Kannada News: ದೇಶವೇ 2000ರೂ. ನೊಟ್ ಬ್ಯಾನ್ ನಿಂದ ಚಿಂತೆಗೊಳಗಾಗಿದ್ದರೆ ಅಡಿಕೆ ಬೆಳೆಗಾರರಿಗೆ ಮಾತ್ರ ದರ ಹೆಚ್ಚಾಗುವ ಆಶಾಭಾವ; ಇದಕ್ಕೆ ಕಾರಣ ಏನು ಗೊತ್ತೇ?

Kannada News: ಕೆಲವು ದಿನಗಳ ಹಿಂದೆ ದಿಢೀರ್ ಎಂದು ವಿಪರೀತ ಏರಿಕೆ ಆಗಿದ್ದ ಅಡಿಕೆ ಬೆಲೆಯಲ್ಲಿ ಈಗ ಇಳಿಕೆ ಕಂಡುಬಂದಿದೆ. ಇತ್ತೀಚೆಗೆ ಆರ್.ಬಿ.ಐ 2000 ರೂಪಾಯಿ ನೋಟ್ ಅನ್ನು ನಿಷೇಧಗೊಳಿಸಿದೆ. ಅಡಿಕೆ ಬೆಲೆ ಕಡಿಮೆ ಆಗುವುದಕ್ಕೆ ಇದು ಕೂಡ ಒಂದು ಕಾರಣ ಎನ್ನಲಾಗಿದೆ. ಅಡಿಕೆಯ ಕೊಯ್ಲು ಹಾಗೂ ಸಂಸ್ಕರಣೆ ಕೆಲಸ ಮುಗಿದು 3 ತಿಂಗಳು ಕಳೆದಿದೆ. ಈಗಾಗಲೇ ಹಲವು ರೈತರು ಅಡಿಕೆಯನ್ನು ಮಾರಿದ್ದಾರೆ. ಮತ್ತು ಕೆಲವರು ಸ್ವಲ್ಪ ಮಟ್ಟವನ್ನು ಹಾಗೆಯೇ ಉಳಿಸಿಕೊಂಡಿದ್ದಾರೆ..

JOSH 2 | Live Kannada News
Kannada News: ದೇಶವೇ 2000ರೂ. ನೊಟ್ ಬ್ಯಾನ್ ನಿಂದ ಚಿಂತೆಗೊಳಗಾಗಿದ್ದರೆ ಅಡಿಕೆ ಬೆಳೆಗಾರರಿಗೆ ಮಾತ್ರ ದರ ಹೆಚ್ಚಾಗುವ ಆಶಾಭಾವ; ಇದಕ್ಕೆ ಕಾರಣ ಏನು ಗೊತ್ತೇ? https://sihikahinews.com/2023/06/17/kannada-news-is-areca-nut-price-increase/

ಅವಶ್ಯಕತೆ ಬಿದ್ದಾಗ ಆದಾಯ ಮಾಡಿಕೊಳ್ಳಬೇಕು ಎಂದು, ಬೆಲೆ ಚೆನ್ನಾಗಿ ಸಿಗುವ ವೇಳೆ ಮಾರಾಟ ಮಾಡಬೇಕು ಎಂದು ಇಟ್ಟುಕೊಳ್ಳುವುದು ಅಡಿಕೆ ವಲಯದಲ್ಲಿ ನಡೆಯುತ್ತದೆ. ಅಡಿಕೆ ಬೆಳೆದವರಿಗೆ ಉತ್ತಮ ಬೆಲೆ ಸಿಕ್ಕಿ ಮಾರಾಟ ಮಾಡಲಾಗಿತ್ತು, ಈಗ ಮಳೆ ಇರುವುದರಿಂದ ಬೆಲೆಯಲ್ಲಿ ಸ್ವಲ್ಪ ಮಟ್ಟಕ್ಕೆ ಏರಿಕೆ ಆಗಿದೆ. ಈಗ ಬೆಳೆಗಾರರು ಇನ್ನು ಉತ್ತಮ ಬೆಲೆ ಸಿಗಬಹುದು ಎನ್ನುವ ನಿರೀಕ್ಷೆಯಲ್ಲಿದ್ದಾರೆ. ದರ ಹೇಗಿತ್ತು ಎಂದರೆ, ಒಂದು ಕ್ವಿನ್ಟಾಲ್ ಗೆ 45 ಸಾವಿರಕ್ಕೆ ಇಳಿಕೆ ಆಗಿತ್ತು, ಬಳಿಕ ಮೇ ತಿಂಗಳಿನಲ್ಲಿ 47 ಸಾವಿರಕ್ಕೆ ಸ್ವಲ್ಪ ಏರಿಕೆ ಆಗಿತ್ತು.

