Post Office jobs: ಕಡಿಮೆ ಓದಿದ್ದರೂ ಪೋಸ್ಟ್ ಆಫೀಸ್ ನಲ್ಲಿ ಇದೆ ಸಾವಿರಾರು ಉದ್ಯೋಗ- ಅರ್ಜಿ ಸಲ್ಲಿಸಿ ಕೆಲಸ ಗಿಟ್ಟಿಸಿಕೊಳ್ಳುವುದು ಹೇಗೆ ಗೊತ್ತೇ?

Post Office Jobs: 2023ರ ಪೋಸ್ಟ್ ಆಫೀಸ್ ನ ಗ್ರಾಮೀಣ ಡಾಕ್ ಸೇವಕ್ ಸ್ಪೆಷಲ್ ಸೈಕಲ್ ನ 12,829 ಹುದ್ದೆಗಳು ಖಾಲಿ ಇದ್ದು, ಇವುಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನ ನೀಡಲಾಗಿತ್ತು. ಈ ಕೆಲಸಕ್ಕೆ ಅರ್ಜಿ ಸಲ್ಲಿಸುವ ದಿನಾಂಕ ಮೇ 22ರಿಂದ ಶುರುವಾಗಿ, ಜೂನ್ 11ರ ವರೆಗು ಇತ್ತು, ಆದರೆ ಈಗ ಅರ್ಜಿ ಹಾಕುವ ದಿನಾಂಕವನ್ನು ವಿಸ್ತರಣೆ ಮಾಡಲಾಗಿದ್ದು, ಅಭ್ಯರ್ಥಿಗಳು ಜೂನ್16 ರಿಂದ ಜೂನ್ 23ರವರೆಗು ಅರ್ಜಿ ಸಲ್ಲಿಸಬಹುದು.. ಅರ್ಜಿಯನ್ನು ತಿದ್ದುಪಡಿ ಮಾಡುವುದಿದ್ದರೆ ಜೂನ್ 14ರ ಒಳಗೆ ಅದನ್ನು ಮಾಡಬಹುದು.

JOSH 2 | Live Kannada News
Post Office jobs: ಕಡಿಮೆ ಓದಿದ್ದರೂ ಪೋಸ್ಟ್ ಆಫೀಸ್ ನಲ್ಲಿ ಇದೆ ಸಾವಿರಾರು ಉದ್ಯೋಗ- ಅರ್ಜಿ ಸಲ್ಲಿಸಿ ಕೆಲಸ ಗಿಟ್ಟಿಸಿಕೊಳ್ಳುವುದು ಹೇಗೆ ಗೊತ್ತೇ? https://sihikahinews.com/2023/06/15/post-office-jobs/

ಈ ಕೆಲಸದ ಬಗ್ಗೆ ಪೂರ್ತಿ ಮಾಹಿತಿ ನೀಡುವುದಾದರೆ, ಖಾಲಿ ಇರುವುದು 12,828 ಗ್ರಾಮೀಣ ಡಾಕ್ ಸೇವಕ್ ಹುದ್ದೆ, ಕರ್ನಾಟಕದಲ್ಲಿ ಒಟ್ಟು 48 ಹುದ್ದೆಗಳು ಖಾಲಿ ಇದೆ. ಈ ಕೆಲಸಕ್ಕೆ ವಿದ್ಯಾರ್ಹತೆ ಹೀಗಿದೆ, 10ನೇ ತರಗತಿ ಪಾಸ್ ಆಗಿರಬೇಕು. ಅಭ್ಯರ್ಥಿಗೆ ಆಯಾ ರಾಜ್ಯದ ಅಧಿಕೃತ ಭಾಷೆಯನ್ನು ಓದಲು, ಬರೆಯಲು ಮತ್ತು ಮಾತನಾಡಲು ಬರಬೇಕು.. ಕರ್ನಾಟಕದ ಅಭ್ಯರ್ಥಿಗಳಿಗೆ ಕನ್ನಡ ಭಾಷೆ ಚೆನ್ನಾಗಿ ಬರಬೇಕು.

ಜೊತೆಗೆ ಕಂಪ್ಯೂಟರ್ ಜ್ಞಾನ ಇರಬೇಕು. ಈ ಕೆಲಸಕ್ಕೆ ಬೇಕಿರುವ ವಯಸ್ಸಿನ ಅರ್ಹತೆ ಹೀಗಿರಬೇಕು.. ಅಪ್ಲಿಕೇಶನ್ ಹಾಕಿದ ಕೊನೆಯ ದಿನದ ವೇಳೆಗೆ ಅಭ್ಯರ್ಥಿಗೆ ಕನಿಷ್ಠ 18 ವರ್ಷ ಆಗಿರಬೇಕು. ಗರಿಷ್ಠ 40 ವರ್ಷ ಆಗಿರಬೇಕು. ಇಲ್ಲಿ SC/ST ಅಭ್ಯರ್ಥಿಗಳಿಗೆ 5 ವರ್ಷ ವಯೋಮಿತಿ ಸಡಿಲಿಕೆ ಇದೆ..ಓಬಿಸಿ ಅಭ್ಯರ್ಥಿಗಳಿಗೆ 3 ವರ್ಷ ವಯೋಮಿತಿ ಸಡಿಲಿಕೆ ಇದೆ. ಆನ್ಲೈನ್ ನಲ್ಲಿ ಅಪ್ಲೈ ಮಾಡುವವರ ಡೇಟಾ ಪಡೆದು, ಮೆರಿಟ್ ಮೇಲೆ ಪಟ್ಟಿ ತಯಾರಾಗುತ್ತದೆ.

ಶಾರ್ಟ್ ಲಿಸ್ಟ್ ಆಗುವ ಅಭ್ಯರ್ಥಿಗಳಿಗೆ ಒರಿಜಿನಲ್ ಡಾಕ್ಯುಮೆಂಟ್ ಗಳ ಪರಿಶೀಲನೆ ನಡೆಸಿ, ಬಳಿಕ ನೇಮಕಾತಿಯ ಪಟ್ಟಿಯನ್ನು ಸಿದ್ಧ ಮಾಡಲಾಗುತ್ತದೆ. ಆನ್ಲೈನ್ ಅರ್ಜಿ ಹಾಕುವವರು ಈ ವೆಬ್ಸೈಟ್
https://indiapostgdsonline.gov.in/Reg_validation.aspx ವಿಸಿಟ್ ಮಾಡಿ..ಮೊದಲು ರಿಜಿಸ್ಟರ್ ಆಗಿ, ಲಾಗಿನ್ ಆಗಿ, ಅರ್ಜಿ ಸಲ್ಲಿಸಿ ನಂತರ ಹಣಪಾವತಿ ಮಾಡಿ. ಅರ್ಜಿ ಹಾಕುವ ಪ್ರಕ್ರಿಯೆಯನ್ನು ಪೂರ್ತಿಮಾಡಿ..ಭಾರತದ ಎಲ್ಲಾ ರಾಜ್ಯಗಳಲ್ಲಿ ಕೆಲಸ ಖಾಲಿ ಇದೆ.

Comments are closed.