Gruhalakshmi plan: 2000 ರೂ. ಕೈಗೆ ಸಿಗುವುದಕ್ಕೆ ಕೊನೆಗೂ ಕೂಡಿ ಬಂತು ಕಾಲ: ಆದರೆ ಅರ್ಜಿ ಸಲ್ಲಿಸುವಾಗ ಈ ಒಂದು ಕೆಲಸ ಮಾಡಲೇಬೇಕು!

Gruhalakshmi plan: ಬಹುನಿರೀಕ್ಷಿತ ಗೃಹಲಕ್ಷ್ಮಿ ಯೋಜನೆಗೆ ಅಂತೂ ಚಾಲನೆ ಸಿಗಲಿದೆ. ರಾಜ್ಯ ಸರ್ಕಾರ ಅಧಿಕಾರಕ್ಕೆ ಬಂದು ಕೆಲವೇ ದಿನಗಳಲ್ಲಿ ಚುನಾವಣೆಯ ಮೊದಲು ಹೊರಡಿಸಿದ್ದ ಪ್ರಣಾಳಿಕೆಯಂತೆ 5 ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತರಲು ಮುಂದಾಗಿದೆ. ಇದರಲ್ಲಿ ಈಗಾಗಲೇ ಶಕ್ತಿ ಯೋಜನೆಗೆ ಚಾಲನೆ ನೀಡಿದ್ದು ಮಹಿಳೆಯರು ಬಸ್ಸಿನಲ್ಲಿ ಉಚಿತವಾಗಿ ಪ್ರಯಾಣ ಮಾಡಬಹುದು.

JOSH 2 | Live Kannada News
Gruhalakshmi plan: 2000 ರೂ. ಕೈಗೆ ಸಿಗುವುದಕ್ಕೆ ಕೊನೆಗೂ ಕೂಡಿ ಬಂತು ಕಾಲ: ಆದರೆ ಅರ್ಜಿ ಸಲ್ಲಿಸುವಾಗ ಈ ಒಂದು ಕೆಲಸ ಮಾಡಲೇಬೇಕು! https://sihikahinews.com/2023/06/16/gruhalakshmi-plan-will-start-today/

ಗೃಹಲಕ್ಷ್ಮಿ ಯೋಜನೆಗೆ ಇಂದೇ ಚಾಲನೆ:

ಸರ್ಕಾರದ ಇನ್ನೊಂದು ಬಹುನಿರೀಕ್ಷಿತ ಯೋಜನೆಗಳಲ್ಲಿ ಗ್ರಹಲಕ್ಷ್ಮಿ ಯೋಜನೆಯ ಒಂದು. ರಾಜ್ಯದ ಪ್ರತಿಯೊಂದು ಮನೆಯ ಗೃಹಿಣಿಗೆ, ಪ್ರತಿ ತಿಂಗಳು 2000 ರೂ. ಹಣ ನೀಡುವ ಯೋಜನೆ ಇದಾಗಿದ್ದು ಈ ಯೋಜನೆಯ ಯಾವಾಗ ಆರಂಭವಾಗಬಹುದು ಎಂದು ಹಲವರು ನಿರೀಕ್ಷೆ ಮಾಡುತ್ತಿದ್ದರು. ಈಗ ಸರ್ಕಾರ ಆದೇಶ ಹೊರಡಿಸಿದ್ದು ಇಂದು ಮಧ್ಯಾಹ್ನ 1:30 ಕ್ಕೆ ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಲು ಚಾಲನೆ ಸಿಗಲಿದೆ. ಮಾನ್ಯ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಅವರು ಗೃಹಲಕ್ಷ್ಮಿ ಯೋಜನೆಗೆ ಚಾಲನೆ ನೀಡಲಿದ್ದು ಸೇವಾ ಸಿಂಧು ಪೋರ್ಟಲ್  ನಲ್ಲಿ ನೀವು ಅರ್ಜಿ ಸಲ್ಲಿಸಬಹುದು.

ಆನ್ಲೈನ್ ಅಥವಾ ಆಫ್ಲೈನ್ ಅರ್ಜಿ ಸಲ್ಲಿಕೆ

ನೀವು ಸೇವಾ ಸಿಂಧು ಪೋರ್ಟಲ್ ನಲ್ಲಿ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸಲು ಎಸ್ಎಂಎಸ್ ಮೂಲಕ ಹಾಗೂ ಸೇವಾ ಸಿಂಧು ಪೋರ್ಟಲ್ ಮೂಲಕ ಆಟೋ ಜನರೇಟೆಡ್ ಸ್ವೀಕೃತಿ ಪಡೆದು ಕೊಳ್ಳಬಹುದು. ಅದೇ ರೀತಿ ನಿಮ್ಮ ಹತ್ತಿರದ ಗ್ರಾಮ ಒನ್, ಕರ್ನಾಟಕ ಒನ್, ಬೆಂಗಳೂರು ಒನ್ ಕೇಂದ್ರಗಳಲ್ಲಿಯೂ ಕೂಡ ನೀವೇ ಹೋಗಿ ಅರ್ಜಿ ಸಲ್ಲಿಸಬಹುದು.

ಬಿಪಿಎಲ್ ಎಪಿಎಲ್ ಅಥವಾ ಅಂತ್ಯೋದಯ ಕಾರ್ಡ್ ನಲ್ಲಿ ನಮೂದಿಸಿರುವ ಮನೆಯ ಯಜಮಾನಿಯ ಹೆಸರಿಗೆ ಪ್ರತಿ ತಿಂಗಳು 2000 ನೀಡುವ ಯೋಜನೆ ಇದಾಗಿದ್ದು ಮಹಿಳೆಯರ ಆರ್ಥಿಕ ಸಬಲೀಕರಣಕ್ಕೆ ಈ ಯೋಜನೆಯ ಮೂಲಕ ಸರ್ಕಾರ ಮುಂದಾಗಿದೆ. ಗೃಹಲಕ್ಷ್ಮಿ ಯೋಜನೆಗೆ ಸಾಕಷ್ಟು ರೂಲ್ಸ್ ಕೂಡ ಇದೆ ಮನೆಯಲ್ಲಿ ಯಜಮಾನಿಯ ಪತಿ ಇನ್ಕಮ್ ಟ್ಯಾಕ್ಸ್ ಅಥವಾ ಜಿ ಎಸ್ ಟಿ ಪಾವತಿದಾರರಾಗಿದ್ದರೆ 2000ರೂ. ಸಿಗುವುದಿಲ್ಲ. ನೀವು ವೆಬ್ ಪೋರ್ಟಲ್ ನಲ್ಲಿ ಕೇಳಿರುವ ಎಲ್ಲಾ ಮಾಹಿತಿಗಳನ್ನು ನೀಡಿ ಅರ್ಜಿ ಸಲ್ಲಿಸಬಹುದು.

ಈ ಪೋರ್ಟಲ್: https://sevasindhugs.karnataka.gov.in/gruhalakshmi (ಇಂದು ಮಧ್ಯಾಹ್ನ 1:30ರ ನಂತರ ಈ ಪೋರ್ಟಲ್ ಕಾರ್ಯ ನಿರ್ವಹಿಸಲು ಆರಂಭಿಸಬಹುದು)

Comments are closed.