ಜೂನ್ ತಿಂಗಳ ಮೊದಲ ವಾರದಲ್ಲಿ 48 ಸಾವಿರ ಆಗಿದೆ. ಈಗ ಚಾಲ್ತಿಯಲ್ಲಿರುವ ಹೊಸ ಥರದ ಬಿಳಿ ಅಡಿಕೆ ಬೆಲೆಯಲ್ಲಿ ಕೂಡ ಏರಿಕೆ ಆಗಿದೆ, ಇವುಗಳಿಗೆ ಏಪ್ರಿಲ್ ಮತ್ತು ಮೇ ತಿಂಗಳಿನಲ್ಲಿ 35 ರಿಂದ 36 ಸಾವಿರ ರೂಪಾಯಿ ಇತ್ತು, ಈಗ 38 ಸಾವಿರ ರೂಪಾಯಿ ಆಗಿದೆ. ಬಹಳಷ್ಟು ಅಡಿಕೆ ಮಾರುಕಟ್ಟೆಯಲ್ಲಿ ಈ ಬೆಲೆ ಕಾಣಸಿಗುತ್ತಿದೆ. ಕಳೆದ ಸಾರಿ ಬೆಲೆ ಸರಿ ಹೋಗದೆ ಕೆಲವು ಅಡಿಕೆ ಬೆಳಗಾರರು ತಮ್ಮ ಬೆಳೆಯನ್ನು ದಾಸ್ತಾನು ಮಾಡಿದ್ದರು, ಈಗ ಬೆಲೆಯಲ್ಲಿ ಸ್ವಲ್ಪ ಏರಿಕೆ ಆಗಿದ್ದು ಏನು ಮಾಡಬೇಕು ಎಂದು ರೈತರು ಯೋಚಿಸುತ್ತಿದ್ದಾರೆ.

ಕೆಲವರು ಈ ಬೆಲೆಗೆ ಮಾರಾಟ ಮಾಡಬೇಕು ಎಂದುಕೊಂಡಿದ್ದಾರೆ ಇನ್ನು ಕೆಲವರು ಬೆಲೆ ಇನ್ನು ಸ್ವಲ್ಪ ಜಾಸ್ತಿಯಾಗಲಿ ಎನ್ನುತ್ತಿದ್ದಾರೆ. ಮತ್ತು ಕೆಲವರು ಹಬ್ಬಗಳು ಬರುತ್ತಿದೆ ಆಗ ನೋಡೋಣ ಎಂದು ಕೂಡ ಹೇಳಿದ್ದಾರೆ. ಆ ಥರ ಇರುವವರು ಒಂದು ಕ್ವಿನ್ಟಾಲ್ ಕೆಂಪು ಅಡಿಕೆಗೆ ₹50 ಸಾವಿರ, ಒಂದು ಕ್ವಿನ್ಟಾಲ್ ಬಿಳಿ ಅಡಿಕೆಗೆ ₹40 ಸಾವಿರ ದಾಟಬಹುದು ಎಂದು ಕಾಯುತ್ತಿದ್ದಾರೆ. ಈಗ ಆರ್.ಬಿ.ಐ 2000 ರೂಪಾಯಿ ನೋಟ್ ನಿಷೇಧ ಮಾಡಿರುವುದರಿಂದ ಬೆಲೆಯಲ್ಲಿ ಇಳಿಕೆ ಆಗಿದ್ದು, ಮುಂದಿನ ದಿನಗಳಲ್ಲಿ ಹೆಚ್ಚಳ ಆಗುತ್ತಾ ಎಂದು ಕಾದು ನೋಡಬೇಕಿದೆ.

Comments are closed.