Govt.Job: ವೇಷ ಬದಲಿಸಿ ದೇಶಕ್ಕಾಗಿ ಕೆಲಸ ಮಾಡುವ ಸಿಕ್ರೆಟ್ ಎಜೆಂಟ್ ಗಳಿಗೆ ಏನೆಲ್ಲಾ ಸೌಲಭ್ಯ ಸಿಗತ್ತೆ ಗೊತ್ತಾ? ಅಬ್ಬಾ ಸಿಕ್ಕರೆ ಇಂಥ ಕೆಲಸ ಸಿಗಬೇಕು!

Govt.Job: ಸರ್ಕಾರಿ ಕೆಲಸ ಬೇಕು ಎಂದು ಬಯಸುವ ಯುವಕರಿಗೆ ಇಂಟಲಿಜೆನ್ಸ್ ಬ್ಯುರೋ ನಲ್ಲಿ ಕೆಲಸ ಮಾಡಬೇಕು ಎಂದು ಆಸೆ ಇರುತ್ತದೆ. ಯುವಕರಿಗೆ ಈ ಕೆಲಸ ಹೆಚ್ಚು ಇಷ್ಟವಾಗುತ್ತದೆ. ಸಹಾಯಕ ಕೇಂದ್ರ ಗುಪ್ತಚರ ಅಧಿಕಾರಿ (ACIO) ಹುದ್ದೆಯಲ್ಲಿ ಕೆಲಸ ಸಿಗುತ್ತದೆ. ಈ ಕೆಲಸದ ಮುಖ್ಯ ಉದ್ದೇಶ, ಭಾರತ ದೇಶದ ಭದ್ರತೆಯ ವಿಷಯದ ಬಗ್ಗೆ ಪೂರ್ತಿ ಮಾಹಿತಿ ಸಂಗ್ರಹಿಸುವುದು ಮುಖ್ಯ ಕೆಲಸ ಆಗಿದೆ. ಇಂಟಳಲಿಜೆನ್ಸ್ ಬ್ಯುರೋ ನಲ್ಲಿ ACIO ಹುದ್ದೆಯಲ್ಲಿ ಕೆಲಸ ಮಾಡುವವರಿಗೆ ಮತ್ತೊಂದು ಮುಖ್ಯ ಕೆಲಸ..

ರಾಜ್ಯಕ್ಕೆ ಅಥವಾ ರಾಷ್ಟ್ರಕ್ಕೆ ಅಪಾಯ ಎನ್ನಿಸುವಂಥ ಮಾಹಿತಿಯನ್ನು ಕಲೆಹಾಕುವುದು ಮಾತ್ರವಲ್ಲದೆ ಅದೆಲ್ಲವನ್ನು ಟ್ರ್ಯಾಕ್ ಮಾಡಬೇಕು. ಕರೆನ್ಸಿ ಎಕ್ಸ್ಛೇಂಜ್, ಭಯೋತ್ಪಾದನೆ, ವಸ್ತುಗಳ ಕಳ್ಳ ಸಾಗಾಣಿಕೆ ಹಾಗೂ ಇನ್ನು ಕೆಲವು ವಿಚಾರಗಳ ಬಗ್ಗೆ ಮಾಹಿತಿ ತಿಳಿದುಕೊಳ್ಳಬೇಕಾಗುತ್ತದೆ. ಇನ್ನು ಈ ಕೆಲಸ ಮಾಡುವವರಿಗೆ ಸಿಗುವ ಸೌಲಭ್ಯಗಳು ಏನೇನು ಎಂದು ಇಂದು ನಿಮಗೆ ತಿಳಿಸುತ್ತೇವೆ ನೋಡಿ..

ನಗರ ಪರಿಹಾರ ಭತ್ಯೆ :- ಮೊದಲ ಶ್ರೇಣಿಯಲ್ಲಿ ಕೆಲಸ ಮಾಡುವವರಿಗೆ ಮೆಟ್ರೋಪಾಲಿಟನ್ ನಗರಪ್ರದೇಶದಲ್ಲಿ ಬದುಕಿನ ವೆಚ್ಚವನ್ನು ಸರಿಪಡಿಸಲು ಈ ಹುದ್ದೆಯಲ್ಲಿ ಇರುವವರಿಗೆ CCA ನೀಡಲಾಗುತ್ತದೆ.
ವೈದ್ಯಕೀಯ ಭತ್ಯೆ :- ಕೆಲಸ ಮಾಡುತ್ತಿರುವವರಿಗೆ ಹಾಗೂ ಅವರ ಮನೆಯವರಿಗೆ ಆರೋಗ್ಯದ ಸಮಸ್ಯೆ ಉಂಟಾದರೆ, ಅವರ ವೈದ್ಯಕೀಯ ಖರ್ಚುಗಳನ್ನು ಸರ್ಕಾರವೇ ಭರಿಸುತ್ತದೆ.

ತುಟ್ಟಿ ಭತ್ಯೆ :- ಇದು ಮತ್ತೊಂದು ವಿಶೇಷವಾದ ಶೇಕಡಾವಾರು ಪ್ರಮಾಣ ಆಗಿದ್ದು, ಹಣದುಬ್ಬರವನ್ನು ಇದು ಸರಿ ಮಾಡುತ್ತದೆ..
ಮೈಲೇಜ್ ಭತ್ಯೆ :- 7ನೇ ವೇತನ ಆಯೋಗದ ಬಗ್ಗೆ ಬರೆಯಲಿದ್ದು, ಕೆಲಸದ ವೇಳೆ 8ಕಿಮೀ ಅಥವಾ ಅದಕ್ಕಿಂತ ಹೆಚ್ಚಿನ ದೂರ ಪ್ರಯಾಣ ಮಾಡಬೇಕು ಎಂದರೆ, ಅದರ ವೆಚ್ಚವನ್ನು ಸರ್ಕಾರವೇ ಭರಿಸುತ್ತದೆ. ಇದಿಷ್ಟೆ ಅಲ್ಲದೆ, ಕೆಲಸ ಮಾಡುತ್ತಿರುವವರಿಗೆ ಪತ್ರಿಕೆ ಮರುಪಾವತಿ, ಅತಿಥಿ ವೆಚ್ಚ, ಸೂಟ್ ಕೇಸ್ ಗಳು, ಎಲೆಕ್ಟ್ರಾನಿಕ್ಸ್ ವಸ್ತುಗಳ ಮೇಲೆ ಸೌಲಭ್ಯ ಸಿಗುತ್ತದೆ.

Comments are closed.