Yash New car: ರಾಕಿ ಭಾಯ್ ಬತ್ತಳಿಕೆಗೆ ಸೇರಿದ ಮತ್ತೊಂದು ಐಷಾರಾಮಿ ಕಾರು; ಇದರ ಬೆಲೆ ಹೈ ಬಜೆಟ್ ಸಿನಿಮಾವನ್ನೇ ನೆನಪಿಸುತ್ತೆ; ಅಬ್ಬಬ್ಬಾ ಇಷ್ಟೋಂದಾ?

Yash New car: ಸೆಲೆಬ್ರಿಟಿ (Celebrities) ಗಳು ತಮ್ಮ ಐಷಾರಾಮಿ ಜೀವನದಿಂದ ಹೆಚ್ಚು ಸುದ್ಧಿಯಾಗುತ್ತಾರೆ. ಅವರು ಬಳಸುವ ದುಬಾರಿ ಬೆಲೆಯ ವಸ್ತುಗಳು, ಧರಿಸುವ ಬಟ್ಟೆ, ಓಡಾಡುವ ಕಾರ್, ಅದ್ಧೂರಿ ಮನೆ ಇದೆಲ್ಲದರಿಂದ ಕಲಾವಿದರು ಸುದ್ದಿಯಾಗುತ್ತಾರೆ. ತಮ್ಮ ಮೆಚ್ಚಿನ ಕಲಾವಿದರ ಹತ್ತಿರ ಇರುವ ಈ ಥರದ ದುಬಾರಿ ವಸ್ತುಗಳ ಬೆಲೆ ತಿಳಿದುಕೊಳ್ಳಬೇಕು ಎಂದು ನೆಟ್ಟಿಗರು ಹಾಗೂ ಅವರ ಅಭಿಮಾನಿಗಳು ಕೂಡ ಆಸೆ ಪಡುತ್ತಾರೆ..ಇದೀಗ ನಟ ಯಶ್ ಅವರು ಈ ಥರದ ವಿಚಾರಕ್ಕೆ ಸುದ್ದಿಯಾಗಿದ್ದಾರೆ..

JOSH 2 | Live Kannada News
Yash New car: ರಾಕಿ ಭಾಯ್ ಬತ್ತಳಿಕೆಗೆ ಸೇರಿದ ಮತ್ತೊಂದು ಐಷಾರಾಮಿ ಕಾರು; ಇದರ ಬೆಲೆ ಹೈ ಬಜೆಟ್ ಸಿನಿಮಾವನ್ನೇ ನೆನಪಿಸುತ್ತೆ; ಅಬ್ಬಬ್ಬಾ ಇಷ್ಟೋಂದಾ? https://sihikahinews.com/2023/06/15/yash-new-car-price/

ಕೆಜಿಎಫ್2 ಅಷ್ಟು ದೊಡ್ಡ ಮಟ್ಟದಲ್ಲಿ ಹಿಟ್ ಆದ ಬಳಿಕ ಎಲ್ಲರ ಕಣ್ಣು ರಾಕಿ ಭಾಯ್ ಯಶ್ ಅವರ ಮೇಲಿದೆ. ಯಶ್ ಅವರ ಮುಂದಿನ ಸಿನಿಮಾ ಯಾವುದು ಎನ್ನುವ ಕುತೂಹಲಕ್ಕೆ ಇನ್ನು ಉತ್ತರ ಸಿಕ್ಕಿಲ್ಲ. ಆದರೆ ಇದೀಗ ಯಶ್ ಅವರು ಹೊಸ ದುಬಾರಿ ಬೆಲೆಯ ಕಾರ್ ಖರೀದಿ ಮಾಡುವ ಮೂಲಕ ಸುದ್ದಿಯಾಗಿದ್ದಾರೆ. ಹೊಸ ಖರೀದಿ ಮಾಡಿ, ಪತ್ನಿ ರಾಧಿಕಾ ಪಂಡಿತ್ (Radhika pandit) ಮತ್ತು ಮಕ್ಕಳಾದ ಆಯ್ರ ಹಾಗೂ ಯಥರ್ವ್ ಜೊತೆಗೆ ಒಂದು ರೌಂಡ್ ಹೋಗಿಬಂದಿದ್ದಾರೆ. ಇದನ್ನೂ ಓದಿ: Bluetick: ಫೇಸ್ಬುಕ್, ಇನ್ಸ್ಟಾಗ್ರಾಮ್ ನಲ್ಲಿ ನೀವು ಸೆಲೆಬ್ರೆಟಿ ಅಲ್ಲದೆ ಇದ್ದರೂ ಸುಲಭವಾಗಿ ಬ್ಲೂ ಟಿಕ್, ಪಡೆಯುವುದು ಹೇಗೆ ಗೊತ್ತೇ?? ದೇವ್ರೇ ಇಷ್ಟೊಂದು ಸುಲಭನಾ??

ಯಶ್ ಅವರು ಈಗ ಖರೀದಿ ಮಾಡಿರುವುದು ರೇಂಜ್ ರೋವರ್ ಕಾರ್, ಕಪ್ಪು ಬಣ್ಣದ ರೇಂಜ್ ರೋವರ್ (Range Rover) ಕಾರ್ ನ ಬರೋಬ್ಬರಿ 5ಕೋಟಿ ರೂಪಾಯಿ ಎಂದು ಹೇಳಲಾಗುತ್ತಿದೆ. ಈ ದುಬಾರಿ ಬೆಲೆಯ ಕಾರ್ ಎದುರಲ್ಲಿ ಯಶ್ ಅವರು ಪತ್ನಿ ಹಾಗೂ ಮಕ್ಕಳ ಜೊತೆಗೆ ಪೋಸ್ ನೀಡಿದ್ದಾರೆ..ಈ ಫೋಟೋಸ್ ಈಗ ಸಿಕ್ಕಾಪಟ್ಟೆ ವೈರಲ್ ಆಗಿದೆ. ಯಶ್ ಅವರ ಹತ್ತಿರ ಈಗಾಗಲೇ ಆಡಿ Q7, ಬೆಂಚ್, BMW 5 ಸೇರಿದಂತೆ ಐಷಾರಾಮಿ ಕಾರ್ ಗಳಿವೆ..

ಆ ಲಿಸ್ಟ್ ಗೆ ಈಗ ಹೊಸ ರೇಂಜ್ ರೋವರ್ ಕಾರ್ ಸೇರ್ಪಡೆಯಾಗಿದೆ. ಈ ಕಾರ್ ಶ್ರೀಮಂತ ರಾಜಕಾರಣಿಗಳು ಹಾಗೂ ಸಿನಿಮಾ ತಾರೆಯರ ಹತ್ತಿರವಿದೆ. ಸಾಕಷ್ಟು ವಿಶೇಷತೆಗಳನ್ನು ಹೊಂದಿರುವ ಈ ರೇಂಜ್ ರೋವರ್ ಕಾರ್ ಅನ್ನು ಈಗ ಯಶ್ ಅವರು ಸಹ ಖರೀದಿ ಮಾಡಿ ಸುದ್ದಿಯಾಗಿದ್ದಾರೆ. ಇನ್ನು ಅಭಿಮಾನಿಗಳು ಯಶ್ ಅವರು ಹೊಸ ಕಾರ್ ಖರೀದಿ ಮಾಡಿರುವುದಕ್ಕೆ ವಿಶ್ ಮಾಡುತ್ತಿದ್ದಾರೆ.

Comments are closed.