Serial: ಗಟ್ಟಿಮೇಳದ ಕಾಂತಾ ಗೊತ್ತಾ ಯಾರೂ ಅಂತಾ? ಇಲ್ಲಿದೆ ಇಂಟರೆಸ್ಟಿಂಗ್ ವಿಷಯ!

Serial: ಗಟ್ಟಿಮೇಳ ಧಾರವಾಹಿ ಕನ್ನಡ ಕಿರುತೆರೆಯಲ್ಲಿ ಟಾಪ್ ರೇಟೆಡ್ ಧಾರವಾಹಿಗಳಲ್ಲಿ ಒಂದು ಧಾರವಾಹಿ ಆಗಿದೆ. ಪ್ರತಿ ವಾರ ಬರುವ ಟಿಆರ್ಪಿ ರೇಟಿಂಗ್ ನಲ್ಲಿ, ಈ ಧಾರವಾಹಿ ಸದಾ ಮೊದಲ ಅಥವಾ ಎರಡನೇ ಸ್ಥಾನದಲ್ಲಿ ಇರುತ್ತದೆ. ಗಟ್ಟಿಮೇಳ ಧಾರವಾಹಿಯ ಪ್ರತಿಯೊಂದು ಪಾತ್ರಗಳು ಕೂಡ ಜನರಿಗೆ ತುಂಬಾ ಇಷ್ಟ. ಈ ಧಾರವಾಹಿಯಲ್ಲಿ ನಾಯಕ ವೇದಾಂತ್ ಪಿಎ ಪಾತ್ರ ಲಕ್ಷ್ಮೀಕಾಂತ್ ಪಾತ್ರ. ಈ ಪಾತ್ರದಲ್ಲಿ ನಟಿಸುತ್ತಿರುವವರ ಬಗ್ಗೆ ನಿಮಗೆ ಗೊತ್ತಾ?

JOSH 2 | Live Kannada News
Serial: ಗಟ್ಟಿಮೇಳದ ಕಾಂತಾ ಗೊತ್ತಾ ಯಾರೂ ಅಂತಾ? ಇಲ್ಲಿದೆ ಇಂಟರೆಸ್ಟಿಂಗ್ ವಿಷಯ! https://sihikahinews.com/2023/06/16/who-is-gattimela-serial-kanta/

ಗಟ್ಟಿಮೇಳ ಧಾರವಾಹಿಯ ಆರಂಭದಲ್ಲಿ ನಾಯಕ ವೇದಾಂತ್ ವಸಿಷ್ಠ ಗೆ ಹೆಣ್ಣುಮಕ್ಕಳನ್ನು ಕಂಡರೆ ಆಗೋದಿಲ್ಲ, ಇವರ ಅಸಿಸ್ಟಂಟ್ ಹೆಸರು ಲಕ್ಷ್ಮೀಕಾಂತ್, ಆದರೆ ವೇದಾಂತ್ ಗೆ ಹೆಣ್ಣುಮಕ್ಕಳು ಇಷ್ಟವಿಲ್ ಎಂದು ಕಾಂತ ಎಂದು ಕರೆಯುತ್ತಿರುತ್ತಾರೆ. ಈಗ ಅದೇ ಹೆಸರು ಕಂಟಿನ್ಯೂ ಆಗಿದೆ. ಕಾಂತ ಎಂದೇ ಫೇಮಸ್ ಆಗಿರುವ ಈ ಕಲಾವಿದನ ನಿಜವಾದ ಹೆಸರು ರವಿಚಂದ್ರನ್. ಅಭಿಮಾನಿಗಳು ಮಾತ್ರ ಇವರನ್ನು ಕಾಂತ ಎಂದೇ ಗುರುತಿಸುತ್ತಾರೆ..

ರವಿಚಂದ್ರ ಅವರು ಗಟ್ಟಿಮೇಳ ಧಾರವಾಹಿಗಿಂತ ಕಮಲಿ, ಅಸಾಧ್ಯ ಅಳಿಯಂದಿರು ಹಾಗೂ ಕಸ್ತೂರಿ ನಿವಾಸ ಧಾರವಾಹಿಯಲ್ಲಿ ನಟಿಸಿದ್ದರು. ಇವರು ಬಿಕಾಮ್ ಫೈನಲ್ ಇಯರ್ ಓದುವಾಗ ರೋಬೋ ಫ್ಯಾಮಿಲಿ ಹಾಸ್ಯ ಧಾರವಾಹಿಯಲ್ಲಿ ನಟಿಸುವ ಅವಕಾಶ ಸಿಕ್ಕಿತ್ತು. ಇನ್ನು ರವಿಚಂದ್ರ ಅವರು ಹಲವು ಸಿನಿಮಾಗಳಲ್ಲಿ ಕೂಡ ನಟಿಸಿದ್ದಾರೆ, ಕನ್ನಡಕ್ಕಾಗಿ ಒಂದನ್ನು ಒತ್ತಿ, ಒನ್ ಲವ್ 2 ಸ್ಟೋರಿ, ಅಸುರ ಸಂಹಾರ ಹಾಗೂ ಏಳೆಂಟು ಸಿನಿಮಾಗಳಲ್ಲಿ ನಟಿಸಿದ್ದಾರೆ..

ರವಿಚಂದ್ರ ಒಳ್ಳೆಯ ಸಿನಿಮಾಗಳಲ್ಲಿ ನಟಿಸಬೇಕು ಎನ್ನುವ ಆಸೆ ಇದೆ. ರವಿಚಂದ್ರ ಅವರು ಮತ್ತೊಬ್ಬರ ನಗುವಿನಲ್ಲಿ ತಮ್ಮ ಸಂತೋಷ ಕಾಣಲು ಇಷ್ಟ ಎಂದು ಹೇಳಿಕೊಂಡಿದ್ದಾರೆ. ಹಾಗೆಯೇ ಗಟ್ಟಿಮೇಳ ಧಾರವಾಹಿಯ ಎಲ್ಲಾ ಸದಸ್ಯರ ಜೊತೆಗೂ ಉತ್ತಮವಾದ ಒಡನಾಟ ಇಟ್ಟುಕೊಂಡಿದ್ದಾರೆ. ರವಿಚಂದ್ರ ಅವರ ಕನಸಿನ ಹಾಗೆ ಅವರಿಗೆ ಒಳ್ಳೆಯ ಅವಕಾಶಗಳು ಸಿಗಲಿ ಎಂದು ಹಾರೈಸೋಣ.

Comments are closed.