Political News: ಸಿದ್ದರಾಮಯ್ಯ ನವರ ಸರ್ಕಾರದ ಪ್ರಮುಖ ಉದ್ದೇಶ ಏನು ಅಂತೇ ಗೊತ್ತೇ?? ಕೊನೆಗೂ ಇರುವುದನ್ನು ಒಪ್ಪಿಕೊಂಡ ಸಿದ್ದು. ಹೇಳಿದ್ದೇನು ಗೊತ್ತೆ??

Political News: ಸಿದ್ದರಾಮಯ್ಯ (Siddaramaiah) ಅವರು ಸಿಎಂ ಆಗಿ ಅಧಿಕಾರ ಸ್ವೀಕರಿಸಿದ್ದಾರೆ. ರಾಜ್ಯದ ಕ್ಯಾಬಿನೆಟ್ ಸಹ ರಚನೆ ಆಗಿದೆ. ಕಾಂಗ್ರೆಸ್ ಸರ್ಕಾರ (Congress Govt.) ಚುನಾವಣೆಗಿಂತ ಮೊದಲು ಭರವಸೆಯಾಗಿ ನೀಡಿದ್ದ ಎಲ್ಲಾ ಯೋಜನೆಗಳನ್ನು ಜಾರಿಗೆ ತರಲು ಮುಂದಾಗಿದೆ. ಈಗಾಗಲೇ ಒಂದು ಯೋಜನೆ ನಿನ್ನೆಯಷ್ಟೇ ಜಾರಿಗೆ ಬಂದಿದೆ, ಇದು ಶಕ್ತಿ ಯೋಜನೆ ಆಗಿದ್ದು, ಎಲ್ಲಾ ಮಹಿಳೆಯರು ಉಚಿತವಾಗಿ ಬಸ್ ನಲ್ಲಿ ಪ್ರಯಾಣ ಮಾಡಬಹುದು. ಇದನ್ನೂ ಓದಿ:Insurance: ರೈಲ್ವೆ ಪ್ರಯಾಣಕ್ಕೂ ಮುನ್ನ ಈ ಚಿಕ್ಕ ಕೆಲಸ ಮಾಡಿದರೇ, ಏನೇ ಆದರೂ ಹತ್ತು ಲಕ್ಷದ ವರೆಗೂ ಹಣ ನೀಡುತ್ತೆ ರೈಲ್ವೆ ಇಲಾಖೆ- 35 ಪೈಸೆ ಖರ್ಚು ಮಾಡಿ ಸಾಕು.

JOSH 2 | Live Kannada News
Political News: ಸಿದ್ದರಾಮಯ್ಯ ನವರ ಸರ್ಕಾರದ ಪ್ರಮುಖ ಉದ್ದೇಶ ಏನು ಅಂತೇ ಗೊತ್ತೇ?? ಕೊನೆಗೂ ಇರುವುದನ್ನು ಒಪ್ಪಿಕೊಂಡ ಸಿದ್ದು. ಹೇಳಿದ್ದೇನು ಗೊತ್ತೆ?? https://sihikahinews.com/2023/06/12/what-is-karnataka-govt-going-to-do/

ಈ ವೇಳೆ ಸಿಎಂ ಸಿದ್ದರಾಮಯ್ಯ ಅವರ ಸರ್ಕಾರದ ಪ್ರಮುಖ ಉದ್ದೇಶ ಏನು ಎನ್ನುವ ಪ್ರಶ್ನೆ ಕೂಡ ಇತ್ತು, ಇದಕ್ಕೆ ಖುದ್ದು ಸಿದ್ದರಾಮಯ್ಯ ಅವರೇ ಉತ್ತರ ಕೊಟ್ಟಿದ್ದು ಹೀಗೆ.. “ಎಲೆಕ್ಷನ್ ಗಿಂತ ಮೊದಲು 5 ಗ್ಯಾರಂಟಿ ಯೋಜನೆಗಳ ಘೋಷಣೆ ಮಾಡಿದ್ವಿ, ಈಗ ಹೇಳಿದ ಹಾಗೆ ಮಾಡುತ್ತಿದ್ದೇವೆ. ಮೊದಲು ಅಧಿಕಾರದ್ದಲ್ಲಿ ಇದ್ದಾಗಲು ಹೇಳಿದ್ದನ್ನು ಮಾಡಿದ್ದೆವು..ಜನರಿಗೆ ಕೊಟ್ಟಿರುವ ಗ್ಯಾರಂಟಿ ಯೋಜನೆಗಳ ಭರವಸೆಯನ್ನು ಈಡೇರಿಸಬೇಕು ಎನ್ನುವುದೇ ನಮ್ಮ ಉದ್ದೇಶ..

