Free Bus Service: ಫ್ರೀ ಬಸ್ ಯೋಜನೆ ಒಂದೇ ತಿಂಗಳು ಅವಕಾಶ ಇರುವುದು ಎನ್ನುವಂತೆ ನೂಗು ನುಗ್ಗಲು ಮಾಡಿ ಇತರರಿಗೆ ತೊಂದರೆ ಮಡುವ ಮಹಿಳೆಯರಿಗೆ ಸಾರಿಗೆ ಸಚಿವರ ಸ್ಕ್ರೀಕ್ಟ್ ವಾರ್ನಿಂಗ್!

Free Bus Service: ಕಾಂಗ್ರೆಸ್ ಪಕ್ಷ ಎಲೆಕ್ಷನ್ ವೇಳೆ 5 ಯೋಜನೆಗಳನ್ನು ಜನರಿಗೆ ನೀಡುವುದಾಗಿ ತಮ್ಮ ಪ್ರಣಾಳಿಕೆಯಲ್ಲಿ ತಿಳಿಸಿತ್ತು, ಎಲೆಕ್ಷನ್ ಗೆದ್ದು ಅಧಿಕಾರಕ್ಕೆ ಬಂದ ನಂತರ ಒಂದೊಂದಾಗಿ ಎಲ್ಲಾ ಯೋಜನೆಗಳನ್ನು ಜಾರಿಗೆ ತರಲಾಗುತ್ತಿದೆ. ಈಗಾಗಲೇ ಜೂನ್ 11ರಿಂದ ಶಕ್ತಿ ಯೋಜನೆಯನ್ನು ಜಾರಿಗೆ ತರಲಾಗಿದೆ. ಈ ಯೋಜನೆಯ ಮೂಲಕ ರಾಜ್ಯದ ಎಲ್ಲಾ ಮಹಿಳೆಯರು ಉಚಿತವಾಗಿ ಸರ್ಕಾರಿ ಬಸ್ ಗಳಲ್ಲಿ ಪ್ರಯಾಣ ಮಾಡಬಹುದಾಗಿದೆ.

ಈ ಯೋಜನೆ ಜಾರಿಗೆ ಬಂದಾಗಿನಿಂದ ಮಹಿಳೆಯರು ಹೆಚ್ಚಿನ ಬಸ್ ಪ್ರಯಾಣ ಮಾಡುತ್ತಿದ್ದಾರೆ. ಈಗ ಫ್ರೀ ಬಸ್ ಪ್ರಯಾಣ ಶುರುವಾದ ನಂತರ ಹೆಚ್ಚಿನ ಮಹಿಳೆಯರು ಬಸ್ ನಲ್ಲಿ ಪ್ರಯಾಣ ಮಾಡುವುದಕ್ಕೆ ಶುರು ಮಾಡಿದ್ದಾರೆ. ಪುಣ್ಯ ಕ್ಷೇತ್ರಗಳು, ಪ್ರವಾಸಿ ತಾಣಗಳು ಹಾಗೂ ಇನ್ನಿತರ ಕಡೆಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಭೇಟಿ ನೀಡುತ್ತಿದ್ದಾರೆ. ಜೂನ್ 11ರಿಂದ ಇಲ್ಲಿಯವರೆಗೂ ಎಷ್ಟು ಮಹಿಳೆಯರು ಈ ಯೋಜನೆಯ ಪ್ರಯೋಜನ ಪಡೆದಿದ್ದಾರೆ ಎನ್ನುವ ಅಂಕಿ ಅಂಶ ಈಗ ಹೊರಬಿದ್ದಿದೆ.

ಸಾರಿಗೆ ಸಚಿವರಾದ ರಾಮಲಿಂಗಾರೆಡ್ಡಿ ಅವರು ತಿಳಿಸಿರುವ ಹಾಗೆ ಸುಮಾರು 3 ಕೋಟಿಗಿಂತ ಹೆಚ್ಚು ಮಹಿಳೆಯರು ಪ್ರಯಾಣ ಮಾಡಿದ್ದಾರೆ. ಉಚಿತ ಬಸ್ ಪ್ರಯಾಣ ಇದೆ ಎಂದು ಮಹಿಳೆಯರು ಹೀಗೆ ಮುಗಿಬಿದ್ದು ಪ್ರಯಾಣ ಮಾಡುತ್ತಿರುವುದರಿಂದ ಸಾರಿಗೆ ಸಿಬ್ಬಂದಿಗಳಿಗೂ ಸ್ವಲ್ಪ ತೊಂದರೆ ಆಗುತ್ತಿದೆ. ಕಂಡಕ್ಟರ್ ಗಳಿಗೆ ಟಿಕೆಟ್ ಕೊಡಲು ಕಷ್ಟವಾಗಿದೆ, ಹಾಗೂ ನೂಕು ನುಗ್ಗಲು ಕೂಡ ಜಾಸ್ತಿಯಾಗುತ್ತಿದೆ. ಇದರಿಂದ ಸರ್ಕಾರಿ ಬಸ್ ಗಳಿಗೆ ಕೆಲವು ಕಡೆ ಹಾನಿ ಸಹ ಉಂಟಾಗಿದೆ.

ಹೀಗಿರುವಾಗ ಸಾರಿಗೆ ಸಚಿವ ರಾಮಲಿಂಗರೆಡ್ಡಿ ಅವರು ಮಹಿಳೆಯರ ಹತ್ತಿರ ಒಂದು ಮನವಿ ಮಾಡಿಕೊಂಡಿದ್ದಾರೆ. ಇನ್ನು 10 ವರ್ಷಗಳವರೆಗು ಈ ಯೋಜನೆ ಜಾರಿಯಲ್ಲಿರುತ್ತದೆ. ಯಾರು ಕೂಡ ಆತುರ ಮಾಡದೆ ನಿಧಾನವಾಗಿ ನೀವು ಹೋಗಬೇಕಾದ ಕಡೆಗಳಿಗೆ ಹೋಗಿ, ಹೀಗೆ ಮಾಡಿದರೆ ಸಿಬ್ಬಂದಿಗಳಿಗೂ ತೊಂದರೆ ಆಗುತ್ತದೆ ಎಂದು ಮಹಿಳೆಯರಿಗೆ ಮನವಿ ಮಾಡಿದ್ದಾರೆ. ಒಂದು ವೇಳೆ ಪ್ರಯಾಣದಲ್ಲಿ ಈ ಥರದ ಸಮಸ್ಯೆಗಳು ಹೆಚ್ಚಾದರೆ, ಹೊಸ ನಿಯಮಗಳನ್ನು ಜಾರಿಗೆ ತರಬಹುದು ಎಂದು ಕೂಡ ಹೇಳಲಾಗುತ್ತಿದೆ.

Comments are closed.