Kannada Serial: ಪುಟ್ಟಕ್ಕನ ಮಕ್ಕಳು ಧಾರಾವಾಹಿಯ ’ಸೆಂಟರ್ ಆಫ್ ಅಟ್ರಾಕ್ಷನ್’ ಸ್ನೇಹಾ ನಿಜಕ್ಕೂ ಹೀಗಿದ್ದಾರಾ? ನಂಬೋದಕ್ಕೇ ಸಾಧ್ಯವಿಲ್ಲ ನೋಡಿ!

Kannada Serial: ಜೀಕನ್ನಡ ವಾಹಿನಿಯ ಪುಟ್ಟಕ್ಕನ ಮಕ್ಕಳು ಧಾರವಾಹಿ ಈಗ ಎಲ್ಲರ ಫೇವರೆಟ್ ಧಾರವಾಹಿಗಳಲ್ಲಿ ಒಂದು. ಟಿಆರ್ಪಿ ರೇಟಿಂಗ್ ನಲ್ಲಿ ಪ್ರತಿ ವಾರ ಅಗ್ರಸ್ಥಾನ ಪಡೆಯುವ ಧಾರವಾಹಿಗಳಲ್ಲಿ ಪುಟ್ಟಕ್ಕನ ಮಕ್ಕಳು ಮುಂಚೂಣಿಯಲ್ಲಿದೆ. ಈ ಧಾರವಾಹಿಯಲ್ಲಿ ನಟಿ ಉಮಾಶ್ರೀ ಅವರು ಪುಟ್ಟಕ್ಕನ ಪಾತ್ರದಲ್ಲಿ ನಟಿಸುತ್ತಿದ್ದು, ಕಿರುತೆರೆಯಲ್ಲಿ ಮೋಡಿ ಮಾಡುತ್ತಿದ್ದಾರೆ. ಪುಟ್ಟಕ್ಕನಿಗೆ ಮೂವರು ಹೆಣ್ಣುಮಕ್ಕಳು, ಇವರ ಎರಡನೇ ಮಗಳು ಸ್ನೇಹ ಪಾತ್ರದಲ್ಲಿ ನಟಿಸುತ್ತಿರುವ ಸಂಜನಾ ಬುರ್ಲಿ ಅವರ ಬಗ್ಗೆ ಆಸಕ್ತಿಕರ ವಿಚಾರಗಳು ನಿಮಗೆ ಗೊತ್ತಾ? ಇಂದು ತಿಳಿಸುತ್ತೇವೆ ನೋಡಿ.. ಇದನ್ನೂ ಓದಿ; Sylvester Dacunha: ಫೋಟೋ ಮೇಲೆ ಯಾವಾಗಲು ಖುಷಿಯಾಗಿದ್ದ ಅಮುಲ್ ಹುಡುಗಿ, ಈಗ ಅಳುತ್ತಿರುವುದು ಯಾಕೆ ಗೊತ್ತೇ? ಅಮುಲ್ ಹೀಗೆ ಮಾಡಿದ್ದು ಯಾಕೆ ಗೊತ್ತೇ?

ನಟಿ ಸಂಜನಾ ಬುರ್ಲಿ ಅವರು ಹುಟ್ಟಿ ಬೆಳೆದದ್ದು ಬೆಂಗಳೂರಿನಲ್ಲಿ. ಇವರಿಗೆ ಚಿಕ್ಕಂದಿನಿಂದ ಎಂಬಿಬಿಎಸ್ ಮಾಡಬೇಕು ಎಂದು ಆಸೆ ಇತ್ತು, ಆದರೆ ಬೆಂಗಳೂರಿನಲ್ಲಿ ಸೀಟ್ ಸಿಗದೆ, ಶಿವಮೊಗ್ಗದಲ್ಲಿ ಸಿಕ್ಕಾಗ, ನಟನೆ ಜೊತೆಗೆ ಓದನ್ನು ಮುಂದುವರೆಸಬೇಕು ಎಂದು ಸಂಜನಾ ಅವರು ಬೆಂಗಳೂರಿನಲ್ಲಿ ಮೆಡಿಕಲ್ ಇಂಜಿನಿಯರಿಂಗ್ ಕೋರ್ಸ್ ಗೆ ಸೇರಿಕೊಂಡರು. ಇದು ಮೆಡಿಸಿನ್ ಬಗ್ಗೆಯೇ ಆದರೆ ಟೆಕ್ನಿಕಲ್ ಆಗಿ ತಿಳಿದುಕೊಳ್ಳುವ ಕೋರ್ಸ್ ಆಗಿದೆ..

