್ಷ ಪ್ರಣಾಳಿಕೆಯಲ್ಲಿ ಹೊರಡಿಸಿದಂತೆ ಐದು ಯೋಜನೆಗಳನ್ನು ಈಗಾಗಲೇ ಜಾರಿಗೆ ತಂದಿದೆ. ಆದರೆ ಎಲ್ಲ ಯೋಜನೆಗಳಿಗೂ ಕೆಲವು ಕಂಡಿಶನ್ ಹಾಕಿದ್ದು ಇದು ಹಲವರಲ್ಲಿ ಅಸಮಾಧಾನ ಮೂಡಿಸಿದೆ. ಗೃಹಿಣಿಯರಿಗೆ ಅದರಲ್ಲೂ ಮನೆಯ ಯಜಮಾನಿಗೆ ತಿಂಗಳಿಗೆ 2000 ಗಳನ್ನು ನೀಡುವ ಗೃಹಲಕ್ಷ್ಮಿ ಯೋಜನೆಯಿಂದ ಹಲವು ಗೃಹಿಣಿಯರು ಸಂತಸ ಪಟ್ಟರೆ ಇನ್ನೂ ಕೆಲವರು ಅಸಮಾಧಾನಗೊಂಡಿದ್ದಾರೆ. ಇದಕ್ಕೆ ಮುಖ್ಯವಾದ ಕಾರಣ ಗೃಹ ಲಕ್ಷ್ಮಿ ಯೋಜನೆಯ ಪಾಲುದಾರರಾಗಬೇಕು ಅಂದ್ರೆ ಆ ಯಜಮಾನಿಯ ಪತಿ ಯಾವುದೇ ಕಾರಣಕ್ಕೂ ತೆರಿಗೆ ಕಟ್ಟುವ ವ್ಯಕ್ತಿ ಆಗಿರಬಾರದು.

ಹೌದು, ಯಾರು ತೆರಿಗೆ ಕಟ್ಟುತ್ತಾರೋ, ಜಿ ಎಸ್ ಟಿ (GST) ಪಾವತಿ ಮಾಡುತ್ತಾರೋ ಅಂತವರ ಹೆಂಡತಿ ಮನೆ ಯಜಮಾನಿಯಾಗಿದ್ದರು ಆಕೆಗೆ ಎರಡು ಸಾವಿರ ರೂಪಾಯಿಗಳು ಸಿಗುವುದಿಲ್ಲ. ಅದೇ ರೀತಿ ಮನೆ ಯಜಮಾನಿ ತೆರಿಗೆ ಕಟ್ಟುತ್ತಿದ್ದರೆ ಅಥವಾ ಜಿಎಸ್‌ಟಿ ಕಟ್ಟುವವರಾಗಿದ್ದರೆ ಅವರಿಗೂ ಕೂಡ 2000 ರೂಪಾಯಿಗಳು ಸಿಗುವುದಿಲ್ಲ.

ಕಳೆದ ತಿಂಗಳು ಗೃಹಲಕ್ಷ್ಮಿ ಯೋಜನೆಗೆ ತಾತ್ವಿಕ ಒಪ್ಪಿಗೆ ನೀಡಲಾಗಿದ್ದು ಆರ್ಥಿಕ ಇಲಾಖೆ ಹಾಗೂ ಯೋಜನಾ ಇಲಾಖೆಗಳ ಜೊತೆಗೆ ಚರ್ಚಿಸಿ ಸರ್ಕಾರ ಹೊಸ ಮಾರ್ಗಸೂಚಿಗಳನ್ನು ಘೋಷಣೆ ಮಾಡಿದೆ. ಆದರೆ ಎಲ್ಲಾ ಯೋಜನೆಗಳ ಮಾರ್ಗಸೂಚಿಯಲ್ಲಿ ಸಾಕಷ್ಟು ಗೊಂದಲಗಳು ಸೃಷ್ಟಿಯಾಗಿದ್ದು ಚರ್ಚೆಗೆ ಕಾರಣವಾಗಿದೆ. ತೆರಿಗೆಯನ್ನೂ ಕಟ್ತಬೇಕು ಜೊತೆಗೆ ಯೋಜನೆ ಫಲವೂ ಸಿಗುತ್ತಿಲ್ಲ ಅಂತ ಕೆಲವರು ಸರ್ಕಾದ ಕಂಡೀಶನ್ ವಿರುದ್ದ ಕಿಡಿಕಾರಿದ್ದಾರೆ. ಇದನ್ನೂ ಓದಿ: IRCTC: ಕಡಿಮೆ ಬೆಲೆಗೆ ಸುತ್ತಿ ಬನ್ನಿ ಕರಾವಳಿ ಕರ್ನಾಟಕ- ಆರು ರಾತ್ರಿ, ಐದು ಅಗಲು ಟ್ರಿಪ್ ನಲ್ಲಿ ಎಷ್ಟೆಲ್ಲ ತೋರಿಸುತ್ತಾರೆ ಗೊತ್ತೇ? IRCTC (ರೈಲ್ವೆ) ಪ್ಯಾಕೇಜ್ ಹೇಗಿದೆ ಗೊತ್ತೇ?

Comments are closed.