KTM 200 Duke 2023: ಬಿಡುಗಡೆಯಾಗಿದೆ ಹೊಸ KTM -200, ಹೊಸ ಲುಕ್, ಬೆಲೆ ಹಾಗೂ ಹೊಸ ವೈಶಿಷ್ಯತೇ ಏನು ಗೊತ್ತೆ? ತಿಳಿದರೆ ಇಂದೇ ಬುಕ್ ಮಾಡ್ತೀರಾ.

KTM 200 Duke 2023:ಇದೀಗ KTM ಇಂಡಿಯಾ ಸಂಸ್ಥೆ ಈಗ ಹೊಸದಾದ KTM 200 Duke ಬೈಕ್ ಅನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ. ಇದರ ಶೋರೂಮ್ ಬೆಲೆ 1.96ಲಕ್ಷ ರೂಪಾಯಿ ಆಗಿದೆ. ಈ ಹಿಂದೆ ಇದ್ದ ಡ್ಯುಕ್ 200 ಗಿಂತ 3,155 ರೂಪಾಯಿ ಕಡಿಮೆ ಬೆಲೆಯಲ್ಲಿ ಜ್ ಬೈಕ್ ಸಿಗಲಿದೆ. ಇದರಲ್ಲಿ ಹೊಸದಾದ LED ಹೆಡ್ ಲ್ಯಾಮ್ಪ್ ಹೊಂದಿದೆ. 2023 KTM 200 ಡ್ಯುಕ್ ಬೈಕ್ ಎಲೆಕ್ಟ್ರಾನಿಕ್ ಆರೆಂಜ್ ಮತ್ತು ಮೆಟಾಲಿಕ್ ಸಿಲ್ವರ್ ಬಣ್ಣದಾದಲ್ಲಿ ಸಿಗುತ್ತದೆ. ಈ ಬೈಕ್ ನ ಹೆಡ್ ಲ್ಯಾಮ್ಪ್ ಘಟಕವು 32 LED ಸೆಟ್ ಹೊಂದಿದೆ. ಈ ಹೆಡ್ ಲ್ಯಾಮ್ಪ್ 1290 ಸೂಪರ್ ಡ್ಯುಕ್ R ಇಂದ ಪ್ರೇರಣೆಗೊಂಡಿದೆ.

ಈ ಬೈಕ್ ನ LCD ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಪಡೆಯುತ್ತದೆ. ಇದು ಹೆಚ್ಚು ಮಾಹಿತಿ ನೀಡುತ್ತದೆ. ಹಾಗೆಯೇ ಇದರಲ್ಲಿ ಟೈಲ್ ಲೈಟ್ ಇದೆ. ಈ ಹೊಸ 2023 ಡ್ಯುಕ್ 200 ಬೈಕ್ ನಮ್ಮ ದೇಶದಲ್ಲಿ ಬಜಾಜ್ ಪಲ್ಸರ್ NS200, TVS ಅಪಾಚೆ RTR 200 4V ಮತ್ತು ಸುಜುಕಿ Gixxer 250 ಬೈಕ್ ಗಳಿಗೆ ಪೈಪೋಟಿ ಕೊಡಲಿದೆ. ಈ ಬೈಕ್ 195cc, ಸಿಂಗಲ್ ಸಿಲಿಂಡರ್ ಲಿಕ್ವಿಡ್ ಕೋಲ್ಡ್ ಇಂಜಿನ್ ಪಡೆಯುತ್ತದೆ. ಈ ಇಂಜಿನ್ 10,000 rpm ನಲ್ಲಿ 24.68 bhp ಎನರ್ಜಿ ಉತ್ಪಾದನೆ ಮಾಡುತ್ತದೆ..

ಈ ಬೈಕ್ ನ ಇಂಜಿನ್ ನಲ್ಲಿ ಯ್ ಸ್ಪೀಡ್ ಗೇರ್ ಬಾಕ್ಸ್ ಇದೆ. ಇಂಜಿನ್ OBD2 ಆಗಿರುವುದರಿಂದ E20 ಫ್ಯುಲ್ ನಲ್ಲಿಯು ಚಲಿಸುತ್ತದೆ.ಈ ಬೈಕ್ ನಲ್ಲಿ ಸ್ಪ್ಲಿಟ್ ಟ್ರೆಲ್ಲಿಸ್ ಟ್ಯೂಬುಲರ್ ಫ್ರೇಮ್ ಬಳಸಲಾಗುತ್ತದೆ. ಬೈಕ್ ನ ಮುಂಭಾಗದಲ್ಲಿ 43mm USD ಫೋರ್ಕ್ ಗಳಿವೆ ಹಾಗೂ ಹಿಂಭಾಗದಲ್ಲಿ. 10 ಲೆವೆಲ್ ಮೋನೋ ಶಾಕ್ ಸಸ್ಪೆನ್ಷನ್ ಗೊಂಡಿದೆ. ಈ WP ಅಪೆಕ್ಸ್ ಇಂದ ಬಂದಿದೆ. ಈ ಬೈಕ್ ನ ಬ್ರೆಜ್ ಮುಂಭಾಗದಲ್ಲಿ 300 mm ಡಿಸ್ಕ್ ಹಾಗೂ ಹಿಂಭಾಗದಲ್ಲಿ 230 mm ಡಿಸ್ಕ್ ಹೊಂದಿದೆ. ಕ್ಯಾಲಿಪರ್ ಗಕು, ಸೂಪರ್ ಮೋಟೋ ಎಬಿಎಸ್ ಹಾಗೂ ಡ್ಯುಯೆಲ್ ಚಾನಲ್ ಎಬಿಎಸ್ ಇದೆ.

ಬಜಾಜ್ ಆಟೋ ಲಿಮಿಟೆಡ್ ಅಧ್ಯಕ್ಷರಾದ ಸುಮಿತ್ ನಾರಂಗ್ ಅವರು ಈ ಬೈಕ್ ಬಗ್ಗೆ ಮಾತನಾಡಿದ್ದು, KTM 200 ಡ್ಯುಕ್ ತನ್ನ ವಿಭಿನ್ನವಾಫಾ ವೀಣ್ಯದ ಹಾಗೂ ವೈಶಿಷ್ಟ್ಯತೆಗಳಿಂದ ರೆಡಿ ಟು ರೇಸ್ ಆಗಿ ಹೆಸರು ಪಡೆದಿದೆ. ಇದು ಯುವಕರಿಗೆ ಡ್ರೀಮ್ ಬೈಕ್, LED ಶೇಫ್ ಲ್ಯಾಮ್ಪ್ ಅಪ್ಗ್ರೇಡ್ ಮಾಡ್ಕ,KTM ಡ್ಯುಕ್ ಬೈಕ್ ಅನ್ನು ಭಾರತದಲ್ಲೇ ಮೊದಲು ಬಿಡುಗಡೆ ಮಾಡಲಾಗಿದೆ. ಬೈಕಿಂಗ್ ನಲ್ಲಿ ನಾವು ಕ್ರಾಂತಿ ಮಾಡಿದ್ದೇವೆ..ಅದನ್ನೇ ಮುಂದುವರೆಸುತ್ತಿದ್ದೇವೆ.. ಎಂದು ಹೇಳಿದ್ದಾರೆ.

Comments are closed.