ಪುಟ್ಟಕ್ಕನ ಮಕ್ಕಳು ಧಾರವಾಹಿಗಿಂತ ಮೊದಲು ಸಂಜನಾ ಅವರು ಬೇರೆ ಧಾರವಾಹಿಗಳಿಗೆ ಹಾಗೂ ಶೋಗಳಿಗೆ ಆಡಿಷನ್ ಕೊಟ್ಟಿದ್ದರಂತೆ. ಆದರೆ ಯಾವುದಕ್ಕೂ ಸರಿಯಾಗಿ ಆಯ್ಕೆಯಾಗಿರಲಿಲ್ಲ. ಬಳಿಕ ಪತ್ತೇದಾರಿ ಪ್ರತಿಭಾ ಧಾರಾವಾಹಿಯಲ್ಲಿ ಒಂದು ವಾರದ ಎಪಿಸೋಡ್ ನಲ್ಲಿ ನಟಿಸಿದ್ದರಂತೆ. ಬಳಿಕ ಲಜ್ಞಾಪತ್ರಿಕೆ ಧಾರವಾಹಿಗೆ ಆಯ್ಕೆಯಾದರು. ಆರಂಭದಲ್ಲಿ ಧಾರವಾಹಿ ಒಪ್ಪಿಕೊಳ್ಳುವುದು ಬೇಡ ಎಂದು ಹೇಳಿದ್ದರಂತೆ ಸಂಜನಾ. ಆಗ ಮತ್ತೊಬ್ಬರು ಆಯ್ಕೆಯಾದರು, ನಂತರ ಸಂಜನಾ ಅವರು ತಾವೇ ನಟಿಸುವುದಾಗಿ ಹೇಳಿದರಂತೆ.

ಲಗ್ನಪತ್ರಿಕೆ ಧಾರವಾಹಿ ಬಹಳ ಬೇಗ ಮುಕ್ತಾಯವಾಯಿತು. ಆಗ ಸಂಜನಾ ಅವರಿಗೆ ಬಹಳ ನೋವಾಗಿತ್ತಂತೆ. ಆ ಸಮಯದಲ್ಲಿ ಸಂಜನಾ ಅವರ ತಾಯಿ ನಿನಗೋಸ್ಕರ ದೊಡ್ಡದಾಗಿ ಏನೋ ಕಾದಿದೆ ಎಂದಿದ್ದರಂತೆ. ಸಂಜನಾ ಅವರು ಉಡುಪಿಯಲ್ಲಿ ಇದ್ದಾಗ ಪುಟ್ಟಕ್ಕನ ಮಕ್ಕಳು ಧಾರವಾಹಿಯ ಪಾತ್ರಕ್ಕಾಗಿ ಕಾಲ್ ಬಂದಿದ್ದು, ಮೊದಲು ಬೇಡ ಎನ್ನಿಸಿದರು ಬಂದಿರುವ ಅವಕಾಶವನ್ನು ಬಿಡಬಾರದು ಎಂದು ಸಂಜನಾ ಅವರು ಪುಟ್ಟಕ್ಕನ ಮಕ್ಕಳು ಧಾರವಾಹಿ ಒಪ್ಪಿಕೊಂಡಿದ್ದಾರೆ ಸಂಜನಾ. ಈಗ ಸ್ನೇಹ ಪಾತ್ರದ ಮೂಲಕ ಕಿರುತೆರೆ ವೀಕ್ಷಕರಿಗೆ ಹತ್ತಿರವಾಗಿದ್ದಾರೆ. ಇದನ್ನೂ ಓದಿ: Personal Loan: ಪರ್ಸನಲ್ ಲೋನ್ ನಲ್ಲಿ EMI ಕಡಿಮೆ ಮಾಡಿಕೊಳ್ಳುವುದು ಹೇಗೆ ಗೊತ್ತೇ?? ಈ ಟ್ರಿಕ್ ಬಳಸಿ ಸಾಕು, EMI ತಾನಾಗಿಯೇ ಕಡಿಮೆಯಾಗುತ್ತದೆ

Comments are closed.