Ola Electric Car: ಎಲಾನ್ ಮಸ್ಕ್ ಗೆ ಶಾಕ್ ಕೊಡುವಂತೆ, ಹೊಸ ಕಾರ್ ಬಿಡುಗಡೆ ಸಿದ್ದವಾಗಿರುವ ಓಲಾ- ಎಲೆಕ್ಟ್ರಿಕ್ ಕಾರ್ ಹೇಗಿರಲಿದೆ ಹಾಗೂ ಏನೆಲ್ಲಾ ಇರಲಿದೆ ಗೊತ್ತೇ?

Ola Electric Car:ಓಲಾ ಸಂಸ್ಥೆ ಎಲೆಕ್ಟ್ರಿಕ್ ಬೈಕ್ ಗಳಿಗೆ ಎಲ್ಲಿಲ್ಲದ ಬೇಡಿಕೆ ಇದೆ. ಓಲಾ ಇಬೈಕ್ ಇಂದ ಹೊಸ ಟ್ರೆಂಡ್ ಸೃಷ್ಟಿಸಿದ ಬಳಿಕ ಈಗ ಓಲಾ ಎಲೆಕ್ಟ್ರಿಕ್ ಕಾರ್ ಬಿಡುಗಡೆ ಮಾಡುವುದಕ್ಕೆ ಮುಂದಾಗಿದೆ. ಓಲಾ ಎಲೆಕ್ಟ್ರಿಕ್ ಕಾರ್ ಹೇಗಿರುತ್ತದೆ ಎನ್ನುವುದಕ್ಕೆ ಫೋಟೋ ಒಂದು ಲೀಕ್ ಆಗಿದ್ದು, ಓಲಾ ಎಲೆಕ್ಟ್ರಿಕ್ ಕಾರ್ ನ ವಿಶೇಷತೆಯ ಬಗ್ಗೆ ಇಂದು ನಿಮಗೆ ತಿಳಿಸುತ್ತೇವೆ ನೋಡಿ..

ಅತ್ಯುನ್ನತ ಎಲೆಕ್ಟ್ರಿಕ್ ಬೈಕ್ ಗಳನ್ನು ಗ್ರಾಹಕರಿಗೆ ನೀಡುವ ಮೂಲಕ ಮುಂಚೂಣಿಯಲ್ಲಿರುವ ಓಲಾ ಸಂಸ್ಥೆ ಈಗ ಎಲೆಕ್ಟ್ರಿಕ್ ಕಾರ್ ಅನ್ನು ಮಾರುಕಟ್ಟೆಗೆ ತರಲು ಸಜ್ಜಾಗಿದೆ. ಇದಕ್ಕಾಗಿ ಎಲ್ಲಾ ತಯಾರಿಗಳು ಸಹ ನಡೆಯುತ್ತಿದೆ. ಮಾಧ್ಯಮಗಳ ಮೂಲಕ ಈ ವಿಷಯ ಬೆಳಕಿಗೆ ಬಂದಿದೆ. ಮಾಧ್ಯಮದಲ್ಲಿ ಸಿಕ್ಕಿರುವ ಮಾಹಿತಿಯ ಪ್ರಕಾರ ಲೀಕ್ ಆಗಿರುವುದು ಓಲಾ ಎಲೆಕ್ಟ್ರಿಕ್ ಕಾರ್ ನ ಫೋಟೋ ಎಂದು ಹೇಳಲಾಗುತ್ತಿದೆ. ಟೆಸ್ಲಾ, ಕಿಯಾ ಸಂಸ್ಥೆಯ ಎಲೆಕ್ಟ್ರಿಕ್ ಕಾರ್ ಗಳ ಹಾಗೆ ಕಾಣುತ್ತಿದೆ.

ಕಾರ್ ನ ಬಾಡಿ ಪ್ಯಾನಲ್ ಗಳು ದುಂಡಾಗಿ ಹಾಗೂ ಮೃದುವಾಗಿದೆ.
ಹೆಡ್ ಲೈಟ್ ಅನ್ನು ಲೈಟ್ ಆಗಿಯೇ ಇರಿಸಲಾಗಿದೆ. ಈ ಕಾರ್ ನ ಲುಕ್ಸ್ SUV ಹಾಗೆ ಕಾಣುತ್ತದೆ. ಇದು ಕಾರ್ ಹೇಗಿರುತ್ತದೆ ಎನ್ನುವ ಪರಿಕಲ್ಪನೆ ಇರಬಹುದು ಎನ್ನಲಾಗುತ್ತಿದ್ದು, ಉತ್ಪಾದನೆ ಆಗುವ ವೇಳೆ ಬದಲಾವಣೆ ಆಗಬಹುದು ಎಂದು ಹೇಳಲಾಗುತ್ತಿದೆ. ಓಲಾ ಎಲೆಕ್ಟ್ರಿಕ್ ಕಾರ್ 500ಕಿಮೀ ರೇಂಜ್ ನಲ್ಲಿ ಸಿಗುತ್ತದೆ. 70 ಇಂದ 80kWh ಬ್ಯಾಟರಿ ಜೊತೆಗೆ ಬರಬಹುದು ಎನ್ನಲಾಗುತ್ತಿದೆ.

ಹಾಗೆಯೇ ಶಕ್ತಿಯುತ ಮೋಟಾರ್ ಇರುತ್ತದೆ ಎನ್ನಲಾಗಿದ್ದು, 0 ಇಂದ 100ಕಿಮೀ ಸ್ಪೀಡ್ ಗೆ ಹೋಗಲು ಕೇವಲ 4 ರಿಂದ 5 ಸೆಕೆಂಡ್ಸ್ ತೆಗೆದುಕೊಳ್ಳುತ್ತದೆ. ಇದರಲ್ಲಿ ಬಹಳಷ್ಟು ವೈಶಿಷ್ಟ್ಯತೆಗಳಿವೆ. ಈಗ ಲೀಕ್ ಆಗಿರುವ ಫೋಟೋ ಮತ್ತು ಬೇರೆ ಮಾಹಿತಿಗಳ ಬಗ್ಗೆ ಓಲಾ ಸಂಸ್ಥೆ ಅಧಿಕೃತವಾಗಿ ಏನನ್ನು ತಿಳಿಸಿಲ್ಲ. ಆದರೆ ಮಾಧ್ಯಮಗಳಲ್ಲಿ ಸಿಕ್ಕಿರುವ ವರದಿಗಳ ಪ್ರಕಾರ, 2024ರಲ್ಲಿ ಓಲಾ ಎಲೆಕ್ಟ್ರಿಕ್ ಕಾರ್ ಲಾಂಚ್ ಆಗಬಹುದು ಎನ್ನಲಾಗಿದ್ದು, ಬೇರೆ ಐಷಾರಾಮಿ ಕಾರ್ ಗಿಂತ ಕಡಿಮೆ ಬೆಲೆಯಲ್ಲಿ ಸಿಗಬಹುದು ಎನ್ನಲಾಗುತ್ತಿದೆ. ಮಾಹಿತಿಯ ಪ್ರಕಾರ ಓಲಾ ಕಾರ್ ನ ಬೆಲೆ 20 ರಿಂದ 30 ಲಕ್ಷ ರೂಪಾಯಿಗಳ ನಡುವೆ ಇರಬಹುದು ಎನ್ನಲಾಗಿದೆ.

Comments are closed.