Film News: ಈ ಒಂದು ಕೆಲಸ ಮಾಡಿದ್ದಕ್ಕೆ ಕನ್ನಡ ನಟಿಯ ಬಂಧನ; ಅಬ್ಬಬ್ಬಾ ಇಂಥವರೂ ಇರ್ತಾರಾ?

Film News: ಇದೀಗ ಕನ್ನಡ ನಟಿಯೊಬ್ಬರ ಮೇಲೆ ವಂಚನೆ ಆರೋಪ ಕೇಳಿಬಂದಿದ್ದು, ಆಕೆಯ ವಿರುದ್ಧ ದೂರು ನೀಡಲಾಗಿದೆ. ಆಕೆಗೆ ನೋಟಿಸ್ ಹೋಗಿದ್ದರು ಸಹ ಆಕೆ ನ್ಯಾಯಾಲಯಕ್ಕೆ ಹಾಜರಾಗದ ಕಾರಣ ಪೊಲೀಸರು ಆಕೆಯನ್ನು ಬಂಧಿಸಿದ್ದಾರೆ. ಶಿವಮೊಗ್ಗದ ವಿನೋಬಾನಗರದಲ್ಲಿ ಈ ನಟಿಯನ್ನು ಬಂಧಿಸಲಾಗಿದೆ. ಈಕೆಯ ಹೆಸರು ಉಷಾ ಎಂದು ಹೇಳಲಾಗಿದ್ದು, ಈ ನಟಿ ಕೆಲವು ಸಿನಿಮಾಗಳು ಹಾಗೂ ಧಾರವಾಹಿಗಳಲ್ಲಿ ನಟಿಸಿದ್ದಾರೆ..

JOSH 2 | Live Kannada News
Film News: ಈ ಒಂದು ಕೆಲಸ ಮಾಡಿದ್ದಕ್ಕೆ ಕನ್ನಡ ನಟಿಯ ಬಂಧನ; ಅಬ್ಬಬ್ಬಾ ಇಂಥವರೂ ಇರ್ತಾರಾ? https://sihikahinews.com/2023/06/18/film-news-kannada-film-actress-arrested/

ನಟ ದುನಿಯಾ ವಿಜಯ್ ಅವರ ಸಲಗ ಸಿನಿಮಾದಲ್ಲಿ ಉಷಾ ನಟಿಸಿದ್ದಾರೆ. ಹಾಗೂ ಕೆಲವು ಧಾರವಾಹಿಗಳಲ್ಲಿ ನಟಿಸಿದ್ದಾರೆ. ಇವರ ವಿರುದ್ಧ ಶರವಣನ್ ಎನ್ನುವವರು ದೂರು ನೀಡಿದ್ದು, ಇವರು ಕೂಡ ಕೆಲವು ಧಾರವಾಹಿಗಳಲ್ಲಿ ನಟಿಸಿದ್ದಾರೆ. ಈ ನಟಿಯ ವಿರುದ್ಧ ಮೋಸ ಮಾಡಿದ ಪ್ರಕರಣ ದಾಖಲಾಗಿದ್ದು, ನೋಟಿಸ್ ಕಳಿಸಿದರು ಹಾಜರಾಗದೆ ಇದ್ದಿದ್ದಕ್ಕೆ ಈಕೆಯನ್ನು ಪೊಲೀಸರು ಬಂಧಿಸಿದ್ದರು. ಈಕೆಯನ್ನು ಕೋರ್ಟ್ ಗೆ ಹಾಜರು ಪಡಿಸಲಾಗಿದೆ.

ಶರವಣನ್ ಎನ್ನುವವರಿಂದ ಹಣ ಪಡೆದ ಉಷಾ, ಅದನ್ನು ವಾಪಸ್ ಕೊಟ್ಟಿಲ್ಲ ಎಂದು ದೂರು ನೀಡಲಾಗಿತ್ತು. ಈ ನಟಿಗೆ ಕೋರ್ಟ್ ಸಹ ಜಾಮೀನುರಹಿತ ಬಂಧನದ ವಾರೆಂಟ್ ನೀಡಿತ್ತು, ಆದರೆ ಬಂಧನವಾಗುತ್ತಿದ್ದ ಹಾಗೆಯೇ ಈ ನಟಿಗೆ, JMFC ಮೂರನೇ ನ್ಯಾಯಾಲಯದ ಜಡ್ಜ್ ಉಷಾ ಅವರಿಗೆ ಮಧ್ಯಂತರ ಜಾಮೀನು ನೀಡಿದ್ದಾರೆ..

ಈ ನಟಿಗೆ ನಾಳೆ ಜಾಮೀನು ಸಿಗಲೇಬೇಕು, ನಾಳೆ ಬೇಲ್ ಸಿಗುವವರೆಗೂ ಮಧ್ಯಂತರ ಜಾಮೀನಿನ ಮೂಲಕ ಆಕೆ ಹೊರಗಡೆ ಇರಬಹುದು ಎಂದು ಹೇಳಲಾಗಿದೆ. ಸಾಯಂಕಾಲದ ಬಳಿಕ ಆಕೆಯನ್ನು ವಿನೋಬಾನಗರದಲ್ಲಿರುವ ಜಡ್ಜ್ ಅವರ ಮನೆಗೆ ಉಷಾ ಅವರನ್ನು ಕಳಿಸಲಾಗಿದೆ. ಇದೀಗ ಉಷಾ ಅವರಿಗೆ ಜಾಮೀನು ಕೊಡಬೇಕು ಎಂದು ಅರ್ಜಿ ಸಲ್ಲಿಸಲಾಗಿದೆ.

Comments are closed.