ನಮ್ಮ ಸರ್ಕಾರದ ಪ್ರಣಾಳಿಕೆಯಲ್ಲಿ 5 ಗ್ಯಾರಂಟಿ ಯೋಜನೆಗಳು ಇದ್ದವು, ನಾನು ಹಾಗೂ ಡಿಎಸಿಎಂ ಡಿಕೆ ಶಿವಕುಮಾರ್ ಅವರು ರಾಜ್ಯದ ಪ್ರತಿ ಮನೆಗೆ ಗ್ಯಾರಂಟಿ ಕೊಟ್ಟಿದ್ದೆವು, ಈ ಗ್ಯಾರಂಟಿಗಳನ್ನು ಕೊಟ್ಟಾಗ, ವಿರೋಧ ಪಕ್ಷದವರು ಟೀಕಿಸಿದ್ದರು. ಅದರಿಂದ ನಮಗೆ ಸಮಸ್ಯೆ ಆಗಲಿಲ್ಲ, ಜನರ ಆಶೀರ್ವಾದ ಪಡೆದು ಬಹುಮತದಲ್ಲಿ ಗೆದ್ದೆವು..ಮೊದಲ ಕ್ಯಾಬಿನೆಟ್ ನಲ್ಲೇ ಎಲ್ಲಾ ಐದು ಗ್ಯಾರಂಟಿ ಗಳಿಗೆ ಒಪ್ಪಿಗೆ ಕೊಟ್ಟಿದ್ದೇವೆ..

ಯಾವ ಗ್ಯಾರಂಟಿ ಯಾವಾಗ ಜಾರಿಗೆ ಬರುತ್ತದೆ ಎಂದು ಹೇಳಿದ್ದೇವೆ. ಈಗ ಶಕ್ತಿ ಯೋಜನೆ ಜಾರಿಗೆ ಬಂದಿದೆ. ಹೆಣ್ಣುಮಕ್ಕಳು ಎಲ್ಲಾ ಕ್ಷೇತ್ರದಲ್ಲೂ ತೊಡಗಿಸಿಕೊಂಡರೆ ನಮ್ಮ ದೇಶ ಬೇಗ ಅಭಿವೃದ್ಧಿ ಆಗುತ್ತದೆ. ಬಡಜನರಿಗೆ ದುಡ್ಡು ಕೊಡುವುದು ನಮ್ಮ ಸರ್ಕಾರದ ಉದ್ದೇಶ. ಐದರಲ್ಲಿ ನಾಲ್ಕು ಗ್ಯಾರೆಂಟಿಗಳು ಹೆಣ್ಣುಮಕ್ಕಳಿಗಾಗಿ ಆಗಿದೆ. ಹೆಣ್ಣು ಸಮಾಜದ ಕಣ್ಣು..” ಎಂದಿದ್ದಾರೆ ಸಿಎಂ ಸಿದ್ದರಾಮಯ್ಯ ಅವರು. ಇದನ್ನೂ ಓದಿ:Business News: ಹೆಚ್ಚು ಬೇಡವೇ ಬೇಡ, ಕೇವಲ 10 ಸಾವಿರದಿಂದ ಆರಂಭ ಮಾಡಿ ಲಕ್ಷ ಲಕ್ಷ ಗಳಿಸುವುದು ಹೇಗೆ ಗೊತ್ತೇ??

Comments are